ಯಡಿಯೂರಪ್ಪ ಬೆಂಬಲಿಸಿ ಹೇಳಿಕೆ: ಮಠಾಧೀಶರ ನಡೆಗೆ ರಾಯರೆಡ್ಡಿ ಬೇಸರ

By Suvarna NewsFirst Published Jul 22, 2021, 5:31 PM IST
Highlights

* ನಾಯಕತ್ವ ಬದಲಾವಣೆ ವಿಚಾರಕ್ಕೆ ಸ್ವಾಮೀಜಿಗಳ ನಡೆಗೆ ಆಕ್ರೋಶ
* ಬಿಎಸ್ ಯಡಿಯೂರಪ್ಪನವರ ಬೆನ್ನಿಗೆ ನಿಂತಿರುವ ಸ್ವಾಮೀಜಿಗಳು
* ಮಾಜಿ ಸಚಿವ, ಕಾಂಗ್ರೆಸ್‌ನ ಬಸವರಾಜ ರಾಯರ ಬೇಸರ
 

ನವದೆಹಲಿ, (ಜು.22): ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಬೆಂಬಲ ವ್ಯಕ್ತಪಡಿಸಿರುವ ಮಠಾಧೀಶರ ನಡೆ ಸರಿಯಲ್ಲ ಎಂದು ಮಾಜಿ ಸಚಿವ, ಕಾಂಗ್ರೆಸ್‌ನ ಬಸವರಾಜ ರಾಯರಡ್ಡಿ ಅಭಿಪ್ರಾಯಪಟ್ಟರು.

ಇಂದು (ಗುರುವಾರ) ನವದೆಹಲಿಯ ಕರ್ನಾಟಕ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯ ಪಕ್ಷಗಳ ಕಾರ್ಯಕರ್ತರು, ಭಕ್ತರು ಕಾಲಿಗೆ ಬೀಳುತ್ತಾರೆ. ಆದರೆ, ಮಠಾಧೀಶರು ಒಂದು ಪಕ್ಷದಮುಖಂಡರನ್ನು ಬೆಂಬಲಿಸುವುದು ಸರಿಯಲ್ಲ ಎಂದು ಅಭಿಪ್ರಾಯ ತಿಳಿಸಿದರು. 

ರಾಜೀನಾಮೆ ಸುಳಿವು ಕೊಟ್ಟ ಬೆನ್ನಲ್ಲೇ ಬಿಎಸ್‌ವೈಗೆ ಜೆಡಿಎಸ್‌ ಸೇರುವಂತೆ ಬಂತು ಆಹ್ವಾನ

ಸಂವಿಧಾನದಲ್ಲಿ ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗಗಳು ಪ್ರಮುಖ ಅಂಗಗಳಾದರೂ, ಜನತೆಯೆದುರು ಸತ್ಯ ಹೊರಗಿಡುವ ಪತ್ರಿಕಾ ರಂಗವನ್ನು ನಾಲ್ಕನೇ ಅಂಗ ಎಂದು ಕರೆಯಲಾಗುತ್ತದೆ. ಅದರ ಜೊತೆಗೆ ಈಗ ರಾಜಕಾರಣಿಗಳು ಸ್ವಾಮೀಜಿಗಳಿಗೆ ಹಾಕುವ 'ಸಾಷ್ಟಾಂಗ'ವೂ ಸೇರಿದೆ‌. 'ಸಾಷ್ಟಾಂಗ' ಹಾಕುವ ಮೂಲಕ ಅಧಿಕಾರ ಉಳಿಸಿಕೊಳ್ಳುವ ಪರಿಪಾಠ ನಡೆದಿದೆ ಎಂದು  ವ್ಯಂಗ್ಯವಾಡಿದರು.

ಶಾಮನೂರು ನಡೆಗೆ ಬೇಸರ 
ಕಾಂಗ್ರೆಸ್ ಶಾಸಕರಾದ ಶಾಮನೂರು ಶಿವಶಂಕರಪ್ಪ ಹಾಗೂ ಎಂ.ಬಿ. ಪಾಟೀಲ ಅವರು ಲಿಂಗಾಯತರು ಎಂಬ ಕಾರಣದಿಂದ ಯಡಿಯೂರಪ್ಪ ಅವರಿಗೆ ಬಹಿರಂಗ ಬೆಂಬಲ ನೀಡಿರುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಒಂದು ಪಕ್ಷದ ತತ್ವ, ಸಿದ್ಧಾಂತಕ್ಕೆ ಒಳಪಟ್ಟ‌ ಈ ಶಾಸಕರು, ಸಿದ್ಧಾಂತ, ಶಿಸ್ತು ಇಲ್ಲದ ಇನ್ನೊಂದು ಪಕ್ಷದ ಮುಖಂಡರ ಬೆಂಬಲಕ್ಕೆ ನಿಲ್ಲುವುದು ಎಷ್ಟು ಸೂಕ್ತ? ಎಂದು  ಪ್ರಶ್ನಿಸಿದರು.

click me!