* ದಳಪತಿಗಳಿಗೆ ಶಾಕ್ ಮೇಲೆ ಶಾಕ್
* ಜೆಡಿಎಸ್ ತೊರೆಯುವ ಸುಳಿವು ಕೊಟ್ಟ ಮತ್ತೋರ್ವ ಶಾಸಕ
* ಟಿಕೆಟ್ ಸಿಗದಿದ್ದರೆ ಪಯಾ೯ಯ ಮಾಗ೯ ಎಂದು ಜೆಡಿಎಸ್ ವರಿಷ್ಠರಿಗೆ ಎಚ್ಚರಿಕೆ
ತುಮಕೂರು, (ಅ.02): ಒಂದೆಡೆ 2023ರ ವಿಧಾನಸಭಾ ಚುನಾವನೆಗೆ ಪಕ್ಷವನ್ನು ಸಂಘಟಿಸಲು ಜೆಡಿಎಸ್ ನಾಯಕರು ಕಾರ್ಯಗಾರ ನಡೆಸುತ್ತಿದ್ದರೆ, ಮತ್ತೊಂದೆಡೆ ಒಬ್ಬೊಬ್ಬರೇ ಜೆಡಿಎಸ್ ತೊರೆಯುತ್ತಿದ್ದಾರೆ.
ಹೌದು..ಜಿಟಿ ದೇವೇಗೌಡ, ಕೋಲಾರ ಜೆಡಿಎಸ್ ಶಾಸಕ ಶ್ರೀನಿವಾಸ ಗೌಡ, ಸಂದೇಶ್ ನಾಗರಾಜ್ ಸೇರಿದಂತೆ ಹಲವು ಘಟಾನುಘಟಿ ನಾಯಕರು ಜೆಡಿಎಸ್ ತೊರೆಯುವುದಾಗಿ ಬಹಿರಂಗಾಗಿಯೇ ಘೋಷಿಸಿದ್ದಾರೆ. ಇದರ ಮಧ್ಯೆ ಮತ್ತೋರ್ವ ಶಾಸಕ ಜೆಡಿಎಸ್ ತೊರೆಯುವ ಸುಳಿವು ಕೊಟ್ಟಿದ್ದಾರೆ.
ಉತ್ತರ ಕರ್ನಾಟಕದಲ್ಲಿ ಅಸ್ತಿತ್ವ ಕಳೆದುಕೊಳ್ಳುತ್ತಿದೆಯಾ ಜೆಡಿಎಸ್..?
ಜೆಡಿಎಸ್ ನಿಂದ ಟಿಕೆಟ್ ಸಿಗದಿದ್ದರೆ ಪಯಾ೯ಯ ಮಾಗ೯ ಮಾಡಿಕೊಳ್ಳ ಬೇಕಾಗುತ್ತದೆ ಎಂದು ಗುಬ್ಬಿ ಶಾಸಕ ಎಸ್.ಆರ್ ಶ್ರೀನಿವಾಸ್(ವಾಸು) ಪರೋಕ್ಷವಾಗಿ ಬೇರೆ ಪಕ್ಷಕ್ಕೆ ಸೇರುವ ಎಚ್ಚರಿಕೆ ಕೊಟ್ಟಿದ್ದಾರೆ.
ಚೇಳೂರು ಹೋಬಳಿಯ ದೊಡ್ಡಎಡಗೇಹಳ್ಳಿಯಲ್ಲಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ಮಾಡಿ ಮಾತನಾಡಿದ ಶ್ರೀನಿವಾಸ್, ಎಚ್.ಡಿ. ಕುಮಾರಸ್ವಾಮಿ ಅವರು ಪಕ್ಷದ ಟಿಕೆಟ್ ಕೊಡುವುದಿಲ್ಲ ಎಂದು ಕ್ಷೇತ್ರದಲ್ಲಿ ಮತ್ತೊಬ್ಬರನ್ನು ಪರಿಚಯಿಸುತ್ತಿದ್ದಾರೆ.ನಾನು ಈಗ ಜೆಡಿಎಸ್ ನಲ್ಲಿ ಇದ್ದೇನೆ. ಮುಂದೆ ನನಗೆ ಗೋತ್ತಿಲ್ಲ ಎಂದು ಪಕ್ಷ ತೊರೆಯುವ ಸುಳಿವು ನೀಡಿದರು.
ಮುಂದೆ ಆಗುವುದಕ್ಕೆ, ಊಹಾಪೋಹಗಳಿಗೆ ಉತ್ತರ ಕೊಡುವುದಿಲ್ಲ. ನನ್ನ ಕ್ಷೇತ್ರದ ಜನರ ಸಹಕಾರ ಮುಖ್ಯ. ಪ್ರಜಾಪ್ರಭುತ್ವದಲ್ಲಿ ಜನ ಬೆಂಬಲ ಮುಖ್ಯ, ಜನರ ಮೇಲೆ ನಾನು ನಂಬಿಕೆ ಇಟ್ಟಿದ್ದು, ಅವರು ನನಗೆ ಸಹಕಾರ ನೀಡುತ್ತಾರೆ. ಕುಮಾರಸ್ವಾಮಿ ಅವರು ಟಿಕೆಟ್ ಕೊಡದಿದ್ದರೆ ಅಂತಿಮವಾಗಿ ಜನರ ತೀರ್ಮಾನದಂತೆ ಮುಂದುವರಿಯುತ್ತೇನೆ ಎಂದು ಸ್ಪಷ್ಟಪಡಿಸಿದರು.