40% ಕಮಿಷನ್‌ ಸಿಗಲ್ಲ ಅಂತ ಸರ್ಕಾರ ಮನೆ ಹಂಚಿಲ್ಲ: ಮಧು ಬಂಗಾರಪ್ಪ

Published : Mar 08, 2023, 11:57 AM IST
40% ಕಮಿಷನ್‌ ಸಿಗಲ್ಲ ಅಂತ ಸರ್ಕಾರ ಮನೆ ಹಂಚಿಲ್ಲ: ಮಧು ಬಂಗಾರಪ್ಪ

ಸಾರಾಂಶ

ಬಿಜೆಪಿ ಸರ್ಕಾರ 40 ಪರ್ಸೆಂಟ್‌ ಕಮಿಷನ್‌ ಸಿಗಲ್ಲ ಅಂತ ಮನೆ ಹಂಚಲಿಲ್ಲ, ಗ್ರಾಮೀಣಾ ಪ್ರದೇಶಕ್ಕೆ 7 ತಾಸು ವಿದ್ಯುತ್‌ ನೀಡದೇ ಹೊರ ರಾಜ್ಯಕ್ಕೆ ವಿದ್ಯುತ್‌ ಮಾರಿಕೊಳ್ಳುತ್ತಿದ್ದಾರೆ. ಬಿಜೆಪಿಯ ಸುಳ್ಳಿನ ಖಜಾನೆ ಖಾಲಿಯಾಗಿದೆ ಎಂದು ಎಐಸಿಸಿ ಸದಸ್ಯ ಮಧು ಬಂಗಾರಪ್ಪ ಆರೋಪಿಸಿದರು. 

ಶಿವಮೊಗ್ಗ (ಮಾ.08): ಬಿಜೆಪಿ ಸರ್ಕಾರ 40 ಪರ್ಸೆಂಟ್‌ ಕಮಿಷನ್‌ ಸಿಗಲ್ಲ ಅಂತ ಮನೆ ಹಂಚಲಿಲ್ಲ, ಗ್ರಾಮೀಣಾ ಪ್ರದೇಶಕ್ಕೆ 7 ತಾಸು ವಿದ್ಯುತ್‌ ನೀಡದೇ ಹೊರ ರಾಜ್ಯಕ್ಕೆ ವಿದ್ಯುತ್‌ ಮಾರಿಕೊಳ್ಳುತ್ತಿದ್ದಾರೆ. ಬಿಜೆಪಿಯ ಸುಳ್ಳಿನ ಖಜಾನೆ ಖಾಲಿಯಾಗಿದೆ ಎಂದು ಎಐಸಿಸಿ ಸದಸ್ಯ ಮಧು ಬಂಗಾರಪ್ಪ ಆರೋಪಿಸಿದರು. ತಾಲೂಕಿನ ಹೊಳೆಬೆನವಳ್ಳಿಯಲ್ಲಿ ಜಿಲ್ಲಾ ಕಾಂಗ್ರೆಸ್‌ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಗ್ಯಾರಂಟಿ ಕಾರ್ಡ್‌ ವಿತರಣಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿ, ಮಾಜಿ ಸಿಎಂ ಎಸ್‌.ಬಂಗಾರಪ್ಪ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಆಶ್ರಯ ಮನೆ ನೀಡುವ ಮೂಲಕ ಬಡವರ ಕಲ್ಯಾಣ ಮಾಡಿದ್ದರು. 

ಆದರೆ ಬಿಜೆಪಿ ಸರ್ಕಾರದಲ್ಲಿ ಬಡವರಿಗೆ ಮನೆ ಹಂಚಿಕೆ ಮಾಡಿಲ್ಲ. ಯಾಕೆಂದರೆ ಶೇ.40 ಕಮಿಷನ್‌ ಸಿಗಲ್ಲ. ಹಾಗಾಗಿ, ಮನೆ ಹಂಚಿಕೆ ಮಾಡಿಲ್ಲ. ಬಿಜೆಪಿ ಸರ್ಕಾರ ಗ್ರಾಮೀಣ ಪ್ರದೇಶಕ್ಕೆ 7 ತಾಸು ವಿದ್ಯುತ್‌ ನೀಡುತ್ತಿಲ್ಲ. ಹೊರ ರಾಜ್ಯಕ್ಕೆ ವಿದ್ಯುತ್‌ ಮಾರಿಕೊಳ್ಳುತ್ತಿದ್ದಾರೆ. ನಮಗೆ ಜಾಸ್ತಿ ಶುಲ್ಕ ವಿಧಿಸಿ, ಹೊರ ರಾಜ್ಯಕ್ಕೆ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ನರೇಂದ್ರ ಮೋದಿ .15 ಲಕ್ಷ ಹಾಕುತ್ತೇನೆ ಎಂದು ಹೇಳಿ ಮತ ಪಡೆದುಕೊಂಡರು. ಆದರೆ 15 ಪೈಸೆ ಕೊಟಿಲ್ಲ ಎಂದು ಟೀಕಿಸಿದರು.

ಜೆಡಿಎಸ್‌-ಕಾಂಗ್ರೆಸ್‌ನಿಂದ ಡೋಂಗಿ ರಾಜಕೀಯ: ಡಿ.ವಿ.ಸದಾನಂದಗೌಡ

ಕಾಂಗ್ರೆಸ್‌ ಮೇಲೆ ಈ ಬಾರಿ ಜನರು ಪೂರ್ಣ ವಿಶ್ವಾಸವಿಟ್ಟಿದ್ದು, ಮತ್ತೆ ಅಧಿಕಾರಕ್ಕೆ ಬಂದೇ ಬರುತ್ತದೆ. ನಾಡಿನ ಜನರ ಕಲ್ಯಾಣವಾಗುತ್ತದೆ. ಚುನಾವಣಾ ಸಂದರ್ಭದಲ್ಲಿ ಎಲ್ಲ ಪಕ್ಷದವರು ಬಂದು ಮತ ಕೇಳುತ್ತಾರೆ. ಆದರೆ, ಬಡವರ ಪರವಾಗಿ ನಿಲ್ಲುವ ಏಕೈಕ ಪಕ್ಷ ಕಾಂಗ್ರೆಸ್‌ ಆಗಿದೆ. ಹಾಗಾಗಿ ಈ ಬಾರಿ ಕಾಂಗ್ರೆಸ್‌ಗೆ ಬೆಂಬಲ ನೀಡಬೇಕು. ಬಿಜೆಪಿಯವರು ಜಾತಿ ಧರ್ಮದ ಮೇಲೆ ಸಮಾಜ ಒಡೆಯುತ್ತಾರೆ. ಅವರಿಗೆ ಮತ ನೀಡದೇ ಕಾಂಗ್ರೆಸ್‌ಗೆ ಬೆಂಬಲಿಸುವಂತೆ ಮನವಿ ಮಾಡಿದರು.

ಬಿಜೆಪಿಯವರದು 40 ಪರ್ಸೆಂಟ್‌ ಸರ್ಕಾರ ಎಂಬುದು ಸಾಬೀತಾಗಿದೆ. ಸರ್ಕಾರದ ಮೇಲೆ ಶೇ.40 ಕಮಿಷನ್‌ ಆರೋಪ ಮಾಡಿದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪ¿å್ಯ ಅವರನ್ನು ರಾತ್ರೋರಾತ್ರಿ ಬಂಧಿಸಿದ್ದರು. ಆದರೆ, ಬಿಜೆಪಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಮೇಲೆ ಕೋಟಿ ಕೋಟಿ ಹಣ ಸಿಕ್ಕಿರುವ ಬಗ್ಗೆ ಆರೋ​ಪ​ಗ​ಳಿದ್ದರೂ ಬಂಧಿಸಿಲ್ಲ. ಲುಕ್‌ ಔಟ್‌ ನೋಟಿಸ್‌ ಕೊಟ್ಟರೂ ಅವರ ಬಂಧನ ಯಾಕಿಲ್ಲ. ಸರ್ಕಾರ ಅವರನ್ನು ರಕ್ಷಣೆ ಮಾಡುತ್ತಿದೆ ಎಂದು ಆರೋಪಿಸಿದರು.

ಜಿಲ್ಲಾ ಕಾಂಗ್ರೆಸ್‌ ಪ್ರಚಾರ ಸಮಿತಿ ಅಧ್ಯಕ್ಷ ಎನ್‌.ರಮೇಶ್‌ ಮಾತನಾಡಿ, ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಮಾತ್ರ ಹಳ್ಳಿಯ ಮತ್ತು ಬಡವರ ಉದ್ಧಾರವಾಗುತ್ತದೆ. ಬಿಜೆಪಿಯ ಮೇಲೆ ಜನ ನಂಬಿಕೆಯನ್ನೇ ಕಳೆದುಕೊಂಡಿದ್ದಾರೆ. ಕಾಂಗ್ರೆಸ್‌ ತನ್ನ ಸಾಮ್ರಾಜ್ಯವನ್ನು ಮತ್ತೆ ವಿಸ್ತರಿಸಲಿದೆ. ಈ ಹಿನ್ನೆಲೆಯಲ್ಲಿಯೇ ಗ್ಯಾರಂಟಿ ಕಾರ್ಡ್‌ ಅನ್ನು ಪಕ್ಷದ ವತಿಯಿಂದ ನಾವು ಪ್ರಣಾಳಿಕೆ ರೂಪದಲ್ಲಿ ನೀಡುತ್ತಿದ್ದೇವೆ. ಮನೆಯ ಯಜಮಾನಿಗೆ ಪ್ರತಿ ತಿಂಗಳು .2 ಸಾವಿರ, ಎಲ್ಲ ಮನೆಗಳಿಗೂ 200 ಯುನಿಟ್‌ ವಿದ್ಯುತ್‌ ಉಚಿತ ಹಾಗೂ ಬಿಪಿಎಲ್‌ ಕಾರ್ಡ್‌ದಾರರಿಗೆ 10 ಕೆಜಿ ಅಕ್ಕಿ ಉಚಿತವಾಗಿ ನೀಡುತ್ತೇವೆ. ಈ ಬಾರಿ ಕಾಂಗ್ರೆಸ್‌ 135ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆದು ಸ್ಪಷ್ಟಬಹುಮತ ಪಡೆಯಲಿದೆ ಎಂದರು.

ನೂರನೇ ಜನೌಷಧಿ ಕೇಂದ್ರಕ್ಕೆ ಸಿಎಂ ಚಾಲನೆ: ಕೇಂದ್ರ ಸಚಿವ ಮನ್ಸುಖ್‌ ಮಾಂಡವಿಯಾ ಭಾಗಿ

ನಾರಾಯಣ ಸ್ವಾಮಿ ಮಾತನಾಡಿ, ಸ್ವಾತಂತ್ರ ನಂತರ ಬಡವರ ಪರವಾಗಿ ರಚನಾತ್ಮಕವಾಗಿ ಕೆಲಸ ಮಾಡಿದ್ದರೆ ಅದು ಕಾಂಗ್ರೆಸ್‌ ಪಕ್ಷ ಮಾತ್ರ. ಆಶ್ರಯ ನಿವೇಶನ, ಆರಾಧನಾ, ಗ್ರಾಮೀಣ ಕೃಪಾಂಕ ಸೇರಿದಂತೆ ಬಡವರ ಪರವಾಗಿ ಸಾಕಷ್ಟುಕೆಲಸ ಮಾಡಿದೆ. ಈ ಬಾರಿ ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸುವಂತೆ ಮನವಿ ಮಾಡಿದರು. ವಿಧಾನ ಪರಿಷತ್‌ ಮಾಜಿ ಸದಸ್ಯ ಆರ್‌. ಪ್ರಸನ್ನಕುಮಾರ್‌, ವಿಜಯ್‌ಕುಮಾರ್‌ ಮಾತನಾಡಿದರು. ಮುಖಂಡರಾದ ಡಾ. ಶ್ರೀನಿವಾಸ್‌ ಕರಿಯಣ್ಣ, ವೈ.ಎಚ್‌. ನಾಗರಾಜ್‌, ಎಸ್‌.ಪಿ. ದಿನೇಶ್‌, ವೇದಾ ವಿಜಯಕುಮಾರ್‌, ಜಿ.ಡಿ. ಮಂಜುನಾಥ್‌, ಹನುಮಂತು, ಸಿರಿಗೆರೆ ನಾಗರಾಜ್‌, ಕೃಷ್ಣಪ್ಪ ಮತ್ತಿತರರು ಇದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ