ನಾನೇ ಪಕ್ಷ ಸಂಘಟಿಸುವುದಾಗಿ ಪಂಚೆಕಟ್ಟಿನಿಂತ ದೇವೇಗೌಡ! ಸಮಾಧಾನ ಮಾಡಿದ ಕುಮಾರಸ್ವಾಮಿ

By Sathish Kumar KHFirst Published May 17, 2023, 10:02 PM IST
Highlights

ರಾಜ್ಯ ಚುನಾವಣೆಯಲ್ಲಿ ಸೋಲನುಭವಿಸಿದ ಜೆಡಿಎಸ್‌ ಪಕ್ಷವನ್ನು ಸಂಘಟನೆಮಾಡಲು ಪ್ರವಾಸ ಮಾಡುತ್ತೇನೆ ಎಂದು ಮಾಜಿ ಪ್ರಧಾನಿ ದೇವೇಗೌಡರು ಹೇಳಿದರು.

ಬೆಂಗಳೂರು (ಮೇ 17): ರಾಜ್ಯದಲ್ಲಿ ಜೆಡಿಎಸ್‌ ಪಕ್ಷಕ್ಕಾದ ಸೋಲನ್ನು ಅರಗಿಸಿಕೊಳ್ಳಲಾಗದ ಮಾಜಿ ಪ್ರಧಾನಮಂತ್ರಿ ಹೆಚ್.ಡಿ. ದೇವೇಗೌಡರು, ರಾಜ್ಯದಲ್ಲಿ ನಾನೇ ಪಕ್ಷ ಸಂಘಟನೆ ಮಾಡುತ್ತೇನೆ. ಕರುಣಾನಿಧಿ ಓಡಾಡುತ್ತಿದ್ದ ಮಾದರಿಯ ಕಾರನ್ನು ತರಿಸಿಕೊಡಿ, ಇಂದಿನಿಂದಲೇ ಪ್ರವಾಸ ಮಾಡ್ತೀನಿ ಎಂದ ದೇವೇಗೌಡರನ್ನು  ಪುತ್ರ ಕುಮಾರಸ್ವಾಮಿ ಸಮಾಧಾನ ಮಾಡಿದ್ದಾರೆ. 

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ 123 ಸ್ಥಾನಗಳನ್ನು ಗೆದ್ದು ಸ್ವತಂತ್ರವಾಗಿ ಅಧಿಕಾರಕ್ಕೆ ಬರಬೇಕು ಎಂದು ಶ್ರಮಿಸಿದ ಜೆಡಿಎಸ್‌ ಪಕ್ಷಕ್ಕೆ ಬಂದಿದ್ದು, ಕೇವಲ 19 ಸ್ಥಾನಗಳು. ಕಳೆದ ಬಾರಿಯ ಚುನಾವಣೆಯಲ್ಲಿ ಗಳಿಸಿದಷ್ಟು ಸ್ಥಾನಗಳನ್ನು ಕೂಡ ಗೆಲ್ಲಲು ಸಾಧ್ಯವಾಗಿಲ್ಲ. ಸ್ವತಃ ದೇಶದ ಮಾಜಿ ಪ್ರಧಾನಮಂತ್ರಿಯ ಮೊಮ್ಮಗ ಹಾಗೂ ಒಂದು ರಾಜ್ಯದ ಮುಖ್ಯಮಂತ್ರಿಯ ಮಗನಾಗಿದ್ದರೂ ನಿಖಿಲ್‌ ಕುಮಾರಸ್ವಾಮಿಯನ್ನು ಚುನಾವಣೆಯಲ್ಲಿ ಗೆಲ್ಲಿಸಿಕೊಳ್ಳಲಾಗಲಿಲ್ಲ ಎಂಬ ನೋವು ತೀವ್ರವಾಗಿ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಮನೆಯಲ್ಲಿ ಪುತ್ರನೊಂದಿಗೆ ಮಾತನಾಡಿದ ಮಾಜಿ ಪ್ರಧಾನಿ ದೇವೇಗೌಡರು ತಾವು ಪಕ್ಷ ಸಂಘಟನೆಗೆ ಹೊರಡುವುದಾಗಿ ಹೇಳಿದ್ದಾರೆ.

ಬಿಜೆಪಿ ನಾಯಕರ ಶ್ರದ್ಧಾಂಜಲಿ ಬ್ಯಾನರ್ ಹಾಕಿದವರ, ಚರ್ಮ ಸುಲಿದ ಪೊಲೀಸರು!

ಸೋತರೂ ಕಡಿಮೆಯಾಗದ ಉತ್ಸಾಹ:  ರಾಜ್ಯದ ವಿಧಾನಸಭಾ ಚುನಾವಣಾ ಫಲಿತಾಂಶ ಬಂದು ಇನ್ನೂ ವಾರ ಕಳೆದಿಲ್ಲ. ಪ್ರತಿಬಾರಿ ಚುನಾವಣೆಯಲ್ಲಿ 30ಕ್ಕೂ ಅಧಿಕ ಸ್ಥಾನಗಳಿಸುತ್ತಿದ್ದ ಜೆಡಿಎಸ್‌ ಈ ಬಾರಿ 20ಕ್ಕಿಂತ ಕಡಿಮೆ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದು, ಕರುಣಾಜನಕ ಸ್ಥಿತಿಯನ್ನು ತಲುಪಿದೆ. ಅಂದುಕೊಂಡಷ್ಟು ಇರಲಿ, ಕಳೆದ ಬಾರಿ ಇದ್ದಷ್ಟೂ ಸ್ಥಾನಗಳನ್ನು ಗಳಿಸಲಿಲ್ಲ. ಅನಾರೋಗ್ಯ, ವಯಸ್ಸು ಯಾವುದೂ ಲೆಕ್ಕಕ್ಕೇ ಇಟ್ಟುಕೊಳ್ಳದೇ ಮಾಜಿ ಪ್ರಧಾನಮಂತ್ರಿ ದೇವೇಗೌಡರು ಚುನಾವಣಾ ಪ್ರಚಾರ ಮಾಡಿದ್ದರು. 

ಮತ್ತೆ ಪಕ್ಷ ಸಂಘಟನೆ ಮಾಡ್ತೀನಿ ಎಂದು ಎದ್ದುನಿಂತ ದೇವೇಗೌಡರು: ಜೆಡಿಎಸ್‌ ಸೋತು ಸುಣ್ಣವಾಗಿರುವುದನ್ನು ಕಂಡರೂ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಪಕ್ಷ ಸಂಘಟನೆಯ ಉತ್ಸಾಹ ಒಂದಿನಿತೂ ಕುಂದಿಲ್ಲ. ಇಳಿವಯಸ್ಸಿನಲ್ಲೂ ಗೌಡರದ್ದು ಬತ್ತದ ಉತ್ಸಾಹವಾಗಿದೆ. ಸ್ವತಃ ಕುಮಾರಸ್ವಾಮಿ ಪಕ್ಷದ ಕಳಪೆ ಸಾಧನೆಯಿಂದ ಕಂಗಾಲು ಆಗಿದ್ದು, ತಂದೆ ಹಾಗೂ ತಾತನ ಕ್ಷೇತ್ರದಲ್ಲಿ ಸೋಲನುಭವಿಸಿದ ನಿಖಿಲ್‌ ಕುಮಾರಸ್ವಾಮಿ ಕೂಡ ಸೈಲೆಂಟ್‌ ಆಗಿದ್ದಾರೆ. ಆದರೆ ಮಾಜಿ ಪ್ರಧಾನಮಂತ್ರಿ ದೇವೇಗೌಡರು ಹಠಕ್ಕೆ ಈಗಿನಿಂದಲೇ ರಾಜ್ಯಾದ್ಯಂತ ಪ್ರವಾಸ ಮಾಡಿ, ಮತ್ತೆ ಪಕ್ಷವನ್ನು ಸಂಘಟನೆ ಮಾಡುತ್ತೀನಿ ಎಂದು ಎದ್ದು ನಿಂತಿದ್ದಾರೆ. 

ಕರುಣಾನಿಧಿ ಕಾರಿನ ಮಾದರಿಯ ಕಾರು ತರಿಸಿ: ಈ ಕುರಿತು ಮಗನೊಂದಿಗೆ ಹೇಳಿಕೊಂಡ ದೇವೇಗೌಡರು, ರಾಜ್ಯಾದ್ಯಂತ ಪಕ್ಷ ಸಂಘಟನೆಗೆ ಈಗಿನಿಂದಲೇ ತಯಾರು ಮಾಡಿ. ಕರುಣಾನಿಧಿ ಅವರ ಕಾರಿನ ಮಾದರಿಯ ಕಾರನ್ನು ತರಿಸಿ ಎಂದು ಹಠ ಹಿಡಿದಿದ್ದಾರೆ. ತಕ್ಷಣ ಪ್ರವಾಸ ಹೊರಡುತ್ತೇನೆ. ರಾಜ್ಯಾದ್ಯಂತ ಪ್ರವಾಸ ಮಾಡುವ ಮೂಲಕ ಸ್ವತಃ ನಾನೇ ಮತ್ತೊಮ್ಮೆ ಪಕ್ಷ ಸಂಘಟನೆ ಮಾಡುತ್ತೇನೆ. ಈಗಿನಿಂದಲೇ ಶುರು ಮಾಡೋಣ. ಮುಂದಿನ ಚುನಾವಣಾ ಹೊತ್ತಿಗೆ ಮತ್ತೆ ಪಕ್ಷ ಹಳಿಗೆ ಮರಳಬೇಕು ಎಂದು ಪುತ್ರ ಕುಮಾರಸ್ವಾಮಿ ಬಳಿ ಹೇಳಿಕೊಂಡಿದ್ದಾರೆ. 

Karnataka CM ಮಾಡಿದ್ರೆ ಸಿದ್ದು ಸವಾಲು ಎದುರಿಸ್ತೇನೆ: ಲೋಕಸಭೆಗೆ 20 ಸೀಟ್‌ ಗೆಲ್ಲಿಸ್ತೀನಿ- ಡಿಕೆಶಿ

ನಿಖಿಲ್‌ ಚಿತ್ರರಂಗದಲ್ಲಿ ಮುಂದುವರೆಯಲಿ: ಆದರೆ ತಂದೆಯನ್ನು ಸಮಾಧಾನ ಪಡಿಸಿದ ಕುಮಾರಸ್ವಾಮಿ ಅವರು, ಸದ್ಯಕ್ಕೆ ನೀವು ವಿಶ್ರಾಂತಿ ಪಡೆಯಿರಿ. ನಾನೇ ಪಕ್ಷ ಸಂಘಟನೆಯ ಜವಾಬ್ದಾರಿ ನೋಡಿಕೊಳ್ತೀನಿ. ನಿಖಿಲ್ ಸದ್ಯ ಕೆಲವು ದಿನಗಳವರೆಗೆ ಚಿತ್ರರಂಗದಲ್ಲಿ ಮುಂದುವರೆಯಲಿ. ರಾಜಕೀಯವನ್ನು ನಾನು ನೋಡಿಕೊಳ್ಳುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಈ ಮೂಲಕ ಪಕ್ಷದ ಜವಾಬ್ದಾರಿ ನನಗಿರಲಿ ಎಂದು ತಂದೆಯನ್ನು ಸಮಾಧಾನ ಪಡಿಸಿದ್ದಾರೆ.

click me!