ಕೋವಿಡ್​ ವಿಮೆ ವ್ಯಾಪ್ತಿಯಲ್ಲಿ ಪತ್ರಕರ್ತರನ್ನು ಸೇರಿಸಲು ಎಚ್​ಡಿಕೆ ಆಗ್ರಹ

By Suvarna NewsFirst Published Jun 27, 2020, 10:05 PM IST
Highlights

ಕೊರೋನಾ ಸೋಂಕು ತಗುಲಿದ ಪತ್ರಕರ್ತರಿಗೆ ಖಾಸಗಿ ಆಸ್ಪತ್ರೆಗಳಲ್ಲೂ ಉಚಿತವಾಗಿ ಚಿಕಿತ್ಸೆ ಒದಗಿಸಲು ರಾಜ್ಯಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಿಎಂ ಎಚ್​ಡಿಕೆ ಆಗ್ರಹಿಸಿದ್ದಾರೆ.

ಬೆಂಗಳೂರು, (ಜೂನ್.27): ಕಾರ್ಯನಿರತ ಪತ್ರಕರ್ತರನ್ನು(ದೃಶ್ಯ ಮತ್ತು ಮುದ್ರಣ) ಕೋವಿಡ್ ವಿಮೆ ವ್ಯಾಪ್ತಿಗೆ ಒಳಪಡಿಸಬೇಕು ಎಂದು ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ಕೊರೋನಾ ಸೋಂಕು ತಗುಲಿದ ಪತ್ರಕರ್ತರಿಗೆ ಖಾಸಗಿ ಆಸ್ಪತ್ರೆಗಳಲ್ಲೂ ಉಚಿತವಾಗಿ ಚಿಕಿತ್ಸೆ ಒದಗಿಸಲು ರಾಜ್ಯ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿರುವ ಎಚ್​ಡಿಕೆ, ಪತ್ರಕರ್ತರನ್ನು ಕೇವಲ ಹೆಸರಿಗೆ ಮಾತ್ರ ಕೊರೋನಾ ವಾರಿಯರ್ಸ್ ಎಂದು ಘೋಷಿಸಲಾಗಿದೆ ಎಂದು ಟ್ವೀಟ್​  ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಯೋಗಿ ಕೊಂಡಾಡಿದ ಟ್ರಂಪ್,ಅಂತರ್ ಜಿಲ್ಲಾ ಓಡಾಟಕ್ಕೆ ಬ್ರೇಕ್; ಜೂ.27ರ ಟಾಪ್ 10 ಸುದ್ದಿ!

ಪತ್ರಕರ್ತರನ್ನು ಕೇವಲ ಹೆಸರಿಗೆ ಮಾತ್ರ ಕೊರೊನಾ ವಾರಿಯರ್ಸ್ ಎಂದು ಘೋಷಿಸಲಾಗಿದೆ. ಕಾರ್ಯನಿರತ ಪತ್ರಕರ್ತರನ್ನು (ದೃಶ್ಯ ಮತ್ತು ಮುದ್ರಣ) ಕೋವಿಡ್ ವಿಮೆ ವ್ಯಾಪ್ತಿಗೆ ಒಳಪಡಿಸಬೇಕು.
ಕೊರೊನಾ ಸೋಂಕು ತಗುಲಿದ ಪತ್ರಕರ್ತರಿಗೆ ಖಾಸಗಿ ಆಸ್ಪತ್ರೆಗಳಲ್ಲಿಯೂ ಉಚಿತವಾಗಿ ಚಿಕಿತ್ಸೆ ಒದಗಿಸಲು ರಾಜ್ಯಸರ್ಕಾರ ತಕ್ಷಣವೇ ನಿರ್ಧಾರ ಕೈಗೊಳ್ಳಲಿ.

— H D Kumaraswamy (@hd_kumaraswamy)

ಕೊರೋನಾ ವಾರಿಯರ್ಸ್ ಎಂದು ಪತ್ರಕರ್ತರನ್ನು ಹೆಸರಿಗಷ್ಟೇ ಹೇಳಲಾಗಿದೆ. ಅವರಿಗೆ ಯಾವುದೇ ರೀತಿಯ ವಿಮೆ ಸೌಲಭ್ಯವನ್ನೂ ನೀಡಿಲ್ಲ, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರಿಗೂ ಕೋವಿಡ್​ ವಿಮೆ ಅನ್ವಯ ಆಗಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.

click me!