ತಾನು ಮತ್ತೊಮ್ಮೆ ಮುಖ್ಯಮಂತ್ರಿಯಾದರೆ ಏನೆಲ್ಲಾ ಮಾಡುವ ಕನಸು ಹೊತ್ತಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೊಂಡಿದ್ದಾರೆ. ಅಲ್ಲದೇ ಅಧಿಕಾರಕ್ಕೆ ಬಂದ್ರೆ ಏನೆಲ್ಲಾ ಮಾಡುತ್ತೇವೆ ಎನ್ನುವ ಆಶ್ವಾಸನೆ ಕೊಟ್ಟಿದ್ದಾರೆ.
ಮಂಡ್ಯ, (ಜ.10): ಜೆಡಿಎಸ್ ಮುಂಬರುವ ವಿಧಾನಸಭೆ ಚುನಾವಣೆ ಮೇಲೆ ಕಣ್ಣಿಟ್ಟಿದ್ದು, ಹೇಗಾದರೂ ಮಾಡಿ ಅಧಿಕಾರಕ್ಕೆ ಬರಲು ಇನ್ನಿಲ್ಲದ ಕಸರತ್ತು ಈಗಾಗಲೇ ಆರಂಭಿಸಿದೆ.
ಇನ್ನು ಈ ಬಗ್ಗೆ ಮಂಡ್ಯದ ಶ್ರೀರಂಗಪಟ್ಟಣ ತಾಲ್ಲೂಕು ನೇರಳಕೆರೆ ಗ್ರಾಮದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಕುಮಾರಸ್ವಾಮಿ, ತಾನು ಮತ್ತೊಮ್ಮೆ ಮುಖ್ಯಮಂತ್ರಿಯಾದರೆ ಏನೆಲ್ಲಾ ಮಾಡುವ ಕನಸು ಹೊತ್ತಿದ್ದೇನೆ ಎಂದು ಹೇಳುತ್ತಾ ಮುಂದಿನ ವಿಧಾನಸಭಾ ಚುನಾವಣೆಗೆ ಆಶ್ವಾಸನೆ ರೂಪದ ಪ್ರಣಾಳಿಕೆಯನ್ನೇ ಘೋಷಿಸಿದರು.
ರಾಧಿಕಾ ಬಗ್ಗೆ ಕೊನೆಗೂ ಮೌನ ಮುರಿದ ಕುಮಾರಸ್ವಾಮಿ...!
ಅಧಿಕಾರಕ್ಕೆ ಬಂದ ಮೊದಲ ವರ್ಷದಲ್ಲೇ ರಾಜ್ಯದಲ್ಲಿ ಹೊಸದಾಗಿ 50 ಲಕ್ಷ ಮನೆ ನಿರ್ಮಾಣ, 2ನೇ ವರ್ಷದಲ್ಲಿ ಪ್ರತಿ ಗ್ರಾ.ಪಂ ಮುಖ್ಯ ಕೇಂದ್ರದಲ್ಲಿ ಒಂದು ಪಬ್ಲಿಕ್ ಶಾಲೆ, 5,600 ಗ್ರಾ.ಪಂ ವ್ಯಾಪ್ತಿಯಲ್ಲಿ ಸುಸಜ್ಜಿತ ಶಾಲೆಗಳ ನಿರ್ಮಾಣ, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸುಸಜ್ಜಿತ ಆಸ್ಪತ್ರೆಗಳು ಮತ್ತು ಅಗತ್ಯ ಸಿಬ್ಬಂದಿಯನ್ನು ನೇಮಿಸುವ ಭರವಸೆ ನೀಡಿದರು.
ಇವಿಷ್ಟೇ ಅಲ್ಲ, ಇನ್ನೂ ಸಾಕಷ್ಟಿದೆ. ಚುನಾವಣೆ ಘೋಷಣೆಯಾಗಲಿ ಎಲ್ಲವನ್ನೂ ಹೇಳುತ್ತೇನೆ ಎಂದು ಕುಮಾರಸ್ವಾಮಿ ಹೇಳಿದರು.
ನಾನು ಮಂಡ್ಯ ಜಿಲ್ಲೆ ಜನರ ಋಣವನ್ನು ತೀರಿಸಬೇಕಿದೆ. ಈ ಭೂಮಿಗೆ ಸೇರುವ ಮೊದಲು ಋಣ ತೀರಿಸಬೇಕಿದೆ. ಅಲ್ಲಿಯವರೆಗೂ ನಾನು ವಿಶ್ರಾಂತಿ ಪಡೆಯುವುದಿಲ್ಲ. ನನ್ನನ್ನು ಮತ್ತೆ ಸಿಎಂ ಮಾಡಿ. ಸಿಎಂ ಆದರೆ ಆಡಳಿತ ನಡೆಸೋದು ಹೇಗೆಂದು ತೋರಿಸ್ತೇನೆ ಎಂದು ಜನರಲ್ಲಿ ಮನವಿ ಮಾಡಿದರು.