ನನಗೂ 200 ಯೂನಿಟ್‌ ಕರೆಂಟ್‌ ಬೇಕು, ಇಲ್ಲವಾದರೆ ಪ್ರತಿಭಟನೆ: ಶಾಸಕ ಸಿ.ಸಿ.ಪಾಟೀಲ್‌ ಎಚ್ಚರಿಕೆ

By Kannadaprabha News  |  First Published May 28, 2023, 12:23 PM IST

ವಿಧಾನಸಭಾ ಚುನಾವಣೆಯಲ್ಲಿ ಸುಳ್ಳು ಭರವಸೆಗಳನ್ನು ನೀಡಿ, ಎಲ್ಲರಿಗೂ ಫ್ರೀ ಅಂತಾ ಹೇಳಿದ್ದೀರಿ, ನನಗೂ ಕೂಡಾ 200 ಯೂನಿಟ್‌ ಕರೆಂಟ್‌ ಫ್ರೀ ಬೇಕು, ಇಲ್ಲವಾದರೆ ವಿರೋಧ ಪಕ್ಷದ ಶಾಸಕನಾಗಿ ಪ್ರತಿಭಟನೆಗೆ ಮುಂದಾಗುತ್ತೇವೆ ಎಂದು ಶಾಸಕ ಸಿ.ಸಿ. ಪಾಟೀಲ್‌ ಎಚ್ಚರಿಸಿದರು. 


ಹೊಳೆಆಲೂರ (ಮೇ.28): ವಿಧಾನಸಭಾ ಚುನಾವಣೆಯಲ್ಲಿ ಸುಳ್ಳು ಭರವಸೆಗಳನ್ನು ನೀಡಿ, ಎಲ್ಲರಿಗೂ ಫ್ರೀ ಅಂತಾ ಹೇಳಿದ್ದೀರಿ, ನನಗೂ ಕೂಡಾ 200 ಯೂನಿಟ್‌ ಕರೆಂಟ್‌ ಫ್ರೀ ಬೇಕು, ಇಲ್ಲವಾದರೆ ವಿರೋಧ ಪಕ್ಷದ ಶಾಸಕನಾಗಿ ಪ್ರತಿಭಟನೆಗೆ ಮುಂದಾಗುತ್ತೇವೆ ಎಂದು ಶಾಸಕ ಸಿ.ಸಿ. ಪಾಟೀಲ್‌ ಎಚ್ಚರಿಸಿದರು. ಅವರು ಹೊಳೆಆಲೂರ ಉಮಾ ಮಹೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ಹೊಳೆಆಲೂರ ಹೋಬಳಿಯ ಗ್ರಾಮಗಳ ಮತದಾರ ಬಾಂಧವರಿಗೆ ಕೃತಜ್ಞತೆ ಸಭೆಯ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಅವರು ಗಂಡಸೇ ಆಗಿದ್ದರೆ, ಅವರು ಹೇಳಿದ ಹಾಗೆ ಬಡವರ ಪರವಾಗಿ ಹೇಳಿದ ಎಲ್ಲ 5 ಭರವಸೆಗಳನ್ನು ನೀಡಿ ಮಾತು ಉಳಿಸಿಕೊಳ್ಳದಿದ್ದರೆ ಮುಂದಿನ ದಿನಮಾನದಲ್ಲಿ ಕಾರ್ಯಕರ್ತರ ಜೊತೆಗೂಡಿ ಪ್ರತಿಭಟನೆ ಮಾಡಬೇಕಾಗುತ್ತದೆ. ಮುಂದಿನ ಲೋಕಸಭಾ, ತಾಲೂಕು, ಜಿಲ್ಲಾ ಪಂಚಾಯಿತಿ ಚನಾವಣೆಯಲ್ಲಿ ಜನರು ತಕ್ಕಪಾಠ ಕಲಿಸಲಿದ್ದಾರೆ. ಮತ್ತೆ ನಿಮ್ಮ ಪೊಳ್ಳು ಭರವಸೆ ಭರವಸೆಗಳನ್ನು ಈಡೇರಿಸಲು ನಿಮ್ಮ ಇಡೀ ಜನ್ಮದಲ್ಲೇ ಆಗುವುದಿಲ್ಲ, ಅದು ಸಾಧ್ಯವೂ ಇಲ್ಲ. ನೀವೂ ಮಾಧ್ಯಮದಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಚುನಾವಣೆ ಸಂದರ್ಭದಲ್ಲಿ ಮಾತನಾಡಿದ ವಿಡಿಯೋಗಳನ್ನು ಮೊದಲು ನೋಡಿ ಎಂದು ಕಾಂಗ್ರೆಸ್‌ ವಿರುದ್ಧ ಹರಿಹಾಯ್ದರು.

Tap to resize

Latest Videos

undefined

ಅಭಿ​ವೃದ್ಧಿ ಬಿಟ್ಟು ಹಿಂದೂ ಧರ್ಮ ವಿರೋ​ಧಿ​ಸುವ ಹೊಸ ಸರ್ಕಾ​ರ: ಆರಗ ಜ್ಞಾನೇಂದ್ರ

ಈ ಸಂದರ್ಭದಲ್ಲಿ ಹೊಳೆಆಲೂರ ಮಂಡಳ ಅಧ್ಯಕ್ಷ ಮುತ್ತಣ್ಣ ಜಂಗಣ್ಣವರ ಮಾತನಾಡಿ, ಕಾಂಗ್ರೆಸ್‌ ಸಹೋದರರು, ಬರೀ ಜಾತಿ ರಾಜಕಾರಣ ಮಾಡಿ, ನಮ್ಮ ಪಕ್ಷಕ್ಕೆ ನಿಮ್ಮ ಸಮಾಜದವರು ಬಂದಿದ್ದಾರೆ, ನಿಮ್ಮ ವೋಟು ನಮಗೆ ನೀಡಬೇಕು. ಗ್ಯಾರಂಟಿ ಸುಳ್ಳು ಭರವಸೆ ನೀಡಿ ನಂಬಿಸಿ ಮೋಸ ಮಾಡಿದ್ದಾರೆ. ಕೋರೋನಾ ಹಾಗೂ ಪ್ರವಾಹ ಸಂದರ್ಭದಲ್ಲಿ ಸಹಾಯ ಮಾಡಿದ ನಮ್ಮ ಬಿಜೆಪಿ ಸರಕಾರ ಮರೆತು ಗಾಳಿ ಸುದ್ದಿಗೆ ಮಾರು ಹೋಗಿದ್ದಾರೆ ಎಂದು ಹೇಳಿದರು.

ಸಾನಿಧ್ಯವನ್ನು ಯಚ್ಚರೆಶ್ವರ ಸ್ವಾಮಿಗಳು ವಹಿಸಿದ್ದರು. ವೀರಯ್ಯಜ್ಜನವರು ಮತ್ತು ಬಿಜೆಪಿ ಜಿಲ್ಲಾ ಅಧ್ಯಕ್ಷರಾದ ಮುತ್ತಣ್ಣ ಲಿಂಗನಗೌಡ್ರ, ಜಿ.ಪಿ. ಪಾಟೀಲ, ಮುತ್ತಣ್ಣ, ಜಂಗಣ್ಣವರ, ಪ್ರೇಮಾ, ನಾಯಕ, ಶಾರದಾ ದಳವಾಯಿ, ಅಶೋಕ ಹೆಬ್ಬಳ್ಳಿ, ರಾಮನಗೌಡ ಪಾಟೀಲ, ಶಶಿಧರಾಗೌಡ ಪಾಟೀಲ, ಶಿವಕುಮಾರ ನೀಲಗುಂದ, ಬಸವಂತಪ್ಪ ತಳವಾರ ಮುಂತಾದವರು ಇದ್ದರು.

ದೇಶ ಗೆಲ್ಲಿಸುವ ಲೋಕಸಭಾ ಚುನಾವಣೆಗೆ ಸಜ್ಜಾಗಿ: ಈಗ ನನ್ನ ಚುನಾವಣೆ ಮುಗಿದಿದೆ. ಮುಂದೆ ಕಾರ್ಯಕರ್ತರ ಚುನಾವಣೆ ಹಾಗೂ ದೇಶ ಗೆಲ್ಲಿಸುವ ಲೋಕಸಭಾ ಚುನಾವಣೆಗೆ ಪಕ್ಷ ಪುನರ್‌ ಸಂಘಟನೆಗೆ ಸಿದ್ಧರಾಗಬೇಕು ಎಂದು ಕಾರ್ಯಕರ್ತರಿಗೆ ಶಾಸಕ ಸಿ.ಸಿ. ಪಾಟೀಲ ಕರೆ ನೀಡಿದರು. ಪಟ್ಟಣದ ತಮ್ಮ ನಿವಾಸದಲ್ಲಿ ಬಿಜೆಪಿ ಮುಖಂಡರಿಗೆ, ಮತದಾರರಿಗೆ ಏರ್ಪಡಿಸಿದ್ದ ಕೃತಜ್ಞತಾ ಸಮಾರಂಭದಲ್ಲಿ ಮಾತನಾಡಿದರು. ನನ್ನನ್ನು ಆಯ್ಕೆ ಮಾಡಿದ ಮತದಾರರಿಗೆ ಎಷ್ಟುಕೃತಜ್ಞತೆ ಸಲ್ಲಿಸಿದರೂ ಕಡಿಮೆ. ಹಿಂದಿನ ಚುನಾವಣೆಗಿಂತಲೂ ಈ ಚುನಾವಣೆಯಲ್ಲಿ ಎಲ್ಲ ರೀತಿಯ ಪ್ರಚಾರ, ಪ್ರಯತ್ನ, ಶ್ರಮ ಹಾಕಿದರೂ ಗೆಲುವಿನ ಅಂತರ ಕಡಿಮೆಯಾಗಿದೆ. ಇದರ ಬಗ್ಗೆ ಎಲ್ಲರೂ ಅವಲೋಕನ ಮಾಡಿಕೊಳ್ಳಬೇಕು ಎಂದು ಹೇಳಿದರು.

ಸೊರಬ ಕ್ಷೇತ್ರದಲ್ಲಿ ಸಚಿವ ಮಧು ಬಂಗಾರಪ್ಪಗೆ ಹೆಜ್ಜೆ ಹೆಜ್ಜೆಗೂ ಸವಾಲು!

ಕೆಲವೇ ದಿನಗಳಲ್ಲಿ ಕಾರ್ಯಕರ್ತರ ಚುನಾವಣೆಯಾದ ಜಿಪಂ ಹಾಗೂ ತಾಪಂ ಚುನಾವಣೆ ಬರುತ್ತದೆ. ಅದಕ್ಕಾಗಿ ಪಕ್ಷವನ್ನು ಕೆಳಹಂತದಿಂದ ಪುನರ್ಸಂಘಟಿಸಬೇಕು. ಇದಕ್ಕಾಗಿ ನನ್ನನ್ನು ಸಂಪೂರ್ಣ ತೊಡಗಿಸಿಕೊಂಡು ಬಿಜೆಪಿ ಜಿಪಃ ಆಡಳಿತಕ್ಕೆ ಬರುವಲ್ಲಿ ಶ್ರಮ ವಹಿಸಲಾಗುವುದು. ಆನಂತರ ಲೋಕಸಭಾ ಚುನಾವಣೆಗೆ ಸಿದ್ಧಗೊಳ್ಳಬೇಕು. ಬಿಜೆಪಿ ರಾಜ್ಯದಲ್ಲಿ ಸೋತಿರಬಹುದು. ಆದರೆ ದೇಶ ಸೋಲಬಾರದು. ಆದ್ದರಿಂದ ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸಲು ಹೆಚ್ಚಿನ ರೀತಿಯಲ್ಲಿ ಪಕ್ಷ ಸಂಘಟನೆಗೆ ಮುಂದಾಗಬೇಕು ಎಂದು ಹೇಳಿದರು.

click me!