Hanagal Byelection| 'ಸಿಎಂ ಉದಾಸಿ ಅಭಿವೃದ್ಧಿ ಕಾರ್ಯಗಳೇ ಬಿಜೆಪಿ ಗೆಲುವಿಗೆ ಶ್ರೀರಕ್ಷೆ'

By Kannadaprabha News  |  First Published Oct 11, 2021, 2:16 PM IST

*  ಹಾನಗಲ್ಲ ತಾಲೂಕಿನ ಎಲ್ಲ ಗ್ರಾಮಗಳಿಗೆ ಮೂಲಭೂತ ಸೌಲಭ್ಯ 
*  ಕಾರ್ಯಕರ್ತರ ರಕ್ಷಣೆ ಹಾಗೂ ತಾಲೂಕಿನ ಸಮಗ್ರ ಅಭಿವೃದ್ಧಿಯ ಸಂಕಲ್ಪ
*  ಬಿಜೆಪಿ ಅಭ್ಯರ್ಥಿಗೆ ಮತ ನೀಡಿ ಪಕ್ಷ ಬಲಪಡಿಸಬೇಕು 
 


ಹಾನಗಲ್ಲ(ಅ.11):  ರಾಜ್ಯ ಸರ್ಕಾರ(State Government) ಮೂರು ವರ್ಷದಲ್ಲಿ ಹಾನಗಲ್ಲ(Hanagal) ತಾಲೂಕಿಗೆ ನೀರಾವರಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ 1350 ಕೋಟಿಗೂ ಅಧಿಕ ಅನುದಾನ ನೀಡಿದ್ದು ದಿ. ಸಿ.ಎಂ. ಉದಾಸಿ(CM Udasi) ಅವರ ಅಭಿವೃದ್ಧಿ ಕಾರ್ಯಗಳೇ ಬಿಜೆಪಿ(BJP) ಗೆಲುವಿಗೆ ಶ್ರೀರಕ್ಷೆಯಾಗಲಿದೆ ಎಂದು ಸಂಸದ ಶಿವಕುಮಾರ ಉದಾಸಿ(Shivkumar Udasi) ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ತಾಲೂಕಿನ ಬೊಮ್ಮನಹಳ್ಳಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಕೊಪ್ಪರಸಿಕೊಪ್ಪ, ಬೈಚವಳ್ಳಿ, ಹುಲ್ಲತ್ತಿ, ಯಳವಟ್ಟಿ, ಬೊಮ್ಮನಹಳ್ಳಿ, ಕರಗುದರಿ, ಸಾಂವಸಗಿ ಹಾಗೂ ಬೆಳಗಾಲಪೇಟೆ ಗ್ರಾಪಂಗಳಲ್ಲಿ ಚುನಾವಣಾ ಪ್ರಚಾರ(Election Campaign) ನಡೆಸಿ ಮಾತನಾಡಿದರು.

Tap to resize

Latest Videos

ತಾಲೂಕಿನ ಉತ್ತರ ಭಾಗಕ್ಕೆ ನೀರಾವರಿ ಕಲ್ಪಿಸಲು 599 ಕೋಟಿ ವೆಚ್ಚದಲ್ಲಿ ಬಾಳಂಬೀಡ ಹಾಗೂ ಹಿರೇಕಾಂಶಿ ಏತ ನೀರಾವರಿ(Irrigation) ಯೋಜನೆ ಚಾಲನೆಗೊಂಡಿದ್ದು ಶೀಘ್ರದಲ್ಲಿ ಈ ಯೋಜನೆ ಉದ್ಘಾಟನೆಯಾಗಲಿದೆ. ಇದರೊಂದಿಗೆ ತಾಲೂಕಿನ ಎಲ್ಲ ಗ್ರಾಮಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸಲಾಗಿದೆ. ಕಾರ್ಯಕರ್ತರ ರಕ್ಷಣೆ ಹಾಗೂ ತಾಲೂಕಿನ ಸಮಗ್ರ ಅಭಿವೃದ್ಧಿಯ ಸಂಕಲ್ಪ ನಮ್ಮದಾಗಿದ್ದು, ಬಿಜೆಪಿ ಅಭ್ಯರ್ಥಿಗೆ ಮತ ನೀಡಿ ಪಕ್ಷ ಬಲಪಡಿಸಬೇಕು ಎಂದು ಮನವಿ ಮಾಡಿದರು.

ಹಾನಗಲ್ ಬೈ ಎಲೆಕ್ಷನ್: ಗೆಲುವಿನ ನಿರೀಕ್ಷೆಯಲ್ಲಿರುವ ಬಿಜೆಪಿಗೆ ಬಿಗ್ ಶಾಕ್

ವಿಪ ಸದಸ್ಯ ಎನ್‌. ರವಿಕುಮಾರ ಮಾತನಾಡಿ, ತಾಲೂಕಿನ ಎಲ್ಲ ಮನೆ-ಮನಗಳಲ್ಲಿ ಉದಾಸಿ ಇದ್ದಾರೆ. ಅವರ ಅಭಿವೃದ್ಧಿಯ ಕನಸನ್ನು ನನಸಾಗಿಸಲು ಶಿವರಾಜ ಸಜ್ಜನ ಸಂಕಲ್ಪ ಮಾಡಿದ್ದಾರೆ. ದಿ. ಸಿ.ಎಂ. ಉದಾಸಿ ಅವರು ತಾಲೂಕಿಗೆ ಮಾಡಿರುವ ಅಭಿವೃದ್ಧಿ ಕಾರ್ಯಗಳಿಗೆ ಕೃತಜ್ಞತೆ ಸಲ್ಲಿಸಲು ಈ ಚುನಾವಣೆ(Election) ಒಂದು ಅವಕಾಶವಾಗಿದೆ. ತಾಲೂಕಿನ ಜನತೆ ಅತ್ಯಂತ ಹೆಚ್ಚಿನ ಅಂತರದಿಂದ ಬಿಜೆಪಿ ಗೆಲ್ಲಿಸಬೇಖು ಎಂದು ಕರೆ ನೀಡಿದರು.

ಚುನಾವಣೆ ಉಸ್ತುವಾರಿ, ಶಾಸಕ ರಾಜೂಗೌಡ ಮಾತನಾಡಿ, ಬಿಜೆಪಿ ಶಿಸ್ತಿನ ಪಕ್ಷ. ತಾಲೂಕಿನ ಅಭಿವೃದ್ಧಿ ಬಿಜೆಪಿಯಿಂದ ಮಾತ್ರ ಸಾಧ್ಯ. ಇದೇ ಜಿಲ್ಲೆಯ ಬಸವರಾಜ ಮೊಮ್ಮಾಯಿ(Basavaraj Bommai) ಅವರೇ ಮುಖ್ಯಮಂತ್ರಿಯಾಗಿದ್ದಾರೆ. ಅವರ ನೇತೃತ್ವದಲ್ಲಿ ಬಿಜೆಪಿ ಉತ್ತಮ ಆಡಳಿತ ನೀಡಲಿದೆ. ಕಾಂಗ್ರೆಸ್‌ಬರೀ ಅಪಪ್ರಚಾರದಲ್ಲಿ ತೊಡಗಿದೆ. ಅದಕ್ಕೆ ಮತದಾರರು ಈ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಲಿದ್ದಾರೆ. ಶಿವರಾಜ ಸಜ್ಜನರು ದಿ. ಸಿ.ಎಂ. ಉದಾಸಿ ಅವರೊಂದಿಗೆ ನಿಕಟ ಸಂಪರ್ಕ ಇಟ್ಟುಕೊಂಡು ತಾಲೂಕಿನ ಜನರ ನಾಡಿಮಿಡಿತಗಳನ್ನು ಅರಿತಿದ್ದಾರೆ. ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇರುವುದರಿಂದ ತಾಲೂಕಿನ ಸಮಗ್ರ ಅಭಿವೃದ್ಧಿಗಾಗಿ ಬಿಜೆಪಿಗೆ ಮತ ನೀಡಿ ಎಂದು ಮನವಿ ಮಾಡಿದರು.

ಅಭ್ಯರ್ಥಿ ಶಿವರಾಜ ಸಜ್ಜನರ ಮಾತನಾಡಿ, ಉದಾಸಿ ಅವರನ್ನು ಕಳೆದುಕೊಂಡು ನಾವು ಅನಾಥರಾಗಿದ್ದೇವೆ. ಅವರ ಅಭಿವೃದ್ಧಿ ಕಾರ್ಯಗಳು ಹಾಗೂ ಸರ್ಕಾರದ ಸಾಧನೆಗಳನ್ನು ಮನೆ-ಮನೆಗೆ ತಲುಪಿಸುವ ಮೂಲಕ ಚುನವಣೆ ಗೆಲ್ಲಬೇಕಿದೆ. ನಾನು ನಾನು ನಿಮ್ಮ ಮನೆ ಮಗನಾಗಿ ಶಿವಕುಮಾರ ಉದಾಸಿ ಅವರೊಂದಿಗೆ ತಾಲೂಕಿನ ಎರಡು ಕಣ್ಣುಗಳಾಗಿ ಕ್ಷೇತ್ರದ ಅಭಿವೃದ್ಧಿಗೆ ಮುಂದಾಗುತ್ತೇವೆವ. ಜಾಗೃತ ಮತದಾರರು ತಮ್ಮ ಅಮೂಲ್ಯವಾದ ಮತವನ್ನು ಬಿಜೆಪಿಗೆ ನೀಡಿ ತಮ್ಮ ಸೇವೆಗೆ ಅವಕಾಶ ಕಲ್ಪಿಸುವಂತೆ ಮನವಿ ಮಾಡಿದರು.

ಮಂಡಳದ ಅಧ್ಯಕ್ಷ ನಿಂಗಪ್ಪ ಗೊಬ್ಬೇರ, ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಮಂಜುನಾಥ ಓಲೇಕಾರ, ಪದ್ಮನಾಭ ಕುಂದಾಪೂರ, ಶಿವಲಿಂಗಪ್ಪ ತಲ್ಲೂರ, ಭೋಜರಾಜ ಕರೂದಿ, ರವಿಕಿರಣ ಪಾಟೀಲ, ಶಂಕರಗೌಡ ಪಾಟೀಲ, ಚಂದ್ರಶೇಖರ ಸುಬ್ಬಣ್ಣನವರ, ಸಿ.ಜಿ. ಕೋಟಿ, ಫಕ್ರುದ್ಧೀನ ಬಡಗಿ, ಶಂಕ್ರವ್ವ ತಾವರಗೇರಿ, ಹನುಮಂತಪ್ಪ ಹಳೆಬಂಕಾಪೂರ, ಗಂಗಮಳವ್ವ ಕಿವಡೇರ, ಶೋಭಾ ಹಾನಗಲ್ಲ, ಸರಸ್ವತಿ ಹನಮಣ್ಣನವರ, ರಾಮಣ್ಣ ದಾನಪ್ಪನವರ ಮೊದಲಾದವರು ಈ ಸಂದರ್ಭದಲ್ಲಿ ಇದ್ದರು.
 

click me!