ಭಾರತದಲ್ಲಿ 2047ಕ್ಕೆ ಮುಸ್ಲಿಂ ವ್ಯಕ್ತಿಯನ್ನು ಪ್ರಧಾನಮಂತ್ರಿಯನ್ನಾಗಿ ಮಾಡಲು ಪಾಕಿಸ್ತಾನ ಸೇರಿದಂತೆ ಹಲವು ಮುಸ್ಲಿಂ ದೇಶಗಳಿಂದ ಫಂಡಿಂಗ್ ಆಗುತ್ತಿದೆ ಎಂದು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ವಿಜಯಪುರ (ಏ.16): ದೇಶದಲ್ಲಿ ಇರುವ ಸೋಶಿಯಲ್ ಡೆಮೋಕ್ರೆಟಿಕ್ ಆಫ್ ಇಂಡಿಯಾ (ಎಸ್‌ಡಿಪಿಐ) ವಿದೇಶಿ ಸಂಘಟನೆಯಾಗಿದೆ. ಭಾರತದಲ್ಲಿ 2047ಕ್ಕೆ ಮುಸ್ಲಿಂ ವ್ಯಕ್ತಿಯನ್ನು ಪ್ರಧಾನಮಂತ್ರಿಯನ್ನಾಗಿ ಮಾಡಲು ಪಾಕಿಸ್ತಾನ ಸೇರಿದಂತೆ ಹಲವು ಮುಸ್ಲಿಂ ದೇಶಗಳಿಂದ ಫಂಡಿಂಗ್ ಆಗುತ್ತಿದೆ ಎಂದು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ವಿಜಯಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಸ್‌ಡಿಪಿಐ ವಿದೇಶಿ ಸಂಘಟನೆ ಆಗಿದೆ. 2047ಕ್ಕೆ ಮುಸ್ಲಿಂ ವ್ಯಕ್ತಿಯನ್ನು ಪ್ರಧಾನಿ ಮಾಡಲು ಸಿದ್ಧತೆ ಮಾಡಲಾಗಿದೆ. ಅದಕ್ಕೆ ವಿದೇಶದಿಂದ, ಪಾಕಿಸ್ತಾನದಿಂದ, ಮುಸ್ಲಿಂ ರಾಷ್ಟ್ರಗಳಿಂದ ಫಂಡಿಂಗ್ ಆಗ್ತಿದೆ. ಅದರ ಅಜೆಂಡಾ ಭಾರತವನ್ನು ಮುಸ್ಲಿಂ ರಾಷ್ಟ್ರ ಮಾಡೋದಾಗಿದೆ. ದುರ್ದೈವ ಎಂದರೆ ನಮ್ಮ ಬಿಜೆಪಿ ನಾಯಕರು, ಆರ್ ಎಸ್ ಎಸ್ ಸ್ವಯಂ ಸೇವಕರು ಎಂದು ಹೇಳಿಕೊಂಡು ತಿರುಗಾಡ್ತಾರೆ. ಆರ್‌ಎಸ್‌ಎಸ್ ಎಂದು ಹೇಳಿಕೊಳ್ಳುವ ನಿಮಗೆ ತತ್ವ ಏನಿದೆ? ಎಂದು ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: ಸವದಿ ಹೆಣವನ್ನು ಸ್ಮಶಾನಕ್ಕೆ ಕಳಿಸಿ, ಬಿಜೆಪಿ ಕಚೇರಿ ಮುಂದೆ ಯಾಕೆ ತರ್ತೀರಿ?: ಯತ್ನಾಳ್
ಕಾಂಗ್ರೆಸ್ ಎಸ್‌ಡಿಪಿಐ ಜೊತೆಗೆ ಒಪ್ಪಂದ ಮಾಡಿಕೊಂಡಿದೆ: ಎಸ್‌ಡಿಪಿಐ ಉದ್ದೇಶ ಹಿಂದೂಗಳ ನಾಶ, ಮತಾಂತರ ಮಾಡೋದು ಆಗಿದೆ. ಮುಖ್ಯವಾಗಿ ಭಾರತವನ್ನು ಇಸ್ಲಾಂ ರಾಷ್ಟ್ರ ಮಾಡೋದು, ಭಾರತ ಸಂವಿಧಾನ ಅಂತ್ಯ ಮಾಡುವುದು ಎಸ್‌ಡಿಪಿಐ ಉದ್ದೇಶವಾಗಿದೆ. ದೇಶ ವಿರೋಧಿ ಮುಸ್ಲಿಂ ಶಕ್ತಿ, ರಾಷ್ಟ್ರದ್ರೋಹಿಗಳ ಜೊತೆಗೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದೆ. PFI ರಾಜ್ಯವನ್ನ ಇಸ್ಲಾಮಿಕರಣ ಮಾಡುವ ಪ್ರಯೋಗ ಶಾಲೆಯನ್ನಾಗಿ ಮಾಡಿದೆ. ಕರಾವಳಿಯ 1700 ಪಿಎFfಐ ಮತ್ತು ಎಸ್‌ಡಿಪಿಐ ಭಯೋತ್ಪಾದಕರ ಮೇಲಿನ ಕೇಸ್‌ಗಳನ್ನ ಸಿದ್ದರಾಮಯ್ಯ ಸರ್ಕಾರ ವಾಪಸ್ ಪಡೆದಿದೆ. ಹಿಂದೂಗಳ ಮೇಲಿನ ಒಂದೆ ಒಂದು ಹಿಂತೆಗೆದುಕೊಂಡಿಲ್ಲ. ಎಸ್‌ಡಿಪಿಐ ಜೊತೆಗೆ ಕಾಂಗ್ರೆಸ್ ಮಾಡಿಕೊಂಡ ಒಪ್ಪಂದದ ದಾಖಲೆ ನಮ್ಮ ಬಳಿ ಇದೆ ಎಂದು ಹೇಳಿದರು.
ಬಿಜೆಪಿ, ಆರ್‌ಎಸ್‌ಎಸ್ ತತ್ವ ಎಲ್ಲಿ ಹೋಯಿತು: ಬಿಜೆಪಿಯಲ್ಲಿ ಎಲ್ಲ ಅಧಿಕಾರವನ್ನು ಅನುಭವಿಸಿ ದೇಶ ರಕ್ಷಣೆ ಮಾಡುವ ನಿಮ್ಮ ತತ್ವ ಎಲ್ಲಿ ಹೋಯ್ತು? ನಿಮ್ಮ ಸಲುವಾಗಿನೇ ರಾಜಕಾರಣ ಮಾಡಿದ್ರಿ ಅಂದಂಗೆ ಆಯ್ತಲ್ಲ. ನೀವು ಮಂತ್ರಿ ಆಗಬೇಕು, ನೀವು ಉಪಮುಖ್ಯಮಂತ್ರಿ ಆಗಬೇಕು ಎಂಬ ಸ್ವಾರ್ಥದಿಂದ ರಾಜಕಾರಣ ಮಾಡಿದ್ರಾ? ದೇಶದ ಬಗ್ಗೆ ನಿಮಗೆ ಕಾಳಜಿ ಇಲ್ವಾ?, ಇವರ ಉದ್ದೇಶ ಕುಟುಂಬ ಸ್ವಾರ್ಥ. ಕಾಂಗ್ರೆಸ್ ಪಕ್ಷಕ್ಕೆ ಹೋಗ್ತಿರಲ್ಲಾ, ನಿಮ್ಮವರು ನೀವು ಮಾತ್ರ ಅಧಿಕಾರಕ್ಕೆ ಇರಬೇಕಾ. ಈಗಲೂ ಕಾಲ ಮಿಂಚಿಲ್ಲಾ, ಕ್ಷಮೆ ಕೇಳಿ ವಾಪಸ್ ಬಿಜೆಪಿಗೆ ಬನ್ನಿ ಎಂದು ಪಕ್ಷ ಬಿಟ್ಟು ಹೋಗುವವರ ಬಗ್ಗೆ ಕಿಡಿಕಾರಿದರು.
ಕಾಂಗ್ರೆಸ್ ಕಚೇರಿ ಕಸ ಹೊಡೆಯೋಕೆ ಹೋಗ್ತಾರೆ: ಕರ್ನಾಟಕದಲ್ಲಿ 130 ಸೀಟ್ ಬರುತ್ತೆ, ಸ್ವಚ್ಚ ಸರ್ಕಾರ ಇರುತ್ತಎ. ಮುಖ್ಯಮಂತ್ರಿ ಆಗ್ತಿನಿ ಎನ್ನುತ್ತಿದ್ದವರು, ಈಗ ಕಾಂಗ್ರೆಸ್ ಗೆ ಹೋಗ್ತಿದಾರೆ. ಕಾಂಗ್ರೆಸ್ ಕಚೇರಿ ಕಸ ಹೊಡೆಯಲು ಹೊರಟಿದ್ದಾರೆ. ಭಾರತ ಮಾತಾಕಿ ಜೈ ಎನ್ನುತ್ತಿದ್ದವರು ಈಗ ಸೋನಿಯಾ ಗಾಂಧಿ ಕಿ ಜೈ, ಅರೆಹುಚ್ಚ ರಾಹುಲ್ ಗಾಂಧಿ ಕಿ ಜೈ ಎನ್ನುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ನಿಮಗೆಲ್ಲಾ ಮಾನ, ಮರ್ಯಾದೆ, ಸ್ವಾಭಿಮಾನ ಇದೆಯಾ? ಶೆಟ್ಟರ್, ಸವದಿ ವಿರುದ್ಧ ಯತ್ನಾಳ್ ಕೆಂಡ
ಈಗಲೂ ಕಾಲಮಿಂಚಿಲ್ಲ ಬಿಜೆಪಿಗೆ ಶರಣಾಗತಿ ಆಗಿ: ಬಿಜೆಪಿ ಲಿಂಗಾಯತರನ್ನು ಮುಗಿಸುವ ಯತ್ನ ಮಾಡ್ತಿದೆ ಎಂದು ಆರೋಪಿಸುತ್ತಿದ್ದೀರಿ. ನೀವೆಲ್ಲಾ ಹುದ್ದೆಗಳನ್ನು ಅನುಭವಿಸಿದ್ದು, ಇದೇ ಲಿಂಗಾಯತ ಆಧಾರದ ಮೇಲೆ ಎಂಬುದು ನೆನಪಿರಲಿ. ಲಿಂಗಾಯತರನ್ನು ಕಡೆಗಣಿಸಿದ್ದಾರೆ ಎಂದು ಮಾತಾಡ್ತಿರಲ್ಲಾ? ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಏನು ಹೇಳಿದ್ದಾರೆ? ಕಾಂಗ್ರೆಸ್ ಬಂದ ಕೂಡಲೇ ಮೀಸಲಾತಿ ತೆಗೆದು ಹಾಕ್ತೆವೆ ಎಂದಿದ್ದಾರೆ. ಹಾಗಾದ್ರೆ ಲಿಂಗಾಯತರಿಗೆ, ಪರಿಶಿಷ್ಠ ಜಾತಿ, ಪಂಗಡಗಳಿಗೆ ಮೀಸಲಾತಿ ಸಿಕ್ಕಿದ್ದು ಸಮಾಧಾನ ಇಲ್ಲವೇ? ದುಡುಕಿನ ನಿರ್ಧಾರ ತೆಗೆದುಕೊಂಡಿದ್ದೀರಿ, ಕಾಲ ಮಿಂಚಿಲ್ಲ. ಈಗಲೂ ವಾಪಸ್ ಬಂದು ಬಿಜೆಪಿಗೆ ಶರಣಾಗತಿ ಆಗಿ ಎಂದು ಹೇಳಿದರು.