
ಶಿಮ್ಲಾ(ನ.12): ಹಿಮಾಚಲ ಪ್ರದೇಶ ಚುನಾವಣೆ ಯಶಸ್ವಿಯಾಗಿ ನಡೆಯುತ್ತಿದೆ. ಪ್ರತಿ 5 ವರ್ಷಕ್ಕೊಮ್ಮೆ ಸರ್ಕಾರ ಬದಲಿಸುವ ಸಂಪ್ರದಾಯದ ಹಿಮಾಚಲ ಪ್ರದೇಶದಲ್ಲಿ ನಡೆದುಕೊಂಡು ಬಂದಿದೆ. ಹೀಗಾಗಿ ಈ ಬಾರಿ ಕಾಂಗ್ರೆಸ್ ಗೆದ್ದೇ ಗೆಲ್ಲುತ್ತೇ ಅನ್ನೋ ವಿಶ್ವಾಸದಲ್ಲಿದೆ. ಇತ್ತ ಬಿಜೆಪಿ ಪದೇ ಪದೇ ಸರ್ಕಾರ ಬದಲಿಸಿದರೆ ಅಭಿವೃದ್ಧಿ ವೇಗ ಕುಂಠಿತವಾಗಲಿದೆ. ಡಬಲ್ ಎಂಜಿನ್ ಸರ್ಕಾರ ನಿಮ್ಮ ಸೇವೆಗೆ ಸದಾ ಸಿದ್ದ ಎಂದು ಪ್ರಚಾರ ಮಾಡಿದೆ. ಹೀಗಾಗಿ ಯಾರು ಗೆಲುವು ಸಾಧಿಸುತ್ತಾರೆ ಅನ್ನೋ ಕುತೂಹಲ ಇದೀಗ ಮನೆ ಮಾಡಿದೆ. ಒಂದೆಡೆ ಮತದಾನ ಇನ್ನೂ ಪೂರ್ಣಗೊಂಡಿಲ್ಲ, ಫಲಿತಾಂಶದ ಕುರಿತು ಯಾವುದೇ ಸುಳಿವು ಇಲ್ಲ. ಈಗಲೇ ಕಾಂಗ್ರೆಸ್‌ನಲ್ಲಿ ಸಿಎಂ ತಾನಾಗಬೇಕು ಅನ್ನೋ ಗುದ್ದಾಟ ಆರಂಭಗೊಂಡಿದೆ. ಈ ಕುರಿತು ಹಿಮಾಚಲ ಪ್ರದೇಶ ಕಾಂಗ್ರೆಸ್ ಅಧ್ಯಕ್ಷೆ ಪ್ರತಿಭಾ ಸಿಂಗ್ ಬಹಿರಂಗ ಪಡಿಸಿದ್ದಾರೆ. ನಾನು ಸಿಎಂ ಆಕಾಂಕ್ಷಿಯಲ್ಲ. ಆದರೆ ಕಾಂಗ್ರೆಸ್ ಪಕ್ಷದ ಹಲವರು ಸಿಎಂ ಕುರ್ಚಿಗಾಗಿ ಕಾಯುತ್ತಿದ್ದಾರೆ ಎಂದು ಪ್ರತಿಭಾ ಸಿಂಗ್ ಹೇಳಿದ್ದಾರೆ.
ಪ್ರತಿಭಾ ಸಿಂಗ್ ಎನ್‌ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಈ ಮಾಹಿತಿ ಬಹಿರಂಗ ಪಡಿಸಿದ್ದಾರೆ. ಹಲವರು ಸಿಎಂ ಆಗಬೇಕು ಎಂದು ತಿರುಗಾಡುತ್ತಿದ್ದಾರೆ. ಆದರೆ ಕಾಂಗ್ರೆಸ್ ಹೈಕಮಾಂಡ್ ಈ ಕುರಿತು ನಿರ್ಧಾರ ಮಾಡಲಿದ್ದಾರೆ. ಕಾಂಗ್ರೆಸ್ ಈ ಬಾರಿ ಅಧಿಕಾರ ಬರಲಿದೆ ಎಂದು ಪ್ರತಿಭಾ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕಳೆದ ವರ್ಷ ಪತಿ, ಮಾಜಿ ಸಿಎಂ ವೀರಭದ್ರ ಸಿಂಗ್ ನಿಧನರಾಗಿದ್ದಾರೆ. ಅವರ ಅನುಪಸ್ಥಿತಿ ಈ ಚುನಾವಣೆಯಲ್ಲಿ ಕಾಡಿದೆ ಎಂದು ಪ್ರತಿಭಾ ಸಿಂಗ್ ಹೇಳಿದ್ದಾರೆ.
Assembly election: ಇಂದು ಹಿಮಾಚಲ ಮತಸಮರ
ಕಳೆದ 2 ವರ್ಷಗಳಲ್ಲಿ ಕಾಂಗ್ರೆಸ್ 9 ರಾಜ್ಯಗಳನ್ನು ಕಳೆದುಕೊಂಡಿದೆ. ಇದೀಗ ಹಿಮಾಚಲ ಅದರ ಕೈಗೆ ಮರಳಿದರೆ 2024ರ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಹುರುಪು ಸಿಗಲಿದೆ. ಇಲ್ಲದೇ ಹೋದಲ್ಲಿ ಪಕ್ಷ ಮತ್ತಷ್ಟುಹೊಡೆತ ಅನುಭವಿಸಬೇಕಾಗಿ ಬರಲಿದೆ.
ಗುಜರಾತ್ ಹಿಮಾಚಲದಲ್ಲಿ ಮತ್ತೆ ಅರಳಲಿದೆ ಕಮಲ: ಚುನಾವಣಾ ಪೂರ್ವ ಸಮೀಕ್ಷೆ
ಆನಂದ್ ಶರ್ಮಾ ಅಸಮಾಧಾನ
ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಗೆ ಹಿರಿಯ ನಾಯಕರನ್ನು ಬಳಸಿಕೊಂಡು ಪಕ್ಷದ ಪ್ರಚಾರವನ್ನು ಇನ್ನಷ್ಟುಶಿಸ್ತುಬದ್ಧವಾಗಿ ಮತ್ತು ಸಂಘಟಿತವಾಗಿ ಮಾಡಬಹುದಿತ್ತು ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಆನಂದ್ ಶರ್ಮಾ ಹೇಳಿದ್ದಾರೆ. ‘ಪಕ್ಷದ ಚುನಾವಣಾ ಪ್ರಚಾರಕ್ಕೆ ಕೇಂದ್ರೀಕೃತ ಯೋಜನೆ ಮಾಡಿಲ್ಲ. ಹೀಗಾಗಿ ನನ್ನನ್ನು ವೈಯಕ್ತಿಕವಾಗಿ ಯಾರು ಕರೆದಿದ್ದಾರೋ ಅಲ್ಲಿಗೆ ಹೋಗಿ ಪ್ರಚಾರ ಮಾಡಿ ಬಂದಿರುವೆ. ನನ್ನನ್ನು ಪಕ್ಷ ಸರಿಯಾಗಿ ಪ್ರಚಾರಕ್ಕೆ ಬಳಸಿಕೊಂಡಿಲ್ಲ. ಆದರೂ 2017ಕ್ಕೆ ಹೋಲಿಸಿದರೆ ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಗೆದ್ದು ಅಧಿಕಾರಕ್ಕೆ ಬರುವ ವಿಶ್ವಾಸ ಹೆಚ್ಚಿದೆ. ಏಕೆಂದರೆ ನಿರುದ್ಯೋಗ, ಹಣದುಬ್ಬರ, ಹಳೆ ಪಿಂಚಣಿ ಸೇರಿದಂತೆ ಜನ ಸಾಮಾನ್ಯರ ವಿಷಯಗಳನ್ನು ಪಕ್ಷ ಪ್ರಮುಖ ಅಸ್ತ್ರವಾಗಿ ಬಳಸಿಕೊಂಡಿದೆ’ ಎಂದು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.