ಆಪರೇಷನ್‌ ಕಮಲದ ಭೀತಿ, ಗೆಲುವಿನ ಬಳಿಕ ತಕ್ಷಣವೇ ಕಚೇರಿಗೆ ಬನ್ನಿ, ಕಾಂಗ್ರೆಸ್‌ ಆದೇಶ!

Published : Dec 08, 2022, 01:54 PM ISTUpdated : Dec 08, 2022, 03:25 PM IST
ಆಪರೇಷನ್‌ ಕಮಲದ ಭೀತಿ, ಗೆಲುವಿನ ಬಳಿಕ ತಕ್ಷಣವೇ ಕಚೇರಿಗೆ ಬನ್ನಿ, ಕಾಂಗ್ರೆಸ್‌ ಆದೇಶ!

ಸಾರಾಂಶ

ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್‌ ಬಹುಮತ ಪಡೆಯುವ ವಿಶ್ವಾಸದಲ್ಲಿದ್ದರೂ, ಆಪರೇಷನ್‌ ಕಮಲ ಭೀತಿ ಪಕ್ಷವನ್ನು ಕಾಡುತ್ತಿದೆ. ಅದಕ್ಕಾಗಿ ಗೆಲುವು ಕಂಡ ಬೆನ್ನಲ್ಲಿಯೇ ತನ್ನೆಲ್ಲಾ ಶಾಸಕರು ಪಕ್ಷದ ಕಚೇರಿಗೆ ಬರಬೇಕು ಎಂದು ಆದೇಶ ನೀಡಿದೆ.  

ಶಿಮ್ಲಾ (ಡಿ.8): ಹಿಮಾಚಲ ಪ್ರದೇಶದಲ್ಲಿ ಇದುವರೆಗಿನ ಟ್ರೆಂಡ್‌ಗಳಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗುವುದು ಬಹುತೇಕ ನಿಶ್ಚಿತ ಎನ್ನಲಾಗಿದೆ. ಚುನಾವಣೆಯಲ್ಲಿ ಗೆಲುವು ಸಾಧಿಸಿದ ತಮ್ಮ ಪಕ್ಷದ ಅಭ್ಯರ್ಥಿ, ವಿಜಯ ಕಂಡ ಬೆನ್ನಲ್ಲಿಯೇ ತಕ್ಷಣವೇ ಪಕ್ಷದ ಕಚೇರಿಗೆ ಆಗಮಿಸಬೇಕು ಎಂದು ಕಾಂಗ್ರೆಸ್‌ ಪಕ್ಷ ಆದೇಶಿಸಿದೆ. ಅಲ್ಲಿಂದ ಅವರನ್ನು ಬೇರೆ ಕಡೆಗೆ ಸ್ಥಳಾಂತರ ಮಾಡುವ ಸಾಧ್ಯತೆಗಳಿದೆ. ಪಕ್ಷದ ಮೂಲಗಳನ್ನು ನಂಬುವುದಾದರೆ, ಹಿಮಾಚಲ ಪ್ರದೇಶದ ವೀಕ್ಷಕರಾಗಿ ಛತ್ತೀಸ್‌ಗಢ ಸಿಎಂ ಭೂಪೇಶ್ ಬಘೇಲ್ ಮತ್ತು ಹರಿಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಅವರನ್ನು ಹೈಕಮಾಂಡ್ ನೇಮಿಸಿದೆ. ಇನ್ನು ಕೆಲ ಹೊತ್ತಿನಲ್ಲಿ ಈ ಇಬ್ಬರೂ ನಾಯಕರು ಶಿಮ್ಲಾ ತಲುಪಲಿದ್ದಾರೆ ಎಂಬ ಮಾಹಿತಿ ಇದೆ. ಹಿಮಾಚಲ ಪ್ರದೇಶದ ಕಾಂಗ್ರೆಸ್ ಉಸ್ತುವಾರಿ ರಾಜೀವ್ ಶುಕ್ಲಾ ಕೂಡ ಅವರೊಂದಿಗೆ ಶಿಮ್ಲಾಕ್ಕೆ ಬರುತ್ತಿದ್ದಾರೆ. ಮೂಲಗಳ ಪ್ರಕಾರ, ಬಿಜೆಪಿ ನಾಯಕರ ಸಂಪರ್ಕದಿಂದ ದೂರವಿರಲು ರಾಜ್ಯದಿಂದ ಚುನಾವಣೆಯಲ್ಲಿ ಗೆದ್ದ ಎಲ್ಲಾ ಶಾಸಕರನ್ನು ಕಾಂಗ್ರೆಸ್ ಬೇರೆ ರಾಜ್ಯಗಳಿಗೆ ಕರೆದೊಯ್ಯಬಹುದು ಎನ್ನಲಾಗುತ್ತಿದ್ದರೂ, ಬಂದಿರುವ ಮಾಹಿತಿಯ ಪ್ರಕಾರ ಎಲ್ಲರೂ ಚಂಡೀಗಢಕ್ಕೆ ಶಿಫ್ಟ್‌ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಕಾಂಗ್ರೆಸ್‌ಗೆ ಭಾರಿ ಬಹುಮತದಲ್ಲಿ ಗೆದ್ದರೆ ಎಲ್ಲ ಶಾಸಕರು ತಮ್ಮ ಕ್ಷೇತ್ರಗಳಲ್ಲಿಯೇ ಉಳಿಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ, ಈ ಬಾರಿ ಅಂತಿಮ ನಿರ್ಧಾರವನ್ನು ಹೈಕಮಾಂಡ್ ತೆಗೆದುಕೊಳ್ಳಲಿದೆ. 40ಕ್ಕಿಂತ ಕಡಿಮೆ ಅಥವಾ ಆಸುಪಾಸಿನ ಸ್ಥಾನಗಳನ್ನು ಪಡೆದರೆ ಕಾಂಗ್ರೆಸ್ ಪಕ್ಷವು ಎಲ್ಲಾ ಶಾಸಕರ ಮೇಲೆ ತೀವ್ರ ನಿಗಾ ಇಡಲಿದೆ ಎನ್ನಲಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗುತ್ತಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿಕ್ರಮಾದಿತ್ಯ ಸಿಂಗ್ ಹೇಳಿದ್ದಾರೆ. ಬಿಜೆಪಿ ಅವ್ಯವಸ್ಥೆಯ ಪಕ್ಷ.  ಆದರೆ ನಮ್ಮ ಪಕ್ಷ ತಪ್ಪುಗಳಿಂದ ಸಾಕಷ್ಟು ಪಾಠ ಕಲಿತಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

Gujarat, HP Election Results 2022 Live: ಹಿಮಾಚಲ ಪ್ರದೇಶ ಕಾಂಗ್ರೆಸ್ ತೆಕ್ಕೆಗೆ

ಪ್ರತಿಭಾ ಸಿಂಗ್‌ ಸಿಎಂ?: ಮೂಲಗಳ ಪ್ರಕಾರ ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್‌ ಅಧ್ಯಕ್ಷೆ ಪ್ರತಿಭಾ ಸಿಂಗ್‌ ಮುಖ್ಯಮಂತ್ರಿಯಾಗುವ ಸಾಧ್ಯತೆ ಇದೆ. ಇದಕ್ಕೂ ಮುನ್ನ ಶಾಸಕಾಂಗ ಪಕ್ಷದಲ್ಲಿ ಈ ವಿಚಾರ ಚರ್ಚೆ ನಡೆಯಲಿದೆ. ಅಂತಿಮ ನಿರ್ಧಾರವನ್ನು ಪಕ್ಷದ ಹೈಕಮಾಂಡ್ ತೆಗೆದುಕೊಳ್ಳುತ್ತದೆ ಎಂದು ವಿಕ್ರಮಾದಿತ್ಯ ಸಿಂಗ್‌ ಹೇಳಿದ್ದಾರೆ.

Assembly election: ಬಿಜೆಪಿಗೆ ಅನುಕೂಲ ಆಗುವಂತೆ ಎಎಪಿ ಪ್ರಚಾರ: ದಿನೇಶ್‌ ಗುಂಡೂರಾವ್

ಬಿಜೆಪಿ ಏನ್‌ ಬೇಕಾದ್ರೂ ಮಾಡುತ್ತೆ: ಭೂಪೇಶ್‌ ಬಾಗೆಲ್‌: ಹಿಮಾಚಲ ಪ್ರದೇಶದಲ್ಲಿ ಗೆಲುವು ಕಂಡ ಕಾಂಗ್ರೆಸ್‌ ನಾಯಕರನ್ನು ರಾಯ್‌ಪುರಕ್ಕೆ ಕರೆತರುವ ವಿಚಾರದಲ್ಲಿ ಮಾತನಾಡಿದ ಛತ್ತೀಸ್‌ಗಢ ಸಿಎಂ ಭೂಪೇಶ್‌ ಬಾಗೆಲ್‌, ಅವರನ್ನು ನಾನು ಇಲ್ಲಿಗೆ ಕರೆತರುವುದಿಲ್ಲ. ಆದರೆ, ಬಿಜೆಪಿಯಿಂದ ಅವರನ್ನು ಸೇಫ್‌ ಆಗಿ ಇರಿಸುವಲ್ಲಿ ಎಲ್ಲಾ ಕೆಲಸ ಮಾಡುತ್ತೇನೆ. ಬಿಜೆಪಿ ಏನು ಬೇಕಾದರೂ ಮಾಡಬಹುದು ಎಂದಿದ್ದಾರೆ.

ಮಧ್ಯಾಹ್ನ 2.45ಕ್ಕೆ ರಾಯ್‌ಪುರದಿಂದ ಚಂಡೀಗಢಗದಲ್ಲಿ ಭೂಪೇಸ್‌ ಬಾಗೆಲ್‌ ತೆರಳಲಿದ್ದಾರೆ. ವಿಮಾನ ನಿಲ್ದಾಣದಿಂದ ನೇರವಾಗಿ ಅವರು ರಾಡಿಸನ್‌ ಹೋಟೆಲ್‌ಗೆ ತೆರಳಲಿದ್ದು,  ಹಿಮಾಚಲದ ಪರಿಸ್ಥಿತಿಗೆ ಸಂಬಂಧಿಸಿದಂತೆ ಹಿರಿಯ ಕಾಂಗ್ರೆಸ್ ನಾಯಕರೊಂದಿಗೆ ಕಾರ್ಯತಂತ್ರದ ಚರ್ಚೆ ನಡೆಯಲಿದೆ. ಅಗತ್ಯವಿದ್ದಲ್ಲಿ ಶಿಮ್ಲಾಗೆ ಕೂಡ ತೆರಳಲಿದ್ದಾರೆ. ಕಾಂಗ್ರೆಸ್ ಶಾಸಕಾಂಗ ಪಕ್ಷವನ್ನು ಒಗ್ಗೂಡಿಸುವುದು ಸದ್ಯಕ್ಕೆ ಪಕ್ಷಕ್ಕೆ ದೊಡ್ಡ ಸವಾಲಾಗಿದೆ. ರಾಜೀವ್ ಶುಕ್ಲಾ ಮತ್ತು ಇತರ ಪ್ರಮುಖ ನಾಯಕರು ಈಗಾಗಲೇ ದೆಹಲಿಯಲ್ಲಿ ತಮ್ಮ ಕೆಲಸಗಳನ್ನು ಆರಂಭಿಸಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
ಹಿಂದೂಗಳು ಒಂದಾಗದಿದ್ರೆ ದೇಶ, ಸಂವಿಧಾನ ಉಳಿಯಲ್ಲ: ಶಾಸಕ ಬಸನಗೌಡ ಪಾಟೀಲ ಯತ್ನಾಳ