ಕಾಂಗ್ರೆಸ್ ಭದ್ರಕೊಟೆ ಚಿತ್ತಾಪುರ, ಖರ್ಗೆಯನ್ನ ಸೊಲಿಸಿ ಕ್ಷೇತ್ರದಲ್ಲಿ ಕಮಲ ಅರಳುವಂತೆ ಮಾಡಬೇಕು ಎಂದು ಜಿದ್ದಿಗೆ ಬಿದ್ದ ಬಿಜೆಪಿ ನಾಯಕರು.
ಚಿತ್ತಾಪುರ(ಏ.07): ಚಿತ್ತಾಪುರ ಮತಕ್ಷೇತ್ರದಲ್ಲಿ ಕಾಂಗ್ರೆಸ್‌ನ ಪ್ರಿಯಾಂಕ್ ಖರ್ಗೆ ಸೋಲಿಸಲು ಹೊರಟಿರುವ ಬಿಜೆಪಿಗೆ ಇಲ್ಲಿ ಅಭ್ಯರ್ಥಿಗಳನ್ನಾಗಿ ಯಾರನ್ನು ಮಾಡಬೇಕು ಎನ್ನೋದೇ ಕಗ್ಗಂಟಾಗಿದೆ. ಕಾಂಗ್ರೆಸ್ ಭದ್ರಕೊಟೆ ಚಿತ್ತಾಪುರ, ಖರ್ಗೆಯನ್ನ ಸೊಲಿಸಿ ಕ್ಷೇತ್ರದಲ್ಲಿ ಕಮಲ ಅರಳುವಂತೆ ಮಾಡಬೇಕು ಎಂದು ಬಿಜೆಪಿ ನಾಯಕರು ಜಿದ್ದಿಗೆ ಬಿದ್ದಿದ್ದಾರೆ.
ಬಿಜೆಪಿ ಟಿಕೆಟ್ ಹಂಚಿಕೆ ತಲೆ ನೊವಿನ ಸಂಗತಿ:
undefined
ಕಳೆದ ಬಾರಿ ಬಿಜೆಪಿಯಿಂದ ಸ್ಪರ್ಧಿಸಿದ್ದ ವಾಲ್ಮಿಕಿ ನಾಯಕ ಪ್ರಿಯಾಂಕ್ ಖರ್ಗೆರವರಿಗೆ ಪ್ರಬಲ ಪೈಪೋಟಿಯನ್ನು ನೀಡಿದ್ದರು. ಈಗ ಅವರ ನಿಧನದಿಂದ ಅವರ ಪುತ್ರ ವಿಠಲ್ ನಾಯಕ ತಮ್ಮ ತಂದೆಯು ಕ್ಷೇತ್ರದಲ್ಲಿ ಮೂರುವರೆ ವರ್ಷದ ಅವಧಿಯಲ್ಲಿ ಮಾಡಿರುವ ಅಭಿವೃದ್ಧಿ ಮುಂದಿಟ್ಟುಕೊಂಡು ತಮಗೆ ಟಿಕೆಟ್ ನೀಡಬೇಕು ಎಂದು ಹೈಕಮಾಂಡ್ ಮೊರೆ ಹೊಗಿದ್ದಾರೆ. ಅಭ್ಯರ್ಥಿಯಾಗಲು ಎಂಎಲ್‌ಸಿ ಸದಸ್ಯ ಸುನಿಲ್ ವಲ್ಯಾಪುರ, ಮುಂಖಂಡರಾದ ಮಣಿಕಂಠ ರಾಠೋಡ, ಅರವಿಂದ ಚವ್ವಾಣ, ಬಸವರಾಜ ಬೆಣ್ಣೂರಕರ್, ಸುರೇಶ ರಾಠೋಡ, ದೇವೆಂದ್ರನಾಥ ನಾಧ್, ವಿನೋದ ಅಣವಾರಕರ್, ಅಯ್ಯಪ್ಪ ರಾಮತೀರ್ಥ ಹಾಗೂ ಧರ್ಮಣ್ಣ ಇಟಗಾ ಸೇರಿದಂತೆ ಹಲವರು ಲಾಬಿಗೆ ಮುಂದಾಗಿದ್ದಾರೆ.
ಸೇಡಂ ಜಿದ್ದಾಜಿದ್ದಿ: ಕಾಗಿಣಾ ತೀರದಲ್ಲಿ ಈ ಬಾರಿ ಮತ್ತೊಂದು ಚತುಷ್ಕೋನ ಕದನ
ಕಾಂಗ್ರೆಸ್‌ನಲ್ಲಿ ಭರ್ಜರಿ ತಯಾರಿ:
ಕಾಂಗ್ರೆಸ್‌ನಿಂದ ಹಾಲಿ ಶಾಸಕ ಪ್ರಿಯಾಂಕ್ ಖರ್ಗೆ ಸ್ಪರ್ಧೇಗೆ ಹಸಿರು ನಿಶಾನೆ ಸಿಕ್ಕಿದ್ದರಿಂದ ತಯ್ಯಾರಿ ಜೋರಾಗಿದೆ. 2 ಅವಧಿ ಶಾಸಕರಾಗಿದ್ದ ಇವರು ಸಾಕಷ್ಟುಅನುದಾನ ತಂದಿರೋದಾಗಿ ಹೇಳುತ್ತ ಮತ ಕೇಳುತ್ತಿದ್ದಾರೆ. ಮಾಜಿ ಸಚಿವ ಬಾಬೂರಾವ ಚಿಂಚನ್‌ಸೂರ್ ಸೇರಿದ್ದರಿಂದ ಇಲ್ಲಿ ಕಾಂಗ್ರೆಸ್‌ಗೆ ಅನುಕೂಲವಾಗಲಿದೆ.
ಜೆಡಿಎಸ್‌ನಿಂದ ಸುಭಾಶ್ಚಂದ್ರ ರಾಠೋಡ?:
ಜೆಡಿಎಸ್‌ನಿಂದ ಇಲ್ಲಿ ನಿವೃತ್ತ ನಾಯಾಧೀಶ ಡಾ. ಸುಭಾಶ್ವಚಂದ್ರ ರಾಠೋಡ ಧುಮಕಲಿದ್ದಾರೆಂಬ ಸುದ್ದಿ ಇದೆ. ನ್ಯಾಯಾಧೀಶರ ಸ್ಥಾನಕ್ಕೆ ರಾಜೀನಾಮೆಯನ್ನು ಸಲ್ಲಿಸಿ ಕ್ಷೇತ್ರದಾದ್ಯಂತಹ ಕಾರ್ಯಕರ್ತರ ಸಭೆ ನಡೆಸಿ ಭರ್ಜರಿ ಸಿದ್ದತೆಯನ್ನು ಮಾಡಿಕೊಳ್ಳುತ್ತಿದ್ದಾರೆ. ಇನ್ನು ಬಿಎಸ್‌ಪಿ ಹಾಗೂ ಆಮ್ ಆದ್ಮಿ ಪಕ್ಷಗಳು ಕೂಡಾ ಚುನಾವಣೆ ಸ್ಪಧಿಸಲು ಮುಂದಾಗಿದ್ದು ಅಭ್ಯರ್ಥಿ ಯಾರೆಂದು ನಿರ್ಧಾರವಾಗಿಲ್ಲ.
ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.