
ಮೈಸೂರು (ಮಾ.20) : 'ನೀವು 60 ವರ್ಷ ಸಾಧನೆ ಮಾಡಿರದ್ದನ್ನ ನಾನು ಮಾಡಿ ತೋರಿಸುತ್ತೇನೆ ಅಲ್ಲಿಯವರೆಗೆ ನೀವು ಸಾಯಬಾರದು' ದೇವೇಗೌಡರ ಮುಂದೆ ಶಪಥ ಮಾಡಿರುವ ಬಗ್ಗೆ ಎಚ್‌ಡಿ ಕುಮಾರಸ್ವಾಮಿ(HD Kumaraswamy)ಯವರು ಭಾವುಕರಾಗಿ ಮಾತನಾಡಿದ್ದಾರೆ.
ನಿನ್ನೆ ಟಿ.ನರಸೀಪುರ ಕ್ಷೇತ್ರದಲ್ಲಿ ನಡೆದ ಪಂಚರತ್ನ ರಥಯಾತ್ರೆ ಸಮಾವೇಶದಲ್ಲಿ ಮಾತನಾಡುವ ವೇಳೆ ತಂದೆಯ ಅನಾರೋಗ್ಯ ನೆನೆದು ಭಾವುಕರಾದರು.
ಮೊನ್ನೆ ದೇವೇಗೌಡ(HD Devegowda)ರನ್ನು ಮಣಿಪಾಲ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಅವರ ಆರೋಗ್ಯದ ಸಮಸ್ಯೆಯಿಂದ ಹಲವು ಕಡೆ ಅವರು ಬರಲು ಸಾಧ್ಯವಾಗಿಲ್ಲ. ಅಂದು ನಾನು ಆಸ್ಪತ್ರೆಗೆ ಹೋಗಿದ್ದಾಗ ದೇವೇಗೌಡರಿಗೆ ಶಪಥ ಮಾಡಿ ಬಂದಿದ್ದೇನೆ. ನೀವು 60 ವರ್ಷ ಸಾಧನೆ ಮಾಡಿರದನ್ನ ನಾನು ಸಾಧನೆ ಮಾಡಿ ತೋರಿಸುತ್ತೇನೆ ಎಂದು ಶಪಥ ಮಾಡಿದ್ದೇನೆ ಎಂದರು.
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್(JDS) ಸರ್ಕಾರ ಅಧಿಕಾರಕ್ಕೆ ಬರಲಿದೆ. ನನ್ನ ಜನಪರ ಆಡಳಿತವನ್ನು ನೋಡಿದ ಬಳಿಕವೇ ನೀವು ಶಿವನಪಾದ ಸೇರಿಕೊಳ್ಳಿ ಎಂದಿದ್ದೇನೆ. ಅಲ್ಲಿಯವರೆಗೆ ನೀವು ಸಾಯಬಾರದು ಎಂದು ಅವರ ಕೈ ಮುಟ್ಟಿ ಶಪಥ ತೆಗೆದುಕೊಂಡಿದ್ದೇನೆ ಎಂದರು.
ಎಚ್‌ಡಿ ಕುಮಾರಸ್ವಾಮಿಯವರ ಭಾವುಕ ನುಡಿಗಳನ್ನು ಕೇಳಿ ಕಾರ್ಯಕರ್ತರ ಕಣ್ಣುಗಳು ತೇವಗೊಂಡಿದ್ದವು.
ರಾಮನಗರದಲ್ಲೇ ನನ್ನ ಮಣ್ಣಾಗುವುದು: ಎಚ್ಡಿಕೆ
ಜೆಡಿಎಸ್ ಬೆಂಬಲಿಸಲು ಮನವಿ:
ಟಿ. ನರಸೀಪುರ ಕ್ಷೇತ್ರದಲ್ಲಿ ಮಿಂಚಿನ ಸಂಚಾರ ನಡೆಸಿರುವ ಕುಮಾರಸ್ವಾಮಿಯವರು ಮಾವಿನಹಳ್ಳಿ, ಚನ್ನಬಸವಯ್ಯನಹುಂಡಿ, ಚಂದಹಳ್ಳಿ ಸೇರಿದಂತೆ ಹಲವು ಕಡೆ ಪ್ರಚಾರ ನಡೆಸಿದರು. ಈ ವೇಳೆ ಜೆಡಿಎಸ್ ಅಭ್ಯರ್ಥಿಯಾಗಿರುವ ಅಶ್ವಿನ್ ಕುಮಾರರನ್ನು ಬೆಂಬಲಿಸುವಂತೆ ಮತದಾರರಲ್ಲಿ ಮನವಿ ಮಾಡಿಕೊಂಡರು.
ಜನಪರ ಯೋಜನೆಗಳ ಕಾರ್ಯಕ್ರಮವೇ ಪಂಚರತ್ನ ರಥಯಾತ್ರೆ ಯೋಜನೆಯಾಗಿದ್ದು, ನಮ್ಮ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಪ್ರತಿಯೊಬ್ಬರ ಕಷ್ಟಸುಖಗಳಿಗೆ ಸ್ಪಂದಿಸುತ್ತೇವೆ. ರೈತರ ಏಳ್ಗೆಗೆ ಶ್ರಮಿಸುತ್ತೇವೆ ಎಂದು ಭರವಸೆ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.