ರಾಯಚೂರು: ವಿಜಯ ಸಂಕಲ್ಪ ಯಾತ್ರೆಗೆ ದೊಡ್ಡ ಪ್ರಮಾ​ಣ​ದಲ್ಲಿ ಸ್ಪಂದ​ನೆ: ಜಗ​ದೀಶ ಶೆಟ್ಟರ್‌

By Ravi Janekal  |  First Published Mar 11, 2023, 7:30 AM IST

ರಾಜ್ಯದ ನಾಲ್ಕು ಕಡೆ​ಗ​ಳಲ್ಲಿ ನಡೆ​ಯು​ತ್ತಿ​ರುವ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಗೆ ಎಲ್ಲೆಡೆ ದೊಡ್ಡ ಪ್ರಮಾ​ಣ​ದಲ್ಲಿ ಸ್ಪಂದನೆ ವ್ಯಕ್ತ​ವಾ​ಗು​ತ್ತಿ​ದೆ ಎಂದು ಮಾಜಿ ಮುಖ್ಯ​ಮಂತ್ರಿ ಜಗದೀಶ ಶೆಟ್ಟರ್‌(Jagadish shettar) ಶುಕ್ರ​ವಾರ ತಿಳಿ​ಸಿ​ದ​ರು.


ರಾಯ​ಚೂರು (ಮಾ.11) : ರಾಜ್ಯದ ನಾಲ್ಕು ಕಡೆ​ಗ​ಳಲ್ಲಿ ನಡೆ​ಯು​ತ್ತಿ​ರುವ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಗೆ ಎಲ್ಲೆಡೆ ದೊಡ್ಡ ಪ್ರಮಾ​ಣ​ದಲ್ಲಿ ಸ್ಪಂದನೆ ವ್ಯಕ್ತ​ವಾ​ಗು​ತ್ತಿ​ದೆ ಎಂದು ಮಾಜಿ ಮುಖ್ಯ​ಮಂತ್ರಿ ಜಗದೀಶ ಶೆಟ್ಟರ್‌(Jagadish shettar) ಶುಕ್ರ​ವಾರ ತಿಳಿ​ಸಿ​ದ​ರು.

ನಗ​ರ​ದಲ್ಲಿ ನಡೆದ ಯಾತ್ರೆಗೂ ಮುನ್ನ ನಡೆ​ಸಿದ ಸುದ್ದಿ​ಗೋ​ಷ್ಠಿ​ಯಲ್ಲಿ ಮಾತ​ನಾಡಿ, ಕಲ್ಯಾಣ ಕರ್ನಾ​ಟಕ(Kalyana karnataka) ಜಿಲ್ಲೆ​ಗ​ಳಲ್ಲಿ ನಮ್ಮ ತಂಡದ ನೇತೃ​ತ್ವ​ದಲ್ಲಿ ಯಾತ್ರೆ ಸಾಗಿ​ದ್ದು, ರಾಯ​ಚೂರು(Raichur) ಜಿಲ್ಲೆ​ಯಲ್ಲಿ ಭಾರೀ ಬೆಂಬಲ ಸಿಗು​ತ್ತಿದೆ. ಇದು ಪ್ರಸ​ಕ್ತ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎನ್ನುವ ವಿಶ್ವಾ​ಸ​ವನ್ನು ಇನ್ನಷ್ಟುಹೆಚ್ಚಿ​ಸಿದೆ. ದೇಶ ಸೇರಿ​ದಂತೆ ರಾಜ್ಯ​ದ​ಲ್ಲಿ ಕಾಂಗ್ರೆಸ್‌(Congress) ಪಕ್ಷ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿದೆ ಎಂದ​ರು.

Latest Videos

undefined

ರಾಯಚೂರು ವಿಧಾನಸಭಾ ಚುನಾವಣೆ : ಎಸ್‌ ಎಸ್ ರಾಜಮೌಳಿ ಚುನಾವಣಾ ಐಕಾನ್!

ಪ್ರಧಾನಮಂತ್ರಿ(PM Narendra Modi) ಯಶಸ್ವಿಯಾಗಿ ಕೋವಿಡ್‌(Corona virus) ನಿರ್ವಹಣೆ ಮಾಡಿದ್ದನ್ನು ಎಲ್ಲರೂ ನೋಡಿದ್ದಾರೆ. ಭ್ರಷ್ಟಾಚಾರ ರಹಿತವಾದ ಎಂಟು ವರ್ಷಗಳ ಆಡಳಿತ ನೀಡಿದ್ದಾರೆ. ದೇಶ ಆರ್ಥಿಕವಾಗಿ ಚೇತರಿಸಿಕೊಳ್ಳಲು ಮೋದಿ ಕಾರಣರಾಗಿದ್ದಾರೆ. ಆರ್ಥಿಕ ವ್ಯವಸ್ಥೆಯಲ್ಲಿ ಬ್ರಿಟನ್‌ ದೇಶವನ್ನು ಭಾರತ ಹಿಂದಿಕ್ಕಿದೆ. ವಿಶ್ವದ ಜನಪ್ರಿಯ ನಾಯಕ ಪ್ರಧಾನಿ ಇದ್ದಾರೆ. ಡಬಲ್‌ ಎಂಜಿನ್‌ ಸರ್ಕಾರ ಇರುವುದರಿಂದ ಸಾಕಷ್ಟುಅಭಿವೃದ್ಧಿ ಕೆಲಸಗಳು ಆಗಿವೆ ಎಂದು ಹೇಳಿದರು.

ರಾಯಚೂರಿನಲ್ಲಿ ವಿಮಾನ ನಿಲ್ದಾಣ(Airport), ಏತ ನೀರಾವರಿ(Lift irrigation) ವರ್ತುಲ ರಸ್ತೆ, ಭಾರತಮಾಲಾ ಯೋಜ​ನೆ(Bharat mala project)​ಯಡಿ ಆರು ಲೈನ್‌ ರಸ್ತೆ, ಜವಳಿ ಪಾರ್ಕ್, ಹೊಸ ಕೈಗಾರಿಕಾ ವಲಯ, ರಾಯಚೂರು ಮಹಾನಗರ ಪಾಲಿಕೆ ಆಗಲಿದೆ. ನಂಜುಂಡಪ್ಪ ವರದಿ ಜಾರಿಗಾಗಿ ಸಾವಿರಾರು ಕೋಟಿ ಅನುದಾನ ಕೊಡಲಾಗಿದೆ ಎಂದರು.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ(CT Ravi) ಮಾತನಾಡಿ, ಸುಳ್ಳು ಹಾಗೂ ಕಾಂಗ್ರೆಸ್‌ ಒಂದೇ ನಾಣ್ಯದ ಎರಡು ಮುಖ​ಗ​ಳಿ​ದ್ದಂತೆ. ಕಾಂಗ್ರೆ​ಸ್‌ ಅವಮಾನ, ಅಪಮಾನ ಹಾಗೂ ಅಪಪ್ರಚಾರದಲ್ಲಿ ಸಂಪೂ​ರ್ಣ​ವಾಗಿ ಮುಳು​ಗಿ​ದ್ದು, ನಿರಂತರ ಸೋಲಿನಿಂದ ಕಂಗೆಟ್ಟಿದೆ ಎಂದರು.

ನಿನಗೆ ಗಂಡಸ್ತನ ಇದ್ರೆ ನಿನ್ನ ಶಕ್ತಿ ಪ್ರೊವ್ ಮಾಡು: ಎಚ್‌ಡಿಕೆಗೆ ನೇರ ಸವಾಲು ಹಾಕಿದ ಶಿವನಗೌಡ ನಾಯಕ

ಸಾರಿಗೆ ಸಚಿವ ಬಿ. ಶ್ರೀರಾಮುಲು(B Sriramulu), ವಿಧಾನಪರಿಷತ್‌ ಸದಸ್ಯರಾದ ಶಶೀಲ್‌ ನಮೋಶಿ, ರಘುನಾಥ್‌ ಮಲ್ಕಾಪುರೆ ಇದ್ದರು

click me!