
ನವದೆಹಲಿ: ದೇಶದ ನಾಗರಿಕರು ಸಂಸತ್ತಿಗೆ ಅರ್ಜಿ ಸಲ್ಲಿಸಿ ತಿಳಿಸುವ ವಿಷಯಗಳ ಕುರಿತು ಅಲ್ಲಿ ಚರ್ಚೆಯಾಗುವಂತೆ ಮಾಡಲು ಸೂಕ್ತ ವ್ಯವಸ್ಥೆ ಸೃಷ್ಟಿಸುವ ಸಂಬಂಧ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಸೂಚನೆ ನೀಡಬೇಕು ಎಂದು ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಕೆಯಾಗಿದೆ. ಕರಣ್ ಗಗ್‌ರ್ ಎಂಬುವರು ಈ ಅರ್ಜಿ ಸಲ್ಲಿಸಿದ್ದು, ಅದರ ಪ್ರತಿಯನ್ನು ಕೇಂದ್ರ ಸರ್ಕಾರಿ ವಕೀಲರಿಗೆ ಸಲ್ಲಿಸಲು ಸುಪ್ರೀಂಕೋರ್ಟ್ ಸೂಚಿಸಿದೆ. ವಿಚಾರಣೆಯನ್ನು ಫೆಬ್ರವರಿಗೆ ಮುಂದೂಡಿದೆ.
ಬ್ರಿಟನ್ ಮಾದರಿ ವ್ಯವಸ್ಥೆ ಬೇಕು:
ಸಂಸತ್ತಿಗೆ (Parliament) ಅರ್ಜಿ ಸಲ್ಲಿಸಿ ನಾಗರಿಕ ಪ್ರಸ್ತಾಪಿಸುವ ವಿಚಾರಗಳ ಕುರಿತಂತೆ ಅಲ್ಲಿ ಚರ್ಚೆ, ಸಂವಾದ ನಡೆಯಬೇಕು. ಇದೊಂದು ಮೂಲಭೂತ ಹಕ್ಕು ಎಂದು ಸುಪ್ರೀಂಕೋರ್ಟ್ (Supreme Court) ಘೋಷಿಸಬೇಕು. ತನ್ಮೂಲಕ ಯಾವುದೇ ಅಡೆ ತಡೆ ಇಲ್ಲದೆ ನಾಗರಿಕರ ದನಿ ಸಂಸತ್ತಿನಲ್ಲಿ ಕೇಳುವಂತಾಗಬೇಕು. ಇದಕ್ಕಾಗಿ ಸರ್ಕಾರ ಸೂಕ್ತ ವ್ಯವಸ್ಥೆ ಕೈಗೊಳ್ಳಬೇಕು ಎಂಬುದು ಅರ್ಜಿದಾರರ ವಾದ.
ಪ್ರಜಾಸತ್ತಾತ್ಮಕ ಪ್ರಕ್ರಿಯೆಯಲ್ಲಿ ಜನರನ್ನು ದುರ್ಬಲಗೊಳಿಸಲಾಗಿದೆ. ಜನರು ಮತದಾನ ಮಾಡಿ, ಪ್ರತಿನಿಧಿಗಳನ್ನು ಚುನಾಯಿತರನ್ನಾಗಿಸಿದ ಮೇಲೆ ಅವರಿಗೆ ಅದರಲ್ಲಿ ಭಾಗಿಯಾಗುವ ಅವಕಾಶವೇ ಇಲ್ಲ. ಸಂಸತ್ತಿಗೆ ನೇರವಾಗಿ ಜನರು ಅರ್ಜಿ ಸಲ್ಲಿಸುವ ವ್ಯವಸ್ಥೆ ಬ್ರಿಟನ್‌ನಲ್ಲಿದ್ದು, ಅಲ್ಲಿ ಚೆನ್ನಾಗಿಯೇ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ವಿವರಿಸಿದ್ದಾರೆ.
ಜಗತ್ತಿನ ಅತ್ಯಂತ ಪ್ರಬಲ ನಾಯಕ ಮೋದಿ, ಬ್ರಿಟನ್ ಸಚಿವನ ಮಾತಿಗೆ ತಲೆದೂಗಿದ ಯುಕೆ ಸಂಸತ್ತು!
ಬ್ರಿಟನ್ ಸಂಸತ್ತಲ್ಲಿ ಪ್ರಧಾನಿ ಮೋದಿ ಸಮರ್ಥಿಸಿದ ಪ್ರಧಾನಿ ರಿಷಿ ಸುನಕ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.