ಸಿದ್ದ​ರಾ​ಮಯ್ಯ ಕಾಂಗ್ರೆಸ್‌ನ ಹರಕೆಯ ಕುರಿ: ಶ್ರೀರಾ​ಮುಲು

By Kannadaprabha News  |  First Published Mar 11, 2023, 3:30 AM IST

ಕಾಂಗ್ರೆ​ಸ್‌​ನಲ್ಲಿ ಟಿಕೆಟ್‌ ಹಂಚಿ​ಕೆ​ಯಲ್ಲಿ ಗೊಂದಲ ಸೃಷ್ಟಿ​ಯಾ​ಗಿದೆ, ಸಿದ್ದ​ರಾ​ಮಯ್ಯ, ಡಿ.ಕೆ. ​ಶಿ​ವ​ಕು​ಮಾರ ಅವರ ಗುಂಪು​ಗಾ​ರಿ​ಕೆ​ಯಿಂದಾಗಿ ಕಾಂಗ್ರೆಸ್‌ ಮನೆಯು ಮುರಿದು ಹೋಗಿ ಮನೆ​ಯೊಂದು ಮೂರು ಬಾಗಿ​ಲಾ​ಗಿದೆ ಎಂದ​ ಸಚಿವ ಬಿ. ಶ್ರೀ​ರಾ​ಮುಲು. 


ರಾಯಚೂರು(ಮಾ.11): ಮಾಜಿ ಮುಖ್ಯ​ಮಂತ್ರಿ ಸಿದ್ದ​ರಾ​ಮಯ್ಯ ಅವರು ಕಾಂಗ್ರೆಸ್‌ ಪಕ್ಷದ ಹರಿ​ಕೆಯ ಕುರಿ​ಯಾ​ಗಿ​ದ್ದಾರೆ ಎಂದು ಸಾರಿಗೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಚಿವ ಬಿ. ಶ್ರೀ​ರಾ​ಮುಲು ಟೀಕಿ​ಸಿ​ದರು.

ಶುಕ್ರ​ವಾರ ಸುದ್ದಿ​ಗೋ​ಷ್ಠಿ​ಯಲ್ಲಿ ಮಾತ​ನಾಡಿ, ಕಾಂಗ್ರೆಸ್‌ ಪಕ್ಷವು ರಾಜ್ಯ​ದಲ್ಲಿ ಹಿಂದೆ ಡಿ. ದೇ​ವ​ರಾಜ ಅರ​ಸು,​ ನಿ​ಜ​ಲಿಂಗಪ್ಪ, ವೀರೇಂದ್ರ ಪಾಟೀಲ್‌, ಬಂಗಾ​ರಪ್ಪ ಅವ​ರೊಂದಿಗೆ ಯಾವ​ ರೀ​ತಿ​ಯಾಗಿ ನಡೆ​ದು​ಕೊಂಡಿ​ತ್ತೋ ಅದೇ ರೀತಿ​ಯಾಗಿ ಸಿದ್ದ​ರಾ​ಮಯ್ಯ ಅವ​ರನ್ನು ಸಹ ಪಕ್ಷವು ಬಳ​ಸಿ​ಕೊ​ಳ್ಳು​ತ್ತಿ​ದ್ದು, ಈ ಪರಿಸ್ಥಿತಿ ಸಿದ್ದರಾಮಯ್ಯಗೆ ಬರಬಾರದು. ಕಾಂಗ್ರೆಸ್‌ ಪಕ್ಷದ ಧೈರ್ಯ ತಾಕತ್ತು ಇದ್ದರೆ, ಸಿದ್ದರಾಮಯ್ಯನ ಅವರನ್ನು ಮುಖ್ಯ​ಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡುವಂತೆ ಸವಾಲು ಎಸೆ​ದರು.

Tap to resize

Latest Videos

ರಾಯಚೂರು ವಿಧಾನಸಭಾ ಚುನಾವಣೆ : ಎಸ್‌ ಎಸ್ ರಾಜಮೌಳಿ ಚುನಾವಣಾ ಐಕಾನ್!

ಕಾಂಗ್ರೆ​ಸ್‌​ನಲ್ಲಿ ಟಿಕೆಟ್‌ ಹಂಚಿ​ಕೆ​ಯಲ್ಲಿ ಗೊಂದಲ ಸೃಷ್ಟಿ​ಯಾ​ಗಿದೆ, ಸಿದ್ದ​ರಾ​ಮಯ್ಯ, ಡಿ.ಕೆ. ​ಶಿ​ವ​ಕು​ಮಾರ ಅವರ ಗುಂಪು​ಗಾ​ರಿ​ಕೆ​ಯಿಂದಾಗಿ ಕಾಂಗ್ರೆಸ್‌ ಮನೆಯು ಮುರಿದು ಹೋಗಿ ಮನೆ​ಯೊಂದು ಮೂರು ಬಾಗಿ​ಲಾ​ಗಿದೆ ಎಂದ​ರು.
ತಾವು ಸಿಎಂ ಆಕಾಂಕ್ಷಿಯೇ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ನಗುತ್ತಲೇ ಉತ್ತರಿಸಿದ ಅವರು ಇಷ್ಟುದಿನ ನಮಗೆ ಉಪಮುಖ್ಯಮಂತ್ರಿ ಸಿಕ್ಕಿಲ್ಲ ಏಕೆ ಎನ್ನು​ತ್ತಿ​ದ್ದರು, ಇದೀಗ ಪ್ರಮೋಷ್‌ ಸಿಕ್ಕಿದೆ ಅದ​ಕ್ಕಾಗಿ ಸಿಎಂ ಸರದಿಯನ್ನು ಆರಂಭಿ​ಸ​ಲಾ​ಗಿದೆ. ನಿಭಾಯಿಸುವ ಶಕ್ತಿ ಇದೆ, ಸಿಎಂ ಆಗ​ಲು ಪಕ್ಷ ಅವಕಾಶ ಮಾಡಿಕೊಟ್ಟರೆ ಆಗೋಣ ಎಂದರು.

ಪದೇ ಪದೇ ಮೋದಿ ರಾಜ್ಯಕ್ಕೆ ಬರು​ತ್ತಿ​ದ್ದಾರೆ ಎನ್ನುವ ಪ್ರತಿ​ಪ​ಕ್ಷ​ಗಳ ಪ್ರಶ್ನೆಗೆ ಉತ್ತ​ರಿ​ಸಿದ ಅವರು, ದೇಶ ಮತ್ತು ರಾಜ್ಯ​ದಲ್ಲಿ ಪಕ್ಷ​ವನ್ನು ಉಳಿ​ಸಿ​ಕೊ​ಳ್ಳು​ವು​ದ​ಕ್ಕಾ​ಗಿ ಮೋದಿ ರಾಜ್ಯಕ್ಕೆ ಬರು​ತ್ತಿ​ದ್ದಾರೆ, ಅದು ಅವರ ಕರ್ತ​ವ್ಯವೂ ಆಗಿದೆ. ಮುತಾಲಿಕ್‌ ಅವರ ಬಗ್ಗೆ ನಮಗೆ ಗೌರವಿದೆ. ಅವರು ಹಿಂದೂತ್ವದ ಬಗ್ಗೆ ಬಹಳಷ್ಟುಶ್ರಮಿಸಿದ್ದಾರೆ. ಆದರೆ, ಅವರು ಮೋದಿ ಹೆಸರಲ್ಲಿ ಮತ ಕೇಳಬಾರದು ಅಂತ ಹೇಳುವುದು ಅವರಿಗೆ ಶೋಭೆ ತರುವುದಿಲ್ಲ ಎಂದು ಹೇಳಿದರು.

ನಿನಗೆ ಗಂಡಸ್ತನ ಇದ್ರೆ ನಿನ್ನ ಶಕ್ತಿ ಪ್ರೊವ್ ಮಾಡು: ಎಚ್‌ಡಿಕೆಗೆ ನೇರ ಸವಾಲು ಹಾಕಿದ ಶಿವನಗೌಡ ನಾಯಕ

ವಿಧಾನ ಪರಿಷತ್‌ ಸದಸ್ಯ ಪುಟ್ಟಣ್ಣ ಅವರಿಗೆ ನಮ್ಮ ಪಕ್ಷವು ಎಲ್ಲ ಸ್ಥಾನಮಾನ ನೀಡಿದೆ. ನಮ್ಮ ಪಕ್ಷದವರನ್ನು ನಂಬಿವರ ಕೈ ಬಿಟ್ಟಿಲ್ಲ. ಜನಾರ್ದನರೆಡ್ಡಿ ಅವರಿಗೆ ಸಿಬಿಐನಿಂದ ನೋಟಿಸ್‌ ನೀಡಿರುವುದು ಕಾರ್ಯವನ್ನು ಆ ಸಂಸ್ಥೆ ಮಾಡಿದೆ. ಬಿಜೆಪಿ ಪಕ್ಷವರಿಗೂ ಅನೇಕ ದಾಳಿ, ನೋಟೀಸ್‌ ನೀಡಿದೆ ಎಂದು ಸ್ಪಷ್ಟಪಡಿಸಿದರು.

ಬೆಂಗ​ಳೂ​ರಿ​ನಲ್ಲಿ ಸಾರಿಗೆ ಬಸ್‌ ಬೆಂಕಿ ಅವ​ಘ​ಡ​ದಲ್ಲಿ ಮೃತ​ಪಟ್ಟಚಾಲ​ಕ ಹಾಗೂ ನಿರ್ವಾ​ಹ​ಕ​ರಿಗೆ 5 ಲಕ್ಷ ರು. ಪರಿ​ಹಾರ, ಕುಟುಂಬ​ಸ್ಥ​ರಿಗೆ ನೌಕರಿ ಹಾಗೂ ವಿಮೆ ಹಣ ಮಂಜೂ​ರಿಗೆ ಸೂಚ​ನೆ ನೀಡ​ಲಾ​ಗಿದೆ. ಸಾರಿಗೆ ನೌಕರರ ವೇತನ ಹೆಚ್ಚಳ ಕುರಿತು ಶೇ. 10ರಷ್ಟು ವೇತನ ಹೆಚ್ಚಳಕ್ಕೆ ಭರವಸೆ ನೀಡಿದ್ದು, ಸರ್ಕಾರಿ ನೌಕ​ರರ ಮಾದ​ರಿ​ಯಲ್ಲಿ ಶೇ. 17ರಷ್ಟು ನೀಡು​ವಂತೆ ಬೇಡಿ​ಕೆ​ಯಿ​ಟ್ಟಿ​ದ್ದಾರೆ. ಆದ​ಷ್ಟು ಶೀಘ್ರದಲ್ಲಿ ನೌಕ​ರ​ರಿಗೆ ಸಿಹಿ ಸುದ್ದಿ ನೀಡ​ಲಾ​ಗು​ವುದು ಎಂದರು.

click me!