ರಾಜ್ಯದ ಅಭಿವೃದ್ಧಿಗಾಗಿ ನನ್ನ ಕೈ ಹಿಡಿದು ಬಿಜೆಪಿ ಪಕ್ಷವನ್ನು ಬೆಂಬಲಿಸಿ: ಸಚಿವ ಗೋವಿಂದ ಕಾರಜೋಳ

By Kannadaprabha News  |  First Published Apr 16, 2023, 11:59 PM IST

ರನ್ನಬೆಳಗಲಿ ಪಟ್ಟಣಕ್ಕೆ ಕೇಳಿದ್ದೆಲ್ಲವನ್ನೂ ಕೊಟ್ಟಿದ್ದೇನೆ. ಉಳಿದಿರುವುದನ್ನು ಮುಂದಿನ ಅವಧಿಯಲ್ಲಿ ಕೊಡುತ್ತೇನೆ ಎಂದು ಸಚಿವ ಗೋವಿಂದ ಕಾರಜೋಳ ಹೇಳಿದರು. 


ಮಹಾಲಿಂಗಪುರ (ಏ.16): ರನ್ನಬೆಳಗಲಿ ಪಟ್ಟಣಕ್ಕೆ ಕೇಳಿದ್ದೆಲ್ಲವನ್ನೂ ಕೊಟ್ಟಿದ್ದೇನೆ. ಉಳಿದಿರುವುದನ್ನು ಮುಂದಿನ ಅವಧಿಯಲ್ಲಿ ಕೊಡುತ್ತೇನೆ ಎಂದು ಸಚಿವ ಗೋವಿಂದ ಕಾರಜೋಳ ಹೇಳಿದರು. ಸಮೀಪ ರನ್ನಬೆಳಗಲಿಯ ಶ್ರೀ ಬಂದಲಕ್ಷ್ಮಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ ಬಳಿಕ ಮತಯಾಚನೆ ನಡೆಸಿದ ವೇಳೆ ಮಾತನಾಡಿ, ರನ್ನಬೆಳಗಲಿ ಬಗ್ಗೆ ನನಗೆ ಹೆಮ್ಮೆಯಿದೆ. ಕಳೆದ 28 ವರ್ಷಗಳಿಂದ ರನ್ನಬೆಳಗಲಿಯ ಮತ ಎಣಿಕೆ ಮುಗಿದ ತಕ್ಷಣವೇ ನಮ್ಮ ಮುನ್ನಡೆ ಕಂಡು ವಿರೋಧ ಪಕ್ಷದವರು ಜಾಗ ಖಾಲಿ ಮಾಡುತ್ತಾರೆ ಎಂದು ಹೇಳಿದರು. ಪ್ರತಿ ಬಾರಿ ಅಷ್ಟುಬಹುಮತ ಕೊಟ್ಟರನ್ನಬೆಳಗಲಿ ಜನತೆಗೆ ನ್ಯಾಯ ಒದಗಿಸಿದ್ದೇನೆ. 

ದೇಶದ ಅಭಿವೃದ್ಧಿ ಮತ್ತು ಸುರಕ್ಷತೆಗಾಗಿ ಪ್ರಧಾನಿ ಮೋದಿಯವರ ಕೈ ಬಲಪಡಿಸಲು ಹಾಗೂ ರಾಜ್ಯದ ಅಭಿವೃದ್ಧಿಗಾಗಿ ಎಂದಿನಂತೆ ನನ್ನ ಕೈ ಹಿಡಿದು ಬಿಜೆಪಿ ಪಕ್ಷವನ್ನು ಬೆಂಬಲಿಸುವಂತೆ ಕೋರಿದರು. ಬಿಜೆಪಿ ಗ್ರಾಮೀಣ ಘಟಕದ ಉಪಾಧ್ಯಕ್ಷ ಪಂಡಿತ ಪೂಜಾರ ಮಾತನಾಡಿ, ಬೂತ್‌ಗಳಲ್ಲಿ ಲೀಡ್‌ ತರುವುದೇ ನಿಜವಾದ ನಾಯಕತ್ವ. ಕಾರಜೋಳರು ರನ್ನಬೆಳಗಲಿಗೆ ತಲ ತಲಾಂತರದವರೆಗೂ ಸಹಾಯವಾಗಬಲ್ಲ ಶ್ರೇಷ್ಠ ಕಾರ್ಯಗಳನ್ನು ಮಾಡಿದ್ದಾರೆ. ಅವರ ಸೇವೆಯನ್ನು ಮುಂದೆಯೂ ಉಳಿಸಿಕೊಳ್ಳಲು ಶ್ರಮಿಸೋಣ ಎಂದರು. ಪಪಂ ಸದಸ್ಯ ಸಿದ್ದುಗೌಡ ಪಾಟೀಲ, ಮಹಾಲಿಂಗಪ್ಪ ಗುಂಜಿಗಾ, ಶಿವನಗೌಡ ಪಾಟೀಲ, ನಾಗಪ್ಪ ಅಂಬಿ, ಹನುಮಂತ ತುಳಸಿಗೇರಿ ಮಾತನಾಡಿ, ಪ್ರತಿ ಬೂತಿನ ಮುಖಂಡರು ಕಾರಜೋಳ ಸಾಹೇಬರ ಕೆಲಸಗಳನ್ನು ಪ್ರತಿಯೊಬ್ಬರಿಗೂ ತಲುಪಿಸಿ ಪ್ರತಿ ಬೂತಿನಲ್ಲಿಯೂ ಮುನ್ನಡೆ ತರಲು ಶ್ರನಿಸಬೇಕು ಎಂದರು. 

Tap to resize

Latest Videos

undefined

ನಾನು ಮಾಡಿದ ಅಭಿವೃದ್ಧಿ ಮುಂದಿಟ್ಟು ಮತ ಕೇಳುವೆ: ಶಾಸಕ ವೀರಣ್ಣ ಚರಂತಿಮಠ

ಕಾಂಗ್ರೆಸ್‌ನ ಶಿವನಗೌಡ ಕರೋಲಿ, ಭೀಮನಗೌಡ ಕರೋಲಿ, ಶಿವಲಿಂಗಪ್ಪ ಹೊಸಪೇಟಿ ಬಿಜೆಪಿ ಸೇರ್ಪಡೆಯಾದರು. ಜಮಖಂಡಿ ಬಿಜೆಪಿ ಅಭ್ಯರ್ಥಿ ಜಗದೀಶ ಗುಡಗುಂಟಿ, ಕೆ.ಆರ್‌.ಮಾಚಪ್ಪನವರ, ಅರುಣ ಕಾರಜೋಳ, ಆರ್‌.ಟಿ.ಪಾಟೀಲ, ಅಶೋಕ ಸಿದ್ದಾಪುರ, ಚಿಕ್ಕಪ್ಪ ನಾಯಕ, ರಾಜು ಯಡಳ್ಳಿ, ಕುಮಾರ ಹುಲಕುಂದ, ಪ್ರಕಾಶ ವಸ್ತ್ರದ, ಬಸವರಾಜ ದೊಡ್ಡಟ್ಟಿ, ಲಕ್ಷ್ಮಣ ಚಿನ್ನಣ್ಣವರ, ಶ್ರೀಶೈಲಗೌಡ ಪಾಟೀಲ, ಕಲ್ಲಪ್ಪ ಸಬರದ, ಸದಾಶಿವ ಇಟಕಣ್ಣವರ, ಮಲ್ಲು ಕ್ವಾನ್ಯಾಗೋಳ, ರಂಗಪ್ಪ ಒಂಟಗೋಡಿ, ಪರಮಾನಂದ ಸಂಕ್ರಟ್ಟಿ, ಸಂಗನಗೌಡ ಪಾಟೀಲ, ಶಿವಾನಂದ ಅಮಾತಿ, ಮಲ್ಲಪ್ಪ ಮೇಗಾಡಿ, ಮಹಾಲಿಂಗ ಪುರಾಣಿಕ, ಅರ್ಜುನ ಸರ, ಶ್ರೀಶೈಲ ಪುರಾಣಿಕ, ಕಾಶೀನಾಥ ಕುಗಾಟೆ, ಬಸವರಾಜ ಮಳಲಿ, ಮಹಾಲಿಂಗ ತಟ್ಟಿಮನಿ ಇತರರಿದ್ದರು.

ಮೀಸಲು ವಿಚಾರಕ್ಕೆ ಬಂದರೆ ಭಾರೀ ಪ್ರತಿಭಟನೆ: ರಾಜ್ಯ ಸರ್ಕಾರ ಒಕ್ಕಲಿಗ ಮತ್ತು ವೀರಶೈವ ಸಮುದಾಯಗಳಿಗೆ ನೀಡಿರುವ ಮೀಸಲಾತಿ ವಿಚಾರಕ್ಕೆ ಬಂದರೆ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್‌ ಬಂದರೆ ಭಾರೀ ಪ್ರತಿಭಟನೆ, ಪ್ರತಿರೋಧ ಎದುರಿಸಬೇಕಾಗುತ್ತದೆ ಹುಷಾರ್‌ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಎಚ್ಚರಿಸಿದರು. ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರದಲ್ಲಿ ಜಂಗಮ ಸಮಾಜ ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಕಾಂಗ್ರೆಸ್‌ನ ಈ ಇಬ್ಬರೂ ನಾಯಕರು ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಒಕ್ಕಲಿಗ ಹಾಗೂ ಲಿಂಗಾಯತರಿಗೆ ನೀಡಿರುವ ಮೀಸಲಾತಿ ಹಿಂಪಡೆಯುತ್ತೇವೆ ಎನ್ನುತ್ತಿದ್ದಾರೆ. ಇದು ಖಂಡನೀಯ ಎಂದು ಹೇಳಿದರು. ಕಾಂಗ್ರೆಸ್‌ 60 ವರ್ಷಗಳ ಕಾಲ ನಾಗರಿಕರಲ್ಲಿ ಜಾತಿ ವೈಷಮ್ಯದ ಬೀಜ ಬಿತ್ತಿ ಅಧಿಕಾರ ನಡೆಸಿದ್ದು, ಈಗಲೂ ಅದೇ ಚಾಳಿಯನ್ನು ಮುಂದುವರಿಸಿದೆ ಎಂದು ಹರಿಹಾಯ್ದರಲ್ಲದೆ, ಬಿಜೆಪಿ ಮಾಡಿರುವ ಮೀಸಲಾತಿ ಯೋಜನೆಗಳಿಗೆ ಕೈ ಹಾಕಿದರೆ ಕಾಂಗ್ರೆಸ್‌ ಪಕ್ಷ ಒಕ್ಕಲಿಗ ಹಾಗೂ ಲಿಂಗಾಯತರಿಂದ ಬೃಹತ್‌ ಪ್ರತಿಭಟನೆಗಳನ್ನು ಎದುರಿಸಬೇಕಾಗುತ್ತದೆ ಎಂದು ತಿರುಗೇಟು ನೀಡಿದರು.  

125ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆದ್ದು ಬಿಜೆಪಿ ಸರ್ಕಾರ ರಚನೆ: ಸಚಿವ ಮುರುಗೇಶ್‌ನಿರಾಣಿ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಾವೊಬ್ಬರೇ ಅಹಿಂದ ನಾಯಕ ಎಂದು ಬೊಗಳೆ ಬಿಡುತ್ತಿದ್ದಾರೆ. ಆದರೆ, ಪ್ರಧಾನಿ ಮೋದಿಜಿ ಕೂಡ ನೈಜ ಅಹಿಂದ ನಾಯಕರೇ. ದೇಶದ ಎಲ್ಲ ಸಮುದಾಯಗಳಿಗೆ ಪ್ರಾಮಾಣಿಕವಾಗಿ ಸಾಮಾಜಿಕ ನ್ಯಾಯ ಒದಗಿಸುವುದರ ಮುಖಾಂತರ ಅಭಿವೃದ್ಧಿಯ ಹರಿಕಾರರಾಗಿ ವಿಶ್ವದ 200 ದೇಶಗಳಲ್ಲಿ ಮನೆ ಮಾತಾಗಿದ್ದಾರೆ ಎಂದು ಹೇಳಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

click me!