
ನವದೆಹಲಿ (ನ. 3): ಮೊರ್ಬಿ ತೂಗುಸೇತುವೆ ಘಟನೆಯ ಬಳಿಕ ದೇಶದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಗುಜರಾತ್ ವಿಧಾನಸಭೆಗೆ ಡಿಸೆಂಬರ್ 1 ಹಾಗೂ ಡಿಸೆಂಬರ್ 2 ರಂದು ಚುನಾವಣೆ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ಪ್ರಕಟಿಸಿದೆ. 182 ವಿಧಾನಸಭಾ ಕ್ಷೇತ್ರಗಳಿಗೆ ಒಟ್ಟು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಡಿಸೆಂಬರ್ 8 ರಂದು ಫಲಿತಾಂಶ ಪ್ರಕಟವಾಗಲಿದೆ. ಬಿಜೆಪಿ ಪ್ರಾಬಲ್ಯವಿರುವ ಗುಜರಾತ್‌ನಲ್ಲಿ ಹಾಲಿ ಆಡಳಿತಾರೂಢ ಪಕ್ಷಕ್ಕೆ ಕಾಂಗ್ರೆಸ್ ಹಾಗೂ ಆಮ್ ಆದ್ಮಿ ಪಾರ್ಟಿಯಿಂದ ದೊಡ್ಡ ಮಟ್ಟದ ಪ್ರತಿರೋಧ ವ್ಯಕ್ತವಾಗಲಿದೆ. ಚುನಾವಣಾ ವೇಳಾಪಟ್ಟಿ ಪ್ರಕಟವಾದ ಬೆನ್ನಲ್ಲಿಯೇ ಗುಜರಾತ್‌ನಲ್ಲಿ ಮಾದರಿ ನೀತಿ ಸಂಹಿತೆ (ಎಂಸಿಸಿ) ಜಾರಿಗೆ ಬಂದಿದೆ. ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಸುದ್ದಿಗೋಷ್ಠಿ ಆರಂಭದಲ್ಲಿಯೇ, ಮೊರ್ಬಿ ದುರಂತಕ್ಕೆ ಸಂತಾಪ ಸೂಚಿಸಿದರು. ಗುಜರಾತ್‌ನಲ್ಲಿ ಒಟ್ಟು 4,90, 89,765 ಮತದಾರರು ಇದ್ದಾರೆ. ಇದರಲ್ಲಿ ಪುರುಷರು 2, 53, 36, 610 ಪುರುಷ ಮತದಾರರಾಗಿದ್ದರೆ, 2,37, 51, 738 ಮಹಿಳಾ ಮತದಾರರಾಗಿದ್ದಾರೆ ಎಂದಿದ್ದಾರೆ. ಗುಜರಾತ್‌ನ ಒಟ್ಟು 182 ಕ್ಷೇತ್ರಗಳ ಪೈಕಿ 142 ಕ್ಷೇತ್ರ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದರೆ, 13 ಕ್ಷೇತ್ರ ಎಸ್‌ಸಿ ಹಾಗೂ 27 ಎಸ್‌ಟಿ ಮತಕ್ಷೇತ್ರ ಇರಲಿದೆ.
ಗುಜರಾತ್ ಚುನಾವಣೆಯ ವೇಳಾಪಟ್ಟಿ: ಮೊದಲ ಹಂತದಲ್ಲಿ ಒಟಟು 89 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದರೆ, 2ನೇ ಹಂತದಲ್ಲಿ 93 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಮೊದಲ ಹಂತದ 89 ಕ್ಷೇತ್ರಗಳಿಗೆ ನವೆಂಬರ್ 5ರಂದು ನೋಟಿಫಿಕೇಷನ್ ಹೊರಬೀಳಲಿದೆ. ನ.14ಕ್ಕೆ ನಾಮಪತ್ರ ಸಲ್ಲಿಸಲು ಕೊನೆಯ ದಿನ. ನವೆಂಬರ್ 15 ರಂದು ನಾಮಪತ್ರ ಪರಿಶೀಲನೆಯಾಗಲಿದ್ದು, ನ.17ಕ್ಕೆ ನಾಮಪತ್ರ ಹಿಂಪಡೆದುಕೊಳ್ಳಲು ಕೊನೆಯ ದಿನವಾಗಿದೆ. ಡಿಸೆಂಬರ್ 1 ರಂದು ಮೊದಲ ಹಂತದ ಚುನಾವಣೆ ನಡೆಯಲಿದೆ.
ಇನ್ನು 2ನೇ ಹಂತದ 93 ಕ್ಷೇತ್ರಗಳಿಗೆ ನವೆಂಬರ್ 10 ರಂದು ನೋಟಿಫಿಕೇಷನ್ ಹೊರಬೀಳಲಿದ್ದು, ನ.17ಕ್ಕೆ ನಾಮಪತ್ರ ಸಲ್ಲಿಸಲು ಕೊನೆಯ ದಿನ. ನವೆಂಬರ್ 18 ರಂದು ನಾಮಪತ್ರ ಪರಿಶೀಲನೆಯಾಗಲಿದೆ. ನ.21ಕ್ಕೆ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಡಿಸೆಂಬರ್ 5 ರಂದು 2ನೇ ಹಂತದಲ್ಲಿ ಮತದಾನ ನಡೆಯಲಿದೆ. ಡಿಸೆಂಬರ್ 8 ರಂದು ಫಲಿತಾಂಶ ಪ್ರಕಟವಾಗಲಿದೆ.
Gujarat Election 2022 Asianet Survey: ಗುಜರಾತ್‌ನಲ್ಲಿ ಮತ್ತೆ ಬಿಜೆಪಿ: ಕುಗ್ಗಿದ ಕಾಂಗ್ರೆಸ್ ಬಲ
ಶಿಪ್ಪಿಂಗ್ ಕಂಟೇರ್‌ನಲ್ಲಿ ಪೂಲಿಂಗ್ ಸ್ಟೇಷನ್: ರಾಜ್ಯದ ಪ್ರತಿ ನಾಗರಿಕ ಕೂಡ ಮತ ಹಾಕಲು ಸಾಧ್ಯವಾಗಬೇಕು ಎನ್ನುವ ನಿಟ್ಟಿನಲ್ಲಿ ಈ ಬಾರಿ ಶಿಪ್ಪಿಂಗ್ ಕಂಟೇನರ್‌ನಲ್ಲೂ ಪೂಲಿಂಗ್ ಸ್ಟೇಷನ್ ನಿರ್ಮಾಣ ಮಾಡಲಾಗುತ್ತದೆ. ಒಂದು ಅನನ್ಯ ಉಪಕ್ರಮವಾಗಿ, 217 ಮತದಾರರಿಗೆ ಎಎಂಎಫ್ ಜೊತೆಗೆ ಭರೂಚ್ ಜಿಲ್ಲೆಯ ಅಲಿಯಾಬೆಟ್‌ನಲ್ಲಿ ಶಿಪ್ಪಿಂಗ್ ಕಂಟೈನರ್‌ನಲ್ಲಿ ಪೂಲಿಂಗ್ ಸ್ಟೇಷನ್ ಅನ್ನು ಸ್ಥಾಪಿಸಲಾಗುವುದು. ಈ ಹಿಂದೆ ಮತದಾರರು 82 ಕಿ.ಮೀ ಸಂಚರಿಸಿ ಮತ ಚಲಾಯಿಸಬೇಕಿತ್ತು. ಮೊದಲ ಬಾರಿಗೆ, ಯುವ ಮತದಾರರನ್ನು ಪ್ರೇರೇಪಿಸಲು, ಲಭ್ಯವಿರುವ ಕಿರಿಯ ಚುನಾವಣಾ ಸಿಬ್ಬಂದಿಯಿಂದ 33 ಪೂಲಿಂಗ್ ಸ್ಟೇಷನ್‌ಗಳನ್ನು ನಿರ್ವಹಿಸಲಾಗುತ್ತದೆ. 40% ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳು ಮತ್ತು 80 ವರ್ಷ ಮೇಲ್ಪಟ್ಟವರಿಗೆ ಮನೆಯಲ್ಲಿ ಮತದಾನದ ಸೌಲಭ್ಯವೂ ಇರುತ್ತದೆ ಎಂದು ಸಿಇಸಿ ರಾಜೀವ್ ಕುಮಾರ್ ಹೇಳಿದ್ದಾರೆ.
Gujarat Election 2022 Asianet Survey: ಮತ್ತೆ ಅರಳಲಿದೆ ಕಮಲ, ಕುಗ್ಗಿದೆ ಕೈ ಬಲ, ಆಪ್‌ಗಿಲ್ಲ ಬೆಂಬಲ
51,782 ಪೂಲಿಂಗ್ ಸ್ಟೇಷನ್‌ಗಳು: ಚುನಾವಣೆಯ ವೇಳೆ ಮತದಾರರಿಗೆ ಯಾವುದೇ ಸಮಸ್ಯೆ ಆಗದಿರಲು, 182 ಕ್ಷೇತ್ರಗಳಲ್ಲಿ ಒಟ್ಟು 51, 782 ಪೂಲಿಂಗ್ ಸ್ಟೇಷನ್‌ನಲ್ಲಿ ಸ್ಥಾಪನೆ ಮಾಡಲಾಗುತ್ತದೆ. ಉತ್ತಮ ಮತದಾನದ ಅನುಭವಕ್ಕಾಗಿ, 1274 ಪೂಲಿಂಗ್ ಸ್ಟೇಷನ್ ಅನ್ನು ಸಂಪೂರ್ಣವಾಗಿ ಮಹಿಳಾ ಮತದಾನ ಮತ್ತು ಭದ್ರತಾ ಸಿಬ್ಬಂದಿ ನಿರ್ವಹಿಸುತ್ತಾರೆ. ಹಾಲಿ ಇರುವ ಸರ್ಕಾರದ ಅವಧಿ 2023ರ ಫೆಬ್ರವರಿ 18 ರಂದು ಮುಕ್ತಾಯಗೊಳ್ಳಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.