ಹಿಂದುತ್ವ ಬೇರೆ, ಹಿಂದು ಧರ್ಮ ಬೇರೆ: ಸಿದ್ದರಾಮಯ್ಯ

By Kannadaprabha NewsFirst Published Feb 7, 2023, 1:00 AM IST
Highlights

ನನ್ನನ್ನು ಹಿಂದು ಧರ್ಮದ ವಿರೋಧಿ ಅಂತಾರೆ. ಆದರೆ, ನಾನು ಹಿಂದು ಧರ್ಮದ ವಿರೋಧಿಯಲ್ಲ. ನಾನೂ ಹಿಂದೂನೆ. ನಾನು ಮನುವಾದದ ವಿರೋಧಿ, ಹಿಂದುತ್ವದ ವಿರೋಧಿ. ಹಿಂದುತ್ವ ಬೇರೆ, ಹಿಂದು ಧರ್ಮ ಬೇರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಪಾದಿಸಿದ್ದಾರೆ. 
 

ಕಲಬುರಗಿ (ಫೆ.07): ನನ್ನನ್ನು ಹಿಂದು ಧರ್ಮದ ವಿರೋಧಿ ಅಂತಾರೆ. ಆದರೆ, ನಾನು ಹಿಂದು ಧರ್ಮದ ವಿರೋಧಿಯಲ್ಲ. ನಾನೂ ಹಿಂದೂನೆ. ನಾನು ಮನುವಾದದ ವಿರೋಧಿ, ಹಿಂದುತ್ವದ ವಿರೋಧಿ. ಹಿಂದುತ್ವ ಬೇರೆ, ಹಿಂದು ಧರ್ಮ ಬೇರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಪಾದಿಸಿದ್ದಾರೆ. ನಗರದಲ್ಲಿ ಸೋಮವಾರ ಮಾಜಿ ಶಾಸಕ ಬಿ,ಆರ್‌.ಪಾಟೀಲ್‌ ಅವರ ಜೀವನಕಥೆಯ ‘ನಿರ್ಭಯ ಸಮಾಜವಾದದೆಡೆಗೆ’ ಎಂಬ ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಯಾವುದಾದರೂ ಧರ್ಮದಲ್ಲಿ ಕೊಲೆ, ಹಿಂಸಾಚಾರಕ್ಕೆ ಅವಕಾಶ ಇದೆಯಾ?. ಆದರೆ, ಮನುವಾದ, ಹಿಂದುತ್ವ ಇದೆಯಲ್ಲಾ. ಅದು ಕೊಲೆ, ಹಿಂಸಾಚಾರಕ್ಕೆ ಪ್ರೋತ್ಸಾಹ ಕೊಡುತ್ತದೆ ಎಂದರು.

ನಮ್ಮ ಅಡುಗೆ ಬಡಿಸಲು ಮೋದಿ ಬರ್ತಿದ್ದಾರೆ: ಬಳಿಕ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ರಾಜ್ಯದಲ್ಲಿ ಪದೇ ಪದೆ ಪ್ರಧಾನಿ ಮೋದಿಯವರು ಪ್ರವಾಸ ಮಾಡುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾವು ಅಡುಗೆ ಮಾಡುತ್ತಿದ್ದೇವೆ, ಅವರು ಬಡಿಸೋಕೆ ಬರುತ್ತಿದ್ದಾರೆ. ಯುಪಿಎ ಸರ್ಕಾರದ ಅವಧಿಯಲ್ಲಿ ನಾವು ಮಾಡಿದ ಕೆಲಸಗಳಿಗೆ ಅವರು ಚಾಲನೆ ನೀಡುತ್ತಿದ್ದಾರೆ. ಬಿಜೆಪಿಯಲ್ಲಿ ಯಾರದೂ ನಾಯಕತ್ವ ಇಲ್ಲ. ಅದಕ್ಕೆ ಮೋದಿಯವರನ್ನು ಕರೆ ತರುತ್ತಿದ್ದಾರೆ. ಬಿಜೆಪಿಯವರಿಗೆ ಮೋದಿಯವರೇ ಬಂಡವಾಳ ಎಂದು ಛೇಡಿಸಿದರು.

ಯುವಕರು ನೌಕರಿ ಕೇಳಿದ್ರೆ ಮೋದಿಯವರು ಪಕೋಡಾ ಮಾರಿ ಅಂತಾರೆ: ಸಿದ್ದರಾಮಯ್ಯ

ಅಶೋಕ್‌ಗಿಂತ ಮುಂಚೆ ರಾಜಕೀಯಕ್ಕೆ ಬಂದಿದ್ದೇನೆ: ಸಿದ್ದರಾಮಯ್ಯನವರು ಮುಂದಿನ ದಿನದಲ್ಲಿ ಯಾತ್ರೆಗೆ ಹೋಗಬೇಕಾಗುತ್ತೆ ಎನ್ನುವ ಅಶೋಕ್‌ ಹೇಳಿಕೆಗೆ ತಿರುಗೇಟು ನೀಡಿ, ಅಶೋಕ್‌ಗಿಂತ ಮೊದಲು ನಾನು ರಾಜಕೀಯಕ್ಕೆ ಬಂದಿದ್ದೇನೆ. ನನಗೆ ಇದು ಕೊನೆ ಚುನಾವಣೆ ಅಂತ ಹೇಳೋದಕ್ಕೆ ಅಶೋಕ್‌ಗೆ ಯಾವ ನೈತಿಕತೆ ಇದೆ?. ನಾನು 45 ವರ್ಷಗಳಿಂದ ರಾಜಕೀಯದಲ್ಲಿ ಇರೋದು ಎಂದು ಗುಡುಗಿದರು. ಯಡಿಯೂರಪ್ಪಗೆ ಬಿಜೆಪಿಯವರು ಅನ್ಯಾಯ ಮಾಡಿದ್ದಾರೆ. ಯಡಿಯೂರಪ್ಪನವರನ್ನು ಮನೆಗೆ ಕಳುಹಿಸಿ ಬೊಮ್ಮಾಯಿಯನ್ನು ತಂದರು. ಯಡಿಯೂರಪ್ಪ ಮಗನಿಗೆ ಮಂತ್ರಿ ಸ್ಥಾನ ಕೊಡಬೇಕಾಗುತ್ತದೆ ಎಂದು ಮಂತ್ರಿಮಂಡಲ ವಿಸ್ತರಣೆ ಸಹ ಮಾಡಲಿಲ್ಲ. ಯಡಿಯೂರಪ್ಪ ಏನೋ ಬೊಮ್ಮಾಯಿ ಅವರನ್ನು ಸಿಎಂ ಮಾಡಿಸಿದ್ರು. ಆದರೆ, ಈಗ ಬೊಮ್ಮಾಯಿ ಮತ್ತು ಯಡಿಯೂರಪ್ಪ ನಡುವಿನ ಸಂಬಂಧ ಸರಿಯಿಲ್ಲ ಎಂದು ಹೇಳಿದರು.

ಕುಮಾರಸ್ವಾಮಿ ಹೇಳಿಕೆ ನಾನು ಒಪ್ಪಲ್ಲ-ಸಿದ್ದು: ಬಿಜೆಪಿ ಅಧಿಕಾರಕ್ಕೆ ಬಂದರೆ ಬ್ರಾಹ್ಮಣರು ಸಿಎಂ ಆಗುತ್ತಾರೆ ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ, ಕುಮಾರಸ್ವಾಮಿಯವರ ಮಾತನ್ನು ನಾನು ಒಪ್ಪಲ್ಲ. ಸಿಎಂ ವಿಚಾರವನ್ನು ಆರ್‌ಎಸ್‌ಎಸ್‌ನವರು ತೀರ್ಮಾನ ಮಾಡುತ್ತಾರೆ. ಕುಮಾರಸ್ವಾಮಿ ಅಲ್ಲ. ಬಿಜೆಪಿ ಬಹುಮತ ಬಂದ್ರೆ ಅಲ್ವಾ ತೀರ್ಮಾನ ಮಾಡೋದು?. ರಾಜ್ಯದಲ್ಲಿ ಬಿಜೆಪಿಗೆ ಯಾವಾಗ ಬಹುಮತ ಬಂದಿದೆ ಹೇಳಿ?. 2023ರಲ್ಲಿ ಬಿಜೆಪಿಗೆ 50 ರಿಂದ 60 ಸಿಟ್‌ ಮಾತ್ರ ಬರಬಹುದು ಎಂದು ಭವಿಷ್ಯ ನುಡಿದರು. ಬಿಜೆಪಿಯವರು ಏನೂ ಕೆಲಸ ಮಾಡಿಲ್ಲ. ರಾಜ್ಯದಲ್ಲಿ 40 ಪರ್ಸೆಂಟ್‌ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಬಿಜೆಪಿ ಭ್ರಷ್ಟಾಚಾರದ ಬಗ್ಗೆ ಗೂಳಿಹಟ್ಟಿ ಶೇಖರ್‌ ಸತ್ಯವನ್ನು ಹೇಳಿದ್ದಾರೆ. ಬಿಜೆಪಿಯವರು ಕೆಲಸ ಮಾಡದೆ ಬಿಲ್‌ ಕೊಟ್ಟಿದ್ದಾರೆ. 

Mangaluru: ಫುಡ್ ಪಾಯ್ಸನ್‌ಗೆ ನರ್ಸಿಂಗ್ ವಿದ್ಯಾರ್ಥಿಗಳು ಅಸ್ವಸ್ಥ: ಆಸ್ಪತ್ರೆಗೆ ದಾಖಲು

ಮಾನಪ್ಪ ವಜ್ಜಲ್‌ ನಾರಾಯಣಪುರ ಎಡದಂಡೆ ಕಾಲುವೆಯಲ್ಲಿ ಕೆಲಸ ಮಾಡದೆಯೆ ದುಡ್ಡು ಪಡೆದಿದ್ದಾರೆ. ಮೋದಿಯಿಂದ ಬಿಜೆಪಿಗೆ ಓಟ್‌ ಬರುತ್ತೆ ಅಂತ ಹೇಳಕಾಗಲ್ಲ ಎಂದರು. ಮಳಖೇಡಕ್ಕೆ ಬಂದು ಮೋದಿಯವರು ಲಂಬಾಣಿ ಜನರಿಗೆ ಮನೆಗಳ ಹಕ್ಕುಪತ್ರ ನೀಡಿದ ಸಂಗತಿ ಪ್ರಸ್ತಾಪಿಸಿ, ಈ ಹಿಂದೆಯೂ ಲಂಬಾಣಿ ಜನಾಂಗದವರಿಗೆ ಹಕ್ಕು ಪತ್ರ ನೀಡಲಾಗಿತ್ತು. ಕಾಗೋಡು ತಿಮ್ಮಪ್ಪ ಕಾನೂನು ಮಂತ್ರಿಯಾಗಿದ್ದಾಗ ಕಂದಾಯ ಗ್ರಾಮ ಘೋಷಣೆ ಮಾಡಿದ್ರು. ನಾವು ಕಾನೂನು ತಂದವರು. ಹಕ್ಕು ಪತ್ರ ಹಂಚಲು ಮೋದಿ ಅವರನ್ನು ಬಿಜೆಪಿಯವರು ಕರೆತಂದಿದ್ದಾರೆ. ಇದನ್ನೇ ಸಾಧನೆ ಅಂತ ರಾಜ್ಯ ಬಿಜೆಪಿಯವರು ಬೀಗುತ್ತಿದ್ದಾರೆ ಎಂದರು.

click me!