
ಬೆಂಗಳೂರು (ಮಾ.9): ದೇಶದ ಅತಿದೊಡ್ಡ ರಾಜ್ಯ ಉತ್ತರಪ್ರದೇಶ (Uttar Pradesh), ಉತ್ತರಾಖಂಡ (Uttarakhand), ಮಣಿಪುರ (Manipur), ಪಂಜಾಬ್ (Punjab) ಹಾಗೂ ಗೋವಾ (Goa) ರಾಜ್ಯಗಳಿಗೆ ಏಳು ಹಂತಗಳಲ್ಲಿ ನಡೆದ ಚುನಾವಣಾ (Election) ಪ್ರಕ್ರಿಯೆ ಸಂಪೂರ್ಣ ಶಾಂತಿಯುತವಾಗಿ ಮುಕ್ತಯವಾಗಿದೆ. ಈಗ ಎಲ್ಲರ ಕಣ್ಣು ಗುರುವಾರ ಪ್ರಕಟವಾಗಲಿರುವ ಫಲಿತಾಂಶದತ್ತ ನೆಟ್ಟಿದೆ. ಆದರೆ, ಚುನಾವಣಾ ಫಲಿತಾಂಶವನ್ನು (Election Results) ನೋಡುವ ಮುನ್ನ ಕೆಲವೊಂದು ಸಂಗತಿಗಳನ್ನು ನಾವು ನಿಮಗೆ ತಿಳಿಸುವ ಪ್ರಯತ್ನ ಮಾಡಿದ್ದೇವೆ. ಭಾರತದ ಚುನಾವಣೆಯಲ್ಲಿ ಇವಿಎಂ (EVM) ಅನ್ನು ಯಾವಾಗಲಿಂದ ಬಳಕೆ ಮಾಡಲು ಆರಂಭಿಸಲಾಯಿತು? ಸ್ಟ್ರಾಂಗ್ ರೂಮ್ (Strong Room) ಎಂದರೆ ಏನು? ಮತಗಳು ಹೇಗೆ ಕೌಂಟ್ (Vote Count) ಆಗುತ್ತವೆ ? ಎನ್ನುವ ಕುತೂಹಲ ನಿಮ್ಮಲ್ಲಿರಬಹುದು. ಅದಕ್ಕೆಲ್ಲ ಉತ್ತರ ಇಲ್ಲಿದೆ.
ಇವಿಎಂ ಭಾರತಕ್ಕೆ ಬಂದಿದ್ದು ಹೇಗೆ: 1977ರಲ್ಲಿ ಮೊಟ್ಟಮೊದಲ ಬಾರಿಗೆ ಭಾರತದಲ್ಲಿ ಕೇಂದ್ರ ಚುನಾವಣಾ ಆಯೋಗ ಮೊಟ್ಟಮೊದಲ ಬಾರಿಗೆ ಇವಿಎಂಅನ್ನು ತಯಾರಿಸುವ ನಿಟ್ಟಿನಲ್ಲಿ ಸರ್ಕಾರಿ ಸ್ವಾಮ್ಯದ ಎಲೆಕ್ಟ್ರಾನಿಕ್ಸ್ ಕಾರ್ಪೋರೇಷನ್ ಆಫ್ ಇಂಡಿಯಾ (EICL) ಬಳಿ ಕೇಳಿಕೊಂಡಿತ್ತು. 1979ರಲ್ಲಿ ಈಐಸಿಎಲ್, ಇವಿಎಂನ ಮಾದರಿಯನ್ನು ಸಿದ್ಧಪಡಿಸಿ ಚುನಾವಣಾ ಆಯೋಗಕ್ಕೆ ನೀಡಿತ್ತು. 1980ರ ಆಗಸ್ಟ್ 6 ರಂದು ಚುನಾವಣಾ ಅಯೋಗ ಇವಿಎಂ ಕುರಿತಾಗಿ ರಾಜಕೀಯ ಪಕ್ಷಗಳಿಗೆ ಮಾಹಿತಿ ನೀಡಿತ್ತು.
1982ರ ಮೇ ತಿಂಗಳಿನಲ್ಲಿ ಮೊಟ್ಟಮೊದಲ ಬಾರಿಗೆ ಕೇರಳ ವಿಧಾನಸಭೆ ಚುನಾವಣೆ ಇವಿಎಂ ಮೂಲಕ ನಡೆದಿತ್ತು. ಆ ಸಮಯದಲ್ಲಿ ಚುನಾವಣೆಯನ್ನು ಇವಿಎಂ ಮೂಲಕವೇ ಮಾಡಬೇಕು ಎನ್ನುವ ನಿಯಮ ಕಡ್ಡಾಯವಿರಲಿಲ್ಲ. 1989ರಲ್ಲಿ ಜನಪ್ರತಿನಿಧಿಗಳ ಪ್ರಜಾ ಕಾಯ್ದೆ 11951ಕ್ಕೆ ತಿದ್ದುಪಡಿ ತರುವ ಮೂಲಕ ಚುನಾವಣೆಯನ್ನು ಇವಿಎಂ ಮೂಲಕ ನಡೆಸುವುದನ್ನು ಸೇರಿಸಲಾಗಿತ್ತು. ಕಾನೂನು ಜಾರಿಯಾಗಿದ್ದರೂ, ಹಲವು ವರ್ಷಗಳವರೆಗೆ ಇವಿಎಂ ಅನ್ನು ಚುನಾವಣೆಯಲ್ಲಿ ಬಳಕೆ ಮಾಡುತ್ತಿರಲಿಲ್ಲ.1998ರಲ್ಲಿ ಮಧ್ಯಪ್ರದೇಶ, ರಾಜಸ್ಥಾನ ಹಾಗೂ ದೆಹಲಿಗೆ ನಡೆದ ಚುನಾವಣೆಯ 25 ವಿಧಾನಸಭೆ ಕ್ಷೇತ್ರಗಳಲ್ಲಿ ಇವಿಎಂ ಅನ್ನು ಬಳಕೆ ಮಾಡಲಾಗಿತ್ತು. 1999ರ ಲೋಕಸಭೆ ಚುನಾವಣೆ 45 ಕ್ಷೇತ್ರಗಳ ಚುನಾವಣೆಯನ್ನೂ ಇವಿಎಂ ಮೂಲಕ ಮಾಡಲಾಗಿತ್ತು. 2000 ಇಸವಿಯಲ್ಲಿ ನಡೆದ ಹರಿಯಾಣ ವಿಧಾನಸಭೆ ಚುನಾವಣೆಯ 45 ಕ್ಷೇತ್ರಗಳ ಮತವನ್ನು ಇವಿಎಂ ಮೂಲಕವೇ ಹಿಡಿದಿಡಲಾಗಿತ್ತು.
ಆದರೆ, 2001ರಲ್ಲಿ ತಮಿಳುನಾಡು, ಕೇರಳ, ಪಾಂಡಿಚೇರಿ ಹಾಗೂ ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಗೆ ಸಂಪೂರ್ಣವಾಗಿ ಇವಿಎಂ ಅನ್ನೇ ಬಳಸಲಾಗಿತ್ತು. ಅದಾದ ಬಳಿಕ 2004 ಲೋಕಸಭೆ ಚುನಾವಣೆಯಲ್ಲಿ ಎಲ್ಲಾ 543 ಕ್ಷೇತ್ರಗಳ ಚುನಾವಣೆಯನ್ನೂ ಇವಿಎಂನೊಂದಿಗೆ ಮಾಡಲಾಗಿತ್ತು. ಅಂದಿನಿಂದ ದೇಶದ ಎಲ್ಲಾ ಚುನಾವಣೆಗೂ ಇವಿಎಂ ಅನ್ನೇ ಬಳಕೆ ಮಾಡಿಕೊಳ್ಳಲಾಗುತ್ತಿದೆ.
ಇವಿಎಂ ಎಂದರೇನು?: ಎಲೆಕ್ಟ್ರಾನಿಕ್ ವೋಟಿಂಗ್ ಮಷಿನ್ (electronic Voting machine) ಅಥವಾ ಇವಿಎಂ. ದೇಶದಲ್ಲಿ ಇವಿಎಂ ತಯಾರಿಸುವ ಅಧಿಕಾರ ಸರ್ಕಾರಿ ಸ್ವಾಮ್ಯದ ಎರಡು ಕಂಪನಿಗಳಾದ ಬೆಂಗಳೂರು ಮೂಲದ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಹಾಗೂ ಹೈದರಾಬಾದ್ ಮೂಲಕ ಈಐಸಿಎಲ್ ಗೆ ಮಾತ್ರವೇ ಇದೆ. ಇವಿಎಂನಲ್ಲಿ ಎರಡು ಯುನಿಟ್ ಗಳಿವೆ ಒಂದು ಕಂಟ್ರೋಲ್ ಯುನಿಟ್ ಮತ್ತೊಂದು ಬಾಲಟ್ ಯುನಿಟ್. ಈ ಕಂಟ್ರೋಲ್ ಯುನಿಟ್ ಅನ್ನು ಒತ್ತಬೇಕಾದವರು ಚುನಾವಣೆಯ ಅಧಿಕಾರಿ. ಇದನ್ನು ಒತ್ತದ ಬಳಿಕವೇ ಬಾಲಟ್ ಯುನಿಟ್ ಕೆಲಸ ಮಾಡಲು ಆರಂಭಿಸಲಿದ್ದು,ವೋಟ್ ಹಾಕಲು ಸಾಧ್ಯವಾಗುತ್ತದೆ. ಮತಯಂತ್ರವನ್ನು ಒತ್ತದ ಬಳಿಕ ಬೀಪ್ ಶಬ್ದ ಕೇಳಿಬರುತ್ತದೆ. ಹಾಗೆ ಬಂದಲ್ಲಿ, ನಿಮ್ಮ ಮತ ಚಲಾವಣೆ ಆಗಿದೆ ಎಂದರ್ಥ.
ನಾಳೆ ಪಂಚರಾಜ್ಯಗಳ ಚುನಾವಣಾ ಫಲಿತಾಂಶ: ಪಂಜಾಬ್‌ನಲ್ಲಿ ಲಡ್ಡಿಗೆ ಭಾರಿ ಬೇಡಿಕೆ
ಹೇಗಿರುತ್ತೆ ಸ್ಟ್ರಾಂಗ್ ರೂಮ್: ಮತದಾನವಾದ ಬಳಿಕ, ಇವಿಎಂಗಳು ಹಾಗೂ ವಿವಿಪ್ಯಾಟ್ ಗಳನ್ನು ಸ್ಟ್ರಾಂಗ್ ರೂಮ್ ಹೆಸರಿನ ಕೋಣೆಯಲ್ಲಿ ಇಡಲಾಗುತ್ತದೆ. ಅಲ್ಲಿ ಅಚ್ಚಕಟ್ಟಾದ ಭದ್ರತಾ ವ್ಯವಸ್ಥೆ ಇರುತ್ತದೆ. ಸಿಎಪಿಎಫ್ ಪಡೆಯನ್ನು ದಿನದ 24 ಗಂಟೆಯೂ ಸ್ಟ್ರಾಂಗ್ ರೂಮ್ ಕಾವಲಿಗೆ ಮೀಸಲಿಡಲಾಗುತ್ತದೆ. ಅದರೊಂದಿಗೆ ದಿನದ 24 ಗಂಟೆಯೂ ಸಿಸಿಟಿವಿ ನಿಗಾದಲ್ಲಿ ಇದು ಇರುತ್ತದೆ. ಈ ಸ್ಟ್ರಾಂಗ್ ರೂಮ್ ಗಳಿಗೆ ಎರಡು ಕೀ ಇರುತ್ತದೆ. ಒಂದು ರೂಮ್ ನ ಇನ್ ಚಾರ್ಜ್ ಬಳಿ ಇದ್ದರೆ, ಇನ್ನೊಂದು ಎಡಿಎಂ ಅಥವಾ ಅವರಿಗಿಂತ ಮೇಲಿನ ಅಧಿಕಾರಿಯ ಕೈಯಲ್ಲಿರುತ್ತದೆ. ಸ್ಟ್ರಾಂಗ್ ರೂಮ್ ಗೆ ಒಂದಕ್ಕಿಂತ ಹೆಚ್ಚಿನ ಬಾಗಿಲುಗಳಿದ್ದರೆ, ನಡುವೆ ಗೋಡೆಯನ್ನು ಕಟ್ಟಲಾಗುತ್ತದೆ. ಸ್ಟ್ರಾಂಗ್ ರೂಮ್ ಭದ್ರತೆಗೆ ಕಂಟ್ರೋಲ್ ರೂಮ್ ಕೂಡ ಇರಲಿದೆ. ಪೊಲೀಸ್ ಅಧಿಕಾರಿಗಳು ಭದ್ರತಾ ವ್ಯವಸ್ಥೆ ಪರಿಶೀಲನೆ ಮಾಡಲು ಬರುತ್ತಿರುತ್ತಾರೆ. ಅದರೊಂದಿಗೆ 24 ಗಂಟೆಯೂ ಈ ಕೋಣೆಗೆ ವಿದ್ಯುತ್ ಇರುವಂಥ ವ್ಯವಸ್ಥೆ ಮಾಡಲಾಗಿರುತ್ತದೆ.
5 States Election: ಉ.ಪ್ರ.ಕ್ಕೆ ಮತ್ತೆ ಯೋಗಿ ರಾಜ್ಯಭಾರ, ಪಂಜಾಬ್‌ಗೆ ಆಪ್..?
ಮತಗಳನ್ನು ಕೌಂಟ್ ಮಾಡೋದು ಹೇಗೆ: ಮತ ಎಣಿಕೆ ಕೇಂದ್ರದಲ್ಲಿ 14 ಟೇಬಲ್ ಗಳು ಇರಲಿದ್ದು, ಇವುಗಳೊಂದಿಗೆ ಇನ್ನೊಂದು ಟೇಬಲ್ ರಿಟರ್ನಿಂಗ್ ಅಧಿಕಾರಿ ಅಥವಾ ಅಬ್ಸರ್ವರ್ ಗಾಗಿ ಇರುತ್ತದೆ. ಅಭ್ಯರ್ಥಿ ಅಥವಾ ಆತನ ಏಜೆಂಟ್ ಗೆ ಮತದಾನ ಕೇಂದ್ರದಲ್ಲಿ ಇರುವ ವ್ಯವಸ್ಥೆಯೂ ಇದೆ. ಸಾಕಷ್ಟು ಸುತ್ತುಗಳಲ್ಲಿ ಮತ ಎಣಿಕೆ ನಡೆಯುತ್ತದೆ. ಮತಎಣಿಕೆ ದಿನದ ಮೊದಲ ಅರ್ಧಗಂಟೆ ಪೋಸ್ಟಲ್ ಬಾಲಟ್ ಮತಗಳ ಎಣಿಕೆ ಆಗುತ್ತದೆ. ಆ ಬಳಿಕ ಇವಿಎಂ ಎಣಿಕೆ ಆರಂಭವಾಗುತ್ತದೆ. ಪ್ರತಿ ಸುತ್ತಿನಲ್ಲೂ 14 ಇವಿಎಂಗಳ ಕೌಂಟಿಂಗ್ ನಡೆಯುತ್ತದೆ. ಪ್ರತಿ ಸುತ್ತಿನ ಬಳಿಕ, 17-ಸಿ ಫಾರ್ಮ್ ಗೆ ಏಜೆಂಟ್ ಸಹಿ ಹಾಕಿ ಆರ್ ಓಗೆ ನೀಡಬೇಕಿರುತ್ತದೆ. ಅದರೊಂದಿಗೆ ಮತ ಎಣಿಕೆ ಕೇಂದ್ರದಲ್ಲಿ ಕಪ್ಪುಹಲಗೆ ಇರಲಿದ್ದು, ಪ್ರತಿ ಸುತ್ತಿನ ಬಳಿಕ ಆಯಾ ಅಭ್ಯರ್ಥಿ ಪಡೆದ ಮತಗಳನ್ನು ಅಲ್ಲಿ ದಾಖಲು ಮಾಡುತ್ತಾರೆ. ಅದರೊಂದಿಗೆ ಧ್ವನಿವರ್ಧಕದಲ್ಲಿ ಮಾಹಿತಿಯನ್ನೂ ನೀಡುತ್ತಾರೆ. ಮತ ಎಣಿಕೆ ಕೇಂದ್ರದ್ಲಿ ಮೊಬೈಲ್ ತೆಗೆದುಕೊಂಡು ಹೋಗುವಂತಿಲ್ಲ. ಮಾಧ್ಯಮ ಪ್ರತಿನಿಧಿಗಳಿಗೆ ಅವಕಾಶವಿರುವುದಿಲ್ಲ. ಅಧಿಕೃತ ಕ್ಯಾಮರಾಗಳ ಮೂಲಕ ಮಾತ್ರವೇ ವಿಡಿಯೋ ರೆಕಾರ್ಡಿಂಗ್ ನಡೆಯುತ್ತದೆ. ಖಾಸಗಿ ಕ್ಯಾಮೆರಾದಿಂದ ರೆಕಾರ್ಡ್ ಮಾಡುವುದು ನಿಷಿದ್ಧವಾಗಿರುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.