ನಾನೂ ಕೇಸರಿ ಶಾಲು ಹಾಕಿ ನಿಮ್ಮ ಜೊತೆ ಬರ್ತೀನಿ: ಕುಮಾರಸ್ವಾಮಿ

By Suvarna News  |  First Published Apr 4, 2022, 7:45 PM IST

ಹಲಾಲ್, ಹಿಜಾಬ್ ಇತ್ಯಾದಿ ವಿಚಾರಗಳನ್ನು ಮುಂದಿಟ್ಟುಕೊಂಡು ವಿವಾದಗಳನ್ನು ಸೃಷ್ಟಿ ಮಾಡುತ್ತಿರುವ ಹಿಂದೂ ಸಂಘಟನೆಗಳಿಗೆ ಎಚ್ಡಿಕೆ ಟಾಂಗ್ ಕೊಟ್ಟಿದ್ದು,  ಜನಸಾಮಾನ್ಯರ ಬಗ್ಗೆ ಸರಕಾರ ಯೋಚಿಸುತ್ತಿಲ್ಲ ಎಂದಿದ್ದಾರೆ.


ಬೆಂಗಳೂರು(ಎ.3): ಹಲಾಲ್ (Halal), ಹಿಜಾಬ್ (Hijab) ಇತ್ಯಾದಿ ವಿಚಾರಗಳನ್ನು ಮುಂದಿಟ್ಟುಕೊಂಡು ವಿವಾದಗಳನ್ನು ಸೃಷ್ಟಿ ಮಾಡುತ್ತಿರುವ ಹಿಂದೂ ಸಂಘಟನೆಗಳಿಗೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಟಾಂಗ್ ಕೊಟ್ಟಿದ್ದಾರೆ. ರಾಜ್ಯದಲ್ಲಿ ಪ್ರತಿ ದಿನ ಪೆಟ್ರೋಲ್, ಡೀಸಲ್ ರೇಟ್ ಏರುತ್ತಿದೆ. ಕಬ್ಬಿಣ, ಸಿಮೆಂಟ್ ದರ ಏರಿಕೆ ಆಗ್ತಾ ಇದೆ ಜನಸಾಮಾನ್ಯರು ಬದುಕಲು ಕಷ್ಟವಾಗುತ್ತಿದೆ.

ಇಂತಹ ವಿಚಾರಗಳಿಗೆ ಹೋರಾಟ ಮಾಡಿ. ಆಗ ನಾನೂ ನಿಮ್ಮ ಜೊತೆ ಕೇಸರಿ ಶಾಲು ಹಾಕಿಕೊಂಡು ಹೋರಾಟಕ್ಕೆ ಬರುತ್ತೇನೆ, ಅದು ಬಿಟ್ಟು ಪ್ರತಿದಿನ ಒಂದು ಸಮುದಾಯದವರನ್ನು ಗುರಿಯಾಗಿಟ್ಟುಕೊಂಡು ಬೇಡದ ವಿಚಾರಗಳಲ್ಲಿ ವಿವಾದ ಸೃಷ್ಟಿ ಮಾಡಲಾಗ್ತಿದೆ. ಇದರಿಂದ ಯಾರಿಗೂ ಲಾಭವಿಲ್ಲ. ಇಂದು ಹಲಾಲ್ ಹೆಸರಿನಲ್ಲಿ ಮುಸಲ್ಮಾನರ ವ್ಯಾಪಾರಕ್ಕೆ ತೊಂದರೆ ಕೊಟ್ಟರೆ ಮುಂದಿನ ದಿನಗಳಲ್ಲಿ ರೈತರು ಸಾಕಿ ಬೆಳೆಸಿದ ಕುರಿ,ಕೋಳಿಗಳನ್ನು , ಮತ್ತಿತರ ಬೆಳೆಗಳನ್ನು ಕೊಳ್ಳಲು ಯಾರೂ ಇರೋದಿಲ್ಲ, ಅಂತಹಾ ಸಂಧರ್ಭದಲ್ಲಿ ಈ ಹಿಂದೂ ಪರ ಸಂಘಟನೆ ಗಳು ಹೋಗಿ ರೈತರ ನೆರವಿಗೆ ಬರ್ತಾರಾ ಎಂದು ಕಿಡಿಕಾರಿದರು.

Tap to resize

Latest Videos

ಧ್ಚನಿವರ್ಧಕ ಮಸೀದಿಯೊಳಗೆ ಮಾತ್ರ ಕೇಳುವಂತೆ ಮಾಡಿದ್ರೆ ಸೂಕ್ತ: ಸಚಿವ ಈಶ್ವರಪ್ಪ

ಈಗ ಈ ಎಲ್ಲಾ ವಿವಾದ ಮುಗಿಸಿ ಪ್ರಾರ್ಥನಾ ಮಂದಿರಗಳ ಮೇಲಿನ ಧ್ವನಿವರ್ಧಕ ಗಳ ವಿಚಾರದಲ್ಲಿ ವಿವಾದ ಸೃಷ್ಟಿ ಮಾಡಲಾಗ್ತಿಧ. ಕಳೆದ 75 ವರ್ಷಗಳಿಂದ ಇಲ್ಲದೇ ಇದ್ದ ತೊಂದರೆ ಈಗ ಆಗ್ತಿದೆಯೇ? ಬಿಜೆಪಿ ಪಕ್ಷದಿಂದಲೇ ರಾಜ್ಯ ಹಾಳಾಗ್ತಾ ಇದೆ. ಈಗಲೇ ಎಚ್ಚರಿಕೆ ಕೊಡ್ತಾ ಇದ್ದೇನೆ,ಪರಿಸ್ಥಿತಿ ಇದೇರೀತಿ ಮುಂದುವರೆದರೆ ಕರ್ನಾಟಕವನ್ನು ಜನತೆ ಬಿಜೆಪಿ ಮುಕ್ತ ಮಾಡಲಿದ್ದಾರೆ ಎಂದು ಎಚ್ಚರಿಸಿದರು.

ರಾಜ್ಯದಲ್ಲಿ ಇಷ್ಟೆಲ್ಲಾ ಬೆಳವಣಿಗೆ ಗಳು ಆಗುತ್ತಿದ್ದರೂ  ಕೂಡಾ ಮುಖ್ಯಮಂತ್ರಿ  ಬಸವರಾಜ್ ಬೊಮ್ಮಾಯಿ (basavaraj bommai) ಬಾಯಿ ಬಿಡುತ್ತಿಲ್ಲ, ಈ ಹಿಂದೆ ಮನಮೋಹನ್ ಸಿಂಗ್ ಅವರನ್ನು ಮೌನಿ ಪ್ರಧಾನಿ ಎಂದು ಟೀಕೆ ಮಾಡ್ತಾ ಇದ್ರು , ಈಗ ಅದೇ ರೀತಿ ಮೌನಿ ಬಸವರಾಜ್ ಆಗಿದ್ದಾರೆ. ಸಿಎಂ ಸ್ವತಂತ್ರವಾಗಿ ಅಧಿಕಾರ ಮಾಡುತ್ತಿಲ್ಲ. ಆರೆಸ್ಸೆಸ್ ಕೈಗೊಂಬೆಯಾಗಿ ಕೆಲಸ ಮಾಡ್ತಾ ಇದಾರೆ. ಮತ್ತೊಂದು ಕಡೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ  ಪ್ರಧಾನಿ ನರೇಂದ್ರ ಮೋದಿ ಬಂದ ನಂತರ ಕೋಮು ಗಲಭೆಗಳೇ ಆಗಿಲ್ಲ ಎಂಬಂತ ಹಾಸ್ಯಾಸ್ಪದ ಹೇಳಿಕೆ ಕೊಡುವ ಮೂಲಜ ಜನರನ್ನು ಏಪ್ರಿಲ್ ಫೂಲ್ ಮಾಡಲು ಹೊರಟಿದ್ದಾರೆ. ಎಂದು ಬಿಜೆಪಿ ನಾಯಕರಿಗೆ ಕುಟುಕಿದ್ದಾರೆ. 

BALLARI ಭವಿಷ್ಯ ಹೇಳೋ ನೆಪದಲ್ಲಿ ವಾಮಾಚಾರ ಮಾಡಿ ಕಣ್ಣೆದುರೇ ಕತ್ತಿನ ಸರ ಎಗರಿಸಿದ ಚಾಲಾಕಿ!

ನಾನೇನು ಅಂತಾ 2023 ಕ್ಕೆ ಪ್ರೂವ್ ಮಾಡ್ತೀನಿ: ಜೆಡಿಎಸ್ ಪಕ್ಷದಿಂದ ಗುಳೇ ಹೊರಟ ನಾಯಕರ ಬಗ್ಗೆ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ, ಪಕ್ಷ ಬಿಡುವವರನ್ನು ದಂಬಾಲು ಬಿದ್ದು ಉಳಿಸಿಕೊಳ್ಳೋಕೆ ಆಗುತ್ತಾ.? ಅವರವರ ರಾಜಕೀಯ ಭವಿಷ್ಯ ಅರಸಿಕೊಂಡು ಹೋಗ್ತಾರೆ. ಬಸವರಾಜ್ ಹೊರಟ್ಟಿ ನನ್ನ ಬಳಿ ಮಾತಾಡಿದ್ದಾರೆ.ಅವರ ಕ್ಷೇತ್ರದ ಸಮಸ್ಯೆ ಗಳ ಬಗ್ಗೆಯೂ ಮಾತಾಡಿದ್ದಾರೆ. ನಿಮ್ಮ ಭವಿಷ್ಯದ ದೃಷ್ಟಿಯಿಂದ ನಿಮಗೆ ಏನು ಸೂಕ್ತ ಅನಿಸುತ್ತೋ ಆ ನಿರ್ಣಯ ತೆಗೆದುಕೊಳ್ಳಿ ಎಂದಿದ್ದೇನೆ. ಕುಮಾರಸ್ವಾಮಿ ಒಂದು ರೀತಿಯ ಗಾಳಿ ಪಟ ಇದ್ದ ಹಾಗೆ , ಗಾಳಿ ಬಂದ ಕಡೆ ಹೋಗ್ತಾರೆ ಎಂಬ ವಿಪಕ್ಷದವರ ಟೀಕೆ ಗೆ ಮುಂದಿನ ಚುನಾವಣೆಯಲ್ಲಿ ಉತ್ತರ ಕೊಡ್ತೇನೆ. ಗಾಳಿಪಟ ದ ತಾಖತ್ತು ಏನು ಅಂತಾ ತೋರಿಸ್ತೇನೆ ಎಂದು ಕುಮಾರಸ್ವಾಮಿ ಸವಾಲ್ ಹಾಕಿದ್ದಾರೆ..

ಇನ್ನು ಕಾಂಗ್ರೆಸ್ ನಾಯಕರ ವಿರುದ್ದ ಕೂಡಾ ಹರಿಹಾಯ್ದ ಕುಮಾರಸ್ವಾಮಿ, ಈ ರಾಜ್ಯದಲಯ ಬಿಜೆಪಿ ಸರ್ಕಾರ ಬರಲು ಕಾರಣವಾಗಿದ್ದೇ ಕಾಂಗ್ರೆಸ್ ನಾಯಕರು. ಮೈತ್ರಿ ಸರ್ಕಾರ ಹೋಗಿ ಬಿಜೆಪಿ ಸರ್ಕಾರ ಬಂದಿದ್ದು ಕಾಂಗ್ರೆಸ್ ನಾಯಕರಿಂದ. ಇಂದು ಬಿಜೆಪಿಯವರು ಹುಟ್ಟುಹಾಕುತ್ತಿರುವ ವಿವಾದಗಳಿಂದ ಕಾಂಗ್ರೆಸ್ ನವರು ಕೈ ಕೈ ಹಿಸುಕಿಕೊಳ್ಳುವ ಸ್ಥಿತಿ ಬಂದಿದೆ. ಹಿಜಾಬ್, ಹಲಾಲ್ ನಂತಹ ವಿಚಾರಗಳಲ್ಲಿ ಮಾತನಾಡಿದ್ರೆ, ಎಲ್ಲಿ ಹಿಂದೂಗಳ ಮತಗಳು ಕೈತಪ್ಪಿ ಹೋಗುತ್ತವೆಯೋ ಎಂಬ ಭಯದಿಂದ ಕಾಂಗ್ರೆಸ್ ನಾಯಕರು. ಮಾತೇ ಆಡದೆ ಮನೆ ಸೇರಿಕೊಂಡಿದ್ದಾರೆ.ರಾಜ್ಯಕ್ಕೆ ಬಿಜೆಪಿಯವರು ಬೆಂಕಿ ಹಚ್ಚುವ ಕೆಲಸ ಮಾಡ್ತಾ ಇದ್ದರೆ, ಕಾಂಗ್ರೆಸ್ ನವರು ಮೃಧು ಧೋರಣೆ ತೋರಿಸ್ತಾ ಇದಾರೆ. ಮತಾಂತದ ನಿಷೇಧ, ಗೋಹತ್ಯಾ ನಿಷೇಧ, ಹಲಾಲ್, ಹಿಜಾಬ್ ಅಂತಹಾ ವಿವಾದಗಳಲ್ಲಿ ಕಾಂಗ್ರೆಸ್ ಗಟ್ಟಿದನಿ ಎತ್ತುತ್ತಿಲ್ಲ. ಎಂದು ದೂರಿದ್ದಾರೆ..

click me!