ದಿನದಿಂದ ದಿನಕ್ಕೆ ರಂಗೇರುತ್ತಿರುವ ಹೊಸಕೋಟೆ ಅಖಾಡಕ್ಕೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಬಿಗ್ ಟ್ವಿಸ್ಟ್ ಕೊಟ್ಟಿದ್ದು, ಅಪ್ಪನ ಶತ್ರುತ್ವ ಮರೆತು ಮಗನಿಗೆ ಬೆಂಬಲ ಘೋಷಿಸಿ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದಾರೆ.
ಬೆಂಗಳೂರು / ಹೊಸಕೋಟೆ, (ನ.13): ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆ ಪೈಕಿ ತೀವ್ರ ಜಿದ್ದಾಜಿದ್ದಿಯಿಂದ ಕೂಡಿರುವ ಹೊಸಕೋಟೆ ಬೈ ಎಲೆಕ್ಷನ್ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ.
ಯಾಕಂದ್ರೆ ಅನರ್ಹ ಶಾಸಕ ಎಂಟಿಬಿ ನಾಗರಾಜ್‌ಗೆ ಬಿಜೆಪಿ ಟಿಕೇಟ್ ಕೊಡಲು ನಿರ್ಧರಿಸಿದೆ. ಆದ್ರೆ, ಮತ್ತೊಂದೆಡೆ ಸಂಸದ ಬಿ.ಎನ್.ಬಚ್ಚೇಗೌಡ ಪುತ್ರ ಶರತ್ ಬಚ್ಚೇಗೌಡ ಬಿಜೆಪಿಗೆ ಸೆಡ್ಡು ಹೊಡೆದು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಮುಂದಾಗಿದ್ದು, ನ.14ಕ್ಕೆ ನಾಮಪತ್ರ ಸಲ್ಲಿಸಲು ಮುಹೂರ್ತ ಫಿಕ್ಸ್ ಆಗಿದೆ.
ಶರತ್ ಬಚ್ಚೇಗೌಡ ನಾಮಪತ್ರ ಸಲ್ಲಿಕೆಗೆ ಮುಹೂರ್ತ ಫಿಕ್ಸ್: ಯಾವ ಪಕ್ಷದಿಂದ..?
ಇದರಿಂದ ಎಂಟಿಬಿ ನಾಗರಾಜ್ ನಿದ್ದೆಗೆಡಿಸಿದ್ದು, ಇದರ ಮಧ್ಯೆ ಹೊಸಕೋಟೆಯಲ್ಲಿ ಶರತ್ ಬಚ್ಚೇಗೌಡಗೆ ಬೆಂಬಲ ನೀಡಲು ಜೆಡಿಎಸ್ ಘೋಷಿಸಿದೆ. ಇದರಿಂದ ಎಂಟಿಬಿಗೆ ಮತ್ತಷ್ಟು ಆತಂಕ ಶುರುವಾಗಿದೆ
ಹಳೇ ವೈಷಮ್ಯ ಮರೆತು ಶರತ್‌ಗೆ ಎಚ್ಡಿಕೆ ಬೆಂಬಲ
ಹೌದು...ರಾಜಕೀಯದಲ್ಲಿ ಯಾರು ಶತ್ರುಗಳಲ್ಲ, ಯಾರು ಮಿತ್ರರಲ್ಲ ಎನ್ನುವುದಕ್ಕೆ ಕುಮಾರಸ್ವಾಮಿಯೇ ಉದಾಹರಣೆಯಾಗಿದ್ದಾರೆ.
ಅಪ್ಪನ ಶತ್ರುತ್ವ ಮರೆತು ಇದೀಗ ಹೊಸಕೋಟೆ ಉಪಚುನಾವಣೆಯಲ್ಲಿ ಮಗನಿಗೆ ಬೆಂಬಲ ನೀಡುವುದಾಗಿ ಹೇಳಿದ್ದಾರೆ. ಈ ಹಿಂದೆ ಕಾಳಸರ್ಪ ಅಂತೆಲ್ಲ ದೇವೇಗೌಡ ವಿರುದ್ಧ ಬಿ.ಎನ್. ಬಚ್ಚೇಗೌಡ ವಾಗ್ದಾಳಿ ನಡೆಸಿದ್ದರು.
ಇದನ್ನು ಚುನಾವಣೆಯಲ್ಲಿ ಸೇಡು ತೀರಿಸಿಕೊಳ್ಳಲೇಬೇಕೆಂದು ಬಚ್ಚೇಗೌಡರನ್ನು ಸೋಲಿಸಲೆಂದೇ 2014ರ ಲೋಕಸಭಾ ಎಲೆಕ್ಷನ್‌ನಲ್ಲಿ ಚಿಕ್ಕಬಳ್ಳಾಪುರದಿಂದ ಎಚ್.ಡಿ.ಕುಮಾರಸ್ವಾಮಿ ಸ್ಪರ್ಧೆ ಮಾಡಿದ್ದರು. ಆ ಚುನಾವಣೆಯಲ್ಲಿ ಕಾಂಗ್ರೆಸ್‌ನ ವೀರಪ್ಪ ಮೊಯ್ಲಿ ಜಯಗಳಿಸಿದ್ದು, ಬಚ್ಚೇಗೌಡ ಸೋಲಿಸಲು ಯಶಸ್ವಿಯಾಗಿದ್ದರು.
ಆದ್ರೆ, ಇದೀಗ ಕುಮಾರಸ್ವಾಮಿ ಅಪ್ಪನ ಶತ್ರುತ್ವ ಮರೆತು ಮಗನಿಗೆ ಬೆಂಬಲ ಘೋಷಿಸಿರುವುದು ರಾಜ್ಯ ರಾಜಕಾರಣದಲ್ಲಿ ಭಾರೀ ಕುತೂಹಲಕ್ಕೆ ಕಾರಣವಾಗಿದೆ.
ಇಂದು (ಬುಧವಾರ) ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್‌ಡಿಕೆ, ಹೊಸಕೋಟೆ ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಇಲ್ಲದಿರುವುದರಿಂದ ಬಿಜೆಪಿ ಬಂಡಾಯ ಅಭ್ಯರ್ಥಿ ಶರತ್ ಬಚ್ಚೇಗೌಡಗೆ ಬೆಂಬಲ ಎಂದು ಪ್ರಕಟಿಸಿದರು.ಇದು ರಾಜ್ಯ ರಾಜಕಾರಣ ಹುಬ್ಬೇರಿಸುವಂತೆ ಮಾಡಿದೆ.
ಜೆಡಿಎಸ್‌ಗೆ ಸೇರಿಸಿಕೊಳ್ತೀರಾ ಅನ್ನೊ ಮಾಧ್ಯಮದವರ ಪ್ರಶ್ನೆಗೆ ಅವರು ನಮ್ಮ ಮನೆಯವರೇ ಮುಂದೆ ಏನ್ ಆಗುತ್ತೋ ನೋಡೋಣ ಎಂದು ಹೇಳಿದರು.
ಈ ಹಿಂದೆ ಬದ್ಧ ವೈರಿಗಳಾಗಿದ್ದವರಿಗೆ ಈಗ ಬೆಂಬಲ ನೀಡುತ್ತಿರುವುದು ಹೊಸಕೋಟೆ ಅಖಾಡಕ್ಕೆ ಬಿಗ್ ಟ್ವಿಸ್ಟ್ ಕೊಟ್ಟಿದ್ದಾರೆ. ಜೆಡಿಎಸ್ ಬೆಂಬಲದಿಂದಾಗಿ ಶರತ್ ಬಚ್ಚೇಗೌಡಗೆ ಮತ್ತಷ್ಟು ಬಲ ಸಿಕ್ಕಂತಾಗಿದೆ. ಅಷ್ಟೇ ಅಲ್ಲದೇ ಒಕ್ಕಲಿಗರ ಮತಗಳೆಲ್ಲ ಶರತ್‌ನತ್ತ ತಿರುಗುವುದು ಪಕ್ಕಾ.
ನಾಮಪತ್ರ ಸಲ್ಲಿಸಲು ನ.18ರಂದು ಕಡೆಯ ದಿನ. 19ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ನ.21 ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದೆ. ಡಿ.5ಕ್ಕೆ ಮತದಾನ ನಡೆಯಲಿದ್ದು, ಡಿ.9ರಂದು ಮತ ಎಣಿಕೆ ನಡೆಯಲಿದೆ.
ನವೆಂಬರ್ 13ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: