ಸಿದ್ದರಾಮಯ್ಯ ಅವರೇ ನಿಮ್ಮನ್ನು ಮನೆಗೆ ಕಳುಹಿಸುವವರೆಗೂ ವಿರಮಿಸುವುದಿಲ್ಲ: ಯಡಿಯೂರಪ್ಪ ಸವಾಲು

By Kannadaprabha News  |  First Published Aug 11, 2024, 9:50 PM IST

ನನ್ನ ರಾಜಕೀಯ ನಿವೃತ್ತಿ ಕೇಳಿರುವ ಸಿದ್ದರಾಮಯ್ಯ ಅವರೇ, ನನ್ನ ಉಸಿರು ಇರುವವರೆಗೂ ಹೋರಾಡುತ್ತೇನೆ. ನಿಮ್ಮನ್ನು ಮನೆಗೆ ಕಳುಹಿಸುವವರೆಗೆ ವಿರಮಿಸುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸವಾಲು ಹಾಕಿದರು.


ಮೈಸೂರು (ಆ.11): ನನ್ನ ರಾಜಕೀಯ ನಿವೃತ್ತಿ ಕೇಳಿರುವ ಸಿದ್ದರಾಮಯ್ಯ ಅವರೇ, ನನ್ನ ಉಸಿರು ಇರುವವರೆಗೂ ಹೋರಾಡುತ್ತೇನೆ. ನಿಮ್ಮನ್ನು ಮನೆಗೆ ಕಳುಹಿಸುವವರೆಗೆ ವಿರಮಿಸುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸವಾಲು ಹಾಕಿದರು. ಮಹಾರಾ ಕಾಲೇಜು ಮೈದಾನದಲ್ಲಿ ರಾಜ್ಯ ಬಿಜೆಪಿ ಆಯೋಜಿಸಿದ್ದ ಮೈಸೂರು ಚಲೋ ಸಮಾರೋಪದಲ್ಲಿ ಮಾತನಾಡಿದ ಅವರು, ತಾನು ಕಲ್ಲುಬಂಡೆ ಎಂದು ಹೇಳಿಕೊಳ್ಳುವ ಡಿ.ಕೆ. ಶಿವಕುಮಾರ್‌ ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ವಿಪಕ್ಷ ನಾಯಕರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. 

ಹಾಗೆ ಹಗುರ ಮಾತುಗಳನ್ನು ಆಡಬಾರದು. ಪಾಪದ ಕೊಡ ತುಂಬಿದೆ.  ಯಾವಾಗ ಏನಾಗುತ್ತದೆಯೋ ಗೊತ್ತಿಲ್ಲ. ನಿಮ್ಮ ಭವಿಷ್ಯದ ಬಗ್ಗೆ ಯೋಚಿಸಿ. ಉಳಿದ ವಿಷಯದ ಬೇಡ ಎಂದು ಕಿಡಿಕಾರಿದರು. ಯಾವುದಾದರೂ ಒಬ್ಬ ಸಿಎಂ ಇಷ್ಟೊಂದು ನಿವೇಶನಗಳನ್ನು ಪಡೆದ ಒಂದು ಉದಾಹರಣೆ ಕೊಡಿ. ತಮ್ಮ ಮೇಲೆ ಒಂದೂ ಕಪ್ಪು ಚುಕ್ಕೆ ಇಲ್ಲ ಎನ್ನುವ ಸಿದ್ದರಾಮಯ್ಯ ಅವರೇ ನೀವು ಎಲ್ಲಿ ನೋಡಿದರೂ ಕಪ್ಪು ಚುಕ್ಕೆಯೇ. ನಿಮ್ಮನ್ನು ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಮನೆಗೆ ಕಳುಹಿಸುತ್ತಾರೆ. 

Tap to resize

Latest Videos

ಕಾಂಗ್ರೆಸ್ ಹಿಡಿತದಿಂದ ದಲಿತರು, ಸಂವಿಧಾನ ರಕ್ಷಿಸಬೇಕು: ಮಾಜಿ ಸಚಿವ ಮಹೇಶ್

ನಿಮಗೆ ತಾಕತ್ತಿದ್ದರೆ ವಿಧಾನಸಭೆ ವಿಸರ್ಜಿಸಿ ಬನ್ನಿ, ಸೂರ್ಯಚಂದ್ರರು ಇರುವುದು ಎಷ್ಟು ಸತ್ಯವೋ, ನಾವು ಅಧಿಕಾರಕ್ಕೆ ಬರುವುದೂ ಅಷ್ಟೇ ಸತ್ಯ. ನಿಮ್ಮನ್ನು ಮನೆಗೆ ಕಳುಹಿಸುವ ತನಕ ನಾನು ಮನೆ ಸೇರುವುದಿಲ್ಲ ಎಂದರು. ಭ್ರಷ್ಟ ಮುಖ್ಯಮಂತ್ರಿ ವಿರುದ್ಧ ನಡೆಯುತ್ತಿರುವ ಐತಿಹಾಸಿಕ ಕಾರ್ಯಕ್ರಮ ಇದು. ನೀವು ಪ್ರಧಾನಿ ಮೋದಿ ಅವರ ಬಗ್ಗೆ ಹಗುರವಾಗಿ ಮಾತನಾಡುತ್ತೀರಿ. ಇದು ಶೋಭೆ ತರುವುದಿಲ್ಲ. ಸಂಸತ್‌ ನಲ್ಲಿ ದೇವೇಗೌಡರ ಮಾತು ಇಡೀ ದೇಶದ ಗಮನ ಸೆಳೆಯುತ್ತಿದೆ ಎಂದು ಹೇಳಿದರು.

ಪಾದಯಾತ್ರೆಗೆ ಹೋರಾಟ ಮುಗಿದಿಲ್ಲ: ಅಧಿಕಾರದಲ್ಲಿದ್ದುಕೊಂಡೇ ತನ್ನ ಮೇಲಿನ ಹಗರಣದ ಆರೋಪಕ್ಕೆ ಜನಾಂದೋಲನ ಸಮಾವೇಶದ ಮೂಲಕ ಉತ್ತರ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಮತ್ತು ಕಾಂಗ್ರೆಸ್‌ ಪಕ್ಷಕ್ಕೆ ಮೈಸೂರು ಚಲೋ ಹೆಸರಿನಲ್ಲಿ ಪಾದಯಾತ್ರೆ ನಡೆಸಿದ ಬಿಜೆಪಿ- ಜೆಡಿಎಸ್‌ಮೈತ್ರಿ ಪಕ್ಷಗಳ ನಾಯಕರು ಹೋರಾಟ ಮತ್ತಷ್ಟು ತೀವ್ರಗೊಳ್ಳಲಿದೆ ಎಂಬ ಸಂದೇಶ ನೀಡುವ ಮೂಲಕ ತೀಷ್ಣವಾಗಿ ಪ್ರತಿಕ್ರಿಯಿಸಿದರು.

ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಮೈಸೂರು ಚಲೋ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ, ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಪಕ್ಷ ನಾಯಕ ಆರ್‌. ಅಶೋಕ್‌ ಮೊದಲಾದವರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು. ನಮ್ಮ ಹೋರಾಟ ಈ ಪಾದಯಾತ್ರೆಗೆ ಮುಕ್ತಯವಾಗಲ್ಲ, ತಾವು ರಾಜೀನಾಮೆ ನೀಡದಿದ್ದರೆ ಇದು ಮತ್ತಷ್ಟು ತೀವ್ರಗೊಳ್ಳಲಿದ್ದು, ಕಾನೂನಾತ್ಮಕವಾಗಿಯೂ ಹೆಜ್ಜೆ ಇಡುವುದಾಗಿ ಎಚ್ಚರಿಸಿದರು.

ಕಾಫಿನಾಡಲ್ಲಿ ಮತ್ತೊಂದು ವಿವಾದದ ಕಿಚ್ಚು: ಕರ್ನಾಟಕದ ಅಯೋಧ್ಯೆ ದತ್ತಪೀಠದಲ್ಲೂ ಡ್ರೆಸ್ ಕೋಡ್ ತರುವಂತೆ ಮುಸ್ಲಿಮರಿಂದ ಒತ್ತಾಯ

ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್‌ ಇಬ್ಬರ ವಿರುದ್ಧವೂ ತೀಷ್ಣ ಪ್ರಶ್ನೆಗಳ ಮೂಲಕ ತರಾಟೆಗೆ ತೆಗೆದುಕೊಂಡ ಎಚ್‌.ಡಿ. ಕುಮಾರಸ್ವಾಮಿ ಅವರು ಡಿ.ಕೆ. ಶಿವಕುಮಾರ್‌ ವಿರುದ್ಧದ ಅನೇಕ ವೀಡಿಯೋ ತುಣುಕನ್ನು ಪ್ರದರ್ಶಿಸಿದರು. ಅಲ್ಲದೆ ಸಿದ್ದರಾಮಯ್ಯ ವಿರುದ್ಧ ಡಿ.ಕೆ. ಶಿವಕುಮಾರ್‌ ಅವರ ತಾಯಿ ನೀಡಿರುವ ಹೇಳಿಕೆಯ ವೀಡಿಯೋವನ್ನೂ ಪ್ರಸಾರ ಮಾಡಿ ತರಾಟೆಗೆ ತೆಗೆದುಕೊಂಡರು. ನನ್ನ ಮತ್ತು ಬಿ.ಎಸ್‌. ಯಡಿಯೂರಪ್ಪ ಅವರ ನಡುವಿನ ಬಾಂದವ್ಯ ಹಾಳು ಮಾಡುವ ಕೆಲಸ ಮಾಡಬೇಡಿ. ನಿಮ್ಮದೇನಿದೆ ನೋಡಿ ಎಂದು ವೀಡಿಯೋ ತುಣುಕುಗಳನ್ನು ಪ್ರಸಾರ ಮಾಡಿದರು.

click me!