Belagavi politics: ಪ್ರಭಾವಿ ನಾಯಕ ಕಾಂಗ್ರೆಸ್ ಸೇರ್ಪಡೆ, ಜಾರಕಿಹೊಳಿಗೆ ಟಕ್ಕರ್ ಕೊಡಲು ಡಿಕೆಶಿ ಪ್ಲಾನ್

By Suvarna News  |  First Published Dec 21, 2021, 9:56 PM IST

* ಜೆಡಿಎಸ್ ನಾಯಕ ಕಾಂಗ್ರೆಸ್ ಸೇರ್ಪಡೆ
* ಬೆಳಗಾವಿಯಲ್ಲಿ ಕಾಂಗ್ರೆಸ್ ಬಲಿಷ್ಠಗೊಳಿಸಲು ಪ್ಲಾನ್
* ರಮೇಶ್ ಜಾರಕಿಹೊಳಿಗೆ ಟಕ್ಕರ್ ಕೊಡಲು ಹೊಸ ನಾಯಕನನ್ನು ಸೇರಿಸಿಕೊಂಡ ಡಿಕೆಶಿ


ಬೆಳಗಾವಿ, (ಡಿ.21): ಗೋಕಾಕ್​​ ಜೆಡಿಎಸ್ ಮುಖಂಡ ಅಶೋಕ್ ಪೂಜಾರಿ(Ashok Pujari) ಅವರು ಅಧಿಕೃತವಾಗಿ ಕಾಂಗ್ರೆಸ್ (Congress) ಸೇರ್ಪಡೆಗೊಂಡರು. 

ಇಂದು(ಮಂಗಳವಾರ) ಬೆಳಗಾವಿ ಕಾಂಗ್ರೆಸ್(Belagavi Congress) ಭವನದಲ್ಲಿ ಕೆಪಿಸಿಸಿ ಅಧ್ಯಕ್ಷ  ಡಿಕೆ ಶಿವಕುಮಾರ್(DK Shivakumar), ಸಿದ್ದರಾಮಯ್ಯ ಸೇರಿದಂತೆ ಇತರೆ ನಾಯಕರ ಸಮ್ಮುಖದಲ್ಲಿ ಅಶೋಕ್ ಪೂಜಾರಿ ಅವರು ಕಾಂಗ್ರೆಸ್ ಸೇರ್ಪಡೆಯಾದರು.

Tap to resize

Latest Videos

MLC ಚುನಾವಣೆ ಗೆಲುವಿನ ಬಳಿಕ ಡಿಕೆಶಿಗೆ ವಿಧಾನಸಭೆ ಚುನಾವಣೆಯೇ ಟಾರ್ಗೆಟ್ ಆಗಿದೆ. ಈ ಹಿನ್ನೆಲೆಯಲ್ಲಿ ಅಶೋಕ್​ ಪೂಜಾರಿ ಅವರನ್ನು ಪಕ್ಷಕ್ಕೆ ಸೆಳೆದಿದ್ದಾರೆ. ಮುಖ್ಯವಾಗಿ ಗೋಕಾಕ್‌ನಲ್ಲಿ ರಮೇಶ್ ಜಾರಕಿಹೊಳಿ (Ramesh Jarkiholi) ಸೋಲಿಸಲು  ಡಿಕೆ ಶಿವಕುಮಾರ್​​ ಪ್ಲಾನ್ ಮಾಡಿದ್ದಾರೆ.

Belagavi Politics: ಬೆಳಗಾವಿಯಲ್ಲಿ ಆಪರೇಷನ್ ಹಸ್ತ, ಕಾಂಗ್ರೆಸ್ ಸೇರ್ಪಡೆಗೆ ವೇದಿಕೆ, ಮುಹೂರ್ತ ಫಿಕ್ಸ್

ಗೋಕಾಕ್ ಕ್ಷೇತ್ರದ ಪ್ರಭಾವಿ ಲಿಂಗಾಯತ ಮುಖಂಡ ಆಗಿರುವ ಅಶೋಕ್ ಪೂಜಾರಿ ಕಾಂಗ್ರೆಸ್ ಸೇರ್ಪಡೆಯಿಂದ ಬಲ ಹೆಚ್ಚಾಗಿದೆ. ಈ ರಾಜಕೀಯ ಲೆಕ್ಕಾಚಾರದ ಬಗ್ಗೆ ಮಾತನಾಡಿದ ಡಿಕೆ ಶಿವಕುಮಾರ್​ , ಕಾಂಗ್ರೆಸ್​ಗೆ ಸೇರ್ಪಡೆ ಆಗುವವರ ಲಿಸ್ಟ್ ಇನ್ನೂ ಇದೆ. ಲಿಸ್ಟ್ ಇಲ್ಲ ಎಂದು ಅನ್ನೋದಿಲ್ಲ ಎಂದರು.

ಇನ್ನೊಂದು ದಿನ ನಾವು ಗೋಕಾಕ್​ಗೆ ಬರ್ತಿವಿ. ಸತೀಶ್ ಜಾರಕಿಹೊಳಿ ಯಾವಾಗ ದಿನಾಂಕ ನಿಗದಿ ಮಾಡ್ತಾರೋ ಅವತ್ತು ಗೋಕಾಕ ಬಂದು ಉಳಿದೆಲ್ಲ ಕಾರ್ಯಕರ್ತರನ್ನ ಕಾಂಗ್ರೆಸ್​ಗೆ ಸೇರ್ಪಡೆ ಮಾಡ್ಕೊತ್ತಿವಿ. ಗೋಕಾಕನಲ್ಲಿ ಕಾಂಗ್ರೆಸ ಪಕ್ಷಕ್ಕೆ ಇನ್ನಷ್ಟು ಶಕ್ತಿ ತಂದುಕೊಡುವ ಕೆಲಸ ಮಾಡಬೇಕು. ಬೆಳಗಾವಿ ಜಿಲ್ಲೆ ಹಾಲಿ ಮಾಜಿ ಶಾಸಕರು ಒಮ್ಮತದಿಂದ ಅಶೋಕ ಪೂಜಾರಿ ಕಾಂಗ್ರೆಸ ಸೇರ್ಪಡೆ ಮಾಡ್ಕೊಂಡಿದ್ದೇವೆ ಎಂದರು.

ಗೋಕಾಕ್​ ಕಾಂಗ್ರೆಸ್​​​ನದ್ದು
ನಮಗೆ ಬರೋ ಲಿಸ್ಟ್ ಎಲ್ಲ ಸ್ಕ್ರೀನಿಂಗ್ ಕಮೀಟ್‌ಗೆ ಕಳಿಸುತ್ತೇವೆ. ಯಾರ್ಯಾರು ಬರ್ತಾರೆ ಅನ್ನೋ ರಹಸ್ಯ  ಅನೌನ್ಸ್ ಮಾಡಬಾರದು. ಅಶೋಕ್ ಪೂಜಾರಿ ಪ್ರಬಲ ನಾಯಕರು, ಎಲ್ಲಾ ಪಕ್ಷದಿಂದ ನಿಂತಿದ್ದಾರೆ. ಅವರ ನಾಯಕತ್ವ ಕೆಲಸ ನೋಡಿ ಕಾಂಗ್ರೆಸ್ ಪಕ್ಷಕ್ಕೆ ಹೋಗುವಂತೆ ಅವರ ಬೆಂಬಲಿಗರ ಒತ್ತಾಯ ಮಾಡಿದ್ದಾರೆ. ನಮ್ಮ ಪಕ್ಷ ಕೂಡ ಉತ್ತಮವಾಗಿ ಬೆಳೆಯುತ್ತಿದೆ. ಮುಂದೆ ಕಾಂಗ್ರೆಸ್ ಪಕ್ಷ ಆಯ್ಕೆ ಮಾಡಬೇಕೆಂದು ಗೋಕಾಕ್ ಜನತೆ ತೀರ್ಮಾನ ಮಾಡಿದ್ದಾರೆ. ಯಾವಾಗಲೂ ಗೋಕಾಕ್ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರೇ ಆಯ್ಕೆ ಆಗ್ತಿದ್ರು. ಮುಂದೆಯೂ ಕೂಡ ಕಾಂಗ್ರೆಸ್ ಶಾಸಕರೇ ಆಯ್ಕೆ ಆಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮುಂಬರುವ ಚುನಾವಣೆಯಲ್ಲಿ ಗೋಕಾಕ್ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಅಶೋಕ್ ಪೂಜಾರಿಗೆ ನೀಡ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿ, ನಾವು ಬೇಷರತ್ತಾಗಿ ಅಶೋಕ್ ಪೂಜಾರಿ ಸೇರ್ಪಡೆ ಮಾಡಿಕೊಂಡಿದ್ದೇವೆ. ನಾವು ಯಾರನ್ನೂ ಸೋಲಿಸೋದು ಅಲ್ಲ, ನಮ್ಮ ಗುರಿ. ಕಾಂಗ್ರೆಸ್ ಪಕ್ಷ ಗೆಲ್ಲಬೇಕು. ನಮ್ಮ ಗುರಿ 224 ಕ್ಷೇತ್ರದಲ್ಲಿ ಗೆಲ್ಲೋದು. ಅಧಿವೇಶನ ಆದಮೇಲೆ ಯಾರು ಪಕ್ಷಕ್ಕೆ ಸೇರ್ಪಡೆ ಹೇಳ್ತೀನಿ ಎಂದು ಸ್ಪಷ್ಟಪಡಿಸಿದರು.

 ಪಕ್ಷ ಬಿಟ್ಟವರನ್ನು ಮತ್ತೆ ಸೇರಿಸಿಕೊಳ್ತೀರಾ ಎಂಬ ಪ್ರಶ್ನೆಗೆ ಅರ್ಜಿ ಓಪನ್ ಇದೆ. ಯಾರ ಬೇಕಾದರೂ ಕಾಂಗ್ರೆಸ್ ಪಕ್ಷಕ್ಕೆ ಅರ್ಜಿ ಹಾಕಬಹುದು ಎಂದು ತಿಳಿಸಿದರು.

ರಮೇಶ್ ಜಾರಕಿಹೊಳಿಗೆ ಟಾಂಗ್
ಅಶೋಕ ಪೂಜಾರಿ ಕುಟುಂಬ ಒಟ್ಟು ಆರು ಬಾರಿ ಸ್ಪರ್ಧೆ ಮಾಡಿ ಸೋತಿದ್ದಾರೆ. ಅಶೋಕ ಪೂಜಾರಿ ತಂದೆ ಎರಡು ಬಾರಿ, ಅಶೋಕ ಪೂಜಾರಿ ನಾಲ್ಕು ಬಾರಿ ಸೋತಿದ್ದಾರೆ. ಗೋಕಾಕ್​​​ ಕಾಂಗ್ರೆಸ್ ಪಕ್ಷದ ತವರು ಮನೆ ಎನ್ನುವ ಮೂಲಕ ಪರೋಕ್ಷವಾಗಿ ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಟಾಂಗ್ ನೀಡಿದರು. ಕಾಂಗ್ರೆಸ ಪಕ್ಷದಲ್ಲಿ ವ್ಯಕ್ತಿ ಗಳು ಬರ್ತಾರೆ, ವ್ಯಕ್ತಿ ಗಳು ಹೋಗ್ತಾರೆ. ಕಾಂಗ್ರೆಸ ಪಕ್ಷದಲ್ಲಿ ವ್ಯಕ್ತಿಗಳಲ್ಲ ಪಕ್ಷ ದೊಡ್ಡದು ಎಂದರು.

ಅಶೋಕ ಪೂಜಾರಿ ಮಾತು
ಕಾಂಗ್ರೆಸ್ ಪಕ್ಷ ಸೇರ್ಪಡೆ ಬಳಿಕ ಮಾತನಾಡಿದ ಅಶೋಕ್ ಪೂಜಾರಿ, ಅತಿ ಶೀಘ್ರದಲ್ಲಿಯೇ ಗೋಕಾಕನಲ್ಲಿ ಕಾಂಗ್ರೆಸ್ ಬೃಹತ್ ಸಭೆ ಮಾಡ್ತೀವಿ ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯತಿ ಚುನಾವಣೆಗೂ ಮುನ್ನ ಗೋಕಾಕ್‌ನಲ್ಲಿ ಸಭೆ ಮಾಡ್ತೀವಿ ಎಂದು ತಿಳಿಸಿದರು.

ನಾನು ಬಡತನ ಕುಟುಂಬದಿಂದ ಬಂದವನು. ನಮ್ಮ ತಂದೆ ಬಯಲಾಟ ಮಾಡಿ ಜೀವನ ಸಾಗಿಸಿದ್ದಾರೆ. ರಾಜಕೀಯ ವಿಚಾರದಲ್ಲಿ ಜಾರಕಿಹೊಳಿ ಕುಟುಂಬದ ವಿರುದ್ಧ ಹೋರಾಟ ಮಾಡಿರುವೆ. ಗೋಕಾಕ್ ವ್ಯವಸ್ಥೆ ಸುಧಾರಿಸಲು ಹೋರಾಟ ಮಾಡಿರುವೆ. ಆ ವ್ಯವಸ್ಥೆ ವಿರುದ್ಧ ಸತೀಶ್ ಜಾರಕಿಹೊಳಿ ಅವರೂ ಹೋರಾಟ ಮಾಡಿದ್ದಾರೆ. ಹೀಗಾಗಿ ನಾನು ಸತೀಶ್ ಜಾರಕಿಹೊಳಿ ಅವರು ಒಂದೇ ಚಕ್ಕಡಿ ಗಾಡಿಯಂತೆ ಕೆಲಸ ಮಾಡ್ತಿವಿ ಎಂದು ಸ್ಪಷ್ಟಪಡಿಸಿದರು.

ಮುಂದಿನ‌ ದಿನಗಳಲ್ಲಿ ಗೋಕಾಕ್‌ನಲ್ಲಿ ಬದಲಾವಣೆ ನೋಡಬಹುದು. ನಾನು ಕಾಂಗ್ರೆಸ್ ಪಕ್ಷವನ್ನ ಬೇಷರತ್ ಸೇರ್ಪಡೆ ಆಗಿರುವೆ. ನಾವೆಲ್ಲರೂ ಚಾಡಿ ಹೇಳುವುದನ್ನ ಬಿಡಬೇಕು. ಎಲ್ಲರೂ ಒಂದಾಗಿ ಕೆಲಸ ಮಾಡಬೇಕು. ಎಲ್ಲಾರೂ ಜಾರಕಿಹೊಳಿ ಅವರು ಒಂದೇ ಅಂತಾರೆ. ಅಶೋಕ ಪೂಜಾರಿ ಚುನಾವಣೆ ಸಂದರ್ಭದಲ್ಲಿ ದುಡ್ಡ ತಗೊಂಡು ನ್ಯೂಟ್ರಲ್ ಆಗ್ತಾರೆ ಅಂತಾರೆ. ಹೀಗೆ ಅಪಪ್ರಚಾರ ಮಾಡುವುದನ್ನ ನಾವು ಬಿಡಬೇಕಿದೆ ಎಂದು ಹೇಳಿದರು.

ಸತೀಶ್ ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳಕರ ಅವರ ನೇತೃತ್ವದಲ್ಲಿ ಮುಂದಿನ‌‌ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳು ಗೆಲ್ಲಲಿದ್ದೇವೆ. ನಾನು ಆಮಿಷಕ್ಕೆ ಒಳಗಾಗಿದ್ದರೇ ಈಗ ಅಧಿಕಾರದಲ್ಲಿ ಇರ್ತಿದ್ದೆ. ಗೂಟದ ಕಾರಿನಲ್ಲಿ ತಿರುಗಾಡುತ್ತಿದ್ದೆ, ಆದರೂ ನಾನು ಸಿದ್ಧಾಂತ ಇಟ್ಟುಕೊಂಡು ರಾಜಕೀಯ ಮಾಡ್ತೀನಿ. ಮೊನ್ನೆ ಗೋಕಾಕ ಉಪ ಚುನಾವಣೆಯಲ್ಲಿ ಹಿಂದೆ ಸರಿಯಲಿಲ್ಲ. ಚುನಾವಣೆಯಲ್ಲಿ ಹಿಂದೆ ಸರಿದಿದ್ದರೆ ಆರಾಮದ ಜೀವನ ಸಾಗುತ್ತಿತ್ತು. ಆದ್ರೆ ಅಶೋಕ ಪೂಜಾರಿ ಯಾವುದೇ ದುಡ್ಡಿಗೆ ಮಾರಿಕೊಳ್ಳುವುದಿಲ್ಲ ಎಂಬ ಸಂದೇಶ ಕೊಡಬೇಕಿತ್ತು ಎಂದರು.

click me!