ಕಾಂಗ್ರೆಸ್‌ ವಿರುದ್ಧ ಆರೋಪ ಬಂದ್ರೆ ಗೌರ್ನರ್‌ ಬೆಳಕಿನ ವೇಗ: ಸಚಿವ ಪ್ರಿಯಾಂಕ್‌ ಖರ್ಗೆ ಆಕ್ರೋಶ

By Kannadaprabha News  |  First Published Sep 3, 2024, 5:09 AM IST

ಕಾಂಗ್ರೆಸ್‌ ನಾಯಕರ ಮೇಲಿನ ಆರೋಪ ಎಂದ ತಕ್ಷಣ ಬೆಳಕಿನ ವೇಗದಲ್ಲಿ ರಾಜ್ಯಪಾಲರು ಕ್ರಮ ಕೈಗೊಳ್ಳುತ್ತಿದ್ದಾರೆ. ಆದರೆ ಬಿಜೆಪಿ-ಜೆಡಿಎಸ್‌ ನಾಯಕರಿಗೆ ಸಂಬಂಧಿಸಿದ ಕಡತಗಳು ಅವರ ಟೇಬಲ್‌ನಲ್ಲೇ ಕೊಳೆಯುತ್ತಿದ್ದರೂ ಯಾವ ಕ್ರಮವೂ ಇಲ್ಲ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಬೆಂಗಳೂರು (ಸೆ.03): ಕಾಂಗ್ರೆಸ್‌ ನಾಯಕರ ಮೇಲಿನ ಆರೋಪ ಎಂದ ತಕ್ಷಣ ಬೆಳಕಿನ ವೇಗದಲ್ಲಿ ರಾಜ್ಯಪಾಲರು ಕ್ರಮ ಕೈಗೊಳ್ಳುತ್ತಿದ್ದಾರೆ. ಆದರೆ ಬಿಜೆಪಿ-ಜೆಡಿಎಸ್‌ ನಾಯಕರಿಗೆ ಸಂಬಂಧಿಸಿದ ಕಡತಗಳು ಅವರ ಟೇಬಲ್‌ನಲ್ಲೇ ಕೊಳೆಯುತ್ತಿದ್ದರೂ ಯಾವ ಕ್ರಮವೂ ಇಲ್ಲ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಹೋದರ ರಾಹುಲ್‌ ಖರ್ಗೆ ಅಧ್ಯಕ್ಷತೆಯ ಸಿದ್ಧಾರ್ಥ ವಿಹಾರ ಟ್ರಸ್ಟ್‌ಗೆ ಕೆಐಎಡಿಬಿ ಸಿಎ ನಿವೇಶನ ಹಂಚಿರುವ ದೂರಿನ ಬಗ್ಗೆ ಸರ್ಕಾರದಿಂದ ವರದಿ ಕೇಳಿರುವ ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಸಿದ್ಧಾರ್ಥ ವಿಹಾರ ಟ್ರಸ್ಟ್‌ಗೆ ಕೆಐಎಡಿಬಿ ಸಿಎ ನಿವೇಶನ ಹಂಚಿರುವ ದೂರಿನ ಸಂಬಂಧ ರಾಜ್ಯಪಾಲರು ವಿವರಣೆ ಕೇಳಿದ್ದಾರೆ. ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ವರದಿ ಕೊಡಿ ಎಂದಿದ್ದಾರೆ. ಆದರೆ, ಬಿಜೆಪಿ-ಜೆಡಿಎಸ್ ನಾಯಕರ ಬಗ್ಗೆ ವರದಿ ಕೇಳಿಲ್ಲ. ಕೆಲವು ಸ್ಪಷ್ಟನೆ ಕೋರಿದಾಗ ಲೋಕಾಯುಕ್ತರು ಸ್ಪಷ್ಟನೆ ನೀಡಿದ್ದರೂ ಕ್ರಮ ಕೈಗೊಂಡಿಲ್ಲ. ಬಿಜೆಪಿ ನಾಯಕರ ಪ್ರಕರಣದಲ್ಲಿ ನನ್ನ ಬಳಿ ಕಡತವಿಲ್ಲ ಎಂದು ತಪ್ಪು ಮಾಹಿತಿ ಕೊಡುತ್ತಾರೆ ಎಂದು ಕಿಡಿಕಾರಿದರು.

Tap to resize

Latest Videos

ಕಾಂಗ್ರೆಸ್ ತಮ್ಮ ಹುಳುಕು ಮುಚ್ಚಿಕೊಳ್ಳಲು ಹಿಂದಿನ ಬಿಜೆಪಿ ಸರ್ಕಾರದ ಮೇಲೆ ಆರೋಪ: ಸಂಸದ ಬೊಮ್ಮಾಯಿ

ರಾಜಭವನ ಬಿಜೆಪಿ ಕಚೇರಿ: ಮಲ್ಲಿಕಾರ್ಜುನ ಖರ್ಗೆ ಅವರ ಕುಟುಂಬದ ಟ್ರಸ್ಟ್‌ ಎಂಬ ಕಾರಣಕ್ಕೆ ನಿವೇಶನ ಹಂಚಿಕೆ ಮಾಡಿಲ್ಲ. ಅವರ ಸೇವೆ ಹಾಗೂ ಅರ್ಹತೆ ಮೇರೆಗೆ ಆಯ್ಕೆ ಸಮಿತಿಯು ನಿರ್ಧರಿಸಿರುತ್ತದೆ. ಖರ್ಗೆ ಹಿರಿಯರು, ಎಐಸಿಸಿ ಅಧ್ಯಕ್ಷರಿದ್ದಾರೆ. ನಮಗೆ ಎಷ್ಟು ವಯಸ್ಸಾಗಿದೆಯೋ ಅಷ್ಟು ಅವರಿಗೆ ಅನುಭವವಿದೆ. ಇದನ್ನು ಅನಗತ್ಯವಾಗಿ ವಿವಾದ ಸೃಷ್ಟಿಸುತ್ತಿದ್ದಾರೆ ಎಂದು ಸಚಿವ ಎಂ.ಬಿ. ಪಾಟೀಲ್‌ ಹೇಳಿದ್ದಾರೆ. ರಾಜ್ಯಪಾಲರನ್ನು ನಾವು ಭೇಟಿಯಾದಾಗ ಶಶಿಕಲಾ ಜೊಲ್ಲೆ ಅವರ ಪ್ರಕರಣವನ್ನು ವಿಲೇವಾರಿ ಮಾಡಿದ್ದೇನೆ. ಬಾಕಿ ಇರುವುದು ಸ್ಪಷ್ಟನೆಗೆ ಕಳಿಸಿದ್ದೇನೆ ಎಂದು ಹೇಳಿದ್ದರು. ಅವರ ನಡೆ ಇಡೀ ರಾಜ್ಯಕ್ಕೆ ಗೊತ್ತಾಗಿದೆ. ಅವರು ಕೇಂದ್ರ ಸರ್ಕಾರದ ಕೈಗೊಂಬೆಯಾಗಿದ್ದು, ರಾಜಭವನವನ್ನು ಬಿಜೆಪಿ ಕಚೇರಿ ಮಾಡಿದ್ದಾರೆ ಎಂದು ಟೀಕಿಸಿದರು.

click me!