ಯುವ ಕಾಂಗ್ರೆಸ್ ನಾಯಕಿ ನವ್ಯಶ್ರೀ ಹಾಗೂ ತೋಟಗಾರಿಕೆ ಉಲಾಖೆಯ ಸಹಾಯಕ ನಿರ್ದೇಶಕ ರಾಜಕುಮಾರ್ ಟಾಕಳೆ ತಿಕ್ಕಾಟ ಇದೀಗ ರಾಜಕೀಯ ಸ್ವರೂಪ ಪಡೆದುಕೊಂಡಿದ್ದು, ಮುಂಬೈ ರಹಸ್ಯ ಬಿಚ್ಚಿಟ್ಟಿದ್ದಾರೆ.
ಬೆಳಗಾವಿ, (ಜುಲೈ.23): ಕಾಂಗ್ರೆಸ್ ಯುವ ನಾಯಕಿ ನವ್ಯಶ್ರೀ ಹಾಗೂ ತೋಟಗಾರಿಕೆ ಉಲಾಖೆಯ ಸಹಾಯಕ ನಿರ್ದೇಶಕ ರಾಜಕುಮಾರ್ ಟಾಕಳೆ ತಿಕ್ಕಾಟಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ.
ವಿಡಿಯೋ ಹರಿಬಿಟ್ಟರುವುದರ ಹಿಂದೆ ಚೆನ್ನಪಟ್ಟಣದ ಕಾಂಗ್ರೆಸ್ ಮಹಾನಾಯಕರೊಬ್ಬರ ಕೈವಾಡವಿದೆ ಎಂದು ಸ್ವತಃ ನವ್ಯಶ್ರೀ ಹೊಸ ಬಾಂಬ್ ಸಿಡಿಸಿದ್ದಾರೆ. ಇದರ ಬಗ್ಗೆ ಇನ್ನೂ ಮುಂದುವರೆದು ಮಾತನಾಡಿ, ಈ ಹಿಂದೆ ಕರ್ನಾಟಕದ ಅತೃಪ್ತ ಶಾಸಕರು ಮುಂಬೈಗೆ ಹೋದಾಗ ತಮಗೆ ನೀಡಿದ್ದ ಟಾಸ್ಕ್ ಬಗ್ಗೆಯೂ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಹೌದು... ಈ ಬಗ್ಗೆ ಬೆಳಗಾವಿಯಲ್ಲಿ ಇಂದು(ಶನಿವಾರ) ಸುದ್ದಿಗಾರರೊಂದಿಗೆ ಮಾತನಾಡಿದ ನವ್ಯಶ್ರೀ, ಅತೃಪ್ತ ಶಾಸಕರು ಮುಂಬೈಗೆ ಹೋದಾಗ ನಮಗೆ ಟಾಸ್ಕ್ ನೀಡಿದ್ದು, ಎಂಎಲ್ಎಗಳ ಚಲನವಲನದ ಮೇಲೆ ಕಣ್ಣಿಡಲು ಬಿಟ್ಟಿದ್ದರು. ನನ್ನ ಜತೆ ಮೂವರಿಗೆ ಟಾಸ್ಕ್ ನೀಡಲಾಗಿತ್ತು. ಅತೃಪ್ತ ಶಾಸಕರು ಮುಂಬೈನಲ್ಲಿದ್ದಾಗ ನಾನೂ ಮುಂಬೈಗೆ ತೆರಳಿದ್ದೆ. ಕಾಂಗ್ರೆಸ್ ನಾಯಕರೊಬ್ಬರಿಗೆ ಅರ್ಧರಾತ್ರಿಯಲ್ಲಿ ಅತೃಪ್ತ ಶಾಸಕರ ಬಗ್ಗೆ ಮಾಹಿತಿ ಕೊಡ್ತಿದ್ದೆ ಎಂದು ಸ್ಫೋಟ ಮಾಹಿತಿಯನ್ನು ಬಾಯ್ಬಿಟ್ಟರು.
ನನ್ನ ವಿರುದ್ಧದ ಷಡ್ಯಂತ್ರದ ಹಿಂದೆ ಚೆನ್ನಪಟ್ಟಣದ ಮಹಾನಾಯಕ ಇದ್ದಾನೆ: ನವ್ಯಶ್ರೀ ಬಾಂಬ್
ಅತೃಪ್ತ ಶಾಸಕರು ಮುಂಬೈನಲ್ಲಿ ಇದ್ದಾಗ ನಾನೂ ಮುಂಬೈಗೆ ತೆರಳಿದ್ದೆ. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರೊಬ್ಬರು ನನಗೆ ಮುಂಬೈಗೆ ಹೋಗಲು ಸೀಕ್ರೆಟ್ ಟಾಸ್ಕ್ ನೀಡಿದ್ದರು. ಅದು ಅತೃಪ್ತ ಶಾಸಕರ ಚಲನವಲನ ನೋಡಿಕೊಳ್ಳುವ ಸೀಕ್ರೆಟ್ ಟಾಸ್ಕ್ ಆಗಿತ್ತು. ಅದಕ್ಕಾಗಿ ಬೇರೆ-ಬೇರೆ ಫ್ಲೈಟ್‌ಗಳಿಂದ ಮುಂಬೈಗೆ ಹೋಗಿದ್ದೆ ಎಂದು ಹೇಳಿದರು.
ನಾನು ಮುಂಬೈನ ಸುಫಿಯೋಟೆಲ್ ಹೋಟೆಲ್‌ನಲ್ಲಿ ತಂಗಿದ್ದೆ. ನನ್ನ ಜೊತೆ ಮೂವರು ಮಹಿಳೆಯರು ಬಂದಿದ್ದರು. ಹೋಟೆಲ್‌ಗೆ ಹೋಗಿ ಶಾಸಕರ ಚಲನವಲನ ನೋಡಿಕೊಳ್ಳುತ್ತಿದ್ದೆ. ನಂತರ ಕಾಂಗ್ರೆಸ್ ನಾಯಕರಿಗೆ ಅರ್ಧರಾತ್ರಿ ವಾಟ್ಸಪ್ ಮೂಲಕ ಅತೃಪ್ತ ಶಾಸಕರ ಮಾಹಿತಿ ಕೊಡ್ತಿದ್ದೆ. ಆ ಸೀಕ್ರೆಟ್ ಟಾಸ್ಕ್ ನಾನು ಯಶಸ್ವಿಯಾಗಿ ನಿಭಾಯಿಸಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಖಾಸಗಿ ವಿಡಿಯೋ ವೈರಲ್, ದೂರು ಕೊಟ್ಟವನೇ ನನ್ನ ಗಂಡ ಎಂದ ಕಾಂಗ್ರೆಸ್ ಯುವ ನಾಯಕಿ ನವ್ಯಶ್ರೀ
ನಾನು ದೆಹಲಿಮಟ್ಟದ, ರಾಜ್ಯಮಟ್ಟದ ಕಾಂಗ್ರೆಸ್ ನಾಯಕರ ಜೊತೆ ಸಂಪರ್ಕ ಇರೋದು ನಿಜ. 2023ಕ್ಕೆ ಬೆಳಗಾವಿಯಿಂದ ಚುನಾವಣೆಗೆ ನಿಲ್ಲಬೇಕೆಂದಿದ್ದೆ. ಆದರೆ ಈಗ ರಾಜಕಾರಣ ಹೊರತುಪಡಿಸಿ ವೈಯಕ್ತಿಕ ಬದುಕು ಸರಿಪಡಿಸಿಕೊಳ್ಳಬೇಕಿದೆ. ಈ ಕೃತ್ಯಕ್ಕೆ ಸಹಕಾರ ಕೊಟ್ಟ ಮಹಾನಾಯಕ ಯಾರು ಎಂಬುದನ್ನು ಶೀಘ್ರದಲ್ಲೇ ಹೇಳುತ್ತೇನೆ. ಆತನ ಮುಂದಿನ ಜೀವನ ಮುಳ್ಳಾಗುವಂತೆ ಮಾಡ್ತೇನೆ ಎಂದರು.
ಕಾಂಗ್ರೆಸ್ ನಿಂದ ನನ್ನ ಇನ್ನೂ ಸಸ್ಪೆಂಡ್ ಮಾಡುವ ಲೆಟರ್ ಬಂದಿಲ್ಲ. ಬೇಕಾದರೆ ನನ್ನ ಸಸ್ಪೆಂಡ್ ಮಾಡಲಿ. ನಾನು ಕಾಂಗ್ರೆಸ್ ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತೆ. ಯಾವ ಪೋಸ್ಟ್ ಅಂತಾ ಹೇಳಲ್ಲ. ಇದನ್ನು ರಾಜಕೀಯವಾಗಿ ತಿರುಚುವ ಉದ್ದೇಶವೂ ನನಗಿಲ್ಲ ಎಂದು ತಿಳಿಸಿದರು.