3 ವರ್ಷ ಹಿಂದಿನ ಚುನಾವಣೆಯ ಮರು ಮತ ಎಣಿಕೆ ಕಾರ್ಯ: ಉಪಸಭಾಪತಿ ಎಂ.ಕೆ ಪ್ರಾಣೇಶ್ ಶಾಸಕ ಸ್ಥಾನಕ್ಕೆ ಸಂಕಷ್ಟ?

Published : Feb 21, 2025, 06:58 PM ISTUpdated : Feb 21, 2025, 07:14 PM IST
3 ವರ್ಷ ಹಿಂದಿನ ಚುನಾವಣೆಯ ಮರು ಮತ ಎಣಿಕೆ ಕಾರ್ಯ: ಉಪಸಭಾಪತಿ ಎಂ.ಕೆ ಪ್ರಾಣೇಶ್ ಶಾಸಕ ಸ್ಥಾನಕ್ಕೆ ಸಂಕಷ್ಟ?

ಸಾರಾಂಶ

ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಮೂರು ವರ್ಷಗಳ ಹಿಂದೆ ನಡೆದ ಚುನಾವಣೆಯ ಮರು ಮತ ಎಣಿಕೆ ಕಾರ್ಯ ನಡೆಯುಲಿದೆ.ಸ್ಥಳೀಯ ಸಂಸ್ಥೆಗಳಿಂದ ನಡೆಯುವ ವಿಧಾನಪರಿಷತ್ ಚುನಾವಣೆಯ ಮತದಾನದ ಮರುಮತ ಎಣಿಕೆ ಉಚ್ಚನ್ಯಾಯಾಲಯದ ಆದೇಶ ಮೇರೆಗೆ ಫೆಬ್ರವರಿ 28 ರಂದು ನಡೆಯಲಿದೆ. 

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ಫೆ.21): ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಮೂರು ವರ್ಷಗಳ ಹಿಂದೆ ನಡೆದ ಚುನಾವಣೆಯ ಮರು ಮತ ಎಣಿಕೆ ಕಾರ್ಯ ನಡೆಯುಲಿದೆ.ಸ್ಥಳೀಯ ಸಂಸ್ಥೆಗಳಿಂದ ನಡೆಯುವ ವಿಧಾನಪರಿಷತ್ ಚುನಾವಣೆಯ ಮತದಾನದ ಮರುಮತ ಎಣಿಕೆ ಉಚ್ಚನ್ಯಾಯಾಲಯದ ಆದೇಶ ಮೇರೆಗೆ ಫೆಬ್ರವರಿ 28 ರಂದು ನಡೆಯಲಿದೆ. 

ಜನಪ್ರತಿನಿಧಿಗಳಿಂದ ಆಯ್ಕೆಯಾಗಿದ್ದ ಸ್ಥಾನ: ಜಿಲ್ಲೆಯಲ್ಲಿ ರಂದು 2021 ಡಿಸೆಂಬರ್ 10 ರಂದು ಸ್ಥಳೀಯ ಸಂಸ್ಥೆಗಳಾದ ಗ್ರಾಮಪಂಚಾಯಿತಿ, ಪಟ್ಟಣ ಪಂಚಾಯಿತಿ,ಪುರಸಭೆಯ ಚುನಾಯಿತ ಜನಪ್ರತಿನಿಧಿಗಳು ಮತದಾನಮಾಡಿದ್ದರು. ಅಭ್ಯರ್ಥಿಗಳಾಗಿ ಬಿಜೆಪಿಯಿಂದ ಎಂ.ಕೆ.ಪ್ರಾಣೇಶ್, ಕಾಂಗ್ರೆಸ್‌ನಿಂದ ಎ.ವಿ.ಗಾಯತ್ರಿಶಾಂತೇಗೌಡ, ಆಮ್‌ ಆದ್ಮಿ ಪಕ್ಷದಿಂದ ಡಾ.ಸುಂದರಗೌಡ, ಪಕ್ಷೇತರರಾಗಿ ಬಿ.ಟಿ.ಚಂದ್ರಶೇಖರ್, ಜಿ.ಐ.ರೇಣುಕಾಕುಮಾರ್ ಚುನಾವಣೆಯಲ್ಲಿ ಕಣಕ್ಕಿಳಿದಿದ್ದರು. ವಿಧಾನಪರಿಷತ್ ಚುನಾವಣೆಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾಯಿತ ಜನಪ್ರತಿನಿಧಿಗಳಲ್ಲದೆ ಪುರಸಭೆ, ಪಟ್ಟಣಪಂಚಾಯಿತಿಯ 12 ಮಂದಿ ನಾಮನಿರ್ದೇಶನ ಸದಸ್ಯರು ಮತದಾನದಲ್ಲಿ ಪಾಲ್ಗೊಂಡಿದ್ದರು.  

ಕಾಫಿನಾಡಲ್ಲಿ ಹೆಚ್ಚುತ್ತಿರೋ ಕಾಡ್ಗಿಚ್ಚು ಪ್ರಕರಣ: ಬೆಂಕಿ ನಂದಿಸಲು ಅಗ್ನಿಶಾಮಕ ಠಾಣೆಯಲ್ಲಿ ವಾಹನಗಳೇ ಇಲ್ಲ!

ನಗರದ ಐಡಿಎಸ್‌ಜಿ ಕಾಲೇಜಿನಲ್ಲಿ 2021ರ ಡಿಸೆಂಬರ್ 14ರಂದು ಮತಎಣಿಕೆ ನಡೆದಿದ್ದು, ಒಟ್ಟು 2410 ಮತಗಳ ಲ್ಲಿ 39 ಅಸಿಂಧುವಾಗಿದ್ದು, 231 ಮತ ಸಿಂಧುವಾಗಿತ್ತು. ಈಗ ವಿಧಾನಪರಿಷತ್ ಉಪಸಭಾಪತಿಯಾಗಿರುವ ಎಂ.ಕೆ.ಪ್ರಾಣೇಶ್1188 ಮತಪಡೆದರೆ, ಗಾಯತ್ರಿ ಶಾಂತೇಗೌಡ 1182ಮತಪಡೆದಿದ್ದರು.6 ಮತಗಳಿಂದ ಕಾಂಗ್ರೆಸ್ ಅಭ್ಯರ್ಥಿ ಹಿನ್ನಡೆ ಆಗಿತ್ತು. ಮತ ಎಣಿಕೆ ಕೇಂದ್ರದಲ್ಲೇ ಮರು ಮತ ಎಣಿಕೆಗೆ ಗಾಯತ್ರಿ ಶಾಂತೇಗೌಡ ಮುಂದಾಗಿದ್ದರು, ಆಗ ಜಿಲ್ಲಾ ಚುನಾವಣಾಧಿಕಾರಿಯಾಗಿದ್ದ ಕೆ.ಎನ್.ರಮೇಶ್ ಚುನಾವಣಾ ಆಯೋಗದ ಸೂಚನೆ ಮೇರೆಗೆ ಫಲಿತಾಂಶವನ್ನು ಪ್ರಕಟಿಸಿದ್ದರು.

ಕೋರ್ಟ್‌ನ ಮೊರೆ ಹೋಗಿದ್ದ ಕಾಂಗ್ರೆಸ್ ಅಭ್ಯರ್ಥಿ: ಸ್ಥಳೀಯ ಸಂಸ್ಥೆಗಳ ನಾಮನಿರ್ದೇಶಕ ಸದಸ್ಯರಿಗೆ ಮತದಾನಮಾಡುವ ಅವಕಾಶವಿಲ್ಲವೆಂದು ಮಾಜಿ ವಿಧಾನಪರಿಷತ್ ಸದಸ್ಯೆ ಗಾಯತ್ರಿಶಾಂತೇಗೌಡ ಅವರು ನ್ಯಾಯಾಲಯದ ಮೆಟ್ಟಿಲೇರಿದ್ದರು. ನ್ಯಾಯಾಲಯದ ಇತ್ತೀಚೆಗೆ ನಾಮಕರಣ ಸದಸ್ಯರ 12 ಮತಗಳನ್ನು ಪ್ರತ್ಯೇಕವಾಗಿರಿಸಿ 30ದಿನದೊಳಗೆ ಮರುಎಣಿಕೆ ಮಾಡುವಂತೆ ಹೈ ಕೋರ್ಟ್ ಆದೇಶಿಸಿದ್ದು, ಮರುಮತ ಎಣಿಕೆಗೆ ತಡೆನೀಡುವಂತೆ ಎಂ.ಕೆ.ಪ್ರಾಣೇಶ್ ಸರ್ವೋಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು, ನ್ಯಾಯಾಲಯವೂ ಮಾರ್ಚ್ 4ರ ಒಳಗೆ ಮರು ಮತ ಎಣಿಕೆ ಕಾರ್ಯ ನಡೆಸಿ ಮುಚ್ಚಿದ ಲಕೋಟೆಯಲ್ಲಿ ಫಲಿತಾಂಶ ನೀಡುವಂತೆ ಆದೇಶ ಮಾಡಿತ್ತು.

ಚಿಕ್ಕಮಗಳೂರು: ಮಗಳ ಪ್ರೀತಿ ಮೆಚ್ಚಿ ಮದುವೆ ಮಾಡಿದ್ದಕ್ಕೆ ಅಪ್ಪ-ಅಮ್ಮನಿಗೆ ಬಹಿಷ್ಕಾರ

ಜಿಲ್ಲಾಡಳಿತ ವಿಧಾನಪರಿಷತ್ ಚುನಾವಣೆಯ ಮತದಾನದ ಮತಪತ್ರಗಳನ್ನು ಈಗಾಗಲೇ ಭದ್ರವಾಗಿಟ್ಟಿದ್ದು, ಮರುಮತ ಎಣಿಕೆಗೆ ಸಕಲರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದೆ. ಇದೇ ತಿಂಗಳು 28ರಂದು ಐಡಿಎಸ್‌ಜಿ ಕಾಲೇಜಿನಲ್ಲಿ ಮರು ಮತ ಎಣಿಕೆ ಮಾಡುವ ಮೂಲಕ ಮುಚ್ಚಿನ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸುತ್ತಿದ್ದು, ಮೂರು ವರ್ಷಗಳ ಬಳಿಕ ನ್ಯಾಯಾಲಯ ವಿಜೇತರು ಯಾರೆಂಬುದನ್ನು ಘೋಷಣೆ ಮಾಡಲಿದೆ. ನ್ಯಾಯಾಲಯ ನೀಡುವ ವಿಧಾನಪರಿಷತ್‌ಚುನಾವಣೆಯ ಫಲಿತಾಂಶದ ತೀರ್ಪಿನಿಂದು ಉಪ ಸಭಾಪತಿ ಎಂ.ಕೆ. ಪ್ರಾಣೇಶ್ ಶಾಸಕ ಸ್ಥಾನಕ್ಕೆ ಸಂಕಷ್ಟ ಎದುರಾಗುವುದೋ ಅಥವಾ ವಿಧಾನಪರಿಷತ್ ಮಾಜಿ ಸದಸ್ಯೆ ಎ.ವಿ.ಗಾಯತ್ರಿಶಾಂತೇಗೌಡ 2ನೇ ಅವಧಿಗೆ ಆಯ್ಕೆಯಾಗುವರೋ ಎಂಬುದನ್ನು ಕಾದುನೋಡಬೇಕಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರಾಜ್ಯದಲ್ಲಿ ರಾಜಕೀಯ ಹೊಲಸೆದ್ದು, ಎಲ್ಲ ಪಕ್ಷಗಳು ಗಬ್ಬೆದ್ದು ಹೋಗಿವೆ: ಕೆ.ಎಸ್.ಈಶ್ವರಪ್ಪ
ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ