Hijab Row: ಬಿಜೆಪಿ ರಾಜಕೀಯ ಲಾಭಕ್ಕೆ ಹಿಜಾಬ್‌ ವಿವಾದ ಸೃಷ್ಟಿ: ಮುನಿಯಪ್ಪ

By Kannadaprabha News  |  First Published Feb 18, 2022, 12:48 PM IST

*   ಜನತೆಯ ದಿಕ್ಕು ತಪ್ಪಿಸಿ ಬಿಜೆಪಿಯಿಂದ ಕೋಮಾವಾದ ಸೃಷ್ಟಿಸುವ ಹುನ್ನಾರ
*   ಎಲ್ಲ ಧಮೀಯರಿಗೂ ಸಮಾನ ಹಕ್ಕು
*   ಹಿಜಾಬ್‌ ಧರಿಸುವಿಕೆ ಮುಸ್ಲಿಂ ಧರ್ಮದ ಸಂಸ್ಕೃತಿಗಳಿಗೆ ಸಂಬಂಧಿಸಿದ ವಿಚಾರ
 


ಕೋಲಾರ(ಫೆ.18):  ಮುಂಬರುವ ಚುನಾವಣೆಗಳ ಲಾಭಕ್ಕಾಗಿ ಬಿಜೆಪಿ(BJ) ಪಕ್ಷವು ಹಿಜಾಬ್‌ ಪರದೆಯನ್ನು ಅಜೆಂಡಾವಾಗಿ ರೂಪಿಸಿ ಕೊಂಡು ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆಗೆ ಭಂಗ ಉಂಟಾಗುವಂತೆ ಗೊಂದಲ ಸೃಷ್ಟಿಸಿರುವುದು ದುರಂತದ ಸಂಗತಿ ಎಂದು ಮಾಜಿ ಕೇಂದ್ರ ಸಚಿವ ಕೆ.ಎಚ್‌.ಮುನಿಯಪ್ಪ(KH Muniyappa) ವಿಷಾದಿಸಿದರು.

ನಗರದ ಪತ್ರಕರ್ತರ ಭವನದಲ್ಲಿನ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡುತ್ತಾ ರಾಜ್ಯದಲ್ಲಿ ನಡೆದ ಉಪಚುನಾವಣೆಗಳ ಫಲಿತಾಂಶದಿಂದ ಆತಂಕ ಉಂಟಾಗಿರುವ ಬಿಜೆಪಿ ಪಕ್ಷವು ಆರ್‌.ಎಸ್‌.ಎಸ್‌.(RSS) ಮತ್ತು ಭಜರಂಗದಳಗಳೆಂಬ ಮನುವಾದಿ ಸಂಘಟನೆಗಳು ನೀಡಿರುವ ಸೂಚನೆಯಂತೆ ರಾಜ್ಯದ(Karnataka) ಜನತೆಯನ್ನು ದಿಕ್ಕು ತಪ್ಪಿಸುವ ಮೂಲಕ ಕೋಮುವಾದವನ್ನು(Communal) ಸೃಷ್ಟಿಸುತ್ತಿದೆ ಎಂದು ದೂರಿದರು.

Latest Videos

undefined

Flag Row: ಈಶ್ವರಪ್ಪ ಸಚಿವರಾಗಿರೋದಕ್ಕೆ ನಾಲಾಯಕ್: ಎಚ್‌.ಎಂ. ರೇವಣ್ಣ

ಎಲ್ಲ ಧಮೀಯರಿಗೂ ಸಮಾನ ಹಕ್ಕು

ಭಾರತ(India) ದೇಶವು ಜಾತ್ಯಾತೀತ(Secular) ದೇಶವಾಗಿದ್ದು ಎಲ್ಲಾ ಧರ್ಮಿಯರಿಗೆ ಸಮಾನತೆಯ ಹಕ್ಕುಗಳನ್ನು ಕಲ್ಪಿಸಿದೆ. ತಮ್ಮದೆ ಆದ ತತ್ವ ಸಿದ್ದಾಂತಗಳು ಸಂಸ್ಕೃತಿಯನ್ನು ಅಚರಿಸಿ ಕೊಂಡು ಬರುತ್ತಿರುವುದು ನಾಗರಿಕತೆಯ ಪ್ರತಿರೂಪವಾಗಿದೆ. ಇದನ್ನು ಸ್ವಾತಂತ್ರ್ಯ ಪೂರ್ವದಿಂದಲೂ ವಿವಿಧ ಧರ್ಮಗಳಲ್ಲಿ ತಮ್ಮದೆ ಆದ ವಸ್ತ್ರಗಳನ್ನು ಅಳವಡಿಸಿ ಕೊಳ್ಳುವಂತ ಪರಂಪರೆಯನ್ನು ಕಾಣಬಹುದಾಗಿದೆ. ಅಂದಿನಿಂದಲೂ ಅವರವರ ಸಂಸ್ಕೃತಿಗಳಿಗೆ ಯಾರೂ ಅಡ್ಡಿ ಪಡಿಸಿದ ಇತಿಹಾಸವಿಲ್ಲ ಎಂದರು.

ಇದರ ಜೊತೆಗೆ ಸಚಿವ ಈಶ್ವರಪ್ಪ(KS Eshwarappa) ಅವರು ಕೆಂಪು ಕೋಟೆಯ ಮೇಲೆ ರಾಷ್ಟ್ರ ಧ್ವಜ(National Flag) ಇಳಿಸಿ ಕೇಸರಿ ಧ್ವಜಾವನ್ನು(Saffron Flag) ಮುಂದಿನ ದಿನಗಳಲ್ಲಿ ಹಾರಿಸುವುದಾಗಿ ನೀಡಿರುವ ಹೇಳಿಕೆ ತೀವ್ರ ಖಂಡನೀಯ. ಇದು ಭಾರತದ ಸಂವಿಧಾನಕ್ಕೆ(Constitution of India) ಮಾಡಿದ ಅಪಮಾನವಾಗಿದೆ. ಇಂಧಹವರ ವಿರುದ್ದ ಕಾನೂನು ಕ್ರಮ ಕೈಗೊಂಡು ಸಚಿವ ಸ್ಥಾನದಿಂದ ವಜಾಗೊಳಿಸಬೇಕೆಂದು ಒತ್ತಾಯಿಸಿದರು.

ರಾಜಕೀಯ ಲಾಭಕ್ಕೆ ಹುನ್ನಾರ
ರಾಯಚೂರು ಜಿಲ್ಲೆಯ ರಾಷ್ಟ್ರೀಯ ಕಾರ್ಯಕ್ರಮದಲ್ಲಿ ಬಾಬಾ ಸಾಹೇಬ ಡಾ. ಬಿ.ಆರ್‌. ಅಂಬೇಡ್ಕರ್‌(Dr BR Ambedkar) ಅವರ ಭಾವಚಿತ್ರ ಇಟ್ಟಿರುವುದನ್ನು ಅಕ್ಷೇಪಿಸಿ ತೆಗೆಸಿರುವ ಪ್ರಕರಣವು ತುಂಬಾ ನೋವಿನ ಸಂಗತಿಯಾಗಿದೆ. ದೇಶಕ್ಕೆ ಸಂವಿಧಾನವನ್ನು ರಚಿಸಿ ಕೊಟ್ಟಶಿಲ್ಪಿಗೆ ಮಾಡಿದ ಅವಮಾನವಾಗಿದೆ. ಈ ಎಲ್ಲಾ ಪ್ರಕರಣಗಳ ಹಿಂದೆ ಮನುವಾದಿ ಬಿಜೆಪಿ ರಾಜಕೀಯ ಲಾಭಕ್ಕಾಗಿ ಮಾಡುತ್ತಿರುವ ಹುನ್ನಾರವಾಗಿದ್ದು ದೇಶದಲ್ಲಿ ಅರಾಜಕತೆ ಸೃಷ್ಟಿಸಿ ಚುನಾವಣೆಗಳಲ್ಲಿ ಮತದಾರರ ದಿಕ್ಕು ತಪ್ಪಿಸಿ ಲಾಭ ಪಡೆಯುವುದಾಗಿದೆ. ಜನತೆ ಈ ವಿಚಾರವಾಗಿ ಎಚ್ಚತ್ತು ಕೊಳ್ಳ ಬೇಕಾಗಿದೆ ಎಂದರು.

ಜಮೀರ್‌ ಹೇಳಿಕೆಗೆ ಸಮರ್ಥನೆ

ಹಿಜಾಬ್‌ ಧರಿಸುವಿಕೆ ಅವರ ಧರ್ಮದ(Religion) ಸಂಸ್ಕೃತಿಗಳಿಗೆ ಸಂಬಂಧಿಸಿದ ವಿಚಾರ. ಈ ವಿಷಯವಾಗಿ ಮಧ್ಯ ಪ್ರವೇಶಿಸಲು ಯಾವ ಸರ್ಕಾರಕ್ಕೂ ನೈತಿಕ ಹಕ್ಕಿಲ್ಲ. ಶಾಸಕ ಜಮೀರ್‌ ಆಹಮದ್‌(Zameer Ahmed Khan) ಹೇಳಿಕೆ ಅರ್ಥವು ಎಲ್ಲಾ ಧರ್ಮಿಯ ಹೆಣ್ಣುಮಕ್ಕಳು ಒಂದೇ ಅವರೆಲ್ಲಾ ಭಾರತೀಯರು ಎಂಬ ಅರ್ಥದಲ್ಲಿ ಹೇಳಲು ಪ್ರಯತ್ನಿಸಿದ್ದಾರೆ ಎಂದು ಸಮರ್ಥನೆ ಮಾಡಿಕೊಂಡರು. ಶಾಲಾ,ಕಾಲೇಜುಗಳಲ್ಲಿ ಇರುವ ಅಭಿವೃದ್ದಿ ಸಮಿತಿಗಳು ಕ್ಷೇಮಾಭಿವೃದ್ದಿಗೆ ಮಾತ್ರವಾಗಿದ್ದು, ಧಾರ್ಮಿಕ ವಿಚಾರಗಳಲ್ಲಿ ಮೂಗು ತೊರಿಸುವಂತ ನೈತಿಕತೆ ಇಲ್ಲ ಎಂದು ಪ್ರತಿಪಾದಿಸಿದರು.

Hijab Row: 'ಶುಕ್ರವಾರ, ರಂಜಾನ್‌ ಮಾಸದಲ್ಲಾದರೂ ಹಿಜಾಬ್‌ಗೆ ಅವಕಾಶ ಕೊಡಿ'

ಬಿಜೆಪಿ ಅಜೆಂಡಾ

ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ(BJP Government) ಒಂದೊಂದು ಚುನಾವಣೆ ಎದುರಿಸುವ ಸಂದರ್ಭದಲ್ಲಿ ಒಂದೊಂದು ಅಜೆಂಡಾವನ್ನು ಇಟ್ಟಿಕೊಂಡು ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡಲಾಗುತ್ತಿದೆ. ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಪುಲ್ವಾಮ ದಾಳಿ ಘಟನೆಯನ್ನು ಮುಂದಿಟ್ಟಿಕೊಂಡು ಚುನಾವಣೆ ಎದುರಿಸಿದೆ. ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ದೃಷ್ಟಿಯಿಂದ ಹಿಜಾಬ್‌(Hijab) ಘಟನೆಯನ್ನು ಮುಂದಿಟ್ಟುಕೊಂಡು ಧರ್ಮಗಳನ್ನು ಒಡೆದು ಲಾಭ ಪಡೆಯಲು ಮುಂದಾಗುತ್ತಿದೆ ಎಂದು ಕೆ.ಎಚ್‌ ಮುನಿಯಪ್ಪ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ಉದಯಶಂಕರ್‌, ಪ್ರಸಾದ್‌ ಬಾಬು, ಜಿಲ್ಲಾ ಕಿಸಾನದ ಸೆಲ್‌ ಅಧ್ಯಕ್ಷ ಊರುಬಾಗಿಲು ಶ್ರೀನಿವಾಸ್‌,.ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ರತ್ಮಮ್ಮ. ಕೆ.ಯು.ಡಿ.ಎ. ಮಾಜಿ ಅಧ್ಯಕ್ಷ ಅಥಾವುಲ್ಲಾ ಖಾನ್‌, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಯಕ್ಬಾಲ್‌ ಆಹಮದ್‌, ಎಸ್‌.ಸಿ.ಘಟಕದ ಅಧ್ಯಕ್ಷ ಜಯದೇವ್‌, ಹಿಂದುಳಿ ವರ್ಗಗಳ ಘಟಕದ ಅಧ್ಯಕ್ಷ ನಾಗರಾಜ್‌ ಉಪಸ್ಥಿತರಿದ್ದರು.
 

click me!