ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ನಾವು ಹೆದರಿಕೊಂಡು ಹೋಗುವ ಪ್ರಶ್ನೆಯೇ ಇಲ್ಲ. ಇದನ್ನು ಚಾಲೆಂಜ್ ಆಗಿ ತೆಗೆದುಕೊಳ್ಳುತ್ತೇನೆ. ನಾಳೆ ನಮ್ಮ ಪಕ್ಷ ಏನು ತೀರ್ಮಾನ ಮಾಡುತ್ತೆ ಕಾದು ನೋಡುತ್ತೇನೆ. ನನಗೇನು ಇಲ್ಲಿ ಯಾವುದೂ ಮುಲಾಜಿಲ್ಲ ಎಂದು ಎಚ್.ಡಿ. ರೇವಣ್ಣ ಹೇಳಿದ್ದಾರೆ.
ಹಾಸನ (ಫೆ.25): ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಕಾರ್ಯಕರ್ತರಿಗೆ ಕಿರುಕುಳ ನೀಡಲಾಗುತ್ತಿದ್ದು, ಜನರು ರಕ್ಷಿಸುವಂತೆ ಕೇಳುತ್ತಿದ್ದಾರೆ. ಇದಕ್ಕೆ ಹೆದರಿಕೊಂಡು ಹೋಗುವ ಪ್ರಶ್ನೆಯೇ ಇಲ್ಲ. ಚಾಲೆಂಜ್ ಆಗಿ ತೆಗೆದುಕೊಳ್ಳಲಾಗುತ್ತದೆ. ನಾಳೆ ನಮ್ಮ ಪಕ್ಷ ಏನು ತೀರ್ಮಾನ ಮಾಡುತ್ತೆ ಕಾದು ನೋಡುತ್ತೇನೆ. ನನಗೇನು ಇಲ್ಲಿ ಯಾವುದೂ ಕಷ್ಟವಿಲ್ಲ ಎಂದು ಹೇಳುವ ಮೂಲಕ ಹಾಸನ ಜೆಡಿಎಸ್ ಟಿಕೆಟ್ ಬಗ್ಗೆ ತಾನೇ ಅಭ್ಯರ್ಥಿ ಎಂಬ ಮುನ್ಸೂಚನೆಯನ್ನು ಮಾಜಿ ಸಚಿವ ಎಚ್.ಡಿ. ರೇವಣ್ಣ ಹೇಳಿದ್ದಾರೆ.
ಹಾಸನ ಕ್ಷೇತ್ರದ ಬೈಲಹಳ್ಳಿ ಗ್ರಾಮದಲ್ಲಿ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕುಮಾರಣ್ಣನ ಸರ್ಕಾರ ಹೋದ ಮೇಲೆ ಹಾಸನ ಕ್ಷೇತ್ರದಲ್ಲಿ ನಮ್ಮ ಕಾರ್ಯಕರ್ತರಿಗೆ ಯಾವ ರೀತಿ ನೋವು ಕೊಡ್ತಿದ್ದಾರೆ ನನಗೆ ಗೊತ್ತಿದೆ. 107 ಕೇಸ್ ಹಾಕುತ್ತಿದ್ದಾರೆ. ಎಲೆಕ್ಷನ್ ಟೈಂ ಗಲಾಟೆ ಮಾಡ್ಸಿ ಜೈಲಿಗೆ ಕಳುಹಿಸುವುದು ಅಥವಾ ಗಡಿಪಾರು ಮಾಡಬೇಕು ಅಂತ ಮಾಡಿದ್ದಾರೆ. ನಮ್ಮ ಕಾರ್ಯಕರ್ತರ ಮೇಲೆ ಸುಮೋಟೋ ಕೇಸ್ ಹಾಕ್ತಾ ಇದ್ದಾರೆ. ಕೆಲವರು ದುಡ್ಡಿನಿಂದ ಕೊಂಡುಕೊಂಡು ಬಿಡ್ತೇವೆ, ನಾವು ರೌಡಿಸಂ ಮಾಡೇ ಮಾಡ್ತೀವಿ ಅಂತಿದ್ದಾರೆ. ನಿನ್ನೆ ಉಗಾನೆ ಗ್ರಾಮದಲ್ಲಿ ಜನರು ತಮಗೆ ರಕ್ಷಣೆ ಕೊಡಿ ೆಂದು ಹೇಳುತ್ತಿದ್ದಾರೆ. ಈ ಕ್ಷೇತವನ್ನು ನಾನು ಚಾಲೆಂಜ್ ಆಗಿ ತಗೊಂಡು ಯಾವ ರೀತಿ ಮಾಡಬೇಕು ಅನ್ನೋದನ್ನ ನಮ್ಮ ಮುಖಂಡರುಗಳ ಜೊತೆ ಕುಳಿತು ಮಾತನಾಡಿ ಒಂದು ನಿರ್ಣಯಕ್ಕೆ ಬರುತ್ತೇವೆ ಎಂದರು.
ದಳಪತಿಯ ಆಯ್ಕೆ ಆಪ್ತನಾ.. ಅತ್ತಿಗೆನಾ? ಟೆಂಪಲ್ ರನ್.. ಸೀಕ್ರೆಟ್ ಸಮೀಕ್ಷೆ.. ಏನಿದು ಎಚ್‌ಡಿಕೆ ಮೆಗಾ ಪ್ಲಾನ್!
ಕ್ಷೇತ್ರವನ್ನು ಚಾಲೆಂಜ್ ಆಗಿ ಸ್ವೀಕರಿಸುತ್ತೇನೆ: ಬಿಜೆಪಿಗರ ಕೀಟಲೆಗೆ ಹೆದರಿಕೊಂಡು ಓಡಿ ಹೋಗುವ ಪ್ರಶ್ನೆಯೇ ಇಲ್ಲ. ನೋಡೋಣ ಏನಾಗುತ್ತೆ. ನಮ್ಮ ಪಕ್ಷ ಏನ್ ತೀರ್ಮಾನ ಮಾಡುತ್ತೆ ಅದುನ್ನು ಕಾದು ನೋಡ್ತಿನಿ, ನನಗೇನು ಯಾವುದು ಇಲ್ಲ. ಕಳೆದ 60 ವರ್ಷದಿಂದ ದೇವೇಗೌಡರು ಈ ಮಟ್ಟಕ್ಕೆ ಬರಬೇಕಾದರೆ ನೀವೇ ಕಾರಣ. ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದೀರಿ. ಪ್ರಕಾಶ್ ಅವರನ್ನು 4 ಬಾರಿ ಗೆಲ್ಲಿಸಿದ್ದೀರಿ. ಈಗ ಏನ್ ನೋಡೋಣ. ಇದೊಂದು ಚಾಲೆಂಜ್ ಆಗಿ ಸ್ವೀಕರಿಸೋಣ. ದೇವೇಗೌಡರು, ನಾನು ಈ ತಾಲ್ಲೂಕಿಗೆ, ಜಿಲ್ಲೆಗೆ, ಹಾಸನ ನಗರಕ್ಕೆ ಏನ್ ಕೊಡುಗೆ ಕೊಟ್ಟಿದ್ದೀವಿ ಅನ್ನೋದು ಒಂದು ಪರೀಕ್ಷೆ ಆಗಲೇಬೇಕಾಗುತ್ತದೆ. ಬಿಜೆಪಿಯ ಮಂತ್ರಿಗಳಿಗೆ, ಮುಖ್ಯಮಂತ್ರಿಗಳಿಗೆ ಏನಾಗಿದೆ ಅಂದ್ರೆ ಇದೊಂದು ಕ್ಷೇತ್ರ ಇದೆ. ಕಾನೂನು, ಪಾನೂನೋ ಏನ್ ಬೇಕಾದರು ಮಾಡಿಕೊಳ್ಳಲಿ ಎಂದು ಹೇಳಿದ್ದಾರೆ. ಏನೇನ್ ಆಗುತ್ತೆ ನೋಡೋಣ ಎಂದು ಹೇಳಿದರು.
ಭ್ರಷ್ಟಾಚಾರದ ಕೇಸ್ ನಮ್ಮ ಮೇಲಿಲ್ಲ: ರಾಜ್ಯದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳಿಗೆ ನಮ್ಮ ಮೇಲೆ ಭ್ರಷ್ಟಾಚಾರ ಅಂತ ಹೇಳಲು ಆಗುತ್ತಿಲ್ಲ. ಒಂದೇ ಒಂದು ಕುಟುಂಬ ರಾಜಕಾರಣ ಅಂತ ಬಿಟ್ರೆ ಇನ್ನೇನ್ ಹೇಳ್ತಾರೆ. ರಾಷ್ಟ್ರೀಯ ಪಕ್ಷಗಳು ಹೇಳಲಿ ಕುಟುಂಬದಿಂದ ಯಾರು ನಿಲ್ಲಿಸೋದು ಬೇಡ ಅಂತ ಚಾಲೆಂಜ್ ಹಾಕ್ತಿನಿ. ಒಂದು ಕಡೆ ಕಾಂಗ್ರೆಸ್‌ನವರು ಬಿಜೆಪಿಯವರ ಮೇಲೆ 40% ಅಂತಾರೆ. ಮುಖ್ಯಮಂತ್ರಿಗಳು 8 ಸಾವಿರ ಕೋಟಿ ಅಂತ ಸದನದಲ್ಲಿ ಕಾಂಗ್ರೆಸ್‌ನವರ ಮೇಲೆ ಹೇಳಿದ್ದಾರೆ. ಇಷ್ಟು ದಿನ ಸುಮ್ನಿದ್ದು ಎಲೆಕ್ಷನ್ ಬಂದಾಗ ಕಾಂಗ್ರೆಸ್‌ನವರ ಮೇಲೆ ದೂರುತ್ತಿದ್ದಾರೆ. ನಾಲ್ಕು ವರ್ಷ ಏನು ಮಾಡುತ್ತಿದ್ದರು ಎಂದು ಕಿಡಿಕಾರಿದರು.
ಭ್ರಷ್ಟಾಚಾರ ತನಿಖೆ ಮಾಡಿಸಲು ಹೆದರಿಕೆ ಏಕೆ?: ಸುಪ್ರೀಂಕೋರ್ಟ್ ಸಿಟ್ಟಿಂಗ್ ಜಡ್ಜ್ ಕೈಲಿ ನನ್ನ ಆಡಳಿತ ಅವಧಿ ಹಾಗೂ ಬಿಜೆಪಿ ಆಡಳಿತದ ಭ್ರಷ್ಟಾಚಾರದ ತನಿಖೆ ಮಾಡಿಸಲು ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಅವರದ್ದೇ ಕೇಮದ್ರ ಮತ್ತು ರಾಜ್ಯ ಸರ್ಕಾರ ಅಧಿಕಾರದಲ್ಲಿದ್ದು, ತನಿಖೆ ಮಾಡಿಸಲು ಉವರು ಯಾಕೆ ಹೆದರಬೇಕು. ಎಲೆಕ್ಷನ್ ದೃಷ್ಟಿ ಇಟ್ಟುಕೊಂಡು ಗಿಮಿಕ್ ಮಾಡುವ ಒಂದು ಸ್ಟಂಟ್ ಇದು. ಆದ್ದರಿಂದ ಜನ ಎಚ್ಚೆತ್ತುಕೊಳ್ಳಬೇಕು. ಕಳಪೆ ಕಾಮಗಾರಿ ದುಡ್ಡು ಹೊಡೆಯದು ಬಿಟ್ಟರೆ ಏನು ಇಲ್ಲಾ. ಟಾರು ಹಾಕಿ, ಮತ್ತೆ ಮಾರನೇ ಬೆಳಿಗ್ಗೆ ಇನ್ನೊಂದು ಸಾರಿ ಟಾರ್ ಹಾಕಿ ದುಡ್ಡು ಹೊಡೆಯುತ್ತಾರೆ. ದುರಾಡಳಿತಕ್ಕೆ ನಾವು ಕಡಿವಾಣ ಹಾಕಬೇಕು ಎಂದು ಹೇಳಿದರು.
ಹಾಸನದಲ್ಲಿ ಭವಾನಿಗೆ ಟಕೆಟ್ ಸಿಗೋದು ಡೌಟು: ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ಕೊಡ್ತೀನಿ ಎಂದ ಕುಮಾರಸ್ವಾಮಿ
ಬಿಜೆಪಿ ಕಾರ್ಯಕರ್ತರನ್ನು ಸೆಳೆದುಕೊಂಡ ಪ್ರಜ್ವಲ್ ರೇವಣ್ಣ: ಹಾಸನ ವಿಧಾನಸಭಾ ಕ್ಷೇತ್ರದ ಗುಡ್ಡೆನಹಳ್ಳಿ ಗ್ರಾಮದ ಯುವಕರು ಬಿಜೆಪಿಯನ್ನು ತೊರೆದು ಜೆಡಿಎಸ್ ಸೇರಿದರು. ವರ್ಷದ ಹಿಂದೆ ಶಾಸಕ ಪ್ರೀತಂಗೌಡ ಸಮ್ಮುಖದಲ್ಲಿ ಬಿಜೆಪಿ ಸೇರಿದ್ದರು. ಇಂದು ಸಂಸದ ಪ್ರಜ್ವಲ್ ಜೆಡಿಎಸ್ ಹಾಸನ ಕ್ಷೇತ್ರದ ಟಿಕೇಟ್ ಆಕಾಂಕ್ಷಿ ಭವಾನಿ ನೇತೃತ್ವದಲ್ಲಿ ಮರಳಿ ಜೆಡಿಎಸ್ ಸೇರ್ಪಡೆ ಆಗಿದ್ದಾರೆ. ಸಂಸದರ ನಿವಾಸದಲ್ಲಿ ಜೆಡಿಎಸ್ ಬಾವುಟ ನೀಡಿ ಪಕ್ಷಕ್ಕೆ ಸ್ವಾಗತಿಸಿದರು. ಇನ್ನು ಕಳೆದುಕೊಂಡಿರುವ ಕ್ಷೇತ್ರವನ್ನು ಮರು ವಶಕ್ಕೆ ಪಡೆಯಲು ರಣತಂತ್ರ ರೂಪಿಸಲಾಗಿದೆ ಎಂದು ಸಂಸದ ಪ್ರಜ್ವಲ್ ರೇವಣ್ಣ ಹೇಳಿದರು.