Karnataka Politics: ರಾಹುಲ್  ಕರ್ನಾಟಕ ಪ್ರವಾಸ ಬಂದ್ರೆ ಖರ್ಚೆಲ್ಲ ನಂದೇ ಎಂದ  ಈಶ್ವರಪ್ಪ

By Contributor AsianetFirst Published Apr 4, 2022, 6:38 PM IST
Highlights

* ಅಮಿತ್ ಶಾ ಬರುವಾಗಲೇ ಬಾಂಬ್ ತೆಗೆದುಕೊಂಡು ಬಂದಿದ್ದಾರೆ
* ದೇಶದದ್ರೋಹಿಗಳ ವಿರುದ್ಧ ಸಮರ  ನಿರಂತರ
* ರಾಹುಲ್  ಗಾಂಧಿ ಪ್ರವಾಸ ಮಾಡುವುದಾದರೆ ಖರ್ಚನ್ನು ನಾನೇ ನೋಡಿಕೊಳ್ಳುತ್ತೇನೆ
* ಉತ್ತರ ಕನ್ನಡ ಜಿಲ್ಲಾ ಪ್ರವಾಸದಲ್ಲಿರುವ ಕೆಎಸ್ ಈಶ್ವರಪ್ಪ

ಕಾರವಾರ(ಏ.03)  ಅಮಿತ್ ಶಾ (Amit Shah)ರಾಜ್ಯ ಪ್ರವಾಸದ ಬಳಿಕ ಸಚಿವ ಸಂಪುಟದಲ್ಲಿ ಬದಲಾವಣೆ ಸಾಧ್ಯತೆ ವಿಚಾರದ ಬಗ್ಗೆ ಸಚಿವ ಕೆಎಸ್ ಈಶ್ವರಪ್ಪ (KS Eshwarappa) ಶಾಕಿಂಗ್ ಉತ್ತರ ನೀಡಿದ್ದಾರೆ. ಕಾದು ನೋಡಿ ಎಂದ ಸಚಿವ ಕೆ.ಎಸ್. ಈಶ್ವರಪ್ಪ (Cabinet Expansion) ಕುತೂಹಲಕಾರಿ ಮಾಹಿತಿ ನೀಡಿದ್ದಾರೆ.

ಅಮಿತ್ ಶಾ ಬಂದು ಹೋಗಿರೋದು ಪತ್ರಕರ್ತರಲ್ಲೇ ಕುತೂಹಲ ಮೂಡಿಸಿದೆ. ಇನ್ನು ಕಾಂಗ್ರೆಸ್‌ನವರಿಗೆ (Congress) ಢವ ಢವ ಎಂತಾ ಎದೆ ಹೊಡೆದುಕೊಳ್ಳುವುದ್ರಲ್ಲಿ ಎರಡು ಮಾತಿಲ್ಲ. ಅಮಿತ್ ಶಾ ಬರ್ಬೇಕಿದ್ರೆ ರಾಷ್ಟ್ರದ್ರೋಹಿಗಳ ವಿರುದ್ದ ಬಾಂಬ್ ತೆಗೆದುಕೊಂಡೇ ಬಂದಿದ್ದಾರೆ. ರಾಹುಲ್ ಗಾಂಧಿ (Rahul Gandhi) ಉತ್ತರ ಪ್ರದೇಶದಲ್ಲಿ (Uttar Pradesh) ಕಾಲಿಟ್ಟ ಕಡೆಗಳೆಲ್ಲಾ ಕಾಂಗ್ರೆಸ್ ಸರ್ವ ನಾಶವಾಗಿದೆ. ಕರ್ನಾಟಕ ರಾಜ್ಯಕ್ಕೆ ಬಂದ್ರೆ ಇಲ್ಲೂ ಕಾಂಗ್ರೆಸ್‌ಗೆ ಅದೇ ಗತಿಯಾಗುತ್ತದೆ ಎಂದು ಭವಿಷ್ಯ ನುಡಿದರು.

Latest Videos

ರಾಹುಲ್ ಗಾಂಧಿ ಕರ್ನಾಟಕ ಪ್ರವಾಸ ಬರ್ತಾರೆ ಅಂದ್ರೆ ರಾಹುಲ್ ಗಾಂಧಿ ಹೋಗಿ ಬರುವ ಖರ್ಚು ನಾನೇ ವಹಿಸಿಕೊಳ್ಳುತ್ತೇನೆ ಎಂದು ಈಶ್ವರಪ್ಪ ವ್ಯಂಗ್ಯದ ಪ್ರತಿಕ್ರಿಯೆ  ನೀಡಿದರ ಅಂಕೋಲಾ ತಾಲೂಕಿನ ಮಾದನಗೇರಿಯ ಬಳಲೆ ಗ್ರಾಮಕ್ಕೆ ಈಶ್ವರಪ್ಪ ಭೇಟಿ ನೀಡಿದ್ದರು. 

 ಸಂಪುಟ ಕನಸು ಕಾಣುತ್ತಿದ್ದವರಿಗೆ ಶಾಕ್ ಸಿಕ್ಕಿತ್ತು:  ಪಂಚ ರಾಜ್ಯಗಳ ಫಲಿತಾಂಶ ಬಿಜೆಪಿ ಪರವಾಗಿ ಬಂದ ನಂತರ ಕರ್ನಾಟಕ ಸಂಪುಟ ವಿಸ್ತರಣೆ ಆಗಲಿದೆ ಎಂದೇ ಭಾವಿಸಲಾಗಿತ್ತು. ಆದರೆ ಅನೇಕರಿಗೆ ನಿರಾಸೆ ಕಾದಿತ್ತು. ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯ ಪ್ರವಾಸ ಮಾಡಿದ ನಂತರ ಬೊಮ್ಮಾಯಿ ಸಂಪುಟಕ್ಕೆ ಹೊಸ ರೂಪ ಸಿಗಲಿದೆ ಎಂಬ ವರದಿಗಳು ಬಂದಿದ್ದವು.

ನಡ್ಡಾ ಭೇಟಿಗೆ ಕಾಯುವುದು ಅನಿವಾರ್ಯ

ಈಗಿನ ಬೆಳವಣಿಗೆ ನೋಡಿದರೆ ಏಪ್ರಿಲ್ ನಲ್ಲಿ ಸಂಪುಟ ಪುನರ್ ರಚನೆ ಆಗೋದೆ ಡೌಟು. ಹೌದು ಕೇಂದ್ರ ನಾಯಕರು ಪಂಚ ರಾಜ್ಯದ ಚುನಾವಣೆ ಬಳಿಕ ನಾಲ್ಕು ರಾಜ್ಯದ ಸಚಿವ ಸಂಪುಟ ರಚನೆಯಲ್ಲಿ ಬ್ಯುಸಿ ಇದ್ದಾರೆ. ಈಗಷ್ಟೇ ಗೋವಾ, ಮಣಿಪುರ, ಉತ್ತರಖಾಂಡಕ್ಕೆ ಸಿಎಂ ಆಯ್ಕೆ ಮುಗಿಸಿರುವ ಬಿಜೆಪಿ ಹೈಕಮಾಂಡ್ ಈಗ ಆ ಮೂರು ರಾಜ್ಯ ಸೇರಿ ಉತ್ತರಪ್ರದೇಶಕ್ಕೆ ಯೋಗಿ ಸಂಪುಟ ರಚನೆಯಲ್ಲಿ ಬ್ಯುಸಿ ಆಗಿದ್ದಾರೆ.   ಒಂದು ಕಡೆ ಅಮಿತ್ ಶಾ ಮತ್ತು ಅತ್ತ ರಾಹುಲ್ ಗಾಂಧಿ ಸಹ ಕರ್ನಾಟಕಕ್ಕೆ ಬಂದು ಹೋಗಿದ್ದು ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿದೆ.

4+4 ಮಾದರಿಯಲ್ಲಿ ಸಂಪುಟ ?
ಸದ್ಯ ಸಿಎಂ ಬೊಮ್ಮಾಯಿ ಸಂಪುಟದಲ್ಲಿ 30 ಸಚಿವರಿದ್ದು , ನಾಲ್ಕು ಸ್ಥಾನ ಖಾಲಿ ಇದೆ. ಈಗ ಆ ನಾಲ್ಕು ಸ್ಥಾನ ಭರ್ತಿ ಮಾಡುವ ಜೊತೆಗೆ, ಹಾಲಿ ಇರುವ ನಾಲ್ವರು ಹಿರಿಯ ಸಚಿವರನ್ನು ಕೈಬಿಟ್ಟು ಒಟ್ಟು ಎಂಟು ಹೊಸಬರಿಗೆ ಮಂತ್ರಿ ಮಾಡಬಹುದು ಎಂಬ ಲೆಕ್ಕಾಚಾರ ಚರ್ಚೆಯಲ್ಲಿ ಇದೆ. ಹಿರಿಯರನ್ನು ಪಕ್ಷದ ಸಂಘಟನೆಗೆ ತೊಡಗಿಸಿಕೊಂಡು ಹೊಸ ಮುಖಗಳಿಗೆ ಅವಕಾಶ ನೀಡುವ ಆಲೋಚನೆಯಲ್ಲಿ ಬಿಜೆಪಿ ಇದೆ ಎನ್ನಲಾಗಿದೆ. 

ಹಳಬರನ್ನು ಕೈಬಿಟ್ಟು ಹೊಸಬರಿಗೆ ಅವಕಾಶ ಮಾಡಿಕೊಡಲಾಗುತ್ತದೆ ಎಂದು ಹೇಳಿದ್ದರೂ ಆಂತರಿಕ ವಲಯದ ಸದ್ದು ಇತ್ತೀಚೆಗೆ ಮಾಯವಾಗಿದೆ. ರೇಣುಕಾಚಾರ್ಯ  ಹಿರಿಯ ಶಾಸಕರು ದೆಹಲಿಗೆ ದೌಡಾಯಿಸಿ ಬಂದಿದ್ದರು.

ಮೇಕೆದಾಟು ಪಾದಯಾತ್ರೆ ನಡೆಸಿದ್ದ ಕಾಂಗ್ರೆಸ್ ಮುಂದಿನ ವಿಧಾನಸಭೆ ಚುನಾವಣೆ ಗಮನದಲ್ಲಿ ಇಟ್ಟುಕೊಂಡು ಒಂದು ಹಂತದ ಮೈಲೇಜ್ ಪಡೆದುಕೊಂಡಿತ್ತು. ಆದರೆ ನಂತರ ಹಿಜಾಬ್ ವಿವಾದ, ಹಲಾಳ್ ವಿವಾದಗಳು ಭುಗಿಲೆದ್ದು ನಾಯಕರ ನಡುವಿನ ಆರೋಪ ಬೇರೆಯದೇ ರೂಪ ಪಡೆದುಕೊಂಡಿತು.

 

click me!