
ಬೆಂಗಳೂರು[ಡಿ.26] ಹೊಸ ದೋಸ್ತಿ ಸರಕಾರವನ್ನು ಜನ 2018ರಲ್ಲಿ ಕಂಡರು. ಇದೆಲ್ಲದಕ್ಕಿಂತ ಮುಖ್ಯವಾಗಿ ವೈರಿಗಳಂತೆ ಗುದ್ದಾಡುತ್ತಿದ್ದವರು ಒಟ್ಟಾಗಿ ಅಧಿಕಾರ ಹಂಚಿಕೊಂಡರು.
ವಿಧಾನಸಭೆ ಚುನಾವಣೆ: 2018ರ ವರ್ಷಾರರಂಭಕ್ಕೆ ಚುನಾವಣೆ ಕಾವು ಎಲ್ಲ ಪಕ್ಷಗಳಲ್ಲಿ ಮನೆ ಮಾಡಿತ್ತು. ಅಧಿಕಾರದಲ್ಲಿದ್ದ ಕಾಂಗ್ರೆಸ್ ನೆಲಕಚ್ಚಿಸಲು ಬಿಜೆಪಿ ಮತ್ತು ಜೆಡಿಎಸ್ ಎದುರಾಳಿಯಾಗಿ ನಿಂತಿದ್ದವು.
ಈಗ ಸಿಎಂ ಆಗಿರುವ ಎಚ್‌ಡಿ ಕುಮಾರಸ್ವಾಮಿ ರಾಮನಗರ ಮತ್ತು ಚೆನ್ನಪಟ್ಟಣ ಎರಡೂ ಕಡೆ ಸ್ಪರ್ಧೆ ಮಾಡಿದ್ದರು. ಇನ್ನು ಬಿಜೆಪಿಯಿಂದ ಶ್ರೀರಾಮುಲು ಬಾದಾಮಿ ಮತ್ತು ಮೊಳಕಾಲ್ಮೂರಿನಲ್ಲಿ ಸ್ಪರ್ಧೆ ಮಾಡಿದ್ದರು. ಸಿಎಂ ಆಗಿದ್ದ ಸಿದ್ದರಾಮಯ್ಯ ಸಹ ತವರು ಕ್ಷೇತ್ರ ವರುಣಾವನ್ನು ಪುತ್ರನಿಗೆ ಬಿಟ್ಟು ಚಾಮುಂಡೇಶ್ವರಿ ಮತ್ತು ಬಾದಾಮಿಯಲ್ಲಿ ಸ್ಪರ್ಧೆ ಮಾಡಿದ್ದು ಚುನಾವಣೆ ರಂಗು ಹೆಚ್ಚಿಸಿತ್ತು.
ಸಚಿವ ಸಂಪುಟ ಸೀಕ್ರೆಟ್: ವಿಲನ್ ಯಾರು? ಹೀರೋ ಯಾರು? ಇಲ್ಲಿದೆ ಅಸಲಿ ಕಥೆ
ಫಲಿತಾಂಶ ಬಂತು: ಅತಂತ್ರ ವಿಧಾನಸಭೆ ಫಲಿತಾಂಶ ಬಂದಾಗ ಯಾವುದೇಷರತ್ತುಗಳಿಲ್ಲದೆ ಕಾಂಗ್ರೆಸ್ ಜೆಡಿಎಸ್‌ಗೆ ಸಂಪೂರ್ಣ ಬೆಂಬಲ ಘೋಷಣೆ ಮಾಡಿದ್ದು ರಾಷ್ಟ್ರೀಯ ಪಕ್ಷವೊಂದು ಈ ರೀತಿ ನಡೆದುಕೊಂಡಿತಾ? ಎಂದು ಹುಬ್ಬೇರಿಸುವಂತೆ ಮಾಡಿತ್ತು. ದೇವೇಗೌಡ ಮತ್ತು ಕುಮಾರಸ್ವಾಮಿ ಟೀಕೆ ಮಾಡಿಕೊಂಡೇ ಬಂದಿದ್ದ ಸಿದ್ದರಾಮಯ್ಯ ಬೆಂಬಲ ನೀಡುವಾಗ ಕೈಕಟ್ಟಿ ನಿಂತಿದ್ದರು.
ಒಂದೇ ದಿನದ ಸಿಎಂ: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ 224 ಸ್ಥಾನಗಳ ಪೈಕಿ 104ನ್ನು ಗೆದ್ದ ಬಿಜೆಪಿಯಿಂದ ಬಿಎಸ್‌ವೈ ಪ್ರಮಾಭ ವಚನ ತೆಗೆದುಕೊಂಡಿದ್ದರು. ಆದರೆ ಬಹುಮತ ಸಾಬೀತು ಮಾಡಲು ಸಾಧ್ಯವಾಘದ ಬಿಜೆಪಿ ಅಧಿಕಾರ ಕಳೆದುಕೊಂಡಿತು. ಈ ವೇಳೆ ಶಾಸಕರನ್ನು ಹೊಟೇಲ್ ನಿಂದ ಹೊಟೇಲ್‌ಗೆ ಶಿಫ್ಟ್ ಮಾಡುವುದು.. ದೆಹಲಿ ನಾಯಕರು ರಾಜ್ಯದಲ್ಲಿಯೇ ಠಿಕಾಣಿ ಹೂಡುವುದು ಸರ್ವೇ ಸಾಮಾನ್ಯವಾಗಿ ಹೋಗಿತ್ತು.
ಮಹಾಘಟಬಂಧನಕ್ಕೆ ಕರ್ನಾಟಕವೇ ಮೂಲ: ಕರ್ನಾಟಕದ ಸಿಎಂ ಆಗಿ ಕುಮಾರಸ್ವಾಮಿ ಅಧಿಕಾರ ಸ್ವೀಕರಿಸಿದರು. ಕಾಂಗ್ರೆಸ್-ಜೆಡಿ ಎಸ್ ದೋಸ್ತಿ ದೇಶದ ಇತರೆ ಮೋದಿ ವಿರೋಧಿ ಪಕ್ಷಗಳನ್ನು ಒಂದೇ ಕಡೆಗೆ ಎಳೆದು ತಂದಿತು. ಪ್ರಮಾಣ ವಚನ ಸಮಾರಂಭವೇ ಮಹಾಘಟಬಂಧನ್ ಎಂಬ ಚಿಂತನೆಗೆ ವೇದಿಕೆಯಾಯಿತು.
ಕಿತ್ತಾಡಿಕೊಂಡ ಬಿಜೆಪಿ ಸಂಸದರು: ನೋಡಿ ಮುಸಿ-ಮುಸಿ ನಕ್ಕ ಸತೀಶ್ ಜಾರಕಿಹೊಳಿ
ವರ್ಷವಿಡಿ ಕಾಡಿದ ಆಪರೇಶನ್ ಕಮಲ: ದೋಸ್ತಿ ಸರಕಾರ ರಚನೆಯಾದ ದಿನದಿಂದ ಆಪರೇಶನ್ ಕಮಲ ಎಂಬ ವಿಚಾರ ಕಾಡುತ್ತಲೇ ಬಂತು. ಸಂಪುಟ ರಚನೆ, ಸಚಿವ ಸ್ಥಾನ ಹಂಚಿಕೆ ವೇಳೆ ಅತೃಪ್ತಿಯ ಹೇಳಿಕೆಗಳು ಅಲ್ಲಲ್ಲಿ ಕೇಳಿಬಂದವು. ದೋಸ್ತಿ ಸರಕಾರದ ಆಯುಷ್ಯ ಕೆಲವೇ ದಿನ ಎನ್ನುತ್ತಲೇ 7 ತಿಂಗಳು ಮುಕ್ತಾಯವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.