ಶಕ್ತಿ ಯೋಜನೆಯನ್ನು ರಾಜ್ಯ ಸರ್ಕಾರ ಕೇವಲ ಮಹಿಳೆಯರಿಗೆ ಮಾತ್ರ ಮಾಡಿದ್ದರಿಂದ ಮನೆಯಲ್ಲಿ ಸಮಸ್ಯೆಯಾಗುತ್ತಿದೆ. ದೇವಸ್ಥಾನ ಸೇರಿದಂತೆ ಮೊದಲಾದ ಕಡೆ ಮಹಿಳೆಯರು ಮಾತ್ರ ಹೋಗುವಂತೆ ಆಗಿದ್ದು, ಇದರಿಂದ ಸಂಸಾರದಲ್ಲಿ ಸಮಸ್ಯೆಯಾಗುತ್ತಿದೆ.
ಕೊಪ್ಪಳ (ಜು.15): ಶಕ್ತಿ ಯೋಜನೆಯನ್ನು ರಾಜ್ಯ ಸರ್ಕಾರ ಕೇವಲ ಮಹಿಳೆಯರಿಗೆ ಮಾತ್ರ ಮಾಡಿದ್ದರಿಂದ ಮನೆಯಲ್ಲಿ ಸಮಸ್ಯೆಯಾಗುತ್ತಿದೆ. ದೇವಸ್ಥಾನ ಸೇರಿದಂತೆ ಮೊದಲಾದ ಕಡೆ ಮಹಿಳೆಯರು ಮಾತ್ರ ಹೋಗುವಂತೆ ಆಗಿದ್ದು, ಇದರಿಂದ ಸಂಸಾರದಲ್ಲಿ ಸಮಸ್ಯೆಯಾಗುತ್ತಿದೆ. ಇದನ್ನೇ ಪುರುಷ ಮತ್ತು ಮಹಿಳೆಯರಿಗೆ ಅರ್ಧ ಟಿಕೆಟ್ ಮಾಡಿದ್ದರೂ ಅನುಕೂಲವಾಗುತ್ತಿದ್ದು, ಪತಿ, ಪತ್ನಿಯರಿಬ್ಬರು ಸೇರಿ ಪ್ರವಾಸ ಮಾಡುತ್ತಿದ್ದರು ಎಂದು ಸಂಸದ ಸಂಗಣ್ಣ ಕರಡಿ ಹೇಳಿದ್ದಾರೆ. ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಕ್ತಿ ಯೋಜನೆಯಿಂದ ಮನೆಯಲ್ಲಿ ಸಮಸ್ಯೆಯಾಗುತ್ತಿದೆ. ಕೇವಲ ಮಹಿಳೆಯರಿಗೆ ಮಾತ್ರ ಯಾಕೆ ಕೊಡಬೇಕು, ಇಬ್ಬರಿಗೂ ಕೊಟ್ಟಿದ್ದರೇ ಅನುಕೂಲವಾಗುತ್ತಿತ್ತು. ಇಲ್ಲವೇ ಇಬ್ಬರಿಗೂ ಅರ್ಧ ಚಾರ್ಜ್ ನಿಗದಿ ಮಾಡಿದ್ದರೂ ಅನುಕೂಲವಾಗುತ್ತಿತ್ತು ಎಂದು ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ಶ್ರೀನಾಥ ಅರಿತು ಮಾತನಾಡಬೇಕಿತ್ತು: ವಿಪ ಮಾಜಿ ಸದಸ್ಯ ಎಚ್.ಆರ್. ಶ್ರೀನಾಥ ಅರಿತು ಮಾತನಾಡಬೇಕಿತ್ತು. ಹಾಗೆಲ್ಲ ಏಕಾಏಕಿ ಮಾತನಾಡುವುದು ಸರಿಯಲ್ಲ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ಬಸವರಾಜ ರಾಯರಡ್ಡಿ ಪೊಲೀಸ್ ಇಲಾಖೆಯ ದಾಖಲೆಯನ್ನಾಧರಿಸಿ ಮಾಹಿತಿ ಪಡೆದು ಹೇಳಿದ್ದಾರೆ. ಈ ಹಿಂದೆ ಆನೆಗೊಂದಿ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಅಕ್ರಮಗಳ ಕುರಿತು ಮಾತನಾಡಿದ್ದಾರೆ. ಆದರೆ, ಅವರೆಲ್ಲಿಯೂ ರೆಸಾರ್ಚ್ ಕುರಿತು ಮಾತನಾಡಿಲ್ಲ ಎಂದರು.
undefined
ಕಳಪೆ ಬಿತ್ತನೆ ಬೀಜ ಮಾರಿದರೆ ಪರವಾನಗಿ ರದ್ದು: ಚಲುವರಾಯಸ್ವಾಮಿ
ರಾಯರಡ್ಡಿ ಡ್ರಗ್ಸ್ ಹಬ್ ಎಂದಿರುವ ಕುರಿತು ನನಗೆ ಮಾಹಿತಿ ಇಲ್ಲ. ಅದನ್ನು ಅವರನ್ನೇ ಕೇಳಿ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಆದರೆ, ಇದಕ್ಕಿಂತ ಮಿಗಿಲಾಗಿ ಅಲ್ಲಿ ಅಭಿವೃದ್ಧಿಯಾಗಬೇಕಾಗಿದೆ. ಸ್ಥಳೀಯ ನಾಯಕರು ಎಲ್ಲರೂ ಸೇರಿಕೊಂಡು ಆನೆಗೊಂದಿ, ಅಂಜನಾದ್ರಿ ಭಾಗದ ಅಭಿವೃದ್ಧಿಗೆ ಶ್ರಮಿಸಬೇಕಾಗಿದೆ ಎಂದರು. ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಏನು ಹೇಳಿದ್ದಾರೋ ನನಗೆ ಗೊತ್ತಿಲ್ಲ. ಹೀಗಾಗಿ, ನಾನು ಆ ಕುರಿತು ಏನೂ ಹೇಳುವುದಿಲ್ಲ ಎಂದರು. ಅಂಜನಾದ್ರಿಯನ್ನು ಈ ಹಿಂದಿನ ಸರ್ಕಾರ ಅಭಿವೃದ್ಧಿ ಮಾಡಿಲ್ಲ ಎನ್ನುವುದು ಸರಿಯಲ್ಲ.
ಈ ಹಿಂದೆ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಬಿಡುಗಡೆಯಾಗಿದ್ದ 20 ಕೋಟಿ ಯೋಜನೆಯ ಕಾಮಗಾರಿಯ ಟೆಂಡರ್ ಆಗಿದೆ. ಭೂಸ್ವಾಧೀನ ಸಮಸ್ಯೆಯಾಗಿ ವಿಳಂಬವಾಗಿದೆ. ಇನ್ನು ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿದ್ದಾಗ ಬಿಡುಗಡೆಯಾಗಿದ್ದ 100 ಕೋಟಿ ಯೋಜನೆಗೆ ಆಡಳಿತಾತ್ಮಕ ಮಂಜೂರಾತಿ ನೀಡಲಾಗಿದೆ. ಈಗ ಅದನ್ನು ಜಾರಿ ಮಾಡುವ ದಿಸೆಯಲ್ಲಿ ಪ್ರಯತ್ನಿಸಬೇಕು ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಎಸಿಬಿ ಆರಂಭ ಮಾಡಿದ್ದು ಸದುದ್ದೇಶದಿಂದ ಹೇಳಿರುವುದು ಸರಿಯಲ್ಲ. ಅಂದು ಬಲಿಷ್ಠ ಸಂಸ್ಥೆಯಾಗಿದ್ದ ಲೋಕಾಯುಕ್ತವನ್ನು ಮುಚ್ಚಿ, ಎಸಿಬಿ ರಚಿಸಿದರು. ಇದರಲ್ಲೇ ಏನು ಸದುದ್ದೇಶ ಇದೆ? ಎಂದರು.
ಸಿದ್ದರಾಮಯ್ಯಗೆ ಭ್ರಷ್ಟಾಚಾರದಲ್ಲಿ ಸಿಲುಕಿರುವ ಭಯ: ಬೊಮ್ಮಾಯಿ
ಸ್ವಾಮಿ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆ ರಸ್ತೆಯ ರೈಲ್ವೆ ಹಳಿಯ ಕೆಳಸೇತುವೆ ಕಾಮಗಾರಿ ಬಹುತೇಕ ಮುಗಿದಿದೆ. ಆದರೆ, ರಾಜ್ಯ ಸರ್ಕಾರ ರಸ್ತೆ ಅಗಲೀಕರಣಕ್ಕಾಗಿ ನೀಡಬೇಕಾಗಿರುವ .1.60 ಕೋಟಿ ನೀಡದಿರುವುದರಿಂದ ನನೆಗುದಿಗೆ ಬಿದ್ದಿದೆ. ಈ ಹಿಂದಿನ ಸರ್ಕಾರವೇ ಮಾಡಬೇಕಾಗಿತ್ತು, ಆಗಿಲ್ಲ. ಈಗಿನ ಸರ್ಕಾರದಲ್ಲಿಯಾದರೂ ಹಾಲಿ ಶಾಸಕರು ಮಾಡಲಿ ಎಂದರು.