ಪ್ರಕೃತಿ ಮುಂದೆ ನಾವೆಲ್ಲರೂ ಅಸಹಾಯಕರು. ಮುಂಗಾರು ಹಾಗೂ ಹಿಂಗಾರು ಸಂಪೂರ್ಣವಾಗಿ ಕೈಕೊಟ್ಟಿರುವುದರಿಂದ ಈಗ ಭೀಕರ ಬರಗಾಲ ಎದುರಾಗಿದ್ದು, ಅದನ್ನು ನಾವು ಸಮರ್ಥವಾಗಿ ಎದುರಿಸುತ್ತೇವೆ. ರೈತರು ಆತಂಕ ಪಡುವುದು ಬೇಡ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಹೊನ್ನಾಳಿ (ಅ.29): ಪ್ರಕೃತಿ ಮುಂದೆ ನಾವೆಲ್ಲರೂ ಅಸಹಾಯಕರು. ಮುಂಗಾರು ಹಾಗೂ ಹಿಂಗಾರು ಸಂಪೂರ್ಣವಾಗಿ ಕೈಕೊಟ್ಟಿರುವುದರಿಂದ ಈಗ ಭೀಕರ ಬರಗಾಲ ಎದುರಾಗಿದ್ದು, ಅದನ್ನು ನಾವು ಸಮರ್ಥವಾಗಿ ಎದುರಿಸುತ್ತೇವೆ. ರೈತರು ಆತಂಕ ಪಡುವುದು ಬೇಡ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು. ಮಾದನಬಾವಿ ಗ್ರಾಮದಲ್ಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ರಾಜ್ಯಮಟ್ಟದ ಕೃಷಿ ಮೇಳದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಭೀಕರ ಬರಗಾಲ ಎಂದುರಾಗಿದೆ ಎಂದು ನಮ್ಮ ಸರ್ಕಾರ ಕೈಕಟ್ಟಿ ಕುಳಿತಿಲ್ಲ. ಬರ ಅಧ್ಯಯನ ತಂಡ ಬಂದು ಹೋಗಿದೆ, ಬರಗಾಲದಿಂದ ರಾಜ್ಯದ 216 ತಾಲೂಕಿನಲ್ಲಿ ಬೆಳೆ ಹಾನಿ ಬಗ್ಗೆ ಈಗಾಗಲೆ ಸರ್ವೇ ಮಾಡಿ ವರದಿಯನ್ನು ಕೇಂದ್ರಕ್ಕೆ ಕಳುಹಿಸಿಕೊಡುವ ಕೆಲಸ ನಮ್ಮ ಸರ್ಕಾರ ಮಾಡಿದೆ ಎಂದು ತಿಳಿಸಿದರು.
ಇಡೀ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಮಾತ್ರ ರೈತರ ನೆರವಿಗೆ ಬಂದಿರುವುದು ಇತಿಹಾಸದಲ್ಲಿ ನೀವು ನಾವು ನೋಡಬಹುದು. ನಮ್ಮ ಪೂಜ್ಯ ತಂದೆ ಮಾಜಿ ಮುಖ್ಯಮಂತ್ರಿ ದಿವಂಗತ ಎಸ್. ಬಂಗಾರಪ್ಪನವರು ರೈತರ 10 ಎಚ್.ಪಿ. ಪಂಪ್‍ಸೆಟ್‍ಗಳಿಗೆ ಉಚಿತ ವಿದ್ಯುತ್ ನೀಡಿರುವುದು, ಆಶ್ರಯ ಯೋಜನಡಿಯಲ್ಲಿ ದೀನ ದಲಿತ ಹಾಗೂ ನಿವೇಶನ ರಹಿತರಿಗೆ ಉಚಿತ ನಿವೇಶನ ನೀಡಿದ್ದು ತಮಗೆಲ್ಲಾ ಗೊತ್ತಿದೆ ಎಂದರು. ಈಗ ನಮ್ಮ ಸರ್ಕಾರ ಬಂದ ತಕ್ಷಣ ನಾವು ಭರವಸೆ ನೀಡಿದಂತೆ ಉಚಿತ ವಿದ್ಯುತ್, ಗೃಹಲಕ್ಷ್ಮೀ, ಅಕ್ಕಿ ಹಾಗೂ ಶಕ್ತಿ ಯೋಜನೆಯಡಿಯಲ್ಲಿ ಉಚಿತ ಬಸ್‍ನಲ್ಲಿ ಪ್ರಯಾಣ ಮಾಡಲು ಅವಕಾಶ ಮಾಡಿಕೊಟ್ಟು ನುಡಿದಂತೆ ನಡೆದಿದ್ದೇವೆ. ಹಾಗಾಗಿ ಕಾಂಗ್ರೆಸ್ ಪಕ್ಷ ದೀನ, ದಲಿತರ, ಹಾಗೂ ನಿರ್ಗತಿಕರ ಪರ ಎಂದು ಎಲ್ಲರಿಗೂ ತಿಳಿದಿರುವ ವಿಷಯ ಎಂದರು.
ಅರಸೀಕೆರೆಗೆ ಸಂಸದ ಪ್ರಜ್ವಲ್ ರೇವಣ್ಣ ಕೊಡುಗೆ ಏನು: ಕಾಟಿಕೆರೆ ಉಮೇಶ್
ವಿದ್ಯಾರ್ಥಿಗಳ ಹಿತಕ್ಕಾಗಿ ಪಾಲಕರು ಶ್ರಮಿಸಬೇಕು. ನಿಮ್ಮ ಶ್ರಮದ ಹಿಂದೆ ನಿಮ್ಮ ಮಕ್ಕಳ ಭವಿಷ್ಯ ಅಡಗಿದೆ. ಹಾಗಾಗಿ ಅವರ ಎಲ್ಲಾ ಒಳ್ಳೆ ವಿಚಾರಗಳಿಗೆ ತಮ್ಮ ಸಹಕಾರ ನೀಡಿ, ನಿಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಸರ್ಕಾರವೂ ಕೂಡ ಸಾಥ್ ನೀಡಲಿದೆ ಎಂದರು. ಮಲೆನಾಡಿನಲ್ಲಿ ಅಡಕೆಯನ್ನು ಯಥೇಚ್ಚವಾಗಿ ಬೆಳೆಯುತ್ತಿದ್ದರು, ಆದರೆ ಅಡಕೆಯ ದರ ದುಪ್ಪಟ್ಟು ಆಗುತ್ತಿದ್ದಂತೆ ಹೊನ್ನಾಳಿ ಹಾಗೂ ನ್ಯಾಮತಿ ತಾಲೂಕಿನಲ್ಲಿ ಸಹ ಅಡಕೆಯನ್ನು ಹೆಚ್ಚು ಬೆಳೆಯಲು ಮುಂದಾಗಿದ್ದಾರೆ. ಈಗಾಗಲೆ ಅನೇಕರು ಫಸಲು ಪಡೆಯುತ್ತಿದ್ದು, ಮಲೆನಾಡಿಗಿಂತ ಅವಳಿ ತಾಲೂಕಿನಲ್ಲಿ ಸಾಹುಕಾರರ ಸಂಖ್ಯೆ ಹೆಚ್ಚಾಗಿದೆ ಎಂದು ತಮಾಷೆ ಮಾಡುತ್ತ ತಿಳಿಸಿದರು.
ದಾಖಲೆ ನೋಡಿದರೆ ರಾಮನಗರಕ್ಕೆ ಎಚ್‌ಡಿಕೆ ಕೊಡುಗೆ ಗೊತ್ತಾಗುತ್ತೆ: ಎಚ್.ಡಿ.ರೇವಣ್ಣ
ಶಾಸಕ ಡಿ.ಜಿ. ಶಾಂತನಗೌಡ ಮಾತನಾಡಿ, ಭೀಕರ ಬರಗಾಲ ಸ್ಥಿತಿಯಲ್ಲೂ ರಾಜ್ಯಮಟ್ಟದ ಕೃಷಿಮೇಳ ಮಾಡಿ ತಮ್ಮ ಗ್ರಾಮ ರಾಜ್ಯದಲ್ಲಿ ಗಮನ ಸೆಳೆದಿದೆ. ಅದಕ್ಕಾಗಿ ನಾನು ನಿಮಗೆಲ್ಲ ಧನ್ಯವಾದ ಅರ್ಪಿಸುತ್ತೇನೆ ಎಂದು ತಿಳಿಸಿದರು. ಜಾನಪದ ಗಾಯಕ ಕಡದಕಟ್ಟೆ ತಿಮ್ಮಣ್ಣ ಅವರಿಂದ ಸುಗಮ ಸಂಗಿತಾ ಕಾರ್ಯಕ್ರಮ ನಡೆಯಿತು. ನ್ಯಾಮತಿ ತಹಸೀಲ್ದಾರ್ ಗೋವಿಂದಪ್ಪ, ಬಿಇಒ ನಂಜರಾಜ್, ಕಾಂಗ್ರೆಸ್ ಮುಖಂಡರಾದ ಎಚ್.ಬಿ.ಶಿವಯೋಗಿ, ಎಚ್.ಎ.ಉಮಾಪತಿ, ಬಿ.ಸಿದ್ದಪ್ಪ, ನುಚ್ಚಿನ ವಾಗೀಶ್, ಹನುಮನಹಳ್ಳಿ ಬಸವರಾಜಪ್ಪ, ಗ್ರಾಮದ ಮುಖಂಡರಾದ ರುದ್ರಪ್ಪಚಾರ್, ಪರಮೇಶಪ್ಪ, ದೇವರಾಜ್, ಚೈತ್ರಾ ಉಪಸ್ಥಿತರಿದ್ದರು.