ಸಿದ್ದರಾಮಯ್ಯ ಸದನದಲ್ಲಿ ಉತ್ತರಿಸಿದ್ದರೆ ಪಾದಯಾತ್ರೆ ಬಗ್ಗೆ ಮರು ಯೋಚಿಸುತ್ತಿದ್ದೆವು: ಆರ್‌.ಅಶೋಕ್‌

By Kannadaprabha NewsFirst Published Aug 11, 2024, 10:57 PM IST
Highlights

ನಾನು ಕ್ಲೀನ್, ಕ್ಲೀನ್, ಕ್ಲೀನ್ ಅಂತ ಹೇಳುವ ಸಿದ್ದರಾಮಯ್ಯ ಅವರು ನಮ್ಮ ಪ್ರಶ್ನೆಗೆ ವಿಧಾನಸಭೆಯಲ್ಲಿ ಉತ್ತರಿಸಿದ್ದರೆ ಪಾದಯಾತ್ರೆ ಮಾಡುವುದೋ ಬೇಡವೋ ಯೋಚಿಸುತ್ತಿದ್ದೇವು ಎಂದು ಪ್ರತಿಪಕ್ಷ ನಾಯಕ ಆರ್‌. ಅಶೋಕ್‌ ಹೇಳಿದರು. 

ಮೈಸೂರು (ಆ.11): ನಾನು ಕ್ಲೀನ್, ಕ್ಲೀನ್, ಕ್ಲೀನ್ ಅಂತ ಹೇಳುವ ಸಿದ್ದರಾಮಯ್ಯ ಅವರು ನಮ್ಮ ಪ್ರಶ್ನೆಗೆ ವಿಧಾನಸಭೆಯಲ್ಲಿ ಉತ್ತರಿಸಿದ್ದರೆ ಪಾದಯಾತ್ರೆ ಮಾಡುವುದೋ ಬೇಡವೋ ಯೋಚಿಸುತ್ತಿದ್ದೇವು ಎಂದು ಪ್ರತಿಪಕ್ಷ ನಾಯಕ ಆರ್‌. ಅಶೋಕ್‌ ಹೇಳಿದರು. ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಮೈಸೂರು ಚಲೋ ಸಮಾರೋಪದಲ್ಲಿ ಮಾತನಾಡಿದ ಅವರು, ಈಗ ಬಿಜೆಪಿ ಮತ್ತು ಜೆಡಿಎಸ್‌ ಕೈಗೊಂಡಿದ್ದ ಪಾದಯಾತ್ರೆಯು ಭ್ರಷ್ಟಾಚಾರದ ವಿರುದ್ಧದ ದಂಡಯಾತ್ರೆ. ಹರಿಸಿಣ ಕುಂಕುಮ ಹೆಸರಲ್ಲಿ ಮೂರ್ನಾಲ್ಕು ಸಾವಿರ ಕೋಟಿ ಲೂಟಿ ಹೊಡೆದದ್ದು ಜನರಿಗೆ ತಲುಪಬೇಕು ಎಂದರು.

ಎಂಡಿಎಗೆ ನಿವೇಶನಕ್ಕಾಗಿ ಸುಮಾರು 80 ಸಾವಿರ ಮಂದಿ ಅರ್ಜಿ ಸಲ್ಲಿಸಿದ್ದಾರೆ. ಅವರಿಗೆ ನ್ಯಾಯ ಸಿಗಬೇಕು. ನಿಮ್ಮ ಕಾಂಗ್ರೆಸ್‌ ಸರ್ಕಾರದಲ್ಲಿ ಪ್ರಾಮಾಣಿಕ ಅಧಿಕಾರಿಗಳಿಗೆ ಸಾವು, ದಲಿತರಿಗೆ ಅನ್ಯಾಯ ಫ್ರೀ. ಕಾಂಗ್ರೆಸ್ ಕಾರ್ಯಕರ್ತರಿಗೆ ಭತ್ಯೆ ಫ್ರೀ. ಪಕ್ಷದ ಕಾರ್ಯಕರ್ತರಿಗೆ ಸಂಬಳ ಕೊಡಲಾಗುತ್ತಿದೆ. ನೀವು ರಾಜೀನಾಮೆ ಕೊಡುವ ತನಕ ನಾವು ವಿರಮಿಸುವುದಿಲ್ಲ ಎಂದರು. ದಲಿತರ ಜಮೀನನ್ನು ಮೊದಲು ಖರೀಸಿದ್ದು ಕೇವಲ ಒಂದು ರೂಪಾಯಿಗೆ. ಇವರ ಬಾಮೈದ 5 ಲಕ್ಷಕ್ಕೆ ಬರೆಸಿಕೊಂಡರು. 

Latest Videos

ಸಿದ್ದರಾಮಯ್ಯ ಅವರೇ ನಿಮ್ಮನ್ನು ಮನೆಗೆ ಕಳುಹಿಸುವವರೆಗೂ ವಿರಮಿಸುವುದಿಲ್ಲ: ಯಡಿಯೂರಪ್ಪ ಸವಾಲು

ಈಗ ಸಿದ್ದರಾಮಯ್ಯ ಅವರ ಪತ್ನಿಗೆ ಉಡುಗೊರೆಯಾಗಿ ನೀಡಲಾಗಿದೆ. ಅದಕ್ಕೆ ಸಿದ್ದರಾಮಯ್ಯ ಅವರು 62 ಕೋ ಕೇಳುತ್ತಿದ್ದಾರೆ. ಇದನ್ನು ಜನ ಮೆಚ್ಚುತ್ತಾರೆಯೇ ಎಂದು ಅವರು ಪ್ರಶ್ನಿಸಿದರು. ಪಿ. ಚಂದ್ರಶೇಖರ್‌ ಒಬ್ಬ ನಿಷ್ಠಾವಂತ ಅಧಿಕಾರಿ. ಅವರು ನಿಧನದಿಂದ 175 ಕೋಟಿ ನುಂಗಿರುವುದು ಬೆಳಕಿಗೆ ಬಂತು. ಎಸ್‌ಐ ಪರಶುರಾಮ್‌ ವರ್ಗಾವಣೆಗೆ 20 ಕೋಟಿ ಕೇಳಲಾಯಿತು. ಹೀಗೆ ಪ್ರಾಮಾಣಿಕ ಅಧಿಕಾರಿಗಳಿಗೆ ಚಿತ್ರಹಿಂಸೆ ನೀಡಲಾಗುತ್ತದೆ. ಈ ಸರ್ಕಾರದಲ್ಲಿ ಪ್ರಾಮಾಣಿಕ ಅಧಿಕಾರಿಗಳಿಗೆ ನೇಣು ಇಲ್ಲವೇ ರಾಜೀನಾಮೆ ನೀಡುವುದೇ ಗತಿ ಎಂದು ಅವರು ಹೇಳಿದರು.

ಪಾದಯಾತ್ರೆಗೆ ಹೋರಾಟ ಮುಗಿದಿಲ್ಲ: ಅಧಿಕಾರದಲ್ಲಿದ್ದುಕೊಂಡೇ ತನ್ನ ಮೇಲಿನ ಹಗರಣದ ಆರೋಪಕ್ಕೆ ಜನಾಂದೋಲನ ಸಮಾವೇಶದ ಮೂಲಕ ಉತ್ತರ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಮತ್ತು ಕಾಂಗ್ರೆಸ್‌ ಪಕ್ಷಕ್ಕೆ ಮೈಸೂರು ಚಲೋ ಹೆಸರಿನಲ್ಲಿ ಪಾದಯಾತ್ರೆ ನಡೆಸಿದ ಬಿಜೆಪಿ- ಜೆಡಿಎಸ್‌ಮೈತ್ರಿ ಪಕ್ಷಗಳ ನಾಯಕರು ಹೋರಾಟ ಮತ್ತಷ್ಟು ತೀವ್ರಗೊಳ್ಳಲಿದೆ ಎಂಬ ಸಂದೇಶ ನೀಡುವ ಮೂಲಕ ತೀಷ್ಣವಾಗಿ ಪ್ರತಿಕ್ರಿಯಿಸಿದರು.

ಕಾಂಗ್ರೆಸ್ ಹಿಡಿತದಿಂದ ದಲಿತರು, ಸಂವಿಧಾನ ರಕ್ಷಿಸಬೇಕು: ಮಾಜಿ ಸಚಿವ ಮಹೇಶ್

ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಮೈಸೂರು ಚಲೋ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ, ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಪಕ್ಷ ನಾಯಕ ಆರ್‌. ಅಶೋಕ್‌ ಮೊದಲಾದವರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು. ನಮ್ಮ ಹೋರಾಟ ಈ ಪಾದಯಾತ್ರೆಗೆ ಮುಕ್ತಯವಾಗಲ್ಲ, ತಾವು ರಾಜೀನಾಮೆ ನೀಡದಿದ್ದರೆ ಇದು ಮತ್ತಷ್ಟು ತೀವ್ರಗೊಳ್ಳಲಿದ್ದು, ಕಾನೂನಾತ್ಮಕವಾಗಿಯೂ ಹೆಜ್ಜೆ ಇಡುವುದಾಗಿ ಎಚ್ಚರಿಸಿದರು.

click me!