BJP Rathayatre: ಮಾ.1ರಿಂದ ಬಿಜೆಪಿ ರಥಯಾತ್ರೆ ಆರಂಭ: ಯಾರ ನೇತೃತ್ವ- ಎಲ್ಲೆಲ್ಲಿ ರಥಯಾತ್ರೆ.?

By Sathish Kumar KH  |  First Published Feb 25, 2023, 2:42 PM IST

ರಾಜ್ಯದ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮಾ.1 ರಿಂದ ರಾಜ್ಯದ 4 ಮೂಲೆಗಳಲ್ಲಿ ಬಿಜೆಪಿ ರಥಯಾತ್ರೆ ಆರಂಭಿಸಲಾಗುತ್ತಿದ್ದು, ಮೊದಲ ದಿನ ಮಹದೇಶ್ವರ ಬೆಟ್ಟದಲ್ಲಿ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಉದ್ಘಾಟನೆ ಮಾಡಲಿದ್ದಾರೆ.


ಬೆಂಗಳೂರು (ಫೆ.25): ರಾಜ್ಯದ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮಾ.1 ರಿಂದ ರಾಜ್ಯದ 4 ಮೂಲೆಗಳಲ್ಲಿ ಬಿಜೆಪಿ ರಥಯಾತ್ರೆ ಆರಂಭಿಸಲಾಗುತ್ತಿದ್ದು, ಮೊದಲ ದಿನ ಮಹದೇಶ್ವರ ಬೆಟ್ಟದಲ್ಲಿ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಉದ್ಘಾಟನೆ ಮಾಡಲಿದ್ದಾರೆ. ಎರಡನೇ ದಿನ ರಾಜನಾಥ್‌ ಸಿಂಗ್, ಮೂರನೇ ದಿನ ಅಮಿತ್‌ ಶಾ ಉದ್ಘಾಟನೆ ಮಾಡಲಿದ್ದಾರೆ. ರಥಯಾತ್ರೆಯ ಸಮಾರೋಪ ಸಮಾರಂಭ ದಾವಣಗೆರೆಯಲ್ಲಿ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ ಎಂದು ಸಚಿವ ಸಿ.ಸಿ. ಪಾಟೀಲ್‌ ಹೇಳಿದರು.

ಈ ಕುರಿತು ಸುದ್ದೊಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ ತಿಂಗಳಲ್ಲಿ ಬರುವ ಚುನಾವಣೆ ‌ಗೆಲ್ಲುವ ನಿಟ್ಟಿನಲ್ಲಿ ಯಡಿಯೂರಪ್ಪ ಅವರು ಜಾರಿಗೊಳಿಸಿದ ಜನಪರ ಯೋಜನೆಗಳು, ಬಸವರಾಜ ಬೊಮ್ಮಾಯಿ ಅವರ ಬಜೆಟ್ ಹಾಗೂ ಜನಪರ ಕಾರ್ಯಕ್ರಮ ಇಟ್ಟುಕೊಂಡು150 ಸ್ಥಾನ ಗೆಲ್ಲುತ್ತೇವೆ. ಮಹದೇಶ್ವರ ದೇವಸ್ಥಾನ, ಸಂಗೊಳ್ಳಿ ರಾಯಣ್ಣ ಸ್ಮಾರಕ, ಬಸವ ಕಲ್ಯಾಣ, ಬೆಂಗಳೂರು ಸೇರಿದಂತೆ ನಾಲ್ಕು ಕಡೆ ಯಾತ್ರೆ ಆರಂಭ ಮಾಡುತ್ತೇವೆ. ಮಾ.1ರಂದು ಜೆ.ಪಿ.ನಡ್ಡಾ, ಮಾ.2ರಮದು ರಾಜನಾಥ್ ಸಿಂಗ್, ಮಾ.3ರಂದು ಅಮಿಶ್ ಶಾ ಬಸವಕಲ್ಯಾಣ ಹಾಗೂ ಬೆಂಗಳೂರಿನಲ್ಲಿ ಉದ್ಘಾಟನೆ ಮಾಡಲಿದ್ದಾರೆ. 

Tap to resize

Latest Videos

ಮಹಾ ನಿರ್ಗಮನ: ಬಿಎಸ್‌ವೈ ಭಾಷಣಕ್ಕೆ ಪಕ್ಷ ಬೇದವಿಲ್ಲದೇ ಎಲ್ಲರ ಕಣ್ಣಲ್ಲೂ ನೀರು..!

ಮೇ ತಿಂಗಳಲ್ಲಿ ಚುನಾವಣೆ ಘೋಷಣೆ ಯಾಗುವ ಸಾಧ್ಯತೆ ಇದೆ. ಹೀಗಾಗಿ ಚುನಾವಣೆ ಗೆಲ್ಲಲು ಮಾಡಬೇಕಾದ ತಂತ್ರಗಳ ಬಗ್ಗೆ ನಾವು ಮಾಡ್ತಿದ್ದೇವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳು, ಅಭಿವೃದ್ಧಿ ಕಾರ್ಯ ಕ್ರಮಗಳ ಮೂಲಕ ಚುನಾವಣೆ ಎದುರಿಸಲು ಸಿದ್ದತೆ ಮಾಡಿಕೊಳ್ಳುತ್ತಿದ್ದೇವೆ. ನಾಲ್ಕು ತಂಡಗಳಲ್ಲಿ ನಾವು ರಥಯಾತ್ರೆಗೆ ರೆಡಿ ಆಗಿದ್ದೇವೆ. 4 ರಥಯಾತ್ರೆಗಳನ್ನು ಮಾಡಿ ರಾಷ್ಟ್ರೀಯ ನಾಯಕರು, ರಾಜ್ಯದ ನಾಯಕರ ಮೂಲಕ ರಥಯಾತ್ರೆ ಉದ್ಘಾಟನೆ ಮಾಡುತ್ತೇವೆ. ಮಾರ್ಚ್ 21-22ರೊಳಗೆ 224 ಕ್ಷೇತ್ರಗಳಲ್ಲೂ ಸಂಚರಿಸಲು ತಯಾರಾಗಿದ್ದೇವೆ. ಬೆಳಿಗ್ಗೆ ರೋಡ್ ಶೋ, ಮಾಡಿ ಅಲ್ಲೇ ಒಂದು ಮೀಟಿಂಗ್ ಮಾಡಿ ಭಾಷಣ ಮಾಡಲಾಗುತ್ತದೆ. ಮಧ್ಯಾಹ್ನ ಮತ್ತೊಂದು ರೋಡ್ ಶೋ ಮಾಡಿ ಸಂಜೆ ಬೃಹತ್ ಸಮಾವೇಶ ಮಾಡಲಾಗುತ್ತದೆ ಎಂದು ಹೇಳಿದರು.

ಫೆ.28ರಂದು ರಥಯಾತ್ರೆಗೆ ವಾಹನ ಪೂಜೆ: 1 ರಿಂದ 20ರ ವರೆಗೆ ರಥಯಾತ್ರೆ ನಡೆಯುತ್ತದೆ. ಪೂರ್ಣ ಬಹುಮತದ ಅಧಿಕಾರ ಕೊಡಿ ಎಂದು ನಾವು ಯಾತ್ರೆಯಲ್ಲಿ ಕೇಳುತ್ತೇವೆ. ಫೆಬ್ರವರಿ 28ಕ್ಕೆ ಬಿಜೆಪಿ ಕಚೇರಿಯಲ್ಲಿ ಪೂಜೆ ಮಾಡಿ ರಥಯಾತ್ರೆಗಳನ್ನು ಕಳುಹಿಸಿಕೊಡುವ ಕೆಲಸ ಮಾಡುತ್ತೇವೆ. ಒಟ್ಟು 8,000 ಕಿಲೋಮೀಟರ್ ಯಾತ್ರೆ ಸಂಚಾರ ಮಾಡಲಿದೆ. ಈ ಮೂಲಕ ಬಿಜೆಪಿ ಪರವಾದ ಅಲೆ ನಿರ್ಮಾಣ ಮಾಡುವ ಕೆಲಸ ಮಾಡುತ್ತೇವೆ. ಮಾರ್ಚ್ 22 ರಿಂದ ಮಾ.25ರ ಅವಧಿಯಲ್ಲಿ ದಾವಣಗೆರೆಯಲ್ಲಿ ದೊಡ್ಡ ಸಮಾವೇಶ ನಡೆಯಲಿದೆ. ಈಬಗ್ಗೆ ನಾಳೆ ಅಥವಾ ನಾಡಿದ್ದು ಅಮಿತ್‌ ಶಾ ಅವರೊಂದಿಗೆ ಚರ್ಚೆ ಮಾಡಿ ದಿನಾಂಕ ನಿಗದಿ ಮಾಡುತ್ತಿದ್ದೇವೆ ಎಂದರು. 

ರಥಯಾತ್ರೆಗೆ ನೃತೃತ್ವ ವಹಿಸುವ ನಾಯಕರು: 

  • ಮೊದಲ ತಂಡ: ಈಶ್ವರಪ್ಪ, ಸೋಮಣ್ಣ, ನಾರಯಣಗೌಡ, ಸುನೀಲ್ ಕುಮಾರ್, ಶ್ರೀನಿವಾಸ ಪ್ರಸಾದ್, ಎನ್ ಮಹೇಶ್. 
  • ಎರಡನೇ ತಂಡ: ಗೋವಿಂದ ಕಾರಜೋಳ, ಲಕ್ಷಣ ಸವದಿ, ರಮೇಶ್ ಜಾರಕಿಹೊಳಿ, ಮುರುಗೇಶ್ ನಿರಾಣಿ
  • ಮೂರನೇ ತಂಡ: ಜಗದೀಶ್ ಶೆಟ್ಟರ್ ಹಾಗೂ ಇತರೆ ನಾಯಕರು
  • ನಾಲ್ಕನೇ ತಂಡ: ಆರ್ ಅಶೋಕ್, ಅಶ್ವಥ್ ನಾರಾಯಣ್, ಎಸ್.ಟಿ. ಸೋಮಶೇಖರ್, ಮುನಿರತ್ನ ಹಾಗೂ ಡಾ. ಸುಧಾಕರ್ 
  • ಎಲ್ಲೆಡೆ ಭಾಗಿ: ರಾಜ್ಯಾಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್, ಮಾಜಿ ಸಿಎಂ ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ.
  • ಜಿಲ್ಲೆ ಅಗತ್ಯತೆ ಅನುಸಾರ ಭಾಗಿ: ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ, ಶೋಭಾ ಕರಂದ್ಲಾಜೆ ಹಾಗೂ ಸಂಸದ ಸದಾನಂದಗೌಡ

ಹಾಸನದಲ್ಲಿ ಭವಾನಿಗೆ ಟಕೆಟ್‌ ಸಿಗೋದು ಡೌಟು: ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್‌ ಕೊಡ್ತೀನಿ ಎಂದ ಕುಮಾರಸ್ವಾಮಿ

ಬಿಜೆಪಿಯಿಂದ ರಥಯಾತ್ರೆಯ ವಿವರ
ಮೊದಲ ತಂಡ - ಮಲೈ ಮಹದೇಶ್ವರ ದೇವಸ್ಥಾನದಿಂದ ಪ್ರಾರಂಭ

1 ಚಾಮರಾಜನಗರ
2 ಮೈಸೂರು
3 ಮಂಡ್ಯ
4 ಹಾಸನ
5 ಕೊಡಗು
6 ದಕ್ಷಿಣ ಕನ್ನಡ
7 ಉಡುಪಿ
8 ಚಿಕ್ಕಮಗಳೂರು
9 ಶಿವಮೊಗ್ಗ
10 ದಾವಣಗೆರೆ

ಎರಡನೇ ತಂಡ: ಬೆಳಗಾವಿ ಜಿಲ್ಲೆ ಖಾನಾಪುರದ ನಂದಗಡದ ಸಂಗೊಳ್ಳಿ ರಾಯಣ್ಣ ಸ್ಮಾರಕದಿಂದ ಪ್ರಾರಂಭ
1 ಬೆಳಗಾವಿ
2 ವಿಜಯಪುರ
3 ಬಾಗಲಕೋಟೆ
4 ಗದಗ
5 ಧಾರವಾಡ
6 ಉತ್ತರ ಕನ್ನಡ
7 ಹಾವೇರಿ
8 ದಾವಣಗೆರೆ

ಮೂರನೇ ತಂಡ: ಬಸವಕಲ್ಯಾಣದ ಅನುಭವ ಮಂಟಪದಿಂದ ಆರಂಭ
1 ಬೀದರ್
2 ಕಲ್ಬುರ್ಗಿ
3 ಯಾದಗಿರಿ
4 ರಾಯಚೂರು
5 ಕೊಪ್ಪಳ
6 ಬಳ್ಳಾರಿ
7 ವಿಜಯನಗರ
8 ದಾವಣಗೆರೆ

ನಾಲ್ಕನೇ ತಂಡ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ಕೆಂಪೇಗೌಡ ಪ್ರತಿಮೆಯಿಂದ ಪ್ರಾರಂಭ
1 ಬೆಂಗಳೂರು ಗ್ರಾಮಾಂತರ
2 ರಾಮನಗರ.
3 ಬೆಂಗಳೂರು ನಗರ
4 ಕೋಲಾರ
5 ಚಿಕ್ಕಬಳ್ಳಾಪುರ
6  ತುಮಕೂರು.
7 ಚಿತ್ರದುರ್ಗ
8 ದಾವಣಗೆರೆ

ಅಂತಿಮವಾಗಿ ದಾವಣಗೆರೆಯಲ್ಲಿ ಮಹಾಸಂಗಮ ಸಮಾವೇಶ

click me!