MCD Election 2022: ಪಾಲಿಕೆ ಚುನಾವಣೆಯಲ್ಲಿ ಯಾರಿಗೆ ಡೆಲ್ಲಿಯ ದಿಲ್‌?

By Santosh NaikFirst Published Nov 12, 2022, 4:08 PM IST
Highlights

ದೆಹಲಿ ಪಾಲಿಕೆ ಚುನಾವಣೆಗೆ ದಿನಾಂಕ ನಿಗದಿಯಾಗಿದೆ. ಭಾರತೀಯ ಜನತಾ ಪಕ್ಷ ಹಾಗೂ ಆಮ್‌ ಆದ್ಮಿ ಪಾರ್ಟಿ ನಡುವೆ ನೇರ ಫೈಟ್‌ಗೆ ವೇದಿಕೆ ಸಿದ್ಧವಾಗಿದೆ. ಡಿಸೆಂಬರ್‌ 4 ರಂದು ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೆಸ್‌ನದ್ದು ಪೋಷಕ ಪಾತ್ರ ಮಾತ್ರ.

ವರದಿ: ಡೆಲ್ಲಿ ಮಂಜು

ನವದೆಹಲಿ (ನ.12): `ರಾಕೆಟ್ ಸೈನ್ಸ್ ನಷ್ಟು ಕಷ್ಟವಿಲ್ಲದೆ ಕಸ ವಿಲೇವಾರಿ, ಸ್ವಚ್ಚ, ಸುಂದರ, ಅಚ್ಚುಕಟ್ಟಾದ ದೆಹಲಿ ನಿರ್ಮಾಣ, ಭ್ರಷ್ಟಚಾರ ರಹಿತ ಮುನಿಸಿಪಾಲಿಟಿ'. ಇಂಥ ಹತ್ತು ಪಾಯಿಂಟ್ಸ್ ಮುಂದಿಟ್ಟು ವಿಶ್ವದ ಅತಿದೊಡ್ಡ ಸದಸ್ಯರು ಹೊಂದಿರುವ ಭಾರತೀಯ ಜನತಾ ಪಕ್ಷಕ್ಕೆ ಚುನಾವಣೆಯ ರಣವೀಳ್ಯ ನೀಡಿದ್ದಾರೆ ಆಪ್‍ನ ಚಾಣಕ್ಯ ಅರವಿಂದ ಕೇಜ್ರಿವಾಲ್.

ಒಂದು ಕಡೆ ಗುಜರಾತ್, ಹಿಮಾಚಲ ಪ್ರದೇಶದ ಚುನಾವಣೆ. ಮತ್ತೊಂದು ಕಡೆ ದೆಹಲಿ ಮುನಿಸಿಪಲ್ ಕಾರ್ಪೋರೇಷನ್ ಚುನಾವಣೆ. ಅಯ್ಯೋ ಅದೊಂದು ಸಿಟಿ ಸ್ಟೇಟ್. ಡೆಲ್ಲಿ ಸರ್ಕಾರವನ್ನೇ ಬೆಂಗಳೂರು ಮಹಾನಗರ ಪಾಲಿಕೆಗೆ ಹೋಲಿಕೆ ಮಾಡಬಹುದು. ಅಂಥದರಲ್ಲಿ ಡಿಎಂಸಿ ಚುನಾವಣೆ ಏನ್ ಮಹಾನ್..! ಇಂತಹ ಮಾತುಗಳು ಕೇಳಿರುತ್ತೇವೆ. ಅದರೂ ಕೂಡ ರಾಷ್ಟ್ರೀಯ ಪಕ್ಷ ಬಿಜೆಪಿ, ಎರಡು ಮೂರು ರಾಜ್ಯಗಳಲ್ಲಿ ಪ್ರಾಬಲ್ಯ ಇರುವ ಆಪ್ ಸಿಕ್ಕಾಪಟ್ಟೆ ಕಸರತ್ತು ಶುರು ಮಾಡಿವೆ. ಕಸ, ನೈರ್ಮಲ್ಯ, ಭ್ರಷ್ಟಚಾರ ಅಂಶಗಳನ್ನು ಮುಂದಿಟ್ಟುಕೊಂಡು ಬೈದಾಟ, ಸವಾಲು, ಕೆಸರು ಒಬ್ಬರ ಮೇಲೆ ಒಬ್ಬರು ಎರಚುವುದು, ಈ ಹಿಂದೆ ಆಗಿರುವ ಹಗರಣಗಳನ್ನು ಸರಣಿಯಂತೆ ಹೊರಗಡೆ ತೆಗೆಯುವುದರಲ್ಲಿ ಎರಡೂ ಪಕ್ಷಗಳು ನಿರತವಾಗಿವೆ.

15 ವರ್ಷಗಳಿಂದಲೇ ಕಮಲದ್ದೇ ರಾಯಭಾರ : ಡೆಲ್ಲಿ ಮತದಾರರ ಇಂಟ್ರಸ್ಟಿಂಗ್ ತೀರ್ಮಾನ ಮಾಡೋದರಲ್ಲಿ ಬಹಳ ನಿಸ್ಸೀಮ. ಲೋಕಸಭಾ ಚುನಾವಣೆ ಬಂದ್ರೆ ಕಮಲಪಕ್ಷದ ಕಮಲನಾಥರಿಗೆ ಜೈ ಅಂತಾನೆ. ಅದೇ ವಿಧಾನಸಭಾ ಚುನಾವಣೆ ಬಂದರೆ ಇರುವ 90 ಸೀಟ್‍ನಲ್ಲಿ ಹೆಚ್ಚುಕಮ್ಮಿ 80 ಸೀಟ್ ತನಕ ಕೇಜ್ರಿವಾಲ್‍ಗೆ ಜೈ ಅಂತಾನೆ. ಇನ್ನು ಎಂಸಿಡಿ ಎಲೆಕ್ಷನ್ ಬಂದರೆ ಕಳೆದ 15 ವರ್ಷಗಳಿಂದ ಬಿಜೆಪಿ ಎಂಸಿಡಿಯಲ್ಲಿ ಅಧಿಕಾರ ಹಿಡಿದಿದೆ. ಈ ಬಾರಿ ಯಾರಿಗೆ ಅಧಿಕಾರ ಅನ್ನೋ ಕುತೂಹಲ ಡಿಸೆಂಬರ್ 6ಕ್ಕೆ ತಣಿಯಲಿದೆ. 2017ರಲ್ಲಿ 250 ಸೀಟಿನ ಪಾಲಿಕೆಯಲ್ಲಿ 181 ಸ್ಥಾನಗಳನ್ನು ಬಿಜೆಪಿ ಗಳಿಸಿತ್ತು. ಆಪ್ 49 ಸೀಟುಗಳನ್ನು ಗಳಿಸಿತ್ತು.

ಕೇಂದ್ರ ಸರ್ಕಾರದ ಡಬಲ್ ಎಂಜಿನ್ ಸೂತ್ರ ಹಿಡಿದು ಸಾವಿರಾರು ಬಡವರರಿಗೆ ಸಾವಿರಾರು ಅಪಾರ್ಟ್‍ಮೆಂಟ್‍ಗಳನ್ನು ನಿರ್ಮಿಸಿ ಮತದಾರರಿಗೆ ತಲುಪುವಂತೆ ಬಿಜೆಪಿ ನೋಡಿಕೊಂಡಿದೆ. ಅಕ್ರಮ ಒತ್ತುವರಿ ತೆರವು ಮೂಲಕ ಒಂದಷ್ಟು ಪ್ರದೇಶಗಳಲ್ಲಿ ಹಿಂದುಗಳ ಮತಗಿಟ್ಟಿಸುವ ಕೆಲಸ ಭಾರತೀಯ ಜನತಾ ಪಕ್ಷ ಮಾಡಿದೆ. ಈ ಭಾರಿ ಪ್ರಣಾಳಿಕೆ ಬಿಡುಗಡೆ ಮಾಡಿರುವ ಬಿಜೆಪಿ ದೆಹಲಿ ಘಟಕ, `ವಚನಪತ್ರ' ಮತದಾರರ ಮುಂದಿಟ್ಟಿದೆ.  ಸ್ಲಂ ನಿವಾಸಿಗಳಿಗೆ ಸುಸಜ್ಜಿತ ಮನೆಗಳು, ಕಾರ್ಪೋರೇಷನ್ ಆಡಳಿತವನ್ನು ಮತ್ತಷ್ಟು ಸದೃಢಗೊಳಿಸುವುದು, ಕಸವಿಲೇವಾರಿ ಸೂಕ್ತ ರೀತಿಯಲ್ಲಿ ಮಾಡೋದು ಆದ್ಯತೆಗಳಾಗಿವೆ ಎಂದು ವಚನಪತ್ರದಲ್ಲಿ ಮತದಾರರಿಗೆ ವಿವರಿಸಲಾಗಿದೆ. ಕಸವಿಲೇವಾರಿಯಂಥ ದೊಡ್ಡ ಸಮಸ್ಯೆ ನಿವಾರಣೆಗೆ ಕೇಜ್ರಿವಾಲ್ ಸರ್ಕಾರ ಸರಿಯಾದ ರೀತಿ ಫಂಡ್ ಬಿಡುಗಡೆ ಮಾಡಲಿಲ್ಲ ಅಂತ ಆರೋಪ ಕೂಡ ದೆಹಲಿ ಬಿಜೆಪಿ ಸಂಸದರು ಮಾಡಿದ್ದಾರೆ.

ಎನ್‌ಡಿಎಯಿಂದ ನಿತೀಶ್ ಹೊರಬರಲು ಮುಖ್ಯ ಕಾರಣಗಳೇನು? ಇಲ್ಲಿವೆ ನೋಡಿ

`20 ಸೀಟ್ ಮೇಲೆ ಗೆಲ್ಲೋದಿಲ್ಲ': ಕೇಜ್ರವಾಲ್ ಈ ಬಾರಿ ಎಂಸಿಡಿ ಚುನಾವಣೆಗೂ ಮುನ್ನ ಒಂದು ಭೀಷ್ಮ ಪ್ರತಿಜ್ಞೆ ಮಾಡಿದ್ದಾರೆ. 15 ವರ್ಷಗಳಿಂದ ಆಡಳಿತ ಚುಕ್ಕಾಣೆ ಹಿಡಿದಿರುವ ಬಿಜೆಪಿಗೆ ಸವಾಲು ಹಾಕುತ್ತಾ, ಈ ಬಾರಿ 20 ಸೀಟು ಮೇಲೆ  ಬಿಜೆಪಿ ಗೆಲ್ಲೋದಿಲ್ಲ ಅಂಥ ಹೇಳಿದ್ದಾರೆ. ಅಲ್ಲದೇ 10 ಭರವಸೆಗಳನ್ನು ದೆಹಲಿ ಮತದಾರರ ಮುಂದಿಟ್ಟು ಮತ ಕೇಳುತ್ತಿದ್ದಾರೆ. ನಮಗೆ ಮತಕೊಟ್ಟು ಎಂಸಿಡಿಯಲ್ಲಿ ಆಡಳಿತಕ್ಕೆ ತನ್ನಿ ಎನ್ನುತ್ತಿರುವ ಪೊರಕೆ ಪಕ್ಷದ ನಾಯಕರು, ದೆಹಲಿಯ ಕಸವಿಲೇವಾರಿ ಮಾಡೋದು ಕಷ್ಟವೂ ಅಲ್ಲ, ಜೊತೆಗೆ ಅದು ರಾಕೆಟ್ ಸೈನ್ಸ್ ಅಲ್ಲ. ದೆಹಲಿಯನ್ನು ಒಂದು ಸುಂದರ, ಅಚ್ಚುಕಟ್ಟಾದ, ಕೊಳಚೆ ಮುಕ್ತ ನಗರವನ್ನಾಗಿ ಮಾಡುತ್ತೇವೆ. ಜೊತೆಗೆ ಎಂಸಿಡಿಯನ್ನು ಭ್ರಷ್ಟಚಾರ ರಹಿತ ಸಂಸ್ಥೆಯಾಗಿ ಮಾಡುತ್ತೇವೆ. ಗುತ್ತಿಗೆ ನೌಕರರ ಕಾಯಂ, ವೈದ್ಯರು ಸೇರಿ ಅಧಿಕಾರಿಗಳಿಗೆ ಸಮಯಕ್ಕೆ ಸರಿಯಾಗಿ ವೇತನ, ರಸ್ತೆ, ಶಾಲೆ ಹಾಗೂ ಆಸ್ಪತ್ರೆಗಳನ್ನು ಸುಜ್ಜಿತಗೊಳಿಸುತ್ತೇವೆ, ಬೀದಿನಾಯಿ, ಕೋತಿಗಳ ಹಾಗೂ ಬೀದಿ ಹಸುಗಳ ಹಾವಳಿಯಿಂದ ಮುಕ್ತಗೊಳಿಸುತ್ತೇವೆ ಅಂಥ ಭರವಸೆಗಳನ್ನು ದೆಹಲಿ ಮತದಾರರ ಮುಂದಿಟ್ಟಿದ್ದಾರೆ.

Delhi Air Pollution crisis; ದೆಹಲಿ ಜನರ ಪ್ರಾಣಕ್ಕೆ ವಿಷಗಾಳಿ ಕಂಟಕ!

ಸುಕೇಶ್ ಚಂದ್ರಶೇಖರನನ್ನು ಬಿಜೆಪಿ ಸ್ಟಾರ್ ಕ್ಯಾಂಪೇನರ್ ಆಗಿ ಮಾಡಿದೆ. ಕೆಲವು ಚಾನಲ್‍ಗಳು ಆತನನ್ನು ಬ್ರಾಂಡ್ ಅಂಬಾಸಿಡರ್‌ ಮಾಡಿಕೊಂಡಿವೆ. ನಾವು ಯಾವುದಕ್ಕೂ ಹೆದರೋದಿಲ್ಲ. ಎಲ್ಲಾ ಪರೀಕ್ಷೆಗಳಿಗೂ ಆಪ್ ನಾಯಕರು ಸಿದ್ದ. ತಪ್ಪು ಮಾಡಿದ್ರೆ ಜೈಲಿಗೆ ಹೋಗೋಲಿಕ್ಕೂ ಸಿದ್ದ ಅಂಥ ಕಮಲನಾಥರ ವ್ಯಾಖ್ಯಾನಕ್ಕೆ ಮರು ಸವಾಲು ಹಾಕಿದ್ದಾರೆ ಕೇಜ್ರಿವಾಲ್. ಕಳೆದ ಬಾರಿ 30 ಸ್ಥಾನ ಗಳಿಸಿದ್ದ ಕಾಂಗ್ರೆಸ್ ಇಷ್ಟಾದರೂ ಹೆಚ್ಚು ಸದ್ದು ಮಾಡುತ್ತಿಲ್ಲ. ನೋಡೋಣ ಡಿಸೆಂಬರ್ 4 ರಂದು ನಡೆಯುವ ಚುನಾವಣೆಯಲ್ಲಿ ಮತದಾರರು ಯಾರ ಕೈ ಹಿಡಿಯುತ್ತಾರೆ ಅಂಥ.
 

click me!