Karnataka Politics: ನನ್ನತ್ರ ಎಲ್ಲರ ಫೈಲಿದೆ: ಸಚಿವ ಅಶ್ವತ್ಥನಾರಾಯಣ ವಿರುದ್ಧ ಹರಿಹಾಯ್ದ ಭಾಸ್ಕರ್‌ ರಾವ್‌

Published : Apr 07, 2022, 07:51 AM IST
Karnataka Politics: ನನ್ನತ್ರ ಎಲ್ಲರ ಫೈಲಿದೆ: ಸಚಿವ ಅಶ್ವತ್ಥನಾರಾಯಣ ವಿರುದ್ಧ ಹರಿಹಾಯ್ದ ಭಾಸ್ಕರ್‌ ರಾವ್‌

ಸಾರಾಂಶ

*  ಭ್ರಷ್ಟಾಚಾರದಲ್ಲಿ ಎಲ್ಲಾ ಪಕ್ಷಗಳು ಭಾಗಿ, ಪೊಲೀಸ್‌ ಇಲಾಖೆಯಲ್ಲಿ ‘ಹುದ್ದೆಗಾಗಿ ಲಂಚ’ *  ಲಂಚಗುಳಿತನಕ್ಕೆ ಬೇಸತ್ತು ರಾಜೀನಾಮೆ ನೀಡಿದೆ *  ಬಜೆಟ್‌ನಲ್ಲಿ ಯೋಜನೆ ಘೋಷಣೆ ಮಾಡಿದರೂ ಜನಸಾಮಾನ್ಯರಿಗೆ ಪ್ರಯೋಜನವಾಗುತ್ತಿಲ್ಲ   

ಬೆಂಗಳೂರು(ಏ.07):  ರಾಜ್ಯದಲ್ಲಿ(Karnataka) ಭ್ರಷ್ಟಾಚಾರ ಗಗನಕ್ಕೆ ಏರಿದೆ. ಭ್ರಷ್ಟಾಚಾರದಲ್ಲಿ ಆಡಳಿತ ಹಾಗೂ ಪ್ರತಿಪಕ್ಷಗಳೆರಡೂ ಭಾಗಿಯಾಗಿವೆ ಎಂದು ಆಮ್‌ ಆದ್ಮಿ ಪಕ್ಷಕ್ಕೆ ಸೇರ್ಪಡೆಯಾದ ಮಾಜಿ ಐಪಿಎಸ್‌ ಅಧಿಕಾರಿ ಎಂ.ಭಾಸ್ಕರ್‌ ರಾವ್‌(Bhaskar Rao) ಗಂಭೀರವಾಗಿ ಆಪಾದಿಸಿದ್ದಾರೆ.

ಬುಧವಾರ ಪಕ್ಷದ ವತಿಯಿಂದ ಆಯೋಜಿಸಲಾಗಿದ್ದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ನಾನು ಎಲ್ಲ ರಾಜಕೀಯ ಪಕ್ಷಗಳನ್ನು ಹತ್ತಿರದಿಂದ ಬಲ್ಲೆ. ನನ್ನಲ್ಲಿ ಆ ನಾಯಕರು ಹೇಳಿಕೊಂಡ ಮಾಹಿತಿಯ ಕಡತಗಳಿವೆ. ಆದರೆ, ನಾನು ಯಾರ ವಿರುದ್ಧವೂ ಆರೋಪ ಮಾಡುವುದಿಲ್ಲ. ನನ್ನ ಮೇಲೂ ಸಾಕಷ್ಟು ಆರೋಪಗಳು ಕೇಳಿ ಬಂದಿವೆ. ಮುಂದೆಯೂ ಬರುತ್ತವೆ. ಅಧಿಕಾರಿಗಳ ಮೇಲೆ ಒತ್ತಡ ಹಾಕುತ್ತಿದ್ದಾರೆ. ನಾನು ಎಲ್ಲವನ್ನೂ ಎದುರಿಸಲು ಸಿದ್ಧವಾಗಿದ್ದೇನೆ. ನನ್ನ ಮೇಲೆ ಕೇಸ್‌ ಹಾಕಿದರೂ ಅಥವಾ ದಾಳಿ ನಡೆಸಿದರೂ ಹೆದುರುವುದಿಲ್ಲ’ ಎಂದು ಗುಡುಗಿದರು.

Karnataka Politics: ಆಮ್‌ ಆದ್ಮಿ ಪಕ್ಷದತ್ತ ಭಾಸ್ಕರ್‌ ರಾವ್‌ ಹೆಜ್ಜೆ?

‘ಒಟ್ಟಿನಲ್ಲಿ ಅವರಿಗೆ ಹಣ(Money) ಬೇಕು. ಅಧಿಕಾರಿಗಳು ಸ್ವಾಭಿಮಾನ ಬಿಟ್ಟು ಕೆಲಸ ಮಾಡುತ್ತಿದ್ದಾರೆ. ಪ್ರತಿಯೊಬ್ಬ ಅಧಿಕಾರಿ ಭಯದಲ್ಲಿ ಬದುಕುತ್ತಿದ್ದಾರೆ. ಸುಮ್ಮನೆ ಕೆಳ ಹಂತದ ಕಾರ್ಯಕರ್ತರು ಗಲಾಟೆ ಮಾಡಿಕೊಳ್ಳುತ್ತಾರೆ. ಆದರೆ ನಾಯಕರು ಸರಿಯಾಗಿ ಇರುತ್ತಾರೆ. ನನ್ನ ಬಳಿ ಎಲ್ಲಾ ನಾಯಕರ ಬಗ್ಗೆ ಮಾಹಿತಿ ಇದೆ. ಯಾರು ಯಾರು ಏನೂ ಮಾಡಿದ್ದಾರೆ ಎಂಬ ಮಾಹಿತಿಯಿದೆ. ಎಲ್ಲವೂ ಚೆನ್ನಾಗಿ ಗೊತ್ತಿದೆ. ಅವರೇ ಹೇಳಿಕೊಂಡ ಮಾಹಿತಿಯಿದೆ’ ಎಂದು ಸ್ಫೋಟಕ ಹೇಳಿಕೆ ನೀಡಿದರು.

‘ಬೆಂಗಳೂರು(Bengaluru) ನಗರದಲ್ಲಿ ಅಪರಾಧಿಗಳ ಜೊತೆ ರಾಜಕೀಯ ಪಕ್ಷಗಳು(Political Parties)ಶಾಮೀಲಾಗಿವೆ. ಇದಕ್ಕೆ ಐಎಂಎ ಬಹುಕೋಟಿ ವಂಚನೆ ಪ್ರಕರಣವು ಉದಾಹರಣೆಯಾಗಿದೆ. ನಾನು ಯಾವುದೇ ರಾಜಕೀಯ ಹುದ್ದೆ ಆಪೇಕ್ಷೆಯಿಂದ ಅನ್ಯ ಪಕ್ಷಕ್ಕೆ ಹೋಗಿಲ್ಲ. ನನ್ನನ್ನು ಎಂಎಲ್‌ಸಿ ಮಾಡಿ ಅಂತ ಯಾವ ದೊಡ್ಡ ಪಕ್ಷವನ್ನು ಕೇಳಲಿಲ್ಲ. ರಾಜಕೀಯ ದ್ವೇಷಕ್ಕೆ ನನ್ನ ಮೇಲೆ ಕೇಸ್‌ ಹಾಕಿದರೂ ರೈಡ್‌ ಮಾಡಿಸಿದರೂ ಎದುರಿಸಲು ನಾನು ಸಿದ್ಧನಿದ್ದೇನೆ. ನಾನು ಕನ್ನಡಿಗರ ಪರವಾಗಿ ಹೋರಾಟ ಮಾಡುತ್ತೇನೆ’ ಎಂದರು.

‘ನನ್ನ ಕಣ್ಣೆದುರೇ ಭ್ರಷ್ಟಾಚಾರ ನಡೆದದ್ದನ್ನು ನೋಡಿದ್ದೇನೆ. ಪೊಲೀಸ್‌ ಇಲಾಖೆಯಲ್ಲಿ(Department of Police) ಒಂದೊಂದು ಪೊಸ್ಟಿಂಗ್‌ಗೆ ಎಷ್ಟುಹಣ ಇಸ್ಕೊಂಡಿದ್ದಾರೆ ಅನ್ನೋದು ಕಣ್ಣಾರೆ ಕಂಡಿದ್ದೇನೆ’ ಎಂದು ಆರೋಪಿಸಿದ ಭಾಸ್ಕರ್‌ ರಾವ್‌ ಅವರು, ಈ ಭ್ರಷ್ಟಾಚಾರವನ್ನು ಸಹಿಸಲಾರದೆ ಇನ್ನೂ ಮೂರು ವರ್ಷ ಸೇವಾವಧಿ ಇದ್ದರೂ ಸರ್ಕಾರಿ ಸೇವೆಗೆ ರಾಜೀನಾಮೆ ಸಲ್ಲಿಸಿದ್ದೇನೆ ಎಂದರು.

ಸಚಿವ ಅಶ್ವತ್ಥನಾರಾಯಣ ವಿರುದ್ಧ ಕಿಡಿ:

‘ಪ್ರತಿಯೊಬ್ಬ ಅಧಿಕಾರಿ ಭಯದಿಂದ ಬದುಕುತ್ತಿದ್ದಾನೆ. ನನ್ನ ಮೇಲೆ ಸಚಿವ ಅಶ್ವತ್ಥನಾರಾಯಣ(CN Ashwath Narayan)  ಅವರು ಭ್ರಷ್ಟಾಚಾರದ(Corruption) ಆರೋಪ ಮಾಡಿದರು. ಆಗ ನಾನು ಕಣ್ಣೀರು ಹಾಕಿದೆ. ನನ್ನ ಮೇಲೆ ಇಂಥ ಆರೋಪ ಬಂತಲ್ಲ ಅಂತ ನೋವಾಯಿತು. ಆಗ ನಾನು ಹೇಳಿದೆ ಕೂಡಲೇ ನನ್ನ ರಾಜೀನಾಮೆ ಪಡೆದುಕೊಳ್ಳಿ. ಆದರೆ ಆಗ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಮತ್ತು ಗೃಹ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ9Basavaraj Bommai) ಅವರು ನನ್ನನ್ನು ಸಮಾಧಾನಿಸಿದರು. ಅವರ ಮೇಲೆ ಗೌರವವಿದೆ’ ಎಂದು ಭಾಸ್ಕರರಾವ್‌ ಸ್ಮರಿಸಿದರು.

‘ನನ್ನ ಮೇಲೆ ಆರೋಪ ಬಂದಾಗಲೇ ಸಿಐಡಿ ಮತ್ತು ಸಿಬಿಐಗೆ ಕೊಡಬಹುದಿತ್ತು. ಅವತ್ತು ರಾತ್ರಿ ನನ್ನನ್ನು ಮನೆಗೆ ಕರೆಸಿ ಮುಖ್ಯಮಂತ್ರಿ ಯಡಿಯೂರಪ್ಪ ಸಮಾಧಾನ ಮಾಡಿದರು. ಇದು ನಿನಗೆ ಮಾಡಿದ ಅವಮಾನ ಇಲ್ಲ. ಇದು ನನಗೆಯಾದ ಅವಮಾನ ಎಂದು ಯಡಿಯೂರಪ್ಪ(BS Yediyurappa) ಹೇಳಿದ್ದರು’ ಎಂದು ತಿಳಿಸಿದರು.

ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಸ್ವಯಂ ನಿವೃತ್ತಿಗೆ ಅರ್ಜಿ : ಮುಂದಿನ ನಡೆ ಏನು..?

ಬಜೆಟ್‌ನಲ್ಲಿ ಯೋಜನೆ ಘೋಷಣೆ ಮಾಡಿದರೂ ಜನಸಾಮಾನ್ಯರಿಗೆ ಯಾವುದೇ ಪ್ರಯೋಜನವಾಗುತ್ತಿಲ್ಲ. ಅಣ್ಣಾ ಹಜಾರೆ ಹೋರಾಟ ಹಾಗೂ ಕೇಜ್ರೀವಾಲ್‌ ಅವರ ಆಡಳಿತ ನೋಡಿ ನಾನು ಆಮ್‌ ಆದ್ಮಿ(AAP) ಪಕ್ಷಕ್ಕೆ ಸೇರ್ಪಡೆಯಾಗಿದ್ದೇನೆ. ನಮ್ಮದು ಜಾತಿರಹಿತ, ಹಣ ರಹಿತ ಪಾರ್ಟಿ. ಆಮ್‌ ಆದ್ಮಿ ಪಕ್ಷಕ್ಕೆ ಸೇರಲು ಮುಕ್ತ ಅವಕಾಶವಿದೆ. ಬೇರೆ ಪಾರ್ಟಿಗಳಿಂದ ಎರಡು ಮೂರು ಬಾರಿ ಗೆದ್ದು ,ಈಗ ಟಿಕೆಚ್‌ ಸಿಗದೆ ಇರುವವರು ಪಾರ್ಟಿಗೆ ಸೇರಲು ಅವಕಾಶವಿದೆ. ಇಲ್ಲಿ ಟಿಕೆಚ್‌ಗೆ ಕಮಿಷನ್‌ ಹಾಗೂ ಹಣ ಕೊಡುವ ಪರಿಸ್ಥಿತಿಯಿಲ್ಲ ಎಂದು ಆಹ್ವಾನ ನೀಡಿದರು. ಸಂವಾದ ಕಾರ್ಯಕ್ರಮದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.

ಸಂವಾದಕ್ಕೂ ಮುನ್ನ ಭಾಸ್ಕರ್‌ ರಾವ್‌ ಅವರು ವಚನಕಾರ ಬಸವಣ್ಣ, ಕೆಂಪೇಗೌಡ, ವೀರ ಮದಕರಿ ನಾಯಕ, ಕನಕದಾಸರು, ಶಂಕರಾಚಾರ್ಯರು, ಡಾ.ಬಿ.ಆರ್‌.ಅಂಬೇಡ್ಕರ್‌, ಕುವೆಂಪು ಹಾಗೂ ಎಲ್ಲಾ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಸ್ಮರಿಸಿ ಭಾಸ್ಕರ್‌ ರಾವ್‌ ಅವರು, ವೇದಿಕೆಯಲ್ಲೇ ರಾಜ್ಯದ ಜನತೆಗೆ ಸಾಷ್ಟಾಂಗ ನಮನ ಸಲ್ಲಿಸಿದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನೆಹರೂ ಕಾಲದಲ್ಲೇ ಮೊದಲ ಮತಗಳ್ಳತನ ನಡೆದಿದ್ದು; ಎರಡು ಮತ ಪಡೆದು ಪ್ರಧಾನಿಯಾದರು' ಸಂಸತ್ತಿನಲ್ಲಿ ಕಾಂಗ್ರೆಸ್ ವಿರುದ್ಧ ಶಾ ವಾಗ್ದಾಳಿ
2.84 ಲಕ್ಷ ಹುದ್ದೆ ಖಾಲಿ ಇದ್ರೂ, ಶೇ.9 ಹುದ್ದೆಗಳ ನೇಮಕಾತಿಯನ್ನೇ ಪ್ರಚಾರಕ್ಕೆ ಬಳಸಿಕೊಂಡ ಸರ್ಕಾರ!