Karnataka Politics: ಗೃಹ ಸಚಿ​ವರು ಖಳ​ನ​ಟನ ಪಾತ್ರ ಮಾಡ್ತಿ​ದ್ದಾ​ರಾ?: ಕುಮಾ​ರ​ಸ್ವಾ​ಮಿ

By Girish Goudar  |  First Published Apr 7, 2022, 11:00 AM IST

*   ಜೆಜೆ ನಗ​ರದ ಯುವ​ಕ ಚಂದ್ರು ಹತ್ಯೆ ಪ್ರಕ​ರ​ಣ
*   ಗೃಹ ಸಚಿವ ಆರಗ ಹೇಳಿ​ಕೆಗೆ ಮಾಜಿ ಸಿಎಂ ಕಿಡಿ
*  ಗೃಹ ಸಚಿ​ವರು ತಮ್ಮ ಜವಾ​ಬ್ದಾರಿ ಮರೆ​ತು ಸಣ್ಣತನದ ಹೇಳಿಕೆ ನೀಡಿ​ದ್ದಾ​ರೆ
 


ಮೈಸೂರು(ಏ.07):  ಬೆಂಗಳೂರಿನ ಜೆಜೆ ನಗ​ರ​ದ ಯುವಕ ಚಂದ್ರು ಕೊಲೆ(Chandru Murder) ಪ್ರಕರಣದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ(Araga Jnanendra) ಅವರ ಹೇಳಿ​ಕೆಗೆ ಮಾಜಿ ಮುಖ್ಯ​ಮಂತ್ರಿ ಎಚ್‌.​ಡಿ.​ಕು​ಮಾ​ರ​ಸ್ವಾಮಿ(HD Kumaraswamy) ತೀವ್ರ ಕಿಡಿ​ಕಾ​ರಿ​ದ್ದಾರೆ. ಗೃಹ ಸಚಿವರು ಹಾಸ್ಯ​ಗಾ​ರನ ಪಾತ್ರ ಮಾಡು​ತ್ತಿ​ದ್ದಾರಾ? ಅಥವಾ ಖಳ​ನ​ಟನ ಪಾತ್ರ ಮಾಡು​ತ್ತಿ​ದ್ದಾ​ರಾ?, ಗೃಹ ಸಚಿ​ವರು ತಮ್ಮ ಜವಾ​ಬ್ದಾರಿ ಮರೆ​ತಿ​ದ್ದಾರೆ, ಸಣ್ಣತನದ ಹೇಳಿಕೆ ನೀಡಿ​ದ್ದಾ​ರೆ ಎಂದು ಕಿಡಿಕಾರಿದರು. 

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಉರ್ದು(Urdu) ಮಾತ​ನಾ​ಡ​ಲಿಲ್ಲ ಎಂಬ ಕಾರ​ಣಕ್ಕೆ ಹತ್ಯೆ​ಯಾ​ಗಿದೆ ಎಂದು ಗೃಹ ಸಚಿ​ವರು ಮೊದಲು ಹೇಳಿಕೆ ನೀಡಿ​ದ್ದರು, ನಂತರ ಆ್ಯಕ್ಸಿಂಡೆಂಟ್‌ ಕಾರ​ಣಕ್ಕೆ ಘಟನೆ ನಡೆ​ದಿದೆ ಎಂದು ತಿಳಿ​ಸಿ​ದ್ದಾರೆ. ಅವ​ರೇನು ಹುಡು​ಗಾಟ ಆಡು​ತ್ತಿ​ದ್ದಾರಾ? ಈ ಕೊಲೆಯನ್ನು ಲಘುವಾಗಿ ಪರಿಗಣಿಸಬೇಡಿ. ಗೃಹ ಸಚಿವರು ತಮ್ಮ ಜವಾಬ್ದಾರಿ ಮರೆತಿದ್ದಾರೆ. ಚುಚ್ಚಿ ಚುಚ್ಚಿ ಕೊಲೆ ಆಗಿದೆ ಅಂತ ಪ್ರಚೋದಾನಾತ್ಮಕ ಹೇಳಿಕೆ ಕೊಟ್ಟಿದ್ದಾರೆ. ಪದೇ ಪದೆ ಸರ್ಕಾರವನ್ನು ಎಚ್ಚರಿಸುತ್ತಿದ್ದೇನೆ. ಮುಖ್ಯ​ಮಂತ್ರಿ ಮೌನ ದೊಡ್ಡ ಅನಾಹುತಕ್ಕೆ ಕಾರಣವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

Tap to resize

Latest Videos

'ಭಾವನಾತ್ಮಕವಾಗಿ ಛಿದ್ರಗೊಳಿಸಿ ಮತ ಗಿಟ್ಟಿಸುವ ಗಿಡುಗಗಳಿವು; ಇವರು ನೈಜ ಹಿಂದುಗಳೇ ಅಲ್ಲ'

ದಲಿತ ಕೊಲೆ ಆಗಿದ್ದಾನೆ ಅಂತ ಸಾಮರಸ್ಯಕ್ಕೆ ಧಕ್ಕೆ ತರುತ್ತಿದ್ದಾರೆ. ಪೋಲಿಸರು ಒಂದು ಹೇಳಿಕೆ ಕೊಟ್ಟರೆ, ಗೃಹ ಸಚಿವರು ಮತ್ತೊಂದು ಹೇಳಿಕೆ ಕೊಡುತ್ತಿದ್ದಾರೆ ಎಂದು ಹೇಳಿ​ದ​ರು.

ಗೃಹ ಸಚಿವರಾಗಲು ಆರ​ಗ ​ನಾಲಾಯಕ್‌: ಸಿದ್ದು ಆಕ್ರೋಶ

ಹುಬ್ಬಳ್ಳಿ/ಬಾಗ​ಲ​ಕೋ​ಟೆ: ಬೆಂಗ​ಳೂ​ರಿ​ನ ಜೆಜೆ ನಗ​ರ​ದ ಯುವ​ಕ ಚಂದ್ರು ಹತ್ಯೆಗೆ ಸಂಬಂಧಿಸಿ ಗೃಹ ಸಚಿವ ಆರಗ ಜ್ಞಾನೇಂದ್ರ ನೀಡಿ​ದ ಹೇಳಿಕೆಯನ್ನು ಪ್ರತಿ​ಪಕ್ಷ ನಾಯಕ ಸಿದ್ದ​ರಾ​ಮಯ್ಯ(Siddaramaiah) ಖಂಡಿ​ಸಿ​ದ್ದಾರೆ. ಆರಗ ಜ್ಞಾನೇಂದ್ರ ಗೃಹ ಸಚಿವರಾಗ​ಲು ನಾಲಾ​ಯಕ್‌ ಎಂದು ಕಿಡಿ​ಕಾ​ರಿ​ದ​ರು.

ಬುಧ​ವಾರ ಸುದ್ದಿ​ಗಾ​ರ​ರೊಂದಿಗೆ ಮಾತ​ನಾಡಿ, ಉರ್ದು ಬಾರದಕ್ಕೆ ಕೊಲೆ ಆಗಿದೆ ಎಂದು ಗೃಹ ಸಚಿ​ವರು ಹೇಳಿಕೆ ನೀಡು​ತ್ತಾರೆಂದರೆ ಏನು ಹೇಳ​ಬೇ​ಕು? ಹಿಂದೆ ಮೈಸೂರಲ್ಲಿ ಗ್ಯಾಂಗ್‌ ರೇಪ್‌ ಆದಾಗಲೂ ಇದೇ ರೀತಿ ಹೇಳಿಕೆ ನೀಡಿದ್ದರು. ಆರಗ ಅವ​ರಿಗೆ ಅನುಭವವೂ ಇಲ್ಲ. ಇಲಾಖೆಯನ್ನೂ ನಿಭಾಯಿಸಲೂ ಬರಲ್ಲ. ಯಾರದ್ದೇ ಕೊಲೆಯಾದರೂ ಅದನ್ನು ಖಂಡಿಸುತ್ತೇನೆ. ಹಿಂದೂ(Hindu) ಸಮುದಾಯದವರು ಸತ್ತರೂ, ಮುಸ್ಲಿಮರು ಸತ್ತರೂ ಜೀವ ಜೀವವೇ. ಆದರೆ ಇವರಿಗೆಲ್ಲ ಹಾಗಲ್ಲ ಎಂದರು.

ನಮಗೆ ಕೊಟ್ಟ ಕಿರುಕುಳ ಜನತೆ ಅನುಭವಿಸಬೇಕಿದೆ, ಹಿಂದೂ ಯುವಕರಿಗೆ ಕೈ ಮುಗಿದು ಮನವಿ ಮಾಡಿದ HDK

ಇದೇ ವೇಳೆ ಮಂಡ್ಯದ ವಿದ್ಯಾ​ರ್ಥಿನಿ ಮುಸ್ಕಾ​ನ್‌ಗೆ ಅಲ್‌​ಖೈ​ದಾ ಮುಖಂಡ ಬೆಂಬಲ ವ್ಯಕ್ತ​ಪ​ಡಿ​ಸಿದ ವಿಚಾ​ರ​ಕ್ಕೆ ಪ್ರತಿ​ಕ್ರಿ​ಯಿ​ಸಿದ ಅವ​ರು, ‘ಎಲ್ರೀ ಉಗ್ರ, ಯಾರ್ರೀ ಉಗ್ರ... ಇವುಗಳನ್ನೆಲ್ಲ ಆರೆಸ್ಸೆ​ಸ್‌​ನ​ವರೇ ಕಲಿಸೋದು. ಸಮಾಜದಲ್ಲಿ ಅಶಾಂತಿ ಉಂಟು ಮಾಡಲು, ಸಾಮರಸ್ಯ ಹಾಳುಮಾಡಲು, ಮತಗಿಟ್ಟಿಸಲು ಇಂಥ​ವು​ಗ​ಳನ್ನು ಹುಟ್ಟು ಹಾಕುತ್ತಿದ್ದಾರೆ’ ಎಂದು ಆರೋ​ಪಿ​ಸಿ​ದ​ರು.

ಬಿಜೆಪಿ ಸಹಕಾರ ಕೊಡದಿದ್ರೆ ನಿಮ್ಮನ್ನು ಯಾರು ಮೂಸುತ್ತಿರಲಿಲ್ಲ, ಎಚ್‌ಡಿಕೆಗೆ ತಿವಿದ ರೇಣುಕಾಚಾರ್ಯ

ದಾವಣಗೆರೆ: ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಹೊನ್ನಾಳಿ ಶಾಸಕ ರೇಣುಕಾಚಾರ್ಯ  ಸರಣಿ ಟ್ವೀಟ್ ಮಾಡಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಹಲವು ಪ್ರಶ್ನೆಗಳನ್ನು ಹಾಕಿದ ರೇಣುಕಾಚಾರ್ಯ(MP Renukacharya), ಕುಮಾರಸ್ವಾಮಿ ಕಾಲೆಳಿದಿದ್ದರು.

ಸ್ವಯಂ ಘೋಷಿತ ಕರ್ನಾಟಕದ(Karnataka) ಆರುವರೆ ಕೋಟಿ ಹೃದಯ ಸಾಮ್ರಾಜ್ಯ ಗೆದ್ದ ಹೆಚ್ ಡಿ ಕುಮಾರಸ್ವಾಮಿ ಎಂದು ಸಂಬೋಧಿಸಿದ ರೇಣುಕಾಚಾರ್ಯ, 2006  ರಲ್ಲಿ ಬಿಜೆಪಿ ನಿಮ್ಮನ್ನು ಮುಖ್ಯಮಂತ್ರಿ ಮಾಡದಿದ್ದರೆ ಈ‌ ಜನ್ಮದಲ್ಲಿ ನೀವು ಸಿಎಂ ಆಗುತ್ತಿರಲಿಲ್ಲ. ಮುಖ್ಯಮಂತ್ರಿ ಸ್ಥಾನಕ್ಕಾಗಿ ನಮ್ಮ ಜೊತೆ ಓಡಿಬಂದು ಸಿದ್ಧಾಂತಕ್ಕೆ ತಿಲಾಂಜಲಿ‌ ಇಟ್ಟವರು ನೀವು ಎಂದು ಕಿಡಿಕಾರಿದ್ದರು. 
 

click me!