
ಬೆಂಗಳೂರು, (ಜೂನ್.28): ಮಂಡ್ಯ ಜಿಲ್ಲೆಯಲ್ಲಿ ದೊಡ್ಡ ಮಟ್ಟಕ್ಕೆ ಬೆಳೆ ಸಚಿವ ನಾರಾಯಣಗೌಡ ಹಾಗೂ ಜೆಡಿಎಸ್ ಮುಖಂಡರ ನಡುವಿನ ಒಳಜಗಳ ಸುಖಾಂತ್ಯವಾಗಿದೆ.
ಮಂಡ್ಯ ಜಿಲ್ಲೆಯಲ್ಲಿ ದುರುದ್ದೇಶದ ರಾಜಕಾರಣ ವಿರುದ್ಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿವಾಸದ ಮುಂದೆ ನಡೆಸಲುದ್ದೇಶಿಸಿದ್ದ ಧರಣಿಯನ್ನು ಮಾಜಿ ಪ್ರಧಾನಿ, ಜೆಡಿಎಸ್ ರಾಜ್ಯಸಭಾ ಸದಸ್ಯ ಎಚ್.ಡಿ.ದೇವೇಗೌಡ ಹಿಂಪಡೆದಿದ್ದಾರೆ.
ಮಾಜಿ ಶಿಷ್ಯನ ಕೆಲಸಕ್ಕೆ ದೇವೇಗೌಡ ಕೆಂಡಾಮಂಡಲ, ಬ್ರಹ್ಮಾಸ್ತ್ರ ಪ್ರಯೋಗ!
ಈ ಸಂಬಂಧ ಟ್ವೀಟ್ ಮಾಡಿರುವ ದೇವೇಗೌಡ,ಯಡಿಯೂರಪ್ಪ ಹಾಗೂ ಗಣಿ ಮತ್ತು ಭೂವಿಜ್ಞಾನ ಸಚಿವರು ಮಂಡ್ಯ ಜಿಲ್ಲೆಯ ರಾಜಕೀಯ ವಿದ್ಯಮಾನಗಳ ಕುರಿತ ನಮ್ಮ ಬೇಡಿಕೆಗಳನ್ನು ಭಾಗಶಃ ಒಪ್ಪಿರುತ್ತಾರೆ. ಆದ್ದರಿಂದ ಜೂನ್ 29ರಂದು ಮುಖ್ಯಮಂತ್ರಿಗಳ ನಿವಾಸದ ಮುಂದೆ ನಡೆಯಬೇಕಾಗಿದ್ದ ಧರಣಿಯನ್ನು ಹಿಂಪಡೆದಿರುವುದಾಗಿ ದೇವೇಗೌಡರು ಸ್ಪಷ್ಟಪಡಿಸಿದ್ದಾರೆ.
ಕೆ.ಆರ್.ಪೇಟೆ ಕ್ಷೇತ್ರದ ಕ್ರಷರ್ ಮಾಲೀಕ ಜೆಡಿಎಸ್ ಕಾರ್ಯಕರ್ತ ಎಚ್.ಟಿ. ಮಂಜುಗೆ ಸಕ್ರಮವಾಗಿ ಅನುಮತಿ ಪಡೆದಿದ್ದರೂ ಕ್ರಷರ್ ನಿಲ್ಲಿಸುವಂತೆ ಅಧಿಕಾರಿಗಳ ಮೂಲಕ ಮಂಡ್ಯ ಉಸ್ತುವಾರಿ ಸಚಿವ ಕಿರುಕುಳ ನೀಡುವ ಮೂಲಕ ನಾರಾಯಣ ಗೌಡರು ರಾಜಕೀಯ ದ್ವೇಷ ಸಾಧಿಸುತ್ತಿದ್ದಾರೆ. ಮಂಜು ಅವರು ಕ್ರಷರ್ ನಿಲ್ಲಿಸಿದ್ದಾರೆ. ಸಕ್ರಮವಾಗಿರುವ ಅವರ ಕ್ರಷರ್ಗೆ ಅನುಮತಿ ಕೊಡಿಸುವಂತೆಯೂ ಇಲ್ಲದಿದ್ದರೆ ಮುಖ್ಯಮಂತ್ರಿಗಳ ನಿವಾಸದ ಮುಂದೆ ಜೂ.29ರಂದು ಧರಣಿ ನಡೆಸುವುದಾಗಿ ಯಡಿಯೂರಪ್ಪಗೆ ಪತ್ರ ಬರೆದಿದ್ದರು.
ದೇವೇಗೌಡರ ಮಾತು ನನಗೆ ಆಶೀರ್ವಾದ: ನಾರಾಯಣ ಗೌಡ
ನಾರಾಯಣಗೌಡ ಹೇಳಿದ್ದೇನು..?
ಜೆಡಿಎಸ್ ಕಾರ್ಯಕರ್ತ ಎಚ್.ಟಿ. ಮಂಜು ಕಲ್ಲು ಗಣಿ ಉದ್ಯಮ ಸ್ಥಗಿತಗೊಳಿಸಿರುವ ಹಿನ್ನೆಲೆಯಲ್ಲಿ ಯಾವುದೇ ರಾಜಕೀಯ ದ್ವೇಷವಿಲ್ಲ. ಈ ವಿಷಯಕ್ಕೆ ಸಂಬಂಧಿಸಿದಂತೆ ದೇವೇಗೌಡರು ಸಮಯ ನೀಡಿದರೆ ನಾನೇ ಖುದ್ದಾಗಿ ಅವರಿರುವ ಸ್ಥಳಕ್ಕೆ ಹೋಗಿ ಸಮಗ್ರ ಮಾಹಿತಿ ಒದಗಿಸುತ್ತೇನೆ. ಆದರೆ ಮಾಜಿ ಪ್ರಧಾನಿ ದೇವೇಗೌಡರು ಮಾತ್ರ ಪ್ರತಿಭಟನೆ ಮುಂದಾಗದಂತೆ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡ ಮನವಿ ಮಾಡಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.