ನಾಯಕತ್ವ ಬದಲಾವಣೆ ಮಧ್ಯೆ ನಡೆದ ಸಂಪುಟ ಸಭೆಯಲ್ಲಿ ತೆಗೆದುಕೊಂಡ ಪ್ರಮುಖ ನಿರ್ಧಾರಗಳು

By Suvarna NewsFirst Published Jul 22, 2021, 6:29 PM IST
Highlights

* ಕರ್ನಾಟಕ ಸಚಿವ ಸಂಪುಟ ಸಭೆ ಅಂತ್ಯ
* ಸಿಎಂ ಬದಲಾವಣೆ ಮಧ್ಯೆ  ನಡೆದ ಕ್ಯಾಬಿನೆಟ್ ಸಭೆ
ಸಭೆ ಸಂಪೂರ್ಣ ಮಾಹಿತಿ ನೀಡಿದ ಸಚಿವ ಬಸವರಾಜ್ ಬೊಮ್ಮಾಯಿ

ಬೆಂಗಳೂರು, (ಜು.22): ನಾಯಕತ್ವ ಬದಲಾವಣೆ ಮಧ್ಯೆ  ತೀವ್ರ ಕುತೂಹಲ ಮೂಡಿಸಿದ್ದ ರಾಜ್ಯ ಸಚಿವ ಸಂಪುಟ ಸಭೆ ಅಂತ್ಯವಾಗಿದ್ದು, ಕೆಲ ಪ್ರಮುಖ ತೀರ್ಮಾನಗಳನ್ನು ಕೈಗೊಂಡಿದೆ.

ಕ್ಯಾಬಿನೆಟ್ ಸಭೆ ಮುಗಿಯುತ್ತಿದ್ದಂತೆಯೇ ಪತ್ರ ಹಿಡಿದು ಸಿಎಂ ಕಚೇರಿಗೆ ಹೋದ ವಲಸಿಗ ಸಚಿವರು

 ಇಂದು (ಗುರುವಾರ) ಸಂಜೆ ನಡೆದ ಸಚಿವ ಸಂಪುಟ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಬೊಮ್ಮಾಯಿ, ಬಿಎಸ್ ಯಡಿಯೂಪ್ಪನವರ ಕೊನೆ ಎನ್ನಲಾದ ಸಂಪುಟ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರಗಳ ಬಗ್ಗೆ ಮಾಹಿತಿ ನೀಡಿದರು.

ಸಭೆಯ ಪ್ರಮುಖ ನಿರ್ಧಾರಗಳು
* ಶಿವಮೊಗ್ಗದಲ್ಲಿ ಕ್ಯಾನ್ಸರ್ ಆಸ್ಪತ್ರೆ ಸ್ಥಾಪನೆಗೆ 50 ಕೋಟಿ ರೂ. ಅನುಮೋದನೆ
* ಗ್ರಾಮೀಣ ಪ್ರದೇಶದಲ್ಲಿ 4 ಲಕ್ಷ ಮನೆ ನಿರ್ಮಾಣ, ನಗರ ಪ್ರದೇಶದಲ್ಲಿ 1 ಲಕ್ಷ ಮನೆ ನಿರ್ಮಾಣಕ್ಕೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ 
* -ಸುಮಾರು 8 ಸಾವಿರ ಕೋಟಿ ವೆಚ್ಚದಲ್ಲಿ ಗ್ರಾಮ ಪಂಚಾಯತ್ ಸಭೆ ಮೂಲಕ ಮನೆ ನಿರ್ಮಾಣ, 
* ನಗರ ಪ್ರದೇಶದಲ್ಲಿ ಆಸರೆ ಸಮಿತಿ ಮೂಲಕ ಮನೆ ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ. 2 ವರ್ಷದಲ್ಲಿ ಒಟ್ಟು 5 ಲಕ್ಷ ಮನೆ ನಿರ್ಮಾಣಕ್ಕೆ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.
* ಹೊನ್ನಾಳಿ ಕ್ಷೇತ್ರಕ್ಕೆ 25 ಕೋಟಿ ರೂ. ಅನುಮೋದನೆ

click me!