ವಕೀಲ್ ಸಾಬ್ ಜಗದೀಶ್ ಕುಮಾರ್ ಸಕ್ರಿಯ ರಾಜಕಾರಣಕ್ಕೆ ಎಂಟ್ರಿ!

By Suvarna NewsFirst Published Oct 10, 2021, 6:45 PM IST
Highlights

* ವಕೀಲ ಜಗದೀಶ್ ಕುಮಾರ್ ಸಕ್ರಿಯ ರಾಜಕಾರಣಕ್ಕೆ ಎಂಟ್ರಿ!
* ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಕೇಸ್‌ನಲ್ಲಿ ಯುವತಿ ಪರ ವಕಾಲತ್ತು ವಹಿಸಿದ ವಕೀಲ
* ಸಾಮಾಜಿಕ ಜಾಲತಾಣಗಳಲ್ಲಿ ವಕೀಲ್ ಸಾಬ್ ಎಂದೇ ಖ್ಯಾತರಾಗಿರುವ ಜಗದೀಶ್

ಬೆಂಗಳೂರು, (ಅ.10): ರಮೇಶ್ ಜಾರಕಿಹೊಳಿ (Ramesh Jarkiholi) ರಾಸಲೀಲೆ ಸಿಡಿ ಕೇಸ್‌ನಲ್ಲಿ ಯುವತಿ ಪರ ವಕಾಲತ್ತು ವಹಿಸಿದ್ದ ವಕೀಲ (lawyer) ಕೆ.ಎನ್​. ಜಗದೀಶ್​ ಮತ್ತೆ ಸುದ್ದಿಯಲ್ಲಿದ್ದಾರೆ.

ಹೌದು...ರಮೇಶ್ ಜಾರಕಿಹೊಳಿ ಕೇಸ್ ಬಳಿಕ ವಕೀಲ್ ಸಾಬ್​ ಎಂದು ಕರೆಸಿಕೊಳ್ಳುತ್ತಿರುವ  ಕೆ.ಎನ್​. ಜಗದೀಶ್ ಕುಮಾರ್ (KN Jagadesh)​ ಅವರು ಆಮ್​ ಆದ್ಮಿ ಪಕ್ಷಕ್ಕೆ (Aam Aadmi Party) ಸೇರ್ಪಡೆಯಾಗಲಿದ್ದಾರೆ. 

ಅಕ್ಟೋಬರ್‌ 11ರ ಸೋಮವಾರದಂದು ಮಧ್ಯಾಹ್ನ 1.00 ಗಂಟೆಗೆ ಬೆಂಗಳೂರಿನ ಪ್ರೆಸ್​​ಕ್ಲಬ್‌ನಲ್ಲಿ (Bengaluru Press Club) ಆಮ್​ ಆದ್ಮಿ ಪಕ್ಷಕ್ಕೆ ಸೇರ್ಪಡೆಯಾಗಲಿದ್ದು, ಬಳಿಕ ಅಲ್ಲೇ ಸುದ್ದಿಗೋಷ್ಠಿ ನಡೆಸಲಿದ್ದಾರೆ.

ಈ ಬಗ್ಗೆ ಅವರೇ ಕೆ.ಎನ್​. ಜಗದೀಶ್ ಅವರೇ ಸಾಮಾಜಿಕ ಜಾಲತಾಣಗಳಲ್ಲಿ (Social Media) ಹಂಚಿಕೊಂಡಿದ್ದಾರೆ. ಅಲ್ಲದೇ ಅಕ್ಟೋಬರ್‌ 11ರ ಸೋಮವಾರದಂದು ಮಧ್ಯಾಹ್ನ 1.00 ಗಂಟೆಗೆ ಬೆಂಗಳೂರಿನ ಪ್ರೆಸ್​​ಕ್ಲಬ್‌ನಲ್ಲಿ‌ ಜಗದೀಶ್‌ ಮಹಾದೇವ್ ಅವರನ್ನು ಆಮ್‌ ಆದ್ಮಿ ಪಾರ್ಟಿಗೆ ಬರಮಾಡಿಕೊಳ್ಳಲಾಗುತ್ತದೆ ಎಂದು ಆಮ್​ ಆದ್ಮಿ ಪಕ್ಷದ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ. ಸದಂ ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಭ್ರಷ್ಟಾಚಾರ ಹಾಗೂ ಇತರೆ ವಿಚಾರದ ಕುರಿತು ಮಾತನಾಡುತ್ತಲೇ ಜನರ ಗಮನ ಸೆಳೆದಿರುವ ಜಗದೀಶ್, ಈಗ ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಳ್ಳಲು ಮುಂದಾಗಿದ್ದಾರೆ.

ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಸಿಡಿ ಪ್ರಕರಣದ ಯುವತಿ ಪರ ವಕಾಲತ್ತು ವಹಿಸಿದ್ದ ಜಗದೀಶ್‌ ಕುಮಾರ್‌ ರಾಜ್ಯದಲ್ಲಿ  ಭಾರೀ ಸದ್ದು ಮಾಡಿದ್ದರು. ಅಲ್ಲದೇ ಬಿಜೆಪಿ ಮುಖಂಡರ ಕೆಂಗಣ್ಣಿಗೂ ಗುರಿಯಾಗಿದ್ದರು. 

ಬಳಿಕ ಅದೇನಾಯ್ತೋ ಏನೋ ರಮೇಶ್ ಜಾರಕಿಹೊಳಿ ಸಿಡಿ ಕೇಸ್‌ನಿಂದ ಆಚೆ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ತಪ್ಪುಗಳನ್ನ ಪ್ರಶ್ನೆ ಮಾಡುತ್ತಲೇ ಬಹಳಷ್ಟು ಫಾಲೋವರ್ಸ್‌ ಹೊಂದಿದ್ದಾರೆ.

click me!