ಕಾಂಗ್ರೆಸ್ ಹಿಡಿತದಿಂದ ದಲಿತರು, ಸಂವಿಧಾನ, ಪ್ರಜಾಪ್ರಭುತ್ವವನ್ನು ರಕ್ಷಿಸಬೇಕಿದೆ ಎಂದು ಮಾಜಿ ಸಚಿವ ಎನ್.ಮಹೇಶ್ ಕಿಡಿಕಾರಿದರು. ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಮೈಸೂರು ಚಲೋ ಸಮಾರೋಪದಲ್ಲಿ ಮಾತನಾಡಿದರು.
ಮೈಸೂರು (ಆ.11): ಕಾಂಗ್ರೆಸ್ ಹಿಡಿತದಿಂದ ದಲಿತರು, ಸಂವಿಧಾನ, ಪ್ರಜಾಪ್ರಭುತ್ವವನ್ನು ರಕ್ಷಿಸಬೇಕಿದೆ ಎಂದು ಮಾಜಿ ಸಚಿವ ಎನ್.ಮಹೇಶ್ ಕಿಡಿಕಾರಿದರು. ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಮೈಸೂರು ಚಲೋ ಸಮಾರೋಪದಲ್ಲಿ ಮಾತನಾಡಿದ ಅವರು, ದಲಿತರ ಜಮೀನನ್ನು ಅಕ್ರಮವಾಗಿ ಖರೀದಿಸಿದ್ದು ದಲಿತ ವಿರೋಧಿ ಅಲ್ಲವೆ?. ಈಗ ಅದು ನಮ್ಮ ಕುಟುಂಬದ್ದು ಎಂದು ಹೇಗೆ ಕ್ಲೈಮ್ ಮಾಡುತ್ತೀರಾ? ಎಂದು ಪ್ರಶ್ನಿಸಿದರು.
ಎಸ್.ಇ.ಪಿ, ಟಿ.ಎಸ್.ಪಿ ಹಣವನ್ನು ನಿಮ್ಮ ಗ್ಯಾರಂಟಿ ಯೋಜನೆಗೆ ಬಳಿಸಿಕೊಂಡಿದ್ದು ದಲಿತ ವಿರೋಧಿ ಅಲ್ಲವೇ? ನೀವು ಸಂವಿಧಾನ ಮತ್ತು ದಲಿತರ ಬಗ್ಗೆ ಮಾತನಾಡುತ್ತೀರಿ. ಎಂಡಿಎ ಹಗರಣ ಕುರಿತು ಸದನದಲ್ಲಿ ಚರ್ಚಿಸಲು ನಿಲುವಳಿ ಮಂಡಿಸಿದರೆ, ಚರ್ಚೆಗೆ ಅವಕಾಶ ನೀಡದೆ ಹೊರ ಹೋಗುವುದು ಸರಿಯೇ? ಪ್ರಜಾಪ್ರಭುತ್ವದಲ್ಲಿ ಚರ್ಚೆಗೆ ಅವಕಾಶವೇ ಇಲ್ಲವೇ? ಇದು ನಿಮ್ಮ ಹೊಣೆಗೇಡಿತನ ತೋರಿಸುವುದಿಲ್ಲವೇ. ನೀವು ಹೊಣೆಗೇಡಿ ಈಡಿಯಟ್ಸ್ ಎಂದು ಜರಿದರು.
ವಿರೋಧ ಪಕ್ಷ ಎಂದರೆ ಏನು ಗೊತ್ತಾ? ವಿಪಕ್ಷಗಳು ಜನರ ಧ್ವನಿ. ಸರ್ಕಾರದ ಧ್ವನಿ ಉತ್ತಮ ಆಡಳಿತ ನೀಡುವುದು. ಅದು ಬಿಟ್ಟು ದಲಿತರಿಗೆ ಅನ್ಯಾಯ ಮಾಡಿದ್ದೀರಾ? ನೀವು ಮಾಡಿಲ್ಲವ್ವಾ? ನೀವು ಭ್ರಷ್ಟಾಚಾರ ಮಾಡಿಲ್ವಾ. ಇದನ್ನು ಪ್ರಶ್ನಿಸಿದರೆ ನೀವು ಮಾಡಿಲ್ವಾ ಅಂತಾರೆ. ಇದಕ್ಕೆ ಕೊಳ್ಳೆಗಾಲದ ಕಡೆ ಕಿತ್ಲು ಅಂತಾರೆ ಎಂದರು. ನಾವು ಹಾಕಿರುವ ಪ್ಲೆಕ್ಸ್ ಮಧ್ಯೆ ತಮ್ಮ ಫ್ಲೆಕ್ಸ್ ಹಾಕುವುದು ಇಂತಹ ಕೇಡಿತನ, ಕಿತ್ತಲು ತನ ಕಾಂಗ್ರೆಸ್ ರಕ್ತದಲ್ಲಿದೆ.
ಮುಸ್ಲಿಂ ಯುವಕರ ಕೈಯಲ್ಲಿ ನನ್ನ ಹತ್ಯೆ ಮಾಡಲು ಸ್ಕೆಚ್ ಹಾಕಿದ್ದಾರೆ: ಕಾಂಗ್ರೆಸ್ ಮುಖಂಡ ಇಸ್ಮಾಯಿಲ್ ತಮಟಗಾರ
ನೀವು ಅಧಿಕಾರದಲ್ಲಿ ಇರಲು ಲಾಯಕ್ಕಾ? ಅಧಿಕಾರಕ್ಕೆ ಬಂದರೆ ಡಿ.ಕೆ. ಶಿವಕುಮಾರ್ ಅವರನ್ನು ಜೈಲಿಗೆ ಹಾಕುತ್ತೆನೆ ಎಂದಿದ್ದವರು, ಈಗ ಜೋಡೆತ್ತಂತೆ. ಕೆಲವೇ ದಿನದಲ್ಲಿ ಎತ್ತುಗಳು ಕಿತ್ತುಕೊಂಡು ಅತ್ಲಾಗೊಂದು, ಇತ್ಲಾಗೊಂದು ಹೋಗುತ್ತವೆ ನೋಡ್ತಾ ಇರಿ ಎಂದು ತಮ್ಮದೇ ದಾಟಿಯಲ್ಲಿ ಛೇಡಿಸಿದರು. ನಮ್ಮ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ. ಇವರ ಮಾತುಗಳಿಗೆ, ಗೋಸುಂಬೆ ತನಕ್ಕೆ ದಲಿತರು ಮರಳಾಗಬೇಡಿ. ಸ್ವಾತಂತ್ರ್ಯ ಪೂರ್ವದಲ್ಲೂ ಕಾಂಗ್ರೆಸ್ ದಲಿತ ವಿರೋಧಿ, ನಂತರವೂ ದಲಿತ ವಿರೋಧಿಯೇ ಎಂದು ಮೊದಲಿಸಿದರು.