ಕಾಂಗ್ರೆಸ್ ಯುವ ನಾಯಕಿ ನವ್ಯಶ್ರೀ ಹಾಗೂ ತೋಟಗಾರಿಕೆ ಉಲಾಖೆಯ ಸಹಾಯಕ ನಿರ್ದೇಶಕ ರಾಜಕುಮಾರ್ ಟಾಕಳೆ ತಿಕ್ಕಾಟಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ.
ಬೆಳಗಾವಿ, (ಜುಲೈ.23): ತಮ್ಮ ವಿರುದ್ಧದ ಬ್ಲಾಕ್ ಮೇಲ್ ಹಾಗೂ ವಂಚನೆ ಪ್ರಕರಣದ ಬಗ್ಗೆ ಕಾಂಗ್ರೆಸ್ ಯುವ ನಾಯಕಿ ನವ್ಯಶ್ರೀ ಪ್ರತಿಕ್ರಿಯಿಸಿದ್ದು, ಹೊಸ ಬಾಂಬ್ ಸಿಡಿಸಿದ್ದಾರೆ. ನವ್ಯಶ್ರೀ ಹಾಗೂ ತೋಟಗಾರಿಕೆ ಉಲಾಖೆಯ ಸಹಾಯಕ ನಿರ್ದೇಶಕ ರಾಜಕುಮಾರ್ ಟಾಕಳೆ ತಿಕ್ಕಾಟ ರಾಜಕೀಯ ಸ್ವರೂಪ ಪಡೆದುಕೊಂಡಿದೆ.
ಹೌದು....ನವ್ಯಶ್ರೀ ರಾಸಲೀಲೆ ವಿಡಿಯೋ ಹರಿಬಿಟ್ಟರುವುದರ ಹಿಂದೆ ಕಾಂಗ್ರೆಸ್ ಮಹಾನಾಯಕರೊಬ್ಬರ ಕೈವಾಡವಿದೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ. ಆದ್ರೆ, ನವ್ಯಶ್ರೀ ಆ ಮಹಾನಾಯಕನ ಹೆಸರು ಹೇಳಿಲ್ಲ.ಇದು ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.
ಈ ಬಗ್ಗೆ ಬೆಳಗಾವಿಯಲ್ಲಿ ಇಂದು(ಶನಿವಾರ) ಸುದ್ದಿಗಾರರೊಂದಿಗೆ ಮಾತನಾಡಿದ ನವ್ಯಶ್ರೀ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ ಹಾಗೂ ರಾಷ್ಟ್ರೀಯ ನಾಯಕರ ಜತೆ ಇರುವ ಫೋಟೋ ಇಟ್ಟುಕೊಂಡು ಅಪಪ್ರಚಾರ ಮಾಡಲಾಗುತ್ತಿದೆ. ರಾಜಕುಮಾರ್ ಟಾಕಳೆ ಹಾಗೂ ನನ್ನ ನಡುವಿನ ಕಿತ್ತಾಟದ ಹಿಂದೆ ಕಾಂಗ್ರೆಸ್ ನ ಮಹಾನಾಯಕರೊಬ್ಬರಿದ್ದಾರೆ. ಅವರು ಟಾಕಳೆಯನ್ನು ದಾಳವನ್ನಾಗಿ ಮಾಡಿಕೊಂಡು ಷಡ್ಯಂತ್ರ ನಡೆಸಿದ್ದಾರೆ ಎಂದು ಆರೋಪಿಸಿದರು.
Karnataka News Live Updates: ಕೈ ಅತೃಪ್ತ ಶಾಸಕರ ಹನಿಟ್ರ್ಯಾಪ್ ಮಾಡಿದ್ರಾ ನವ್ಯಾಶ್ರೀ?
ಇದೆಲ್ಲದರ ಹಿಂದೆ ಇರುವವರು ಚೆನ್ನಪಟ್ಟಣದ ಕಾಂಗ್ರೆಸ್ ಮಹಾನಾಯಕ. ಅವರು ಮುಂದಿನ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗುವ ತವಕದಲ್ಲಿದ್ದಾರೆ. ಅವರ ಜತೆ ಪತ್ರಿಕಾ ಸಂಪಾದಕರೊಬ್ಬರಿದ್ದಾರೆ. ಅವರ ಹೆಸರನ್ನು ನಾನು ಹೇಳಲ್ಲ. ತನಿಖೆ ಬಳಿಕ ಎಲ್ಲರ ಮುಖವಾಡ ಕಳಚಲಿದೆ ಎಂದು ಹೇಳಿದರು.
ನನ್ನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕೆಟ್ಟದಾಗಿ ಬೆಂಬಿಸಲಾಯ್ತು. ಆ ಸಂದರ್ಭದಲ್ಲಿ ನಾನು ವಿದೇಶದಲ್ಲಿದ್ದೆ. ವಾಪಸ್ ಭಾರತಕ್ಕೆ ಬಂದಾಗ ಈ ಬಗ್ಗೆ ಗೊತ್ತಾಯಿತು. ಪರಿಶೀಲನೆ ನಡೆಸಿ ದೂರು ಕೊಡಬೇಕು ಎನ್ನುವಷ್ಟರಲ್ಲಿ ರಾಜಕುಮಾರ ಟಾಕಳೆ ರಾತ್ರೋರಾತ್ರಿ ಬೆಳಗಾವಿ ಎಪಿಎಂಸಿ ಠಾಣೆಗೆ ಹೋಗಿ ದೂರು ನೀಡಿದ್ದಾರೆ. ನನ್ನ ವಿರುದ್ಧ ಹನಿಟ್ರ್ಯಾಪ್ ಆರೋಪ ಮಾಡಿದ್ದಾರೆ ಎಂದರು.
ರಾಜಕುಮಾರ್ ಟಾಕಳೆ ಹಾಗೂ ನಾನು 2020 ಮೇ ತಿಂಗಳಲ್ಲಿ ಬೆಂಗಳೂರಿನ ಕುಮಾರ ಕೃಪಾ ಪ್ರವಾಸಿ ಮಂದಿರದ ಹಿಂದಿರುವ ಗಣೇಶ ದೇವಸ್ಥಾನದಲ್ಲಿ ವಿವಾಹವಾಗಿದ್ದೆವೆ. ರಾಜಕುಮಾರ್ ಟಾಕಳೆ ನನ್ನ ಗಂಡ. ಆತನಿಂದ ನನಗೆ ಅನ್ಯಾಯವಾಗಿದೆ. ಈ ಹಿಂದೆ ನಾನು ಎರಡು ಬಾರಿ ಬೆಳಗಾವಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ. ಮೊದಲ ಪತ್ನಿ ಇದ್ದರೂ ರಾಜಕುಮಾರ್ ಟಾಕಳೆ ನನ್ನನ್ನು ಕಿಡ್ನಾಪ್ ಮಾಡಿ ಮದುವೆಯಾಗಿದ್ದ. ಅಶ್ಲೀಲ ವಿಡಿಯೋ ಚಿತ್ರಿಕರಣ ಮಾಡಿ ವೆಬ್ ಸೈಟ್ ಗೆ ಮಾರಾಟ ಮಾಡಿದ್ದಾನೆ. ಸಾರ್ವಜನಿಕ ಜೀವನದಲ್ಲಿ ನನ್ನ ಮಾನ ತಗೆದಿದ್ದಾನೆ. ಆತನ ವಿರುದ್ಧ ಈಗಾಗಲೇ ನಾನು ದೂರು ದಾಖಲಿಸಿದ್ದೇನೆ. ಕಮಿಷ್ನರ್ ಭೇಟಿಯಾಗಿ ನನಗೆ ನ್ಯಾಯ ಒದಗಿಸುವಂತೆ ಕೇಳಿದ್ದೇನೆ ಎಂದು ತಿಳಿಸಿದರು.