ನಾನು 15 ವರ್ಷ ಸಾಕಿದ್ದ ಗಿಣಿನಾ ಕಾಂಗ್ರೆಸ್‌ ಕಿತ್ಕೊಂಡಿದೆ: ಜನರೇ ಹದ್ದಾಗಿ ಕುಕ್ಕುತಾರೆ!

By Sathish Kumar KHFirst Published May 3, 2023, 9:08 PM IST
Highlights

ನಾನು ಹದಿನೈದು ವರ್ಷ ಸಾಕಿದ್ದ ಗಿಣಿಯನ್ನ ಕಾಂಗ್ರೆಸ್‌ನವರು ಬಲೆಹಾಕಿ ಕರ್ಕಂಡು ಹೋಗಿದಾರೆ. ಆ ಗಿಣಿಯನ್ನು ಜನರೇ ಹದ್ದಾಗಿ ಕುಕ್ಕು ಬೋನಿಗೆ ಹಾಕುತ್ತಾರೆ.

ಹಾಸನ (ಮೇ 3): ಹದಿನೈದು ವರ್ಷದ್ದು ನನ್ನದೊಂದು ಸಾಕಿದ ಗಿಣಿ ಇತ್ತು. ನಾನು ಸಾಕಿದ್ದ ಗಿಣಿಯ ಬಳಿ ಒಂದು ಸ್ವಲ್ಪ ದುಡ್ಡು ಐತೆ ಅಂತಾ ಕಾಂಗ್ರೆಸ್‌ನವರು ಬಲೆಹಾಕಿ ಕರ್ಕಂಡು ಹೋಗಿದಾರೆ. ಆ ಗಿಣಿಯನ್ನು ಜನರೇ ಹದ್ದಾಗಿ ಕುಕ್ಕು ಬೋನಿಗೆ ಹಾಕುತ್ತಾರೆ ಎಂದು ಮಾಜಿ ಶಾಸಕ ಕೆ.ಎಂ. ಶಿವಲಿಂಗೇಗೌಡರ ವಿರುದ್ಧ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಟೀಕೆ ಮಾಡಿದರು.

ಹಾಸನ ಜಿಲ್ಲೆಯಲ್ಲಿ ಜೆಡಿಎಸ್‌ ಬುಧವಾರ ಕೈಗೊಂಡಿದ್ದ ಜೆಡಿಎಸ್‌ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ರೇವಣ್ಣ ಅವರು, ಕಾಂಗ್ರೆಸ್‌ನವರು ಎ.ಟಿ.ರಾಮಸ್ವಾಮಿ ಕರ್ಕಂಡು ಹೋಗೋದಕ್ಕೆ ಎರಡು ವರ್ಷ ತೆಗೆದುಕೊಂಡರು. ಟಿಕೆಟ್ ಕೂಡ ಕೊಡಲಿಲ್ಲ. ಪಾಪ ರಾಮಸ್ವಾಮಿ ಅವರ ಬಗ್ಗೆ ಗೌರವವಿದೆ. ಕಾಂಗ್ರೆಸ್ ಅವರ ಸಂಸ್ಕೃತಿ ದೇವೇಗೌಡನ್ನೇ ಬಿಡಲಿಲ್ಲ. 15 ವರ್ಷದ್ದು ನನ್ನದೊಂದು ಸಾಕಿದ ಗಿಣಿ ಇತ್ತು. ನಾನು ಸಾಕಿದ್ದೆ ಆ ಗಿಣಿಯಾ, ಒಂದು ಸ್ವಲ್ಪ ದುಡ್ಡು ಐತೆ, ಈ ಬಾರಿ ಗೆಲ್ಲುತ್ತದೆ ಅಂತಾ ಕಾಂಗ್ರೆಸ್‌ನವರು ಕರ್ಕೊಂಡು ಹೋಗಿದ್ದಾರೆ. ಆ ಸಾಕಿದ ಗಿಣಿನಾ ಬೋನಿಗೆ ಬಿಡಬೇಕು ಎಂದರು.

ಬಜರಂಗದಳ ಬ್ಯಾನ್: ಡ್ಯಾಮೇಜ್‌ ಕಂಟ್ರೋಲ್‌ಗೆ ಮುಂದಾದ ಕಾಂಗ್ರೆಸ್‌ ನಾಯಕರು!

ಯೋಗ್ಯತೆ ಇಲ್ಲದವನನ್ನ ಜಿಪಂ ಮೆಂಬರ್‌ ಮಾಡಿದೆ: ನಾನು ಸಾಕಿದ ಗಿಣಿ ನನ್ನಿಂದ ದೂರ ಹೋದ ಮೇಲೆ ಅದನ್ನು ಈಚೆಗೆ ಬಿಡಬಾರದು ಅಂತ ದೇವರೇ ನಮ್ಮ ಹತ್ರ ಸಂತೋಷ್ ಅವರನ್ನು ಕಳುಹಿಸಿದ್ದಾನೆ. ನಾನು ಸಾಕಿದ ಗಿಣಿಗೆ ಬಲೆ ಬೀಸಿ ಕಾಂಗ್ರೆಸ್‌ಬವರು ಇಟ್ಕಂಡಿದ್ದಾರೆ. ಜನರೇ ಆ ಗಿಣಿಯನ್ನ ಹದ್ದಾಗಿ ಕುಕ್ಕುತ್ತಾರೆ. ಆದರೆ, ನಾನು ಸಾಕಿದ ಗಿಣಿಯನ್ನೇ ಕುಕ್ಕುವಷ್ಟು ಶಕ್ತಿ ಇಲ್ಲಾ. ಪಾಪ ಅವರು (ಶಿವಲಿಂಗೇಗೌಡ) ಹೇಳ್ತಾರೆ. ಜೆಡಿಎಸ್‌ಗೆ 13 ಸಾವಿರ ಓಟು ಅಷ್ಟೇ ಇದ್ದದ್ದು, ನಾನು ಬಂದಮೇಲೆ ಜಾಸ್ತಿ ಆಯ್ತು ಅಂತ. ಅವರಿಗೆ ನೈತಿಕತೆ ಇದ್ದರೆ ಕಾಂಗ್ರೆಸ್ ಬಿಟ್ಟು ನಿಲ್ಲಲಿ. ಎಷ್ಟು ಓಟು ತಗೊತರೆ ನೋಡೋಣ. ಒಬ್ಬ ಗ್ರಾಮ ಪಂಚಾಯಿತಿ ಮೆಂಬರ್ ಆಗಲು ಯೋಗ್ಯತೆ ಇಲ್ಲದವನನ್ನು ಜಿಲ್ಲಾ ಪಂಚಾಯಿತಿ ಮೆಂಬರ್ ಮಾಡಿದೆ ಎಂದು ಕಿಡಿಕಾರಿದರು.

ಮೋದಿ, ಅಮಿತ್‌ ಶಾ ಬಂದು ಬೂತ್‌ ಪೋಲಿಂಗ್‌ ನೋಡಲಿ:  ಪ್ರಧಾನಮಂತ್ರಿ ನರೇಂದ್ರಮೋದಿ ಹಾಗೂ ಅಮಿತ್ ಷಾ ಕರ್ನಾಟಕದಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಆದರೆ, ಅವರೇ ಬಂದು ದೇವೇಗೌಡರ ಜೊತೆ ಪೊಲೀಂಗ್ ಬೂತ್‌ನು ನೋಡಿಕೊಳ್ಳಲಿ. ಎಲ್ಲಾ ಬೂತ್‌ಗಳನ್ನು ಪರಿಶೀಲನೆ ಮಾಡಲಿ. ನಾನು ಬೇಡ ಅಂತ ಹೇಳಲ್ಲ, ಮೋದಿ, ಷಾ ಅವರ ಬಗ್ಗೆ ಗೌರವವಿದೆ. ಇವರು ಮಾಡಿರುವ ಪರ್ಸೆಂಟ್‌ಜಾದರೂ ತೆಗಿಬೇಕಲ್ಲ. ಹಾಸನ ಜಿಲ್ಲೆಯ, ಹಾಸನ ವಿಧಾನಸಭಾ ಕ್ಷೇತ್ರದ ಮತದಾರ ಬಂಧುಗಳಲ್ಲಿ ವಿನಂತಿ ಮಾಡುತ್ತೇನೆ. ದೇವೇಗೌಡರು, ಕುಮಾರಸ್ವಾಮಿ ಶಿಕ್ಷಣ ಕ್ಷೇತ್ರಕ್ಕೆ ಒತ್ತು ಕೊಟ್ಟಿದ್ದಾರೆ. ಹಾಸನ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಲಾಗಿದೆ. ದೇವೇಗೌಡರ ಮಾರ್ಗದರ್ಶನದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ಆಗಿದೆ. ಗ್ರಾಮೀಣ ಪ್ರದೇಶ, ನಗರ ಪ್ರದೇಶದ ಜನರಿಗೆ ಒಳ್ಳೆಯ ಶಿಕ್ಷಣ ನೀಡಬೇಕು ಅಂತ ಹೋರಾಟ ಮಾಡಿದ್ದೇವೆ. ಎರಡು ರಾಷ್ಟ್ರೀಯ ಪಕ್ಷಗಳು ಶಿಕ್ಷಣವನ್ನು ವ್ಯಾಪಾರಿ ಸಂಸ್ಥೆ ಮಾಡಿಕೊಂಡಿದ್ದಾರೆ ಎಂದು ಹೇಳಿದರು.

ರೋಡ್‌ ಮಾಡೋ ಹೆಸರಲ್ಲಿ ಲೂಟಿ ಹೊಡಿತಿದಾರೆ: ಹಾಸನ ಜಿಲ್ಲೆಯಲ್ಲಿ ಗಲ್ಲಿ ಗಲ್ಲಿ ರಸ್ತೆ ಆಗಿವೆ ಅಂತಾರೆ ಕೆಲವರು. ಗಲ್ಲಿ ರಸ್ತೆ ಮಾಡೋದು ದೊಡ್ದಾ ಇವತ್ತು. ಯಾವುತ್ತಾದರೂ ನಾನು ಹೇಳ್ಕಂಡಿದಿನಾ. ವರ್ಕ್ ಆರ್ಡರ್ ಆಗಿರುವದನ್ನು ತಡೆ ಹಿಡಿಯುವುದೇ ಇವರ ಸಾಧನೆ ಆಗಿದೆ. ಆರ್‌ಟಿ ಕಾಲೇಜು ಕೊಟ್ಟಿದ್ದನ್ನು ಕಿತ್ಕಂಡಿದ್ದು ಯಾರು? ಪಾಪ ಇಲ್ಲಿನ ಸ್ಥಳೀಯ ಶಾಸಕ ಉಸಿರೇ ಬಿಡಲಿಲ್ಲ. ಏನ್ಮಾಡಿದ್ದೀನಿ ಅನ್ನೋದನ್ನ ತೆಗೆದು ನೋಡಲಿ. ರೋಡ್‌ಗೆ ಇವತ್ತು ಟಾರು ಹಾಕೋದು ಬೆಳಿಗ್ಗೆ ಕಿತ್ತೋಗೊದು. ಇಂಜಿನಿಯರ್‌ಗಳು, ಕಂಟ್ರಾಕ್ಟರ್ ಸೇರಿ ಲೂಟಿ ಹೊಡೆಯುವ ಕಾಮಗಾರಿ ಮಾಡುತ್ತಿದ್ದಾರೆ. ನಾವು ಈ ರೀತಿಯ ಕಾಮಗಾರಿ ನಡೆಸಿದ್ರೆ ತನಿಖೆ ನಡೆಸಿ ಕ್ರಮ ತಗೊಳಿ. ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಕಿಡಿಕಾರಿದರು.

ಖರ್ಗೆಗೆ 80 ವರ್ಷವಾಗಿದೆ, ಯಾವಾಗ ಬೇಕಾದ್ರೂ ಮೇಲೆ ಹೋಗಬಹುದು

ರಸ್ತೆಗೆ ಜಾಗ ಹೋಗಿದೆ ಎಂದವನನ್ನ ರೌಡಿಶೀಟರ್‌ ಮಾಡಿದ್ರು: ಒಬ್ಬ ಹುಡುಗ ವಲ್ಲಭಾಯಿ ರೋಡ್ ಜಾಗವನ್ನು ಅವನದ್ದು ಅಂತ ಕೇಸ್ ಇದೆ. ಅವನ ಮೇಲೆ ಗ್ರೇಟ್ ಡಿವೈಎಸ್‌ಪಿ, ಗ್ರೇಟ್ ಸರ್ಕಲ್ ಇನ್ಸ್‌ಪೆಕ್ಟರ್ ರೌಡಿ ಶೀಟರ್ ಓಪನ್ ಮಾಡಿದ್ದಾರೆ.  ಮೂರು ತಿಂಗಳ ಹಿಂದೆ ರೌಡಿಶೀಟರ್ ಓಪನ್ ಮಾಡಿ ಗಡಿಪಾರು ಮಾಡಿದ್ದಾರೆ. ಸ್ವರೂಪ್ ಪರವಾಗಿ ಓಟು ಹಾಕುಸ್ತನೆ ಅಂತ ಗಡಿಪಾರು ಮಾಡಿದ್ದಾರೆ. ಗಡಿಪಾರು ಮಾಡಲು ಅವನು ಇಲ್ಲಿ ಮರ್ಡರ್ ಮಾಡಲು ಹೋಗಿದ್ನಾ.? ಎಲೆಕ್ಷನ್ ಇದ್ದಾಗ ಗಡಿಪಾರುವ ಮಾಡುವ ಅವಶ್ಯಕತೆ ಏನಿತ್ತು. ರೌಡಿಗಳ ತಾಣದ ಅಧಿಕಾರಿ ದಿ ಗ್ರೇಟ್ ಉದಯ್‌ಭಾಸ್ಕರ್. ಅವನು ಯಾರನ್ನು ಬೇಕಾದ್ರು ಮರ್ಡರ್ ಮಾಡ್ಸೋನು. ಹೋಗಿ ಮರ್ಡರ್ ಮಾಡ್ಕೊ ಬನ್ನಿ ನಾನು ಬೇಲ್ ಕೊಡುಸ್ತಿನಿ ಅನ್ನೋನು. ಇಡೀ ಅಧಿಕಾರಿಗಳೆಲ್ಲಾ ಸೇರಿ ರಜೆ ಮೇಲೆ ಕಳ್ಸಿದ್ದಾರೆ. ಅವನನ್ನು ಉಳಿಸಲು ಸ್ಥಳೀಯ ಶಾಸಕರು ಬಹಳ ಪ್ರಯತ್ನಪಟ್ಟರು ಎಂದು ಶಾಸಕ ಪ್ರೀತಂಗೌಡ ವಿರುದ್ಧ ಆರೋಪ ಮಾಡಿದರು.

ಹಾಸನಕ್ಕೆ ಬಿಜೆಪಿ ಕೊಡುಗೆ 60 ಬಾರ್‌ಗಳು:  ಸ್ವರೂಪ್ ಕಡೆಯವರು ನಿಂತ್ಕಂಡ್ರೆ ಓಡಾಡುಸ್ತಾನೆ. ಇಂತಹ ಕೆಲಸ ದೇವೇಗೌಡರು, ರೇವಣ್ಣ, ಕುಮಾರಸ್ವಾಮಿ ಮಾಡಿದ್ದರಾ? ಹಾಸನ ನಗರಕ್ಕೆ ಬಿಜೆಪಿ ಅವರ ಕೊಡುಗೆ 60 ಬ್ರಾಂಡಿ ಶಾಪ್. ಕುಡ್ಕಂಡು ಇರಿ ಅಂತ ಕೊಡುಗೆ ಕೊಟ್ಟಿದ್ದಾರೆ. ಮೋದಿಯವರೇ ನಿಮ್ಮ ಪಕ್ಷದ ಕೊಡುಗೆ ಸಿಎಲ್ 7. ಮನೆ ಒಳಗಡೆ ಇದ್ದವರು ಎದ್ದು ಇಂತಹ ಶಕ್ತಿಗಳನ್ನು ದಮನ ಮಾಡಲು ಹೊರಗೆ ಬಂದಿದ್ದಾರೆ ಎಂದು ಶಾಸಕ ಪ್ರೀತಂಗೌಡ ವಿರುದ್ಧ ಎಚ್.ಡಿ.ರೇವಣ್ಣ ಆಕ್ರೋಶ ವ್ಯಕ್ತಪಡಿಸಿದರು.

click me!