ಹಾಸನ ವಿಧಾಸಭಾ ಕ್ಷೇತ್ರದ ಟಿಕೆಟ್ ಗಾಗಿ ಜೆಡಿಎಸ್ ನಲ್ಲಿ ಫೈಟ್ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ಪಕ್ಷದ ಬೆಂಬಲಿಗರ ಆಕ್ರೋಶ ಹೊರಬಿದ್ದಿದೆ. ಭವಾನಿ ರೇವಣ್ಣ ಅವರ ಪರ ಮತ್ತು ವಿರೋಧವಾಗಿ ಚರ್ಚೆ ಹಾಗೂ ಪೋಸ್ಟರ್ ವಾರ್ ಆರಂಭವಾಗಿದೆ.
ಹಾಸನ (ಜ.29): ಹಾಸನ ವಿಧಾಸಭಾ ಕ್ಷೇತ್ರದ ಟಿಕೆಟ್ ಗಾಗಿ ಜೆಡಿಎಸ್ ನಲ್ಲಿ ಫೈಟ್ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ಪಕ್ಷದ ಬೆಂಬಲಿಗರ ಆಕ್ರೋಶ ಹೊರಬಿದ್ದಿದೆ. ಭವಾನಿ ರೇವಣ್ಣ ಅವರ ಪರ ಮತ್ತು ವಿರೋಧವಾಗಿ ಚರ್ಚೆ ಹಾಗೂ ಪೋಸ್ಟರ್ ವಾರ್ ಆರಂಭವಾಗಿದೆ. ಜೊತೆಗೆ ಹಾಸನ ಕದನದ ಜೆಡಿಎಸ್ ಟಿಕೆಟ್ ಫೈಟ್‌ನಲ್ಲಿ ಭವಾನಿ ರೇವಣ್ಣ ಅಥವಾ ಎಚ್.ಡಿ. ಕುಮಾರಸ್ವಾಮಿ ಯಾರಿಗೆ ಗೆಲುವು.? ಸಿಗಲಿದೆ ಎಂಬ ಚರ್ಚೆ ಶುರುವಾಗಿದೆ.
ಕುಮಾರಸ್ವಾಮಿ ಅಭಿಮಾಣಿಗಳು ಹೇಳೋದೇನು?: ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತಂದು ಗೌಡರ ಕನಸಿನ ಪಕ್ಷ ಉಳಿಸಲು ಕುಮಾರಸ್ವಾಮಿ ಹೋರಾಟ ಮಾಡುತ್ತಿದ್ದಾರೆ. ತಮ್ಮ ಆರೋಗ್ಯ ಲೆಕ್ಕಿಸದೆ ಕುಮಾರಸ್ವಾಮಿ ಹೋರಾಡುತ್ತಿದ್ದರೆ ಇಲ್ಲಿ ಒಂದು ಸ್ಥಾನಕ್ಕಾಗಿ ಅವರ ಮನಸ್ಸಿಗೆ ನೋವು ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ. ಜೆಡಿಎಸ್ ಕಾರ್ಯಕರ್ತರು ನಿಂತಿರೋದು ಕುಮಾರಸ್ವಾಮಿ ಹಾಗು ದೇವೇಗೌಡರು ಎನ್ನೋ ಶಕ್ತಿ ಹಿಂದೆ. ನಮ್ಮ ಗುರಿ ಕುಮಾರಸ್ವಾಮಿ ಸಿಎಂ ಮಾಡೋದು ಎಂದು ಕಿಡಿ. ಜೆಡಿಎಸ್ ಗೆ ಇವತ್ತು ಜನ ಬೆಂಬಲ ಇರೋದಕ್ಕೆ ಕುಮಾರಸ್ವಾಮಿ ಕಾರಣವೇ ಹೊರತು ರೇವಣ್ಣ ಮಕ್ಕಳಲ್ಲ ಎಂದು ತಿರುಗೇಟು ಕುಮಾರಸ್ವಾಮಿ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಕಿಡಿಕಾರಿದ್ದಾರೆ.
ಜೆಡಿಎಸ್‌ಗೆ ಹಾಸನ ಕಗ್ಗಂಟು: ಮನೇಲಿ ನಿರ್ಧಾರ ಮಾಡ್ತೀವಿ, ಬೀದೀಲಿ ನಿಂತು ಉತ್ತರಿಸಲ್ಲ: ಕುಮಾರಸ್ವಾಮಿ
ರೇವಣ್ಣ ಕುಟುಂಬದ ವಿರುದ್ಧ ಆಕ್ರೋಶ: ಹಾಸನದ ಟಿಕೆಟ್ ಹಂಚಿಕೆ ವಿಚಾರವಾಗಿ ಭವಾನಿ ರೇವಣ್ಣ ಹಾಗೂ ಅವರ ಪುತ್ರರು ತಮ್ಮ ಮಾತುಗಳ ಮೂಲಕ ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದ್ದಾರೆ ಎಂದು ರೇವಣ್ಣ ಕುಟುಂಬದ ವಿರುದ್ಧ ಕುಮಾರಸ್ವಾಮಿ ಕೆಲ ಬೆಂಬಲಿಗರ ಅಸಮಧಾನ ವ್ಯಕ್ತಪಡಿಸಿದ್ದಾರೆ. ಈ ಎಲ್ಲಾ ಬೆಳವಣಿಗೆ ನೋಡಿದ್ರೆ ಜೆಡಿಎಸ್ ಸರ್ವನಾಶಕ್ಕೆ ಹಾಸನದವರು ಮುನ್ನುಡಿ ಬರೆಯುತ್ತಿದ್ದಾರೆ. ಹಾಸನ ಟಿಕೇಟ್ ದಂಗಲ್ ಬಗ್ಗೆ ಸಾಮಾಜಿಲ ಜಾಲತಾಣದಲ್ಲಿ ತೀವೃ ಚರ್ಚೆ. ಕುಮಾರಸ್ವಾಮಿ ಅವರ ಮಾತಿನಂತೆ ಎಲ್ಲರೂ ನಡೆಯಲಿ ಎಂದು ಕೆಲ ಬೆಂಬಲಿಗರ ಪೋಸ್ಟ್ ಮಾಡುತ್ತಿದ್ದಾರೆ.
ಕರ್ನಾಟಕದ ಅಮ್ಮಾ ಭವಾನಿ ರೇವಣ್ಣ: ಹಾಸನಕ್ಕೆ ಭವಾನಿ ರೇವಣ್ಣಗೆ ಟಿಕೆಟ್ ಕೊಡಬೇಕೆಂದು ಕಾರ್ಯಕರ್ತರ ಪಟ್ಟು ಹಿಡಿದು ಪ್ರತಿಭಟನೆ, ಹೋರಾಟಗಳನ್ನು ಮಾಡುತ್ತಿದ್ದಾರೆ. ಭವಾನಿ ಪರ ಟ್ರೆಂಡ್ ಸೆಟ್ ಮಾಡುತ್ತಿರೊ ಅಭಿಮಾನಿಗಳು, ಬೆಂಬಲಿಗರು ಕರ್ನಾಟಕದ ಅಮ್ಮಾ ಭವಾನಿ ರೇವಣ್ಣ ಎಂದು ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾ ಫೋಟೋ ಜೊತೆ ಭವಾನಿ ಫೋಟೋ ಸೇರಿಸಿ ವೈರಲ್ ಮಾಡುತ್ತಿದ್ದಾರೆ. ಕರ್ನಾಟಕದ ಮಹಿಳಾ ಶಕ್ತಿ ಗೆ ಮತ್ತೊಂದು ಭರವಸೆ ಅಮ್ಮಾ ಎಂದು ಪೋಸ್ಟ್ ಮಾಡಿದ್ದಾರೆ. ಹಾಸನದ ಮುಂದಿನ ಎಂಎಲ್ ಎ ಭವಾನಿ ರೇವಣ್ಣ ಇದು ಮಹಿಳೆಯರ ಕೋರಿಕೆ ಎಂದು ಹಕ್ಕೊತ್ತಾಯದ ಪೋಸ್ಟ್ ಗಳು ವೈರಲ್ ಆಗುತ್ತಿವೆ. ದಿನೇ ದಿನೆ ಭವಾನಿ ರೇವಣ್ಣ ಗೆ ಟಿಕೆಟ್ ಕೊಡಬೇಕೆಂದು ಭವಾನಿ ರೇವಣ್ಣ ಬೆಂಬಲಿಗರ ಒತ್ತಡ ಹೆಚ್ಚಾಗುತ್ತಿದೆ.
Assembly election: ಹಾಸನಕ್ಕೆ ಭವಾನಿ ರೇವಣ್ಣ ಅವರೇ ಸೂಕ್ತ- ಗೆದ್ದೇ ಗೆಲ್ತಾರೆ: ಸಂಸದ ಪ್ರಜ್ವಲ್ ರೇವಣ್ಣ
ಮಾಜಿ ಸಚಿವ ಎಚ್.ಡಿ. ರೇವಣ್ಣ ಸುದ್ದಿಗೋಷ್ಠಿ: ಇನ್ನು ಹಾಸನ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಜೆಡಿಎಸ್ ಟಿಕೆಟ್ ಹಂಚಿಕೆ ವಿಚಾರವಾಗಿ ಭವಾನಿ ರೇವಣ್ಣ ಹಾಗೂ ಎಚ್.ಡಿ. ಕುಮಾರಸ್ವಾಮಿ ಅವರ ನಡುವೆ ಒಂದೇ ಕುಟುಂಬದಲ್ಲಿ ಕದನ ಶುರುವಾಗಿದೆ. ಕಳೆದ ನಾಲ್ಕೈದು ದಿನಗಳಿಂದ ಟಿಕೆಟ್ ಫೈಟ್ ಕುರಿತು ಪರ -ವಿರೋಧ ಆರಂಭವಾಗಿದೆ. ಭವಾನಿ ರೇವಣ್ಣ ಪರವಾಗಿ ಅವರ ಮಕ್ಕಳಾದ ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಸೂರಜ್ ರೇವಣ್ಣ ಮಾತನಾಡಿದ್ದರು. ಈಗ ಹಾಸನದಲ್ಲಿ ಮಾಜಿ ಸಚಿವ ಹೆಚ್ ಡಿ ರೇವಣ್ಣ ತುರ್ತು ಸುದ್ದಿಗೋಷ್ಠಿ ಕರೆದಿದ್ದಾರೆ. ಈ ಮೂಲಕ ಕಳೆದ ಐದು ದಿನಗಳಿಂದ ಚರ್ಚೆ ನಡೆದಿದ್ದರೂ ಮೌನ ವಹಿಸಿದ್ದ ರೇವಣ್ಣ ಇಂದು ಮೌನ ಮುರಿಯಲು ಸಜ್ಜಾಗಿದ್ದಾರೆ. ಮಧ್ಯಾಹ್ನ 1-30ಕ್ಕೆ ಹಾಸನದ ಸಂಸದರ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಲಿದ್ದಾರೆ.