ಹಾಸನದಲ್ಲಿ ಜೆಡಿಎಸ್ ಟಿಕೆಟ್‍ಗಾಗಿ ವಾರ್: ಶೃಂಗೇರಿ ಶಾರದಾಂಬೆ ಮೊರೆ ಹೋದ್ರಾ ರೇವಣ್ಣ ದಂಪತಿ

By Govindaraj S  |  First Published Jan 28, 2023, 1:30 AM IST

ಮಾಜಿ ಸಿಎಂ ಹಾಗೂ ರೇವಣ್ಣ ಸಹೋದರ ಹೆಚ್.ಡಿ.ಕುಮಾರಸ್ವಾಮಿ ಒಂದು ರೀತಿ ಹೇಳಿಕೆ ನೀಡುತ್ತಿದ್ದು, ಭವಾನಿ ರೇವಣ್ಣ ಕೂಡ ಮತ್ತೊಂದು ಮತ್ತೊಂದು ರೀತಿ ಹೇಳಿಕೆ ನೀಡುತ್ತಿರೋದು ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ. 


ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ಜ.28): ಎಚ್.ಡಿ.ರೇವಣ್ಣ ಪತ್ನಿ ಭವಾನಿ ರೇವಣ್ಣರಿಗೆ ಹಾಸನ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಟಿಕೆಟ್‍ಗಾಗಿ ಇನ್ನಿಲ್ಲದ ಕಸರತು ನಡೆಯುತ್ತಿದೆ. ಮಾಜಿ ಸಿಎಂ ಹಾಗೂ ರೇವಣ್ಣ ಸಹೋದರ ಹೆಚ್.ಡಿ.ಕುಮಾರಸ್ವಾಮಿ ಒಂದು ರೀತಿ ಹೇಳಿಕೆ ನೀಡುತ್ತಿದ್ದು, ಭವಾನಿ ರೇವಣ್ಣ ಕೂಡ ಮತ್ತೊಂದು ಮತ್ತೊಂದು ರೀತಿ ಹೇಳಿಕೆ ನೀಡುತ್ತಿರೋದು ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಹಾಸನವೀಗ ರಾಜ್ಯ ರಾಜಕಾರಣದಲ್ಲಿ ಕೇಂದ್ರಬಿಂದುವಾಗಿದೆ.ಈ ಮಧ್ಯೆ ರೇವಣ್ಣ ದಂಪತಿ ನಿನ್ನೆ ಸಂಜೆ ಏಕಾಏಕಿ ಜಿಲ್ಲೆಯ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಶಾರದಾಂಭೆ ಸನ್ನಿದಿಗೆ ಭೇಟಿ ನೀಡಿ ವಾಸ್ತವ್ಯ ಹೂಡಿ ಇಂದು ಬೆಳಗ್ಗೆ ಶಾರದಾಂಬೆಗೆ ವಿಶೇಷ ಪೂಜೆ ಸಲ್ಲಿಸಿ, ಗುರುಗಳ ಆರ್ಶೀವಾದ ಪಡೆದು ಹಾಸನಕ್ಕೆ ಹಿಂದಿರುಗಿದ್ದಾರೆ.

Tap to resize

Latest Videos

ಟಿಕೆಟ್ ಕೈತಪ್ಪುವ ಆತಂಕದಲ್ಲಿ ಶೃಂಗೇರಿ ಶಾರದಾಂಬೆಯ ಮೊರೆ: ಹಾಸನ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಭವಾನಿ ರೇವಣ್ಣ ಸ್ಪರ್ಧೆ ಮಾಡುವ ಬಯಕೆ ಹೊಂದಿದ್ದು. ಟಿಕೆಟ್ ಕೈತಪ್ಪುವ ಆತಂಕದಲ್ಲಿ ಶೃಂಗೇರಿ ಶಾರದಾಂಬೆಯ ಮೊರೆ ಹೋಗಿದ್ದಾರೆ. ಹಾಸನ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಟಿಕೆಟ್‍ಗಾಗಿ ಸಾಕಷ್ಟು ಫೈಟ್ ನಡೆಯುತ್ತಿರುವ ನಡುವೆ ಶಾಸಕ ಹೆಚ್.ಡಿ.ರೇವಣ್ಣ ಕುಟುಂಬ ಟೆಂಪಲ್ ರನ್ ಆರಂಭಿಸಿದೆ. ದೇವೇಗೌಡರು ಕುಟುಂಬ ದೇವೇಗೌಡರು ರಾಜಕಾರಣಕ್ಕೆ ಬಂದಾಗಿನಿಂದಲೂ ಶಾರದಾಂಬೆ ಭಕ್ತರಾಗಿದ್ದಾರೆ. ರಾಜಕೀಯವಾಗಿ ಯಾವುದೇ ನಿರ್ಣಯ ಕೈಗೊಳ್ಳುವ ಸಂದರ್ಭದಲ್ಲಿ ಶೃಂಗೇರಿ ಶಾರದಾಂಭೆಗೆ ವಿಶೇಷ ಪೂಜೆ ಸಲ್ಲಿಸಿಯೇ ಅವರು ಮುಂದೆ ಹೋಗೋದು. 

ಕಾರ್ಕಳದ ಪರಶುರಾಮ ಪ್ರತಿಮೆ ಲೋಕಾರ್ಪಣೆ ಮಾಡಿದ ಸಿಎಂ ಬೊಮ್ಮಾಯಿ

ಐದು ವರ್ಷದ ಹಿಂದೆ ಅತಿರುದ್ರ ಮಹಾಯಾಗ: 2018ರ ವಿಧಾನಸಭಾ ಚುನಾವಣೆ ವೇಳೆಯಲ್ಲೂ 11 ದಿನಗಳಲ್ಲಿ ಅತಿರುದ್ರ ಮಹಾಯಾಗ ನಡೆಸಿದ್ದರು. ರಾಜಮಹಾರಾಜರ ಕಾಲದಲ್ಲಿ ರಾಜರು ಅಧಿಕಾರಕ್ಕಾಗಿ ಮಾಡುತ್ತಿದ್ದ ಯಾಗವನ್ನ ಜನವರಿ 4ನೇ ತಾರೀಖಿನಿಂದ 15ನೇ ತಾರೀಖಿನವರೆಗೆ ದೇವೇಗೌಡರು ಶೃಂಗೇರಿಯಲ್ಲಿ ವಾಸ್ತವ್ಯ ಹೂಡಿ ಯಾಗ ಮಾಡಿದ್ದರು. ಕುಮಾರಸ್ವಾಮಿ ಕೂಡ ಆರೋಗ್ಯ ಹಾಗೂ ಅಧಿಕಾರಕ್ಕಾಗಿ ಕೊಪ್ಪ ಕುಡ್ನಲ್ಲಿ ಎಂಬ ಗ್ರಾಮದಲ್ಲಿ ತುಂಗಾ ನದಿ ತೀರಿದಲ್ಲಿ ವಿಶೇಷ ಹೋಮ-ಹವನ ನಡೆಸಿದ್ದರು. ಶೃಂಗೇರಿಯಲ್ಲಿ ಬಿ.ಫಾರಂಗಳಿಗೂ ಪೂಜೆ ಸಲ್ಲಿಸಿದರು. 

ಸಿ.ಟಿ.ರವಿಗೆ ಜೆಡಿಎಸ್ ಟಿಕೆಟ್ ಆಫರ್ ಕೊಟ್ಟ ಬಂಡೆಪ್ಪ ಖಾಶೆಂಪೂರ್

ರೇವಣ್ಣ ದೇವಸ್ಥಾನಕ್ಕೆ ಹೋಗೋದು ಎಂದು ಇಡೀ ದಿನ ಸಭೆ-ಸಮಾರಂಭ, ರಾಜಕೀಯ ಭಾಷಣ ಎಲ್ಲಾ ಮುಗಿಸಿ ಸಂಜೆ 6 ಗಂಟೆ ವೇಳೆಗೆ ಶೃಂಗೇರಿಗೆ ಬಂದು ಕಾಲಿಗೆ ಚಪ್ಪಲಿ ಹಾಕದೇ ಬಂದಿದ್ದರು. ರೇವಣ್ಣನವರಿಗೆ ಇರುವ ದೈವದ ನಂಬಿಕೆಯನ್ನ ಬಿಡಿಸಿ ಹೇಳಬೇಕಿಲ್ಲ. ಹೀಗಿರುವಾಗ ಟಿಕೆಟ್‍ಗಾಗಿ ತೀವ್ರ ಲಾಬಿ ನಡೆಯುತ್ತಿದ್ದು, ಟಿಕೆಟ್ ಎಲ್ಲಿ ಕೈತಪ್ಪುತ್ತೋ ಎಂದು ಆತಂಕದಿಂದ ಶೃಂಗೇರಿ ಶಾರದಂಭೆ ಮೊರೆ ಹೋಗಿ ವಿಶೇಷ ಪೂಜೆ ಸಲ್ಲಿಸಿದ್ದಾರೆ ಎನ್ನುವ‌ ಮಾತುಗಳು ರಾಜಕೀಯ ವಲಯದಿಂದ ಕೇಳಿಬಂದಿದೆ.

click me!