ದೇವೇಗೌಡರ ಕಣ್ಣೆದುರಿಗೆ ಸ್ವತಂತ್ರವಾಗಿ ಸರ್ಕಾರ ತರಬೇಕೆಂದು ಹೊರಟಿದ್ದೇನೆ. ಎರಡು ಭಾರಿ ಹೃದಯ ಶಸ್ತ್ರ ಚಿಕಿತ್ಸೆ ಆಗಿದೆ. ಒಬ್ಬನೇ ಏಕಾಂಗಿಯಾಗಿ ಹೋರಾಟ ಮಾಡುತ್ತಿದ್ದೇನೆ. ಪಾಪದ ಹಣಕ್ಕೆ, ಅಪಪ್ರಚಾರಕ್ಕೆ ಮಾರು ಹೋಗಬೇಡಿ.
ಹಾಸನ (ಫೆ.12): ದೇವೇಗೌಡರ ಕಣ್ಣೆದುರಿಗೆ ಸ್ವತಂತ್ರವಾಗಿ ಸರ್ಕಾರ ತರಬೇಕೆಂದು ಹೊರಟಿದ್ದೇನೆ. ಎರಡು ಭಾರಿ ಹೃದಯ ಶಸ್ತ್ರ ಚಿಕಿತ್ಸೆ ಆಗಿದೆ. ಒಬ್ಬನೇ ಏಕಾಂಗಿಯಾಗಿ ಹೋರಾಟ ಮಾಡುತ್ತಿದ್ದೇನೆ. ಇಂತಹ ವ್ಯಕ್ತಿಯ (ಶಾಸಕ ಕೆ.ಎಂ.ಶಿವಲಿಂಗೇಗೌಡ) ಪಾಪದ ಹಣಕ್ಕೆ, ಅಪಪ್ರಚಾರಕ್ಕೆ ಮಾರು ಹೋಗಬೇಡಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ನಾವೇನು ಲೆಕ್ಕಾಚಾರ ಮಾಡಿದರೂ ಮೇಲೊಬ್ಬ ಇದ್ದಾನೆ, ಅವನು ಕೊಡೋದು. ಇವತ್ತು ಶ್ರೀಮಂತರಾಗಿದ್ದಾರೆ, ಕಲ್ಲು ಕ್ವಾರಿಗಳಿದ್ದಾವೆ. ಅವರ ಹತ್ತಿರದಿಂದಲೇ ಕಾಮಗಾರಿ ಮಾಡಲು ಕಲ್ಲು ತಗೋಬೇಕು. ಗುತ್ತಿಗೆದಾರರು ಬಂದು ಅವರ ಮನೆಯ ಮುಂದೆ ನಿಲ್ಲಬೇಕು. ಈಗ ದುಡ್ಡು ಮಾಡ್ಕಂಡವ್ರೆ, ಈಗ ರೇವಣ್ಣ, ನನ್ನ ತೆನೆ ಹೊತ್ತ ಮಹಿಳೆ ಯಾಕೆ ಬೇಕು. ರೇವಣ್ಣ ಅವರು ಶ್ರೀಮಂತ ಆಗುವವರೆಗೂ ಬೆಳೆಸಿದರು. ಇವತ್ತು ಶ್ರೀಮಂತರಾಗಿದ್ದಾರೆ ಅವರಿಗೆ ಜನತಾದಳ ಏಕೆ ಬೇಕು ಎಂದು ಕಿಡಿಕಾರಿದರು.
undefined
Assembly election: ಈ ಮಹಾನುಭಾವ ಜೆಡಿಎಸ್ ಮುಗಿಸಲು ಹೊರಟಿದ್ದ: ಕುಮಾರಸ್ವಾಮಿ ಆಕ್ರೋಶ
ಶಾಸಕ ಕೆ.ಎಂ.ಶಿವಲಿಂಗೇಗೌಡ ಕಳ್ಳಾಟ ಗೊತ್ತಿತ್ತು: ನಾನು ಶಾಸಕಾಂಗ ಸಭೆಗಳಿಗೆ ಕರೆದರೂ ಶಿವಲಿಂಗೇಗೌಡ ಬರಲಿಲ್ಲ. ವಿಧಾನಸೌಧದಲ್ಲಿ ನಾನು ಹೋಗಿ ಕುಳಿತರೂ ಬಂದು ಮಾತನಾಡಿಸಲಿಲ್ಲ. ರೇವಣ್ಣ ಅವರ ದುಡಿಮೆಯಿಂದ ಅವರನ್ನು ನೀವು ಶಾಸಕರಾಗಿ ಆಯ್ಕೆ ಮಾಡಿದ್ದೀರಿ. 2023ರ ಚುನಾವಣೆಯಲ್ಲಿ ಏನಾದರೂ ಹೆಚ್ಚು ಕಮ್ಮಿಯಾದರೆ ಸಿದ್ದರಾಮಯ್ಯ ಡೌನ್ ಫಾಲ್ ಅಂತಾರೆ. ಇವತ್ತೇ ಬರೆದಿಟ್ಟಿಕೊಳ್ಳಿ ಈ ವ್ಯಕ್ತಿ ಹೀಗೆ ಹೇಳ್ತಾನೆ. ಶಿವಲಿಂಗೇಗೌಡರ ಕಾಂಗ್ರೆಸ್‌ಗೆ ಸೇರೋದು ನೂರಕ್ಕೆ ನೂರು ಸತ್ಯ ಅಂತ ಸಿದ್ದರಾಮಯ್ಯ ಇವತ್ತು ಹೇಳಿದ್ದಾರೆ. ನನಗೆ ಇದು ಮೊದಲೇ ಗೊತ್ತಿತ್ತು, ನನಗೇನು ಇದರಲ್ಲಿ ಆಶ್ವರ್ಯ ಏನು ಇಲ್ಲ ಎಂದು ಹೇಳಿದರು.
ಕಳೆದ ಎರಡು ವರ್ಷದಿಂದ ಕಳ್ಳಾಟ: ಕಳೆದ ಎರಡು ವರ್ಷದಿಂದ ಈ ವ್ಯಕ್ತಿ (ಕೆ.ಎಂ.ಶಿವಲಿಂಗೇಗೌಡ) ಕಳ್ಳಾಟ ಆಡಿಕೊಂಡು ಬಂದರು. ಈ ಬೆಕ್ಕು ಕಣ್ಮುಚ್ಚಿ ಹಾಲು ಕುಡಿದರೆ ಯಾರಿಗೂ ಗೊತ್ತಾಗಲ್ಲ ಅನ್ನೋ ತರ ನಡೆದುಕೊಂಡರು. ಅರಸೀಕೆರೆ ಮಹಾಜನತೆಗೆ ಕೈಜೋಡಿಸಿ ಮನವಿ ಮಾಡುತ್ತೇನೆ. ಆರೋಗ್ಯ ಸಮಸ್ಯೆ ಇದ್ದರೂ ಹಗಲು ಇರುಳು ಹೋರಾಡುತ್ತಿದ್ದೇನೆ. ನನ್ನ ಸ್ವಾರ್ಥಕ್ಕೆ ಹೋರಾಟ ಮಾಡುತ್ತಿಲ್ಲ. ದೇವರು, ಗುರು ಹಿರಿಯರ ಆಶೀರ್ವಾದದಲ್ಲಿ ಎರಡು ಭಾರಿ ಮುಖ್ಯಮಂತ್ರಿ ಆಗಿದ್ದೇನೆ. ಎರಡು ಭಾರಿ ಸಿಎಂ ಆದಾಗಲೂ ಈ ಕ್ಷೇತ್ರಕ್ಕೆ ನಾನು ಏನೇನ್ ಕೊಟ್ಟಿದ್ದೇನೆ ಚರ್ಚೆ ಮಾಡಲು ಸಿದ್ದನಿದ್ದೇನೆ ಎಂದರು.
ದಳಪತಿಯ "ಬ್ರಾಹ್ಮಣ ಸಿಎಂ" ಬಾಣಕ್ಕೆ "ಶಾ" ತಿರುಗುಬಾಣ! ಬೊಮ್ಮಾಯಿನೇ ಬಾದ್'ಶಾ' ಇದು ಶಾ ಶಾಸನ!
ಕೋಡಿಮಠದ ಸ್ವಾಮಿ ಭವಿಷ್ಯ ಹೇಳವ್ರಂತೆ- ಅಶೋಕ್‌ಗೆ ಲಕ್: ನಾನು ಎರಡನೇ ಬಾರಿ ಮುಖ್ಯಮಂತ್ರಿ ಆಗಿದ್ದಾಗ ತಾಲ್ಲೂಕು ಕ್ರೀಡಾಂಗಣದಲ್ಲಿ ನಾನು ಅರಸೀಕೆರೆಗೆ ಕೊಟ್ಟ ಕಾರ್ಯಕ್ರಮಗಳ ಬಗ್ಗೆ ಈ ಮಹಾನುಭಾವ (ಶಾಸಕ ಕೆ.ಎಂ. ಶಿವಲಿಂಗೇಗೌಡ) ಬುಕ್‌ಲೇಟ್ ಕೊಟ್ಟಿದ್ದರು. ಈಗ ದೇವೇಗೌಡರು, ಕುಮಾರಸ್ವಾಮಿ ಹೆಸರು ಹೇಳಿದರೆ ಓಟೇ ಹಾಕಲ್ವಂತೆ ಎನ್ನುತ್ತಿದ್ದಾರೆ. ಈ ವೇಳೆ ಮಧ್ಯಪ್ರವೇಶಿಸಿದ ಮಾಜಿಸಚಿವ ಎಚ್.ಡಿ.ರೇವಣ್ಣ, ಕೋಡಿಮಠದ ಸ್ವಾಮಿ ಭವಿಷ್ಯ ಹೇಳವ್ರಂತೆ ಕುರುಬರು ನಿಂತ್ರೆ ಲಾರ್ಟಿ ಹೊಡೆಯುತ್ತಂತೆ ಎಂದರು. ಇದಕ್ಕೆ ಮಾತು ಮುಂದುವರೆಸಿದ ಕುಮಾರಸ್ವಾಮಿ ಹಾಗಾದ್ರೆ ಅಶೋಕ್‌ಗೆ ಲಕ್ ಹೊಡೆಯುತ್ತೆ ಎಂದರು. ಅರಸೀಕೆರೆಗೆ ಬಾಣಾವರ ಅಶೋಕ್ ಅಭ್ಯರ್ಥಿ ಎಂದು ಪರೋಕ್ಷವಾಗಿ ಹೇಳಿದ ಕುಮಾರಸ್ವಾಮಿ ಹೇಳಿದರು.
ಜೆಡಿಎಸ್ ಅಭ್ಯರ್ಥಿ ಗೆಲ್ಲುವವರೆಗೂ ನಿದ್ರೆ ಮಾಡಲ್ಲ: ಸಂಸದ ಪ್ರಜ್ವಲ್ ರೇವಣ್ಣ ಮಾತನಾಡಿ, ಒಂದು ವಾರದಿಂದ ನಮ್ಮ ಕಾರ್ಯಕರ್ತರನ್ನು ಸಮಾವೇಶಕ್ಕೆ ಹೋಗಬೇಡಿ ಎಂದು ಕೆಲವು ಶಕ್ತಿಗಳು ತಡೆಯುವ ಪ್ರಯತ್ನ ಮಾಡಿದರು. ಅರಸೀಕೆರೆಯಲ್ಲಿ ಯಾರನ್ನೇ ಅಭ್ಯರ್ಥಿ ಮಾಡಿದರೂ ನಾವೆಲ್ಲರೂ ಒಗ್ಗಟ್ಟಾಗಿ ಹೋರಾಟ ಮಾಡಿ ಗೆಲ್ಲಿಸುತ್ತೇವೆ. ಅರಸೀಕೆರೆಯಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲ್ಲುವವರೆಗೂ ನಾನು ನಿದ್ರೆ ಮಾಡಲ್ಲ. ಮನೆಯ ಮಗನಿಗೆ ನಿಮ್ಮ ಜೊತೆ ದುಡಿಯುತ್ತೇನೆ. ಕುಮಾರಸ್ವಾಮಿಗೆ ಹಲವು ದೇವರ ಅನುಗ್ರಹವಾಗಿದೆ. ಅರಸೀಕೆರೆಯಲ್ಲಿ ಅಭ್ಯರ್ಥಿಯನ್ನು ಗೆಲಿಸುತ್ತೇವೆ. ನಗರ್ತಿಯಲ್ಲಿ ಕುಮಾರಣ್ಣನಿಗೆ ದೇವರ ಆಶೀರ್ವಾದ ಸಿಕ್ಕಿದೆ. ನಾನು, ಸೂರಜ್ ಎರಡು ದಿನ ಅರಸೀಕೆರೆಯಲ್ಲಿ ಇರುತ್ತೇವೆ ಎಂದರು.