ರಾಧಿಕಾ ಬಗ್ಗೆ ಕೊನೆಗೂ ಮೌನ ಮುರಿದ ಕುಮಾರಸ್ವಾಮಿ...!

By Suvarna News  |  First Published Jan 10, 2021, 3:29 PM IST

ನಟಿ, ನಿರ್ಮಾಪಕಿ ರಾಧಿಕಾ ಅವರನ್ನ ಸಿಸಿಬಿ ವಿಚಾರಣೆ ಮಾಡಿದೆ. ಇನ್ನು ಈ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಪ್ರತಿಕ್ರಿಯಿಸಿದ್ದು ಹೀಗೆ..


ಮಂಡ್ಯ, (ಜ.10): ಸಿನಿಮಾ ವಿಚಾರವಾಗಿಯಲ್ಲದೇ, ಬೇರೆ ಯಾವ ಕಾರಣಕ್ಕೂ ಎಲ್ಲಿಯೂ ಕಾಣಿಸಿಕೊಳ್ಳದ ಸ್ಯಾಂಡಲ್‌ವುಡ್‌ ನಟಿ, ನಿರ್ಮಾಪಕಿ  ರಾಧಿಕಾ ಕುಮಾರಸ್ವಾಮಿ ಇದೀಗ ವಂಚಕ ಯುವರಾಜನ ಪ್ರಕರಣದಲ್ಲಿ ಸಿಸಿಬಿ ವಿಚಾರಣೆಗೆ ಒಳಗಾಗಿದ್ದಾರೆ. 

"

Tap to resize

Latest Videos

ಈ ಹಿನ್ನೆಲೆಯಲ್ಲಿ ರಾಧಿಕಾ ಕುಮಾರಸ್ವಾಮಿ ಕೆಲವು ದಿನಗಳಿಂದ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಇನ್ನು ಈ ಬಗ್ಗೆ ಮಾಜಿ ಎಚ್‌ಡಿ ಕುಮಾರಸ್ವಾಮಿ ಮೌನ ಮುರಿದಿದ್ದಾರೆ.

ರಾಧಿಕಾ ಕುಮಾರಸ್ವಾಮಿ ಹೆಸರಲ್ಲಿ ಕೋಟಿಗಟ್ಟಲೆ ಆಸ್ತಿ, ಲೆಕ್ಕಕ್ಕೆ ಸಿಕ್ಕಿದ್ದಿಷ್ಟು!

ಹೌದು... ಇಂದು (ಭಾನುವಾರ) ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ನೇರಲೆಕೆರೆ ಗ್ರಾಮಕ್ಕೆ ಕುಮಾರಸ್ವಾಮಿ ಭೇಟಿ ಕೊಟ್ಟರು. ಈ ವೇಳೆ  ರಾಧಿಕಾ ಕುಮಾರಸ್ವಾಮಿಗೆ ಸಿಸಿಬಿ ನೋಟಿಸ್ ವಿಚಾರವಾಗಿ ಮಾಧ್ಯಮದವರು ಎಚ್‌ಡಿಗೆ ಅಭಿಪ್ರಾಯ ಕೇಳಿದ್ದಾರೆ. 

ಇದಕ್ಕೆ ಕುಮಾರಸ್ವಾಮಿ,  ಯಾರಪ್ಪ ಅದು.. ಅವರು ಯಾರು ಅಂತ ಗೊತ್ತಿಲ್ಲ.. ಗೊತ್ತಿಲ್ಲದಿದ್ದವರ ಬಗ್ಗೆ ನಾನ್ಯಾಕೆ ತಲೆಕೆಡಿಸಿಕೊಳ್ಳಲಿ. ನನಗೆ ಸಂಬಂಧಪಡದ ವಿಚಾರ ಕೇಳಲೇಬೇಡಿ ಎನ್ನುತ್ತ ಅಲ್ಲಿಂದ ಕಾಲ್ಕಿತ್ತರು.

click me!