Gujarat Election Result ನಿಜವಾಯ್ತು ಏಷ್ಯಾನೆಟ್ ನ್ಯೂಸ್ ಸಮೀಕ್ಷೆ, ಬಿಜೆಪಿ ಗೆಲುವು, ವೋಟ್‌ಶೇರ್, ಜಾತಿ ಬೆಂಬಲ ಭವಿಷ್ಯ ಪಕ್ಕಾ!

By Suvarna News  |  First Published Dec 8, 2022, 2:32 PM IST

ಗುಜರಾತ್ ಚುನಾವಣೆ ಫಲಿತಾಂಶ ಹೊರಬಿದ್ದಿದೆ. ಬಿಜೆಪಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಮತ್ತೆ ಅಧಿಕಾರಕ್ಕೆ ಬಂದಿದೆ. ಬಿಜೆಪಿ ಈ ಗೆಲುವು ಹಾಗೂ ಬಿಜೆಪಿ ಕೈಹಿಡಿಯುವ ಮತಗಳು, ಜಾತಿಗಳ ಕುರಿತು ಏಷ್ಯಾನೆಟ್ ನ್ಯೂಸ್ ನೆಟ್‌ವರ್ಕ್ ಚುನಾವಣಾ ಪೂರ್ವ ಸಮೀಕ್ಷೆ ನಡೆಸಿ ವರದಿ ನೀಡಿತ್ತು. ಇದೀಗ ಏಷ್ಯಾನೆಟ್ ಸಮೀಕ್ಷೆ ನಿಜವಾಗಿದೆ. 


ನವದೆಹಲಿ(ಡಿ.08): ಭಾರಿ ಕೂತೂಹಲ ಕೆರಳಿಸಿದ್ದ ಗುಜರಾತ್ ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟಗೊಂಡಿದೆ. ಬಿಜೆಪಿ ಅಭೂತಪೂರ್ವ ಗೆಲುವಿನ ಮೂಲಕ ಮತ್ತೆ ಅಧಿಕಾರ ಮುಂದುವರಿಸಿದೆ. ಪ್ರಧಾನಿ ನರೇಂದ್ರ ಮೋದಿ ಮ್ಯಾಜಿಕ್ ತವರಿನಲ್ಲಿ ಭರ್ಜರಿ ಫಲ ನೀಡಿದೆ. ಈ ಬಾರಿ ಕಾಂಗ್ರೆಸ್, ಆಮ್ ಆದ್ಮಿ ಪಾರ್ಟಿ ಜೊತೆ ತ್ರಿಕೋನ ಸ್ಪರ್ಧೆ ಎರ್ಪಟ್ಟಿತ್ತು. ಆದರೆ ಕಾಂಗ್ರೆಸ್ ಹಾಗೂ ಆಪ್ ಎರಡೂ ಪಕ್ಷವವನ್ನು ಬಿಜೆಪಿ ಧೂಳೀಪಟ ಮಾಡಿದೆ. ಗುಜರಾತ್‌ನಲ್ಲಿ ಬಿಜೆಪಿ ಗೆಲುವು, ಸ್ಥಾನ, ಬಿಜೆಪಿ ಕೈಹಿಡಿರುವ ಮತದಾರರ ಕುರಿತು ಇಂಚಿಂಚು ಮಾಹಿತಿಯನ್ನು ಏಷ್ಯಾನೆಟನ್ ನ್ಯೂಸ್ ನೆಟ್‌ವರ್ಕ್ ಸಮೀಕ್ಷೆ ಮೂಲಕ ಬಹಿರಂಗ ಪಡಿಸಿತ್ತು. ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಏಷ್ಯಾನೆಟ್ ನ್ಯೂಸ್ ನೆಟ್‌ವರ್ಕ್ ಹೇಳಿದ ಪ್ರತಿ ಮಾಹಿತಿಗಳು ನಿಜವಾಗಿದೆ. ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿದ್ದರೆ, ಕಾಂಗ್ರೆಸ್ ಸಂಪೂರ್ಣವಾಗಿ ನೆಲತಚ್ಚಿದೆ. ಇಷ್ಟೇ ಅಲ್ಲ ಆಮ್ ಆದ್ಮಿ ಪಾರ್ಟಿಗೂ ನಿರೀಕ್ಷಿತ ಬೆಂಬಲ ಸಿಕ್ಕಿಲ್ಲ.

ಗುಜರಾತ್ ವಿಧಾನಸಭೆಯ 182 ಕ್ಷೇತ್ರಗಳಿಗೆ ಎರಡು ಹಂತದಲ್ಲಿ ಚುನಾವಣೆ ನಡೆದಿತ್ತು. ಡಿಸೆಂಬರ್ 1 ಹಾಗೂ ಡಿಸೆಂಬರ್ 5 ರಂದು ಮತದಾನ ನಡೆದಿತ್ತು. ಈ ಮತದಾನಕ್ಕೂ ಮೊದಲೇ ಏಷ್ಯಾನೆಟ್ ನ್ಯೂಸ್ ನೆಟ್‌ವರ್ಕ್ ಚುನಾವಣಾ ಪೂರ್ವ ಸಮೀಕ್ಷೆ ನಡೆಸಿ ವರದಿ ನೀಡಿತ್ತು. ಈ ವರದಿ ಪ್ರಕಾರ ಬಿಜೆಪಿ 133 ರಿಂದ 143 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದಿತ್ತು. ಇನ್ನು ಕಾಂಗ್ರೆಸ್ 28 ರಿಂದ 37 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಭವಿಷ್ಯ ನುಡಿದಿತ್ತು. ಇತ್ತ ಆಮ್ ಆದ್ಮಿ ಪಾರ್ಟಿ 5 ರಿಂದ 14 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಅನ್ನೋ ಮಾಹಿತಿಯನ್ನು ಏಷ್ಯಾನೆಟ್ ನ್ಯೂಸ್ ನೆಟವರ್ಕ್ ನೀಡಿತ್ತು. ಇತ್ತ ಇತರರು 1 ರಿಂ 3 ಕ್ಷೇತ್ರಗಳನ್ನು ಗೆಲ್ಲುವ ಸಾಧ್ಯತೆ ಇದೆ ಎಂದು ಸಮೀಕ್ಷಾ ವರದಿ ಹೇಳಿತ್ತು. 

Tap to resize

Latest Videos

Gujarat Election 2022 Asianet Survey: ಮತ್ತೆ ಅರಳಲಿದೆ ಕಮಲ, ಕುಗ್ಗಿದೆ ಕೈ ಬಲ, ಆಪ್‌ಗಿಲ್ಲ ಬೆಂಬಲ

ಸದ್ಯ ಲಭ್ಯವಾಗಿರುವ ಮಾಹಿತಿ ಪ್ರಕಾರ ಗುಜರಾತ್‌ನಲ್ಲಿ ಬಿಜೆಪಿ 158 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಇನ್ನು ಕಾಂಗ್ರೆಸ್ 16 ಸ್ಥಾನಕ್ಕೆ ಕುಸಿದಿದೆ. ಇತ್ತ ಆಮ್ ಆದ್ಮಿ ಪಾರ್ಟಿ 5 ಸ್ಥಾನಗಳನ್ನು ಬಾಚಿಕೊಂಡಿದ್ದರೆ, ಇತರರ 3 ಕ್ಷೇತ್ರಗಳಲ್ಲಿ ಗೆಲುವಿನ ನಗೆ ಬೀರಿದ್ದಾರೆ. ಏಷ್ಯಾನೆಟ್ ನ್ಯೂಸ್ ನೆಟವರ್ಕ್ ಸಮೀಕ್ಷೆಯೂ ಇದನ್ನ ಹೇಳಿತ್ತು.

ಏಷ್ಯಾನೆಟ್ ನ್ಯೂಸ್ ನೆಟವರ್ಕ್ ಸ್ಥಾನಗಳ ಜೊತೆಗೆ ವೋಟ್ ಶೇರ್, ಜಾತಿವಾರು ಮತದಾರರ ಒಲವು ಸೇರಿದಂತೆ ಸಮಗ್ರ ಮಾಹಿತಿಯನ್ನು ನೀಡಿತ್ತು. ಏಷ್ಯಾನೆಟ್ ನ್ಯೂಸ್ ನೆಟ್‌ವರ್ಕ್ ಸಮೀಕ್ಷೆ ಪ್ರಕಾರ ಬಿಜೆಪಿ ಈ ಬಾರಿಯ ಚುನಾವಣೆಯಲ್ಲಿ ಶೇಕಡಾ 48ಕ್ಕಿಂತ ವೋಟ್ ಶೇರ್ ಪಡೆಯಲಿದೆ ಎಂದಿತ್ತು. ಇದೀಗ ಸರಿಸುಮಾರು ಶೇಕಡಾ 53 ರಷ್ಟು ವೋಟ್ ಶೇರ್ ಬಿಜೆಪಿ ಪಡೆದಿದೆ. ಇನ್ನು ಕಾಂಗ್ರೆಸ್ ವೋಟ್ ಶೇರ್ ಸಮೀಕ್ಷೆ ಪ್ರಕಾರ ಶೇಕಡಾ 31. ಇದೀಗ ಫಲಿತಾಂಶದಲ್ಲಿ ಕಾಂಗ್ರೆಸ್ ಶೇಕಡಾ 27 ರಷ್ಟು ವೋಟ್ ಶೇರ್ ಪಡೆದಿದೆ. ಆಮ್ ಆದ್ಮಿ ಪಾರ್ಟಿ ಶೇಕಡಾ 16 ರಷ್ಟು ವೋಟ್ ಶೇರ್ ಪಡೆಯಲಿದೆ ಎಂದು ಸಮೀಕ್ಷೆ ಹೇಳಿತ್ತು. ಇದೀಗ ಫಲಿತಾಂಶದಲ್ಲಿ ಆಮ್ ಆದ್ಮಿ ಪಾರ್ಟಿ ಶೇಕಡಾ 13 ರಷ್ಟು ವೋಟ್ ಶೇರ್ ಪಡೆದಿದೆ.

Gujarat Election 2022 Asianet Survey: ಗುಜರಾತ್‌ನಲ್ಲಿ ಮತ್ತೆ ಬಿಜೆಪಿ: ಕುಗ್ಗಿದ ಕಾಂಗ್ರೆಸ್‌ ಬಲ

ಏಷ್ಯಾನೆಟ್ ನ್ಯೂಸ್ ನೆಟ್‌ವರ್ಕ್ ಸಮೀಕ್ಷೆ ಪ್ರಕಾರ ಗುಜರಾತ್‌ನಲ್ಲಿ ಬಿಜೆಪಿಗೆ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಯಾವ ಯಾವ ಜಾತಿಗಳು ಕೈಹಿಡಿಯಲಿದೆ ಅನ್ನೋದನ್ನು ವಿವರಿಸಿತ್ತು. ಇದೀಗ ಈ ಜಾತಿಗಳ ಪ್ರಾಬಲ್ಯದಲ್ಲಿ ಬಿಜೆಪಿ ಕ್ಲೀನ್ ಸ್ವೀಪ್ ಗೆಲುವಿನ ದಾಖಲೆ ಬರೆದಿದೆ. ಸಮೀಕ್ಷೆ ಪ್ರಕಾರ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಲು ಗುಜರಾತ್‌ನ ಬ್ರಾಹ್ಮಣರು ಶೇಕಡಾ 77 ರಷ್ಟು ಒಲವು ತೋರಿದ್ದರು. ಇನ್ನು ಬನಿಯಾ ಜಾತಿ ಶೇಕಡಾ 84 ರಷ್ಟು ಮತಗಳು ಬಿಜೆಪಿ ಪರವಾಗಿದೆ.  ಲೆಯುವಾ ಪಟೇಲ್‌ (45), ಕಾಡ್ವಾ ಪಟೇಲ್‌ (67), ಕೋಲಿ (38), ಮಿನಾ, ದುಬ್ಲಾ, ನೈಕ್ಡಾ ಹಾಗೂ ಬಿಹಿಲ್‌ ಸೇರಿದ ಎಸ್‌ಟಿ ಸಮುದಾಯ (34), ದಲಿತರು (13), ರಾಬರೀಸ್‌ (50), ಠಾಕೂರರು(37), ರಜಪೂತರು (70), ಭಾರ್ವಾಡ್‌ (43), ಗುರ್ಜರ್‌ (50), ಮುಸ್ಲಿಮರು (2), ಒಬಿಸಿ (48), ಖಾರ್ವಾ (42), ಜೈನರು (76), ಬನಿಯಾ (84) ಹಾಗೂ ಇತರ ಮೇಲ್ವರ್ಗದವರು (64) ಬೆಂಬಲವಿದೆ  ಅನ್ನೋದನ್ನು ಏಷ್ಯಾನೆಟ್ ನ್ಯೂಸ್ ಸಮೀಕ್ಷೆ ಹೇಳಿತ್ತು. ಇದೀಗ  ಈ ಸಮೀಕ್ಷಾ ಅಂಕಿ ಅಂಶಗಳು ನಿಜವಾಗಿದೆ. 

ನಿಜವಾಗಿತ್ತು ಉತ್ತರ ಪ್ರದೇಶ ಚುನಾವಣಾ ಭವಿಷ್ಯ
2022ರ ಗುಜರಾತ್ ವಿಧಾನಸಭಾ ಚುನಾವಣೆ ಮಾತ್ರವಲ್ಲ. 2012ರ ಉತ್ತರ ಪ್ರದೇಶ ಚುನಾವಣಾ ಪೂರ್ವ ಏಷ್ಯಾನೆಟ್ ನ್ಯೂಸ್ ನೆಟ್‌ವರ್ಕ್ ನಡೆಸಿದ್ದ ಸಮೀಕ್ಷೆಯೂ ನಿಜವಾಗಿತ್ತು. ಈ ವರ್ಷದ ಆರಂಭದಲ್ಲಿ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ನಡೆದಿತ್ತು. ಮತದಾನಕ್ಕೂ ಮೊದಲು ಏಷ್ಯಾನೆಟ್ ನ್ಯೂಸ್ ನೆಟವರ್ಕ್ ಸಮೀಕ್ಷೆ ನಡೆಸಿ ಬಿಜೆಪಿ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಬರುವುದಾಗಿ ಅಂಕಿ ಅಂಶ ನೀಡಿತ್ತು. ಏಷ್ಯಾನೆಟ್ ನ್ಯೂಸ್ ನೆಟ್‌ವರ್ಕ್ ಸಮೀಕ್ಷೆಯಂತೆ ಬಿಜೆಪಿ ಭಾರಿ ಅಂತರದ ಗೆಲುವು ಸಾಧಿಸಿತ್ತು. 2022ರ ಚುನಾವಣಾ ಫಲಿತಾಂಶದಲ್ಲಿ 254 ಸ್ಥಾನ ಗೆದ್ದು ದಾಖಲೆ ಬರೆದಿತ್ತು. ಸಮಾಜವಾದಿ ಪಾರ್ಟಿ 110 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಇನ್ನು ಕಾಂಗ್ರೆಸ್ ಕೇವಲ 2 ಸ್ಥಾನ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. 

click me!