
ಧಾರವಾಡ(ಜೂ.05): ಬಸವರಾಜ ಹೊರಟ್ಟಿ ಏಳು ಬಾರಿ ಶಿಕ್ಷಕರ ಪ್ರತಿನಿಧಿಗಳಾಗಿದ್ದಾರೆ. ಸಭಾಪತಿಗಳಿದ್ದಾಗೂ ಸರ್ಕಾರದ ಕಿವಿ ಹಿಂಡಿ, ಶಿಕ್ಷಣ ಕ್ಷೇತ್ರದ ಸಮಸ್ಯೆಗಳಿಗೆ ಇತಿಶ್ರೀ ಹಾಡಬೇಕಿತ್ತು. ಆದರೆ, ಅದನ್ನು ಮಾಡಿಲ್ಲ ಏಕೆ? ವಿಧಾನಪರಿಷತ್ತಿನಲ್ಲಿ ಶಿಕ್ಷಕರ ಬೇಕು-ಬೇಡಗಳಿಗೆ ಸ್ಪಂದಿಸುವ ಧ್ವನಿ ಬರಬೇಕು. ಕೇವಲ ಅಧಿಕಾರದ ಆಸೆಬುರಕರಿಗೆ ಮಣೆ ಹಾಕಬಾರದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಶಿಕ್ಷಕರಲ್ಲಿ ಮನವಿ ಮಾಡಿದರು.
ಇಲ್ಲಿಯ ದೈವಜ್ಞ ಕಲ್ಯಾಣ ಮಂಟಪದಲ್ಲಿ ಶನಿವಾರ ನಡೆದ ಜೆಡಿಎಸ್ ಅಭ್ಯರ್ಥಿ ಶ್ರೀಶೈಲ ಗಡದಿನ್ನಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಶಿಕ್ಷಕರ ಕಲ್ಯಾಣ ಹಾಗೂ ಮಕ್ಕಳ ಉತ್ತಮ ಭವಿಷ್ಯದ ದೃಷ್ಟಿಯಿಂದ ವಿಧಾನಪರಿಷತ್ ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕಿದೆ. ದೇಶದ ಭವಿಷ್ಯ ನಿರ್ಮಿಸುವ ಶಿಕ್ಷಕರ ಭವಿಷ್ಯ ಇಂದು ಅಧೋಗತಿಗೆ ಹೋಗಿದೆ. ಶಿಕ್ಷಣ ಕ್ಷೇತ್ರದ ಸಮಸ್ಯೆಗಳ ನಿವಾರಣೆಗೆ ಹೊಸಬರಿಗೆ ಅವಕಾಶ ನೀಡಲು ಕೋರಿದರು.
ಈ ಭಾಗದ ಕವಿವಿ ಸಹಾಯಕ-ಅತಿಥಿ ಉಪನ್ಯಾಸಕರು ರೋಸಿ ಹೋಗಿದ್ದಾರೆ. ಅವರ ವಿವಿಧ ಬೇಡಿಕೆ ಈಡೇರಿಸದ ಕಾರಣ ಧರಣಿ ನಡೆಸುತ್ತಿದ್ದಾರೆ. ಈ ಸಮಸ್ಯೆ ಇತ್ಯರ್ಥದಲ್ಲಿ ಹೊರಟ್ಟಿವಿಫಲರಾಗಿದ್ದಾರೆ. ಪ್ರಸಕ್ತ ವಿಪ ಚುನಾವಣೆಯಲ್ಲಿ ಇದೀಗ ಉಪನ್ಯಾಸಕರು ತಕ್ಕಪಾಠ ಕಲಿಸಲು ಸಿದ್ಧರಾಗಿದ್ದಾರೆ ಎಂದ ಅವರು, ಮುಖ್ಯಮಂತ್ರಿ ಅವಧಿಯಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಸಾಕಷ್ಟುಕೊಡುಗೆ ನೀಡಿದ್ದೇನೆ. ಕಳೆದ 30 ವರ್ಷದಿಂದ ಶ್ರೀಶೈಲ ಗಡದಿನ್ನಿ ಶಿಕ್ಷಕರ ಸಮಸ್ಯೆಗೆ ಅವಿರತ ಶ್ರಮಿಸಿದ್ದಾರೆ. ಈ ಮೂಲಕ ಪರಿವರ್ತನೆ ತರಬೇಕು ಎಂದು ಕೋರಿದರು.
'ಸಿದ್ದರಾಮಯ್ಯ ಒಂದೇ ಕಲ್ಲಿನಲ್ಲಿ 2 ಹಕ್ಕಿ ಹೊಡೀತಿಲ್ಲ, ಬದಲಿಗೆ ತಮ್ಮ ಮೇಲೆ ಚಪ್ಪಡಿ ಕಲ್ಲು ಎಳೆದುಕೊಳ್ತಿದ್ದಾರೆ'
ಅಭ್ಯರ್ಥಿ ಶ್ರೀಶೈಲ ಗಡದಿನ್ನಿ ಮಾತನಾಡಿ, ಶಿಕ್ಷಣ ಕ್ಷೇತ್ರದ ಸಮಸ್ಯೆ ಪರಿಹಾರ ಹಾಗೂ ಶಿಕ್ಷಕರ ಹಿತ ಕಾಯುವಲ್ಲಿ ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿ ವಿಫಲರಾಗಿದ್ದಾರೆ. ಹೀಗಾಗಿ ಸಮಸ್ಯೆಗಳ ರಹಿತ ಶಿಕ್ಷಣ ಇಲಾಖೆ ನಿರ್ಮಾಣಕ್ಕೆ ತಮಗೆ ಪ್ರಾಶಸ್ತ್ಯದ ಮತ ನೀಡಿ, ತಮ್ಮ ಸೇವೆಗೆ ಅವಕಾಶ ನೀಡುವಂತೆ ಮನವಿ ಮಾಡಿದರು.
ಜಿಲ್ಲಾಧ್ಯಕ್ಷ ಗುರುರಾಜ ಹುಣಸಿಮರದ ಮಾತನಾಡಿ, ಹೊರ ಟ್ಟಿಅವರ ಭಯದಿಂದ ದೈಹಿಕವಾಗಿ ಶೇ. 80 ಶಿಕ್ಷಕರ ಅವರು ಕಡೆಗೆ ಇದ್ದರೆ, ಮಾನಸಿಕವಾಗಿ ಜೆಡಿಎಸ್ ಪರ ಇದ್ದಾರೆ. ಪಶ್ಚಿಮ ಶಿಕ್ಷಕರ ಕ್ಷೇತ್ರ ಜೆಡಿಎಸ್ ವಶದಲ್ಲೇ ಉಳಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮುಖಂಡರಾದ ದೇವರಾಜ ಕಂಬಳಿ, ಪರೀಧಾ ರೋಣದ ಹಾಗೂ ಗದಗ, ಹಾವೇರಿ, ಧಾರವಾಡ, ಕಾರವಾರ ಜಿಲ್ಲೆಗಳ ಜೆಡಿಎಸ್ ಪದಾಧಿಕಾರಿಗಳು ಇದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.